ನರ್ಸರಿ ಶಿಕ್ಷಣ ಬಲು ದುಬಾರಿ, ಓರಿಯಂಟೇಶನ್ ಶುಲ್ಕ ನೋಡಿ ನೆಟ್ಟಿಗರು ದಂಗು!

ಮಕ್ಕಳಿಗೆ ಆರಂಭದಿಂದಲೇ ಒಳ್ಳೆ ಶಿಕ್ಷಣ ಸಿಗ್ಲಿ ಎನ್ನುವ ಕಾರಣಕ್ಕೆ ಪಾಲಕರು, ಮಕ್ಕಳನ್ನು ಒಳ್ಳೆ ಸ್ಕೂಲ್ ಗೆ ಹಾಕ್ತಾರೆ. ಆದ್ರೆ ಅಡ್ಮಿಷನ್ ವೇಳೆ ಪಾಲಕರ ಕಣ್ಣಲ್ಲಿ ರಕ್ತ ಬರುತ್ತೆ. ಶಾಲೆಯೊಂದರ ಶುಲ್ಕದ ವಿವರ ನೋಡಿ ನೆಟ್ಟಿಗರು ಕಂಗಾಲಾಗಿದ್ದಾರೆ. 
 

parent orientation charges at nursery school netizens roo

ಪಾಲಕರು ಮಾಸ್ಟರ್ ಡಿಗ್ರಿ (Master degree) ಯವರೆಗೆ ಮಾಡಿದ ವೆಚ್ಛ ಈಗ ಮಕ್ಕಳ ಒಂದು ವರ್ಷದ ಶಿಕ್ಷಣದ ಶುಲ್ಕ (Tuition Fee) ವಾಗಿದೆ. ಈಗಿನ ದಿನಗಳಲ್ಲಿ ಮೆಟ್ರೋ ನಗರ (Metro City) ಗಳಲ್ಲಿ ಮಕ್ಕಳನ್ನು ಶಾಲೆಗೆ ಸೇರಿಸೋದು ದುಬಾರಿಯಾಗಿದೆ. ತಟ್ಟಿದ್ದು, ಮುಟ್ಟಿದ್ದಕ್ಕೆಲ್ಲ ಶಾಲೆ ಆಡಳಿತ ಮಂಡಳಿ ಚಾರ್ಜ್ ಮಾಡುತ್ತೆ. ಗಗನಕ್ಕೇರಿದ ಶಾಲಾ ಶುಲ್ಕ, ಪಾಲಕರಿಗೆ ದೊಡ್ಡ ಹೊಣೆಯಾಗ್ತಿದೆ. ಖಾಸಗಿ ಶಾಲೆಯಲ್ಲಿ ಅಂತರಾಷ್ಟ್ರೀಯ ಶಿಕ್ಷಣವನ್ನು ಮಕ್ಕಳಿಗೆ ನೀಡಲಾಗ್ತಿದೆ. ಶ್ರೀಮಂತ ಕುಟುಂಬವನ್ನು ಗುರಿಯಾಗಿಸಿಕೊಂಡು ಶುಲ್ಕವನ್ನು ಫಿಕ್ಸ್ ಮಾಡಲಾಗ್ತಿದೆ. ಆದ್ರೆ ಈ ಶುಲ್ಕ, ಸಾಮಾನ್ಯ, ಬಡ ವರ್ಗದ ಜನರಿಗೆ ನುಂಗಲಾಗದ ತುತ್ತಾಗಿದೆ. ಮಕ್ಕಳ ಶಿಕ್ಷಣಕ್ಕಾಗಿ ಅನೇಕ ಪಾಲಕರು ತಮ್ಮ ಜೀವನವನ್ನು ತ್ಯಾಗ ಮಾಡ್ತಿದ್ದಾರೆ. ತಮ್ಮ ಆಸೆಗಳನ್ನು ಮೂಟೆಕಟ್ಟಿ, ಮಕ್ಕಳ ಶಿಕ್ಷಣಕ್ಕೆ ಹಗಲು ರಾತ್ರಿ ಎನ್ನದೆ ದುಡಿದು ಹಣ ಸುರಿಯುತ್ತಿದ್ದಾರೆ.

ನರ್ಸರಿ ಶಾಲೆ (Nursery School ) ಯ ಆಘಾತಕಾರಿ ವಾರ್ಷಿಕ ಶುಲ್ಕದ ಫೋಟೋ ಒಂದು ವೈರಲ್ ಆಗಿದೆ. ಇದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಶಾಲೆಯ ಶುಲ್ಕ ನೋಡಿ ಹಲವರು ಆಘಾತಕ್ಕೊಳಗಾಗಿದ್ದಾರೆ. ಶುಲ್ಕದ ವಿವರದಲ್ಲಿ ಹೆಚ್ಚು ಗಮನ ಸೆಳೆದಿದ್ದು, ಪಾಲಕ ಓರಿಯಂಟೇಶನ್ ಶುಲ್ಕ (Parent Orientation Fee). ಶಾಲೆ ಪೆರೆಂಟ್ಸ್ ಓರಿಯಂಟೇಶ್ ಶುಲ್ಕವಾಗಿ 8,400 ರೂಪಾಯಿ ಒಂದು ಬಾರಿ ಚಾರ್ಜ್ ಮಾಡ್ತಿದೆ. ಇದೆಲ್ಲವನ್ನೂ ಸೇರಿ ನರ್ಸರಿ ಹಾಗೂ ಜೂನಿಯರ್ ಕೆಜಿ ಮಕ್ಕಳ ಅಡ್ಮಿಷನ್ ಶುಲ್ಕವಾಗಿ 55,600 ರೂಪಾಯಿ ತೆಗೆದುಕೊಳ್ತಿದೆ. 

ಚಾಣಕ್ಯ ನೀತಿ: ಮಕ್ಕಳಿಗೆ ಈ 10 ವಿಷಯ ಕಲಿಸಿದ್ರೆ ಜೀವನದಲ್ಲಿ ಎಂದಿಗೂ ಸೋಲಲಾರರು

ಇಎನ್ ಟಿ (ENT) ಶಸ್ತ್ರಚಿಕಿತ್ಸಕ ಡಾ. ಜಗದೀಶ್ ಚತುರ್ವೇದಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಶಾಲಾ ಶುಲ್ಕದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. 8,400 ರೂಪಾಯಿ ಪೋಷಕ ಓರಿಯಂಟೇಶನ್ ಶುಲ್ಕ!. ವೈದ್ಯರ ಸಮಾಲೋಚನೆಗಾಗಿ ಇದರಲ್ಲಿ ಶೇಕಡಾ 20ರಷ್ಟನ್ನು ಪಾವತಿಸಲು ಪೋಷಕರು ಒಪ್ಪುವುದಿಲ್ಲ. ನಾನು ಶಾಲೆ ತೆರೆಯಲು ಯೋಚಿಸುತ್ತಿದ್ದೇನೆ ಎಂದು ಅವರು ಶೀರ್ಷಿಕೆ ಹಾಕಿದ್ದಾರೆ. ಎಕ್ಸ್ ಖಾತೆಯ ಈ ಪೋಸ್ಟ್ ವೈರಲ್ ಆಗಿದೆ. ಜನರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಪೋಷಕರು ತಮ್ಮ ಮಕ್ಕಳಿಗಾಗಿ ಏನುಬೇಕಾದ್ರೂ ಮಾಡ್ತಾರೆ. ಪೋಷಕರ ಈ ಕೆಲಸದಿಂದ ಕೋಚಿಂಗ್ ಸೆಂಟರ್ ಹಾಗೂ ಶಾಲಾ- ಕಾಲೇಜುಗಳು ಹುಚ್ಚೆದ್ದು ಕುಣಿಯುತ್ತಿವೆ ಎಂದು ಕಮೆಂಟ್ ಮಾಡಿದ್ದಾರೆ. ಶಿಕ್ಷಣ ವ್ಯವಸ್ಥೆಯಲ್ಲಿ ನಮಗೆ ಕ್ರಾಂತಿಯ ಅಗತ್ಯವಿದೆ. ಕೆಲವು ಸ್ಟಾರ್ಟ್‌ಅಪ್‌ಗಳು ಉತ್ತಮ ಗುಣಮಟ್ಟದ ಶಿಕ್ಷಣ ಪಠ್ಯಕ್ರಮದೊಂದಿಗೆ ಕೈಗೆಟುಕುವ ಬೆಲೆಯೊಂದಿಗೆ ಬರಬಹುದೇ ಎಂದು ಪ್ರಶ್ನೆ ಮಾಡಿದ್ದಾರೆ. ನನ್ನ ಇಂಜಿನಿಯರಿಂಗ್ ಶಿಕ್ಷಣವನ್ನು ನಾನು ಇಷ್ಟು ಹಣದಲ್ಲಿ ಮುಗಿಸಿದ್ದೆ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ. ಇದಕ್ಕೆಲ್ಲ ಸರ್ಕಾರ ಕಾರಣ ಎಂದು ಇನ್ನೊಬ್ಬರು ಹೇಳಿದ್ದಾರೆ. ಜನರನ್ನು ಲೂಟಿ ಮಾಡಲು, ಸರ್ಕಾರ, ಖಾಸಗಿ ಶಾಲೆಗಳಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದೆ. ಅನೇಕ ರಾಜಕಾರಣಿಗಳು ಶಿಕ್ಷಣ ಸಂಸ್ಥೆಯ ಮಾಲೀಕರಾಗಿದ್ದಾರೆಂದು ಆರೋಪ ಮಾಡಿದ್ದಾರೆ. ಪಾಲಕರು ನೀಡ್ತಾರೆ ಎನ್ನುವ ಕಾರಣಕ್ಕೆ ಅವರು ಶುಲ್ಕ ತೆಗೆದುಕೊಳ್ತಿದ್ದಾರೆ. ಎ
ಲ್ಲ ಪಾಲಕರು ಇದನ್ನು ವಿರೋಧಿಸಿದ್ರೆ, ಶಾಲಾ ಆಡಳಿತ ಶುಲ್ಕವನ್ನು ಕಡಿಮೆ ಮಾಡುತ್ತೆ ಎಂಬುದು ಮತ್ತೊಬ್ಬರ ಅಭಿಪ್ರಾಯ. ಲಕ್ಷ ಲಕ್ಷ ತೆಗೆದುಕೊಳ್ಳುವ ಶಾಲೆಗಳು ಮಕ್ಕಳಿಗೆ ಎಬಿಸಿಡಿ, 1234 ಹೇಳಿಕೊಡುತ್ತವೆ, ಇದ್ರ ವಿರುದ್ಧ ಸರ್ಕಾರ ಕ್ರಮಕೈಗೊಳ್ಳಬೇಕೆಂದು ಇನ್ನೊಬ್ಬರು ಬರೆದಿದ್ದಾರೆ.

10ನೇ ತರಗತಿ ಪಾಸ್‌ ಆದವರಿಗೆ ರೈಲ್ವೆಯಲ್ಲಿ ಬಂಪರ್‌ ಆಫರ್

ಭಾರತದ ಖಾಸಗಿ ಶಾಲೆಯಲ್ಲಿ ಲೂಟಿಯಾಗ್ತಿದೆ. ಆರಂಭದಲ್ಲಿ ಅಡ್ಮಿಷನ್ ಹೆಸರಿನಲ್ಲಿ ಲಕ್ಷ ಲಕ್ಷ ಚಾರ್ಜ್ ಮಾಡುವ  ಶಾಲೆಗಳು, ಮಧ್ಯಂತರದಲ್ಲಿ ಬೇರೆ ಬೇರೆ ಕಾರಣಕ್ಕೆ ನೂರು, ಸಾವಿರದಂತೆ ಮತ್ತೊಂದಿಷ್ಟು ಹಣವನ್ನು ತೆಗೆದುಕೊಳ್ತಿರುತ್ತದೆ. ಗುರುಗ್ರಾಮ್ ವ್ಯಕ್ತಿಯೊಬ್ಬರು ಕೆಲ ದಿನಗಳ ಹಿಂದೆ ಇದ್ರ ಬಗ್ಗೆ ಧ್ವನಿ ಎತ್ತಿದ್ದರು.   ಮೂರನೇ ತರಗತಿ ಓದುತ್ತಿರುವ ಮಗನಿಗೆ ಮಾಸಿಕ ಶುಲ್ಕವಾಗಿ 30 ಸಾವಿರ ನೀಡ್ತಿದ್ದು, ಶಾಲೆ ಪ್ರತಿ ವರ್ಷ ಶೇಕಡಾ 10ರಷ್ಟು ಶುಲ್ಕ ಹೆಚ್ಚಿಸುತ್ತಿದೆ. ಅಂದ್ರೆ ಆತ 12ನೇ ತರಗತಿಗೆ ಬರುವ ವೇಳೆ ಆತನ ಶುಲ್ಕ 9 ಲಕ್ಷವಾಗುತ್ತ ಎಂದಿದ್ದರು.

Latest Videos
Follow Us:
Download App:
  • android
  • ios