ThinkEdu 2022: NEET ದೋಷಪೂರಿತವಾಗಿದೆ ಎಂದು ಆರೋಪಿಸಿದ ಸಂಸದ ಮನೀಶ್ ತಿವಾರಿ
ರಾಷ್ಟ್ರೀಯ ಪ್ರವೇಶ ಅರ್ಹತಾ ಪರೀಕ್ಷೆ ಒಂದು ತೀವ್ರ ದೋಷಪೂರಿತ ಮಾದರಿಯಾಗಿದೆ. 8 ಲಕ್ಷ ಅರ್ಹ ವಿದ್ಯಾರ್ಥಿಗಳಿಗೆ ಕೇವಲ 80 ಸಾವಿರ ಸೀಟುಗಳು ಎಂದು ಕಾಂಗ್ರೆಸ್ ಸಂಸದ ಮನೀಶ್ ತಿವಾರಿ ಹೇಳಿದ್ದಾರೆ.
ಚೆನ್ನೈ: ಉಕ್ರೇನ್ (Ukrine) ಯುದ್ಧವು ಹೋಲಿಕೆಗೆ ಮೀರಿದ ದುರಂತವಾಗಿದ್ದು ಈ ರೀತಿಯಲ್ಲಿ ಕ್ರೂರವಾಗಿ ವರ್ತಿಸಲು ಅರ್ಹರಲ್ಲದ ಜನರ ಮೇಲೆ ರಷ್ಯಾ (Russia) ನಡೆಸಿದ ಆಕ್ರಮಣವಾಗಿದೆ ಎಂದು ಕಾಂಗ್ರೆಸ್ ಸಂಸದ ಮನೀಶ್ ತಿವಾರಿ (Manish Tewari) ಹೇಳಿದ್ದಾರೆ.
ಉಕ್ರೇನ್‌ನಲ್ಲಿದ್ದ 20,000 ಭಾರತೀಯ ವಿದ್ಯಾರ್ಥಿಗಳು ತಮ್ಮ ಜೀವಕ್ಕಾಗಿ ಪರದಾಡುವಂತಾ ಪರಿಸ್ಥಿತಿ ನಿರ್ಮಾಣವಾಗುವುದಕ್ಕೂ ಮುಂಚೆಯೇ ಕೇಂದ್ರ ಸರ್ಕಾರ ಅವರ ಸ್ಥಳಾಂತರ ಕಾರ್ಯವನ್ನು ನಡೆಸಬೇಕಾಗಿತ್ತು ಎಂದು ಮನೀಶ್ ತಿವಾರಿ ಹೇಳಿದರು.
ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಆಯೋಜಿಸಿದ ಥಿಂಕ್‌ಎಡು ಕಾನ್‌ಕ್ಲೇವ್‌ನ (ThinkEdu Conclave 2022) 10ನೇ ಆವೃತ್ತಿಯಲ್ಲಿ ಉಕ್ರೇನ್ ಮತ್ತು ಭಾರತದ ವಿದ್ಯಾರ್ಥಿಗಳ ಮುಂದೆ ದಾರಿ ಕುರಿತು ಲೇಖಕಿ ಮತ್ತು ಹಿರಿಯ ಪತ್ರಕರ್ತೆ ಕಾವೇರಿ ಬಾಮ್‌ಜಾಯ್ ಅವರೊಂದಿಗೆ ಮನೀಷ್ ತಿವಾರಿ ಮಾತನಾಡಿದ್ದರು.
ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಪರೀಕ್ಷೆ, ಕಟ್ಟುನಿಟ್ಟಾಗಿ ಪರೀಕ್ಷೆ ನಡೆಸಲು DC, SPಗೆ ಸೂಚನೆ
'ರಾಷ್ಟ್ರೀಯ ಪ್ರವೇಶ ಅರ್ಹತಾ ಪರೀಕ್ಷೆ( National Entrance Eligibility Test - NEET) ಒಂದು ತೀವ್ರ ದೋಷಪೂರಿತ ಮಾದರಿಯಾಗಿದೆ. 2021ರಲ್ಲಿ ಇಡೀ ದೇಶದಲ್ಲಿ 8 ಲಕ್ಷ ವಿದ್ಯಾರ್ಥಿಗಳು ನೀಟ್ ಗೆ ಅರ್ಹತೆ ಪಡೆದಿದ್ದಾರೆ. ಆದರೆ ಕೇವಲ 80,000 ಸೀಟುಗಳಿವೆ ಎಂದರು. ಎಂಟು ಲಕ್ಷ ವಿದ್ಯಾರ್ಥಿಗಳ ಪೈಕಿ 80,000 ವಿದ್ಯಾರ್ಥಿಗಳು ಸೀಟು ಪಡೆದಿದ್ದಾರೆ. ಇನ್ನುಳಿದ ವಿದ್ಯಾರ್ಥಿಗಳಲ್ಲಿ ಖಾಸಗಿ ವೈದ್ಯಕೀಯ ಕಾಲೇಜುಗಳಿಗೆ ಪ್ರವೇಶಿಸಲು ಅಪಾರ ಪ್ರಮಾಣದ ಶುಲ್ಕವನ್ನು ಪಾವತಿಸಲು ಸಿದ್ಧರಿರುವ ವಿದ್ಯಾರ್ಥಿಗಳ ಪಟ್ಟಿಯನ್ನು ರಚಿಸುತ್ತೀರಿ. ಇಲ್ಲಿ ಸೀಟುಗಳನ್ನು ಪಡೆಯಲು ಸಾಧ್ಯವಾಗದ ವಿದ್ಯಾರ್ಥಿಗಳು ಉಕ್ರೇನ್, ರಷ್ಯಾ, ಕಝಾಕಿಸ್ತಾನ್ ಮತ್ತು ಕಿರ್ಗಿಸ್ತಾನ್ ಗಳಿಗೆ ಹೋಗುತ್ತಾರೆ. NEET ಸಂಪೂರ್ಣವಾಗಿ ದೋಷಪೂರಿತ ಮಾದರಿಯಂತಿದೆ. ಅದು ಖಾಸಗಿ ಕಾಲೇಜುಗಳ ಪರವಾಗಿದೆ ಎಂದು ಮನೀಶ್ ಹೇಳಿದ್ದಾರೆ.
ಉಕ್ರೇನ್ ನಲ್ಲಿನ ಯುದ್ಧ ಸಂಘರ್ಷ ಪರಿಸ್ಥಿತಿಯಿಂದಾಗಿ ಅಲ್ಲಿಂದ ಸುಮಾರು 20,000 ವಿದ್ಯಾರ್ಥಿಗಳು ದೇಶಕ್ಕೆ ಹಿಂತಿರುಗಿದ್ದಾರೆ. ಇದು ದೇಶದ ಒಟ್ಟು ಸೀಟುಗಳ ಐದನೇ ಒಂದು ಭಾಗವಾಗಿದೆ. ಈ ದೇಶದಲ್ಲಿ ಒಂದೇ ಒಂದು ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳ ಕೊರತೆಯಿರುವ ಬಗ್ಗೆ ನನಗೆ ತಿಳಿದಿಲ್ಲ. ವಾಸ್ತವವಾಗಿ, ನೀವು ಗುಣಮಟ್ಟದ ವಿದ್ಯಾರ್ಥಿಗಳು ಬಯಸಿದರೆ ಮತ್ತು ಇನ್ನೂ ಹೆಚ್ಚಿನ ಚರ್ಚೆಯ ವಿಷಯವಾಗಿರುವ NEET ಅನ್ನು ಮುಂದುವರಿಸಬೇಕಾದರೆ ನೀವು ಅದನ್ನು ಸರಿಪಡಿಸಬೇಕಾಗಿದೆ. ಅರ್ಹತಾ ಶೇಕಡಾವಾರು ಕನಿಷ್ಠ 35 ಅಥವಾ 40 ಪ್ರತಿಶತಕ್ಕೆ ಹೆಚ್ಚಿಸಬೇಕು ಎಂದರು.
TELANGANA GOVT JOB ANNOUNCEMENTS: ತೆಲಂಗಾಣದಲ್ಲಿ 80 ಸಾವಿರ ಸರ್ಕಾರಿ ಉದ್ಯೋಗ ನೇಮಕಾತಿಗೆ ಕೆಸಿಆರ್ ಕರೆ
ಶಿಕ್ಷಣದ ಉದ್ದೇಶ ಹಣ ಗಳಿಕೆ ಅಲ್ಲ, ಬದಲಾವಣೆ ತರುವುದು, ಗೌರ್ ಗೋಪಾಲ್ ದಾಸ್: ಶಿಕ್ಷಣದ ಉದ್ದೇಶ ಹಣ ಗಳಿಸುವುದಲ್ಲ, ಬದಲಾವಣೆ ತರುವುದು ಎಂದು ಧಾರ್ಮಿಕ ಗುರು ಗೌರ್ ಗೋಪಾಲ್ ದಾಸ್ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಆಯೋಜಿಸಿರುವ ಥಿಂಕ್ ಎಡು 10ನೇ ಆವೃತ್ತಿ (Think Edu 2022)ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
ಬದಲಾವಣೆ ತಂದಾಗ ಹಣ ತನ್ನಿಂತಾನಾಗಿಯೇ ಬರುತ್ತದೆ. ಶಿಕ್ಷಣದ ಗುರಿ ಮತ್ತು ಉದ್ದೇಶ ಬದಲಾವಣೆ ತರುವುದಾಗಿದ್ದು, ಬದಲಾವಣೆ ತಂದಾಗ ಹಣ ತನ್ನಿಂತಾನಾಗಿಯೇ ಬರುತ್ತದೆ. ಆಗ ನೀವು ಗುಂಪಿನಲ್ಲಿ ಗೋವಿಂದ ಎನಿಸದೆ ವಿಶಿಷ್ಟವಾಗಿ ಪ್ರತ್ಯೇಕವಾಗಿ ಎದ್ದು ನಿಲ್ಲುತ್ತೀರಿ ಮತ್ತು ನಿಮ್ಮ ಬೆಲೆ, ಸಾಮರ್ಥ್ಯ ಹೆಚ್ಚಾಗುತ್ತದೆ ಎಂದರು. ಭಾರತೀಯ ದಾರಿಯಲ್ಲಿ ಸಂತೋಷ ಗಳಿಕೆ ವಿಷಯದಲ್ಲಿ ಅವರು ಮಾತನಾಡುತ್ತಿದ್ದರು.
ಶಿಕ್ಷಣವೆನ್ನುವುದು ನಮ್ಮ ಮನೋವೃತ್ತಿಯ ಬದಲಿಗೆ ಕೌಶಲ್ಯಕ್ಕೆ ಸಂಬಂಧಿಸಿದ್ದಾಗಿರುತ್ತದೆ. ಯುವಜನತೆಯ ಒಟ್ಟಾರೆ ಬೆಳವಣಿಗೆಗೆ ನಾವು ಗಮನಹರಿಸಬೇಕು. ಶ್ರದ್ಧೆ ಅಷ್ಟೇ ಮುಖ್ಯವಾಗುತ್ತದೆ. ನೀವು ಯಾವುದಾದರೊಂದು ವಿಷಯದಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದೀರಿ, ವಿಶೇಷ ಕೌಶಲ್ಯವಿದೆ, ಆಸಕ್ತಿಯಿದೆ ಎಂದಾದರೆ ಅದಕ್ಕೆ ಬದ್ಧರಾಗಿ ನಿಮ್ಮ ಗುರಿ ತಲುಪಲು ನೋಡಿ. ಅದು ಎಷ್ಟು ಸಮಯ ತೆಗೆದುಕೊಂಡರೂ ಚಿಂತೆಯಿಲ್ಲ. ನೀವು ಈಗ ಸಾಕಷ್ಟು ಶ್ರಮ ಹಾಕದಿದ್ದರೆ ಮುಂದೆ ನಿಮ್ಮ ಜೀವನದಲ್ಲಿ ಒಳ್ಳೆಯದಾಗುವುದಿಲ್ಲ ಎಂದಿದ್ದಾರೆ.