Asianet Suvarna News Asianet Suvarna News

NEET-UG ಪರೀಕ್ಷೆ ಆಕಾಂಕ್ಷಿಗಳಿ ಸಿಹಿಸುದ್ದಿ, ವಯಸ್ಸಿನ ಮಿತಿ ರದ್ದು

*NEET-UG ಪರೀಕ್ಷೆ ಆಕಾಂಕ್ಷಿಗಳಿ ಸಿಹಿಸುದ್ದಿ, ವಯಸ್ಸಿನ ಮಿತಿ ರದ್ದು
* ನೀಟ್ ಯುಜಿ ಪರೀಕ್ಷೆಗೆ ಗರಿಷ್ಠ ವಯಸ್ಸಿನ ಮಿತಿಯ ಮಾನದಂಡ ರದ್ದು
* ರಾಷ್ಟ್ರೀಯ ವೈದ್ಯಕೀಯ ಆಯೋಗದಿಂದ ಪ್ರಕಟ
 

NMC removes upper age limit from NEET UG exam rbj
Author
First Published Mar 10, 2022, 12:10 AM IST | Last Updated Mar 10, 2022, 12:10 AM IST

ನವದೆಹಲಿ, (ಮಾ.09):  ನೀಟ್ -ಯುಜಿ (NEET-UG) ಪರೀಕ್ಷೆ ಬರೆಯಲು ಗರಿಷ್ಠ ವಯಸ್ಸಿನ ಮಿತಿಯನ್ನು ರದ್ದುಗೊಳಿಸಲಾಗಿದೆ.

ರಾಷ್ಟ್ರೀಯ ವೈದ್ಯಕೀಯ ಆಯೋಗವು ಇಂದು(ಬುಧವಾರ ) ಈ ನಿರ್ಧಾರವನ್ನು ಪ್ರಕಟಿಸಿದ್ದು, ಈ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮನ್ಸುಖ್ ಮಾಂಡವಿಯಾ ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಇನ್ಮುಂದೆ ಎಲ್ಲಾ ವಯೋಮಾನದ ಅಭ್ಯರ್ಥಿಗಳು ಪರೀಕ್ಷೆ ನೀಟ್ -ಯುಜಿ ಬರೆಯಬಹುದು.

ThinkEdu 2022: NEET ದೋಷಪೂರಿತವಾಗಿದೆ ಎಂದು ಆರೋಪಿಸಿದ ಸಂಸದ ಮನೀಶ್ ತಿವಾರಿ

 ಈ ಮೊದಲು ನೀಟ್ ಯುಜಿ ಪರೀಕ್ಷೆ ಬರೆಯಲು ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 25 ವರ್ಷ ಮತ್ತು ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ 30 ವರ್ಷ ಗರಿಷ್ಠ ವಯೋಮಿತಿ ನಿಗದಿ ಮಾಡಲಾಗಿತ್ತು. ಇದರ ವಿರುದ್ಧ ದೇಶಾದ್ಯಂತ ಟೀಕೆ ವ್ಯಕ್ತವಾಗಿತ್ತು.

 ಸದ್ಯ ನಿಗದಿಯಾಗಿರುವ ವಯೋಮಿತಿ ಕೈಬಿಡಲು ರಾಷ್ಟ್ರೀಯ ವೈದ್ಯಕೀಯ ಆಯೋಗದ ಸಲಹೆಯ ಮೇರೆಗೆ ಪದವಿ ವೈದ್ಯಕೀಯ ಶಿಕ್ಷಣ ಮಂಡಳಿಯು ಈ ನಿರ್ಧಾರಕ್ಕೆ ಬಂದಿದೆ.

NEET Exam ನವೀನ್ ಸಾವಿನ ಬೆನ್ನಲ್ಲೇ ನೀಟ್ ವಿರುದ್ಧ ಸಮರ ಸಾರಿದ ಕುಮಾರಸ್ವಾಮಿ

ಕಳೆದ ವರ್ಷ ಅಕ್ಟೋಬರ್‌ನಲ್ಲಿ ನಡೆದ ನಾಲ್ಕನೇ ಎನ್‌ಎಂಸಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಆಯೋಗದ ಕಾರ್ಯದರ್ಶಿ ಡಾ.ಪುಲ್ಕೇಶ್ ಕುಮಾರ್ ತಿಳಿಸಿದ್ದಾರೆ.ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಗೆ (ಎನ್‌ಟಿಎ) ಬರೆದ ಪತ್ರದಲ್ಲಿ ಡಾ ಕುಮಾರ್ ಅವರು NEET-UG ಯ ಮಾಹಿತಿ ಬುಲೆಟಿನ್‌ನಿಂದ ಗರಿಷ್ಠ ವಯಸ್ಸಿನ ಮಾನದಂಡಗಳನ್ನು ತೆಗೆದುಹಾಕುವಂತೆ ಏಜೆನ್ಸಿಗೆ ಮನವಿ ಮಾಡಿದ್ದಾರೆ.

ಇನ್ನು ಈ ಬಗ್ಗೆ ಟ್ವೀಟ್ ಮಾಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮನ್ಸುಖ್ ಮಾಂಡವಿಯಾ, ರಾಷ್ಟ್ರೀಯ ವೈದ್ಯಕೀಯ ಆಯೋಗವು NEET-UG ಪರೀಕ್ಷೆಯಲ್ಲಿ ಬರೆಯಲು ನಿಗದಿತ ಗರಿಷ್ಠ ವಯಸ್ಸಿನ ಮಿತಿಯನ್ನು ತೆಗೆದುಹಾಕಿದೆ. ಈ ನಿರ್ಧಾರವು ಮಹತ್ವಾಕಾಂಕ್ಷಿ ವೈದ್ಯರಿಗೆ ಅಪಾರ ಪ್ರಯೋಜನವನ್ನು ನೀಡುತ್ತದೆ ಮತ್ತು ದೇಶದಲ್ಲಿ ವೈದ್ಯಕೀಯ ಶಿಕ್ಷಣವನ್ನು ಬಲಪಡಿಸಲು ಸಹಾಯ ಮಾಡುತ್ತದೆ ಎಂದಿದ್ದಾರೆ.

MBBS, BDS ಮತ್ತು ಇತರ ಕೆಲವು ಸಂಬಂಧಿತ ಕೋರ್ಸ್‌ಗಳಿಗೆ ಪ್ರವೇಶಕ್ಕಾಗಿ NEET ಭಾರತದಲ್ಲಿನ ಏಕೈಕ ಪ್ರವೇಶ ಪರೀಕ್ಷೆಯಾಗಿದೆ. ಪ್ರತಿ ವರ್ಷ ಸುಮಾರು 15 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಪರೀಕ್ಷೆ ಬರೆಯುತ್ತಾರೆ.  ಕಳೆದ ವರ್ಷದಿಂದ, ಬಿಎಸ್ಸಿ ನರ್ಸಿಂಗ್ ಮತ್ತು ಬಿಎಸ್ಸಿ ಆರೋಗ್ಯ ವಿಜ್ಞಾನ ಕೋರ್ಸ್‌ಗಳ ಪ್ರವೇಶಕ್ಕೂ ಈ ಪರೀಕ್ಷೆಯನ್ನು ಬಳಸಲಾಗುತ್ತಿದೆ.

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಪರೀಕ್ಷೆ ನಡೆಸಲಾಗಿತ್ತು.  2022ನೇ ಸಾಲಿನ ನೀಟ್ -ಯುಜಿ ಪರೀಕ್ಷೆ ದಿನಾಂಕ ಮತ್ತು ಸಮಯವನ್ನು NTA ಇನ್ನೂ ಪ್ರಕಟಿಸಿಲ್ಲ.

ನವೀನ್ ಸಾವಿನ ಬೆನ್ನಲ್ಲೇ ನೀಟ್​ ಪ್ರವೇಶ ಪರೀಕ್ಷೆ ಬಗ್ಗೆ ಅಸಮಾಧಾನ
ನವೀನ್ ಶೇ. 97 ಅಂಕ ಗಳಿಸಿದ್ದರೂ (Merit Student) ನೀಟ್​ ಪರೀಕ್ಷೆಯಲ್ಲಿ (NEET) ಉತ್ತಮ ಅಂಕ ಗಳಿಸಲು ವಿಫಲರಾಗಿ ಉಕ್ರೇನ್‌ಗೆ ಹೋಗಿ ಸಾವನ್ನಪ್ಪಿದ್ದಾರೆ. ಇದರಿಂದ ಕರ್ನಾಟಕದಲ್ಲಿ ರಾಷ್ಟ್ರೀಯ ಮಟ್ಟದ ನೀಟ್​ ಪ್ರವೇಶ ಪರೀಕ್ಷೆ ಬಗ್ಗೆ ಅಸಮಾಧಾನ ಭುಗಿಲೆದ್ದಿದೆ. 

ಉಕ್ರೇನ್‌ನಲ್ಲಿ ಕರ್ನಾಟಕದ ವಿದ್ಯಾರ್ಥಿ ನವೀನ್ ಸಾವಿನ ಬಳಿಕ ನೀಟ್ (Neet) ವಿರುದ್ಧ ಮಾಜಿ ಮುಖ್ಯಂತ್ರಿ ಎಚ್. ಡಿ. ಕುಮಾರಸ್ವಾಮಿ(HD Kumaraswamy) ಆಕ್ರೋಶ ಹೊರಹಾಕಿದ್ದನ್ನು ಇಲ್ಲಿ ಸ್ಮರಿಸಬಹದು.

Latest Videos
Follow Us:
Download App:
  • android
  • ios