Asianet Suvarna News Asianet Suvarna News

ಪಿಎಚ್‌ಡಿ ಅಭ್ಯರ್ಥಿಗಳಿಗೆ ಗೂಗಲ್ ಇಂಡಿಯಾ ಫೆಲೋಶಿಪ್!

* ಆಸಕ್ತ ಹಾಗೂ ಪ್ರತಿಭಾನ್ವಿತ ಪಿಎಚ್‌ಡಿ ಅಭ್ಯರ್ಥಿಗಳು ಈ ಫೆಲೋಶಿಪ್‌ಗೆ ಅಪ್ಲೈ ಮಾಡಬಹುದು
* ಗೂಗಲ್ ಇಂಡಿಯಾ ಫೆಲೋಶಿಪ್‌ಗೆ ಅಪ್ಲೈ ಮಾಡಲು ಇದೇ ಮೇ 18 ಕೊನೆಯ ದಿನವಾಗಿದೆ
* ಫೆಲೋಶಿಫ್‌ಗೆ ಆಯ್ಕೆಯಾದ ಪಿಎಚ್‌ಡಿ ಅಭ್ಯರ್ಥಿಗಳಿಗೆ 50 ಸಾವಿರ ಡಾಲರ್ ಸ್ಟೈಫಂಡ್
 

Google PhD Fellowship India Program 2022 for needy students who seek to influence future of technology ckm
Author
Bengaluru, First Published May 4, 2022, 7:58 PM IST

ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಅಥವಾ ಶಿಷ್ಯವೇತನ ಅನ್ನೋದು ಬಹಳ ಸಹಕಾರಿ. ಬಡ ಹಾಗೂ ಹಿಂದುಳಿದ ವರ್ಗದವರ ಉನ್ನತ ಶಿಕ್ಷಣ ಕನಸ್ಸನ್ನು ನೆರವೇರಿಸುವಲ್ಲಿ ಸ್ಕಾಲರ್ಶಿಪ್ (Scholarship) ಪಾತ್ರ ಬಹಳ ಮಹತ್ವದ್ದಾಗಿರುತ್ತದೆ. ಸ್ಕಾಲರ್ಶಿಪ್ ಅಂದ್ರೆ ವಿವಿಧ ವಯಸ್ಸಿನ ಮತ್ತು ಅರ್ಹತೆಗಳ ವಿದ್ಯಾರ್ಥಿಗಳಿಗೆ ನೀಡಲಾಗುವ ಹಣಕಾಸಿನ ನೆರವಿನ ರೂಪವಾಗಿದೆ. ಅವರು ವಿಭಿನ್ನ ಅರ್ಹತಾ ಮಾನದಂಡಗಳನ್ನು ಹೊಂದಿರಬಹುದು. ಕಳೆದ 2 ವರ್ಷಗಳಿಂದ ಕೋವಿಡ್ (Covid-19) ಸಾಂಕ್ರಾಮಿಕ ಸಮಯದಲ್ಲಿ ಭಾರತದಲ್ಲಿ ಅನೇಕ ವಿದ್ಯಾರ್ಥಿವೇತನಗಳು ಜಾರಿಗೆ ಬಂದಿವೆ. ಇದು ಮಕ್ಕಳು ಮತ್ತು ಪೋಷಕರನ್ನು ಕಳೆದುಕೊಂಡಿರುವ ಅಥವಾ ಸದಸ್ಯರನ್ನು ಗಳಿಸುವ ವಿದ್ಯಾರ್ಥಿಗಳನ್ನು ಬೆಂಬಲಿಸುತ್ತದೆ.  ಸರಿಯಾದ ಸ್ಕಾಲರ್‌ಶಿಪ್ (Scholarship) ಮತ್ತು ಫೆಲೋಶಿಪ್ (Fellowship) ಕಾರ್ಯಕ್ರಮಗಳು ಉತ್ತಮ ಅಧ್ಯಾಪಕರು ಮತ್ತು ಉದ್ಯೋಗದ ಸೂಕ್ಷ್ಮ ವ್ಯತ್ಯಾಸಗಳಿಗೆ ಪ್ರವೇಶವನ್ನು ನೀಡುವ ಮೂಲಕ ನಿಮ್ಮ ವೃತ್ತಿಜೀವನವನ್ನು ಪ್ರಾರಂಭಿಸಲು ಸಹಾಯ ಮಾಡಬಹುದು.  ಇನ್ನು ವಿದೇಶದಲ್ಲಿ ಅಧ್ಯಯನ ಮಾಡಲು ಬಯಸುವವರಿಗೂ ಸಾಕಷ್ಟು ಫೆಲೋಶಿಫ್ಗಳು ದೊರೆಯುತ್ತವೆ. ಕಡಿಮೆ ಶುಲ್ಕದಲ್ಲಿ ಉನ್ನತ ಅಧ್ಯಯನಕ್ಕಾಗಿ ವಿದೇಶಿ ವಿಶ್ವವಿದ್ಯಾಲಯಗಳಿಗೆ ಹೋಗಲು ಹಲವು ವಿದ್ಯಾರ್ಥಿವೇತನಗಳು  ಸಹಾಯ ಮಾಡುತ್ತದೆ. ಗೂಗಲ್ ಇಂಡಿಯಾ ಫೆಲೋಶಿಫ್‌ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

ISRO Young Scientist ಕಾರ್ಯಕ್ರಮಕ್ಕೆ ಜಾರ್ಖಂಡ್‌ನ 10ನೇ ತರಗತಿ ವಿದ್ಯಾರ್ಥಿ ಆಯ್ಕೆ

ಪದವಿ (Degree), ಸ್ನಾತಕೋತ್ತರ ಪದವಿ (Post-Graduation) ಹಾಗೂ ಪಿಹೆಚ್ಡಿ (PhD) ಪದವಿ ಪಡೆಯಲು ಜಗತ್ತಿನಾದ್ಯಂತ ಹಲವು ಪ್ರತಿಷ್ಟಿತ ಕಂಪನಿಗಳು ಫೆಲೋಶಿಪ್ ಒದಗಿಸುತ್ತಾ ಬಂದಿವೆ. ಇದೀಗ ಗೂಗಲ್ ಇಂಡಿಯಾ (Google India) ಕಂಪನಿ, ಪಿಎಚ್ಡಿ ಮಾಡುವ ಅಭ್ಯರ್ಥಿಗಳಿಗೆ ಗೂಗಲ್ ಪಿಎಚ್‌ಡಿ (GOOGLE PHD) ಫೆಲೋಶಿಪ್ ಇಂಡಿಯಾ ಪ್ರೋಗ್ರಾಂ 2022 ಯೋಜನೆ ಘೋಷಿಸಿದೆ. ತಂತ್ರಜ್ಞಾನದ ಭವಿಷ್ಯದ ಮೇಲೆ ಪ್ರಭಾವ ಬೀರಲು ಬಯಸುವ ಹಿನ್ನೆಲೆಯ ಅಭ್ಯರ್ಥಿಗಳಿಗೆ PhD ಅನ್ನು ಬೆಂಬಲಿಸುವುದು ಈ ಯೋಜನೆಯ ಉದ್ದೇಶವಾಗಿದೆ ಎಂದು ಹೇಳಲಾಗುತ್ತಿದೆ.

PhD ಗೆ ದಾಖಲಾದ ಅಭ್ಯರ್ಥಿಗಳಿಗೆ GOOGLE PHD ಫೆಲೋಶಿಪ್ ಇಂಡಿಯಾ ಪ್ರೋಗ್ರಾಂ 2022  ಮುಕ್ತವಾಗಿದೆ. ಭಾರತೀಯ ವಿಶ್ವವಿದ್ಯಾನಿಲಯದಿಂದ ಪದವಿ / ಸ್ನಾತಕೋತ್ತರ ಪದವಿಯೊಂದಿಗೆ ಭಾರತೀಯ ವಿಶ್ವವಿದ್ಯಾಲಯದಲ್ಲಿ ಪಿಎಚ್ಡಿ ಅಧ್ಯಯನ ಕೈಗೊಂಡವರು ಈ ಯೋಜನೆಯಡಿ ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ಭಾರತದಲ್ಲಿ ನೋಂದಾಯಿತ ಸಂಸ್ಥೆಯಲ್ಲಿ ಉದ್ಯೋಗದಲ್ಲಿರುವ ವೃತ್ತಿಪರರಾಗಿರಬೇಕು.  ಆರಂಭಿಕ ಹಂತದ ಪಿಎಚ್‌ಡಿ (PhD) ವಿದ್ಯಾರ್ಥಿ (Candidates) ಗಳಿಗೆ ಈ ಫೆಲೋಶಿಪ್ ಲಭ್ಯವಾಗಲಿದೆ.  ಪಿಎಚ್ಡಿ ಮಾಡುವ ಅಭ್ಯರ್ಥಿಗಳಿಗೆ 4 ವರ್ಷಗಳವರೆಗೆ GOOGLE PHD ಫೆಲೋಶಿಪ್ ಸಿಗಲಿದೆ. ಅಮೆರಿಕನ್ ಡಾಲರ್ 50 ಸಾವಿರ ಸ್ಟೈಫಂಡ್ ಪಡೆಯಲು ಅರ್ಹರಾಗಿರುತ್ತಾರೆ. ಪಿಎಚ್ಡಿ  ಸಂಶೋಧನೆಗೆ ಸಂಬಂಧಿಸಿದ ಚಟುವಟಿಕೆಗಳು, ಸಾಗರೋತ್ತರ ಪ್ರಯಾಣ ಸೇರಿದಂತೆ ಪ್ರಯಾಣ ವೆಚ್ಚಗಳನ್ನು ಸರಿದೂಗಿಸಲು ಈ ಫೆಲೋಶಿಪ್ ನೀಡಲಾಗುತ್ತದೆ. 

ವಿದ್ಯಾರ್ಥಿಗಳಿಗೆ ಸಾಲ ರೂಪದ ನೆರವಿಗೆ ಮುಂದಾದ ಬಿಎಚ್‌ಯು    

ಇನ್ನು ಕೊನೆಯ ಹಂತದ ಪಿಎಚ್‌ಡಿ ವಿದ್ಯಾರ್ಥಿಗಳಿಗೆ 1 ವರ್ಷದ GOOGLE PHD ಫೆಲೋಶಿಪ್ ಸಿಗಲಿದೆ. ಸಂಶೋಧನಾ ಕೊಡುಗೆಗಳನ್ನು ಗುರುತಿಸಲು ಅಮೆರಿಕ ಡಾಲರ್ 10 ಸಾವಿರ ಸ್ಟೈಫಂಡ್ ಲಭ್ಯವಾಗಲಿದೆ. ಸಂಶೋಧನೆ ಸಂಬಂಧಿತ ಚಟುವಟಿಕೆಗಳು, ಸಾಗರೋತ್ತರ ಪ್ರಯಾಣ, ಪ್ರಯಾಣ ವೆಚ್ಚ ಸೇರಿ ಒಟ್ಟು ಅಮೆರಿಕ ಡಾಲರ್ 10 ಸಾವಿರ ಸ್ಟೈಫಂಡ್ ದೊರೆಯಲಿದೆ. ಇನ್ನು  GOOGLE PHD ಫೆಲೋಶಿಪ್ ಇಂಡಿಯಾ ಪ್ರೋಗ್ರಾಂ 2022 ಗೆ ಆನ್ಲೈನ್ ಮೂಲಕ ಮಾತ್ರ ಅಪ್ಲಿಕೇಶನ್ ಸಲ್ಲಿಸಬೇಕಾಗಿದ್ದು, ಮೇ 18 ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕವಾಗಿದೆ.

ಗೂಗಲ್ ಇಂಡಿಯಾ ಕಂಪನಿಯು ಈ ಫೆಲೋಶಿಪ್‌ ಆಸಕ್ತ ಹಾಗೂ ಪ್ರತಿಭಾನ್ವಿತ ಪಿಎಚ್‌ಡಿ ಅಭ್ಯರ್ಥಿಗಳಿಗೆ ಅತ್ಯುತ್ತಮ ಆಯ್ಕೆಯಾಗಿದೆ. ಸಾಕಷ್ಟು ಹಣ ದೊರೆಯುವುದರಿಂದ ಅಭ್ಯರ್ಥಿಗಳು ತಮ್ಮ ಪಿಎಚ್‌ಡಿಯನ್ನು ಸರಾಗವಾಗಿ ಮುಗಿಸಬಹುದಾಗಿದೆ ಎಂದು ಹೇಳಬಹುದು. ಆಸಕ್ತರು ಕೂಡಲೇ ಈ ಫೆಲೋಶಿಪ್‌ಗೆ ಅರ್ಜಿಸಲ್ಲಿಸಬಹುದು.

Follow Us:
Download App:
  • android
  • ios