ಬಿಇ ಓದಿದ ಶೇ.15 ಮಂದಿಗೆ ಮಾತ್ರವೇ ನೌಕರಿ ಸಿಗ್ತಿದೆ: ಸಿಎಂ ಸಿದ್ದರಾಮಯ್ಯ
ಉದ್ದಿಮೆಗಳಿಗೆ ಪೂರಕವಾದ ಮತ್ತು ಬೇಡಿಕೆಗೆ ಅನುಗುಣವಾದ ಕೌಶಲ್ಯಯುತ ಶಿಕ್ಷಣ ನೀಡಿದಾಗ ಮಾತ್ರ ನಿರು ದ್ಯೋಗ ಸಮಸ್ಯೆ ನಿವಾರಿಸಲು ಸಾಧ್ಯ. ನಮ್ಮ ಸರ್ಕಾರ ಈ ನಿಟ್ಟಿನಲ್ಲಿ ಕಾರ್ಯೋ ನ್ಮುಖವಾಗಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು(ಅ.26): ಬೇಡಿಕೆಗೆ ಅನುಗುಣವಾದ ಕೌಶಲ್ಯಯುತ ಶಿಕ್ಷಣ ನೀಡಿದರೆ ನಿರುದ್ಯೋಗ ಸಮಸ್ಯೆ ನಿವಾರಿಸಬಹುದು. ಆದ್ದರಿಂದ ನಮ್ಮ ಸರ್ಕಾರ ಕೌಶಲ್ಯಯುತ ಶಿಕ್ಷಣಕ್ಕೆ ಆದ್ಯತೆ ನೀಡುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಮಲ್ಲತ್ತಹಳ್ಳಿ ಡಾ। ಅಂಬೇಡ್ಕರ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ 3.5 ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಒಳಾಂಗಣ ಕ್ರೀಡಾ ಸಂಕೀರ್ಣ ಹಾಗೂ ಮೊದಲನೇ ವರ್ಷದ ಬಿ.ಇ. ತರಗತಿಯನ್ನು ಉದ್ಘಾಟಿಸಿ ಮಾತನಾಡಿದರು. ಉದ್ದಿಮೆಗಳಿಗೆ ಪೂರಕವಾದ ಮತ್ತು ಬೇಡಿಕೆಗೆ ಅನುಗುಣವಾದ ಕೌಶಲ್ಯಯುತ ಶಿಕ್ಷಣ ನೀಡಿದಾಗ ಮಾತ್ರ ನಿರು ದ್ಯೋಗ ಸಮಸ್ಯೆ ನಿವಾರಿಸಲು ಸಾಧ್ಯ. ನಮ್ಮ ಸರ್ಕಾರ ಈ ನಿಟ್ಟಿನಲ್ಲಿ ಕಾರ್ಯೋ ನ್ಮುಖವಾಗಿದೆ. ಕಾಲೇಜುಗಳು ಕೌಶಲ್ಯಯುತ ಶಿಕ್ಷಣದ ಕೋರ್ಸ್‌ಗಳನ್ನು ಹೆಚ್ಚಾಗಿ ಪ್ರಾರಂಭಿಸುವುದರಿಂದ ನಿರುದ್ಯೋಗ ನಿವಾರಣೆಯಾಗುತ್ತದೆ. ಈ ನಿಟ್ಟಿನಲ್ಲಿ ಶಿಕ್ಷಣ ಸಂಸ್ಥೆಗಳ ಪಾತ್ರವೂ ಮಹತ್ತರವಾಗಿದೆ ಎಂದರು.
Halekai House: ಸಮುದ್ರಮುಖಿಯಾಗಿರುವ ರತನ್ ಟಾಟಾ ₹150 ಕೋಟಿ ಮೌಲ್ಯದ ಮನೆಗೆ ಈಗ ಇವರೇ ಮಾಲೀಕರು!
ಶೇ.15ರಷ್ಟು ಮಾತ್ರ ಉದ್ಯೋಗ:
ಪ್ರತಿ ವರ್ಷ ಎಂಜಿನಿಯರಿಂಗ್ ಪದವಿ ಪಡೆಯುವ ವಿದ್ಯಾರ್ಥಿಗಳಲ್ಲಿ ಕೇವಲ ಶೇ.15 ರಷ್ಟು ವಿದ್ಯಾರ್ಥಿಗಳಿಗೆ ಮಾತ್ರ ಉದ್ಯೋಗ ದೊರೆಯುತ್ತಿದೆ. ಆದ್ದರಿಂದ ಸರ್ಕಾರ ಕೌಶಲ್ಯಾಭಿವೃದ್ಧಿಗೆ ಒತ್ತು ನೀಡುತ್ತಿದೆ. ಅಸಮಾನತೆಯನ್ನು ಹೋಗಲಾಡಿಸಿ. ಸಮಸಮಾಜ ನಿರ್ಮಿಸಲು ಪ್ರತಿಯೊಬ್ಬರೂ ಶಿಕ್ಷಣ ಪಡೆಯಬೇಕು. ಹಾಗೆಯೇ ವಿದ್ಯಾವಂತರು ಮಾನವೀಯತೆಯ ಗುಣವನ್ನು ರೂಢಿಸಿ ಕೊಳ್ಳಬೇಕು ಎಂದು ಕರೆ ನೀಡಿದರು.
ಅಂಬೇಡ್ಕರ್ ಅವರ ತತ್ವಾದರ್ಶಗಳ ಹಾದಿಯಲ್ಲಿ ನಡೆದು ಜಯಪ್ರಕಾಶ್ ನಾರಾಯಣ್ ಅವರುಡಾ.ಅಂಬೇಡ್ಕರ್ ತಾಂತ್ರಿಕ ಮಹಾವಿದ್ಯಾಲಯವನ್ನು ಪ್ರಾರಂಭಿಸಿದ್ದು, ಇಲ್ಲಿ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಅಂಬೇಡ್ಕರ್ ಅವರ ಮೂಲಮಂತ್ರವಾಗಿದ್ದ ಶಿಕ್ಷಣ, ಸಂಘಟನೆ, ಹೋರಾಟಗಳ ಆದರ್ಶ ಗಳನ್ನು ಪಾಲಿಸಬೇಕಾದ್ದು ವಿದ್ಯಾರ್ಥಿ ಗಳ ಕರ್ತವ್ಯವಾಗಿದೆ.
ನರ್ಸರಿ ಶಿಕ್ಷಣ ಬಲು ದುಬಾರಿ, ಓರಿಯಂಟೇಶನ್ ಶುಲ್ಕ ನೋಡಿ ನೆಟ್ಟಿಗರು ದಂಗು!
ಅಸಮಾನತೆ ನಿವಾರಣೆಯಾಗಲಿ
ಜಾತಿ ವ್ಯವಸ್ಥೆಯಿಂದ ಸಮಾಜದಲ್ಲಿ ವೈರುಧ್ಯತೆ, ಅಸಮಾನತೆ ಇದೆ. ಬಡವರು, ದೀನದಲಿತರು, ಹಿಂದುಳಿ ದವರು, ಅಲ್ಪಸಂಖ್ಯಾತರಿಗೆ ಆರ್ಥಿಕ ಹಾಗೂ ಸಾಮಾಜಿಕ ಸಮಾನತೆ ಸಿಕ್ಕಾಗ ಮಾತ್ರ ಜಾತಿ ವ್ಯವಸ್ಥೆ ನಿರ್ಮೂಲನೆ ಮಾಡಲು ಸಾಧ್ಯ. ಬುದ್ಧ, ಬಸವಾದಿ ಶರಣರು, ಮಹಾತ್ಮ ಗಾಂಧೀಜಿಯವರ ಸಮಾನ ಸಮಾಜದ ಕನಸು ಈಡೇರಬೇ ಕಿದೆ. ಅಸಮಾನತೆಯ ನಿರ್ಮೂ ಲನೆ ಗಾಗಿ ಪ್ರತಿಯೊಬ್ಬರೂ ಶಿಕ್ಷಣ ಪಡೆಯ ಬೇಕೆಂದು ಸಲಹೆ ನೀಡಿದರು. ಅವಕಾಶ ವಂಚಿತರು ಮುಖ್ಯವಾಹಿ ನಿಗೆ ಬರಲು ಗುಣಮಟ್ಟದ ಶಿಕ್ಷಣ ಅತ್ಯಗತ್ಯವಾಗಿದೆ. ಶೋಷಿತ ವರ್ಗದವ ರಿಗೆ ನ್ಯಾಯ ಒದಗಿಸಿ ಸಮ ಸಮಾಜ ನಿರ್ಮಿಸಬೇಕೆಂಬ ಗುರಿಯೊಂದಿಗೆ ಅಂಬೇಡ್ಕರ್ ಹೋರಾಡಿದರು. ಸಂವಿಧಾನದ ಆಶಯ ಹಾಗೂ ಜನರಿಗೆ ನೀಡುವ ಹಕ್ಕುಗಳ ಬಗ್ಗೆ ಅರಿವು ಮೂಡಿಸಲು ಸಂವಿಧಾನ ಪೀಠಿಕೆಯನ್ನು ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗ ಳಿಗೆ ಓದಿಸಲಾಗುತ್ತಿದೆ ಎಂದರು.
ಉನ್ನತ ಶಿಕ್ಷಣ ಸಚಿವ ಡಾ| ಎಂ.ಸಿ. ಸುಧಾಕರ್ ಮಾತನಾಡಿ, ವಿದ್ಯಾರ್ಥಿ ಗಳಲ್ಲಿ ಕೌಶಲ್ಯ ಹೆಚ್ಚಾದಷ್ಟೂ ಅವಕಾಶ ಗಳು ಹೆಚ್ಚಾಗಲಿವೆ. ಆದ್ದರಿಂದ ನಮ್ಮ ಸರ್ಕಾರವು ಕೌಶಲ್ಯಯುತ ಶಿಕ್ಷಣಕ್ಕೆ ಆದ್ಯತೆ ನೀಡುತ್ತಿದೆ ಎಂದರು. ಪಾಂಚ ಜನ್ಯ ವಿದ್ಯಾ ಪೀಠ ಕಲ್ಯಾಣ ದತ್ತಿಯ ಅಧ್ಯಕ್ಷ ಎಸ್.ಮರಿಸ್ವಾಮಿ, ಕಾರ್ಯ ದರ್ಶಿ ಎಸ್.ಶಿವಮಲ್ಲು, ಪ್ರಾಂಶುಪಾಲ ಡಾ। ತಿಪ್ಪೇಸ್ವಾಮಿ ಹಾಜರಿದ್ದರು.