Asianet Suvarna News Asianet Suvarna News

NITK Surathkal ಕ್ಯಾಂಪಸ್ ಸೆಲೆಕ್ಷನ್‌, ಅಮೆರಿಕಾ ಕಂಪೆನಿಯಲ್ಲಿ ವಿದ್ಯಾರ್ಥಿಗೆ 2.3 ಕೋಟಿ ರೂ ಪ್ಯಾಕೇಜ್ ಉದ್ಯೋಗ

ಎನ್‌ಐಟಿಕೆ ಸುರತ್ಕಲ್ ನ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿಯೊಬ್ಬರು 2023 ರ ವಾರ್ಷಿಕ ಕ್ಯಾಂಪಸ್ ಡ್ರೈವ್‌ನಲ್ಲಿ US ಮೂಲದ ಕಂಪನಿಯಿಂದ 2.3 ಕೋಟಿ  ರೂ ಪ್ಯಾಕೇಜ್ ಅನ್ನು ಪಡೆದುಕೊಂಡಿದ್ದಾರೆ.

NITK Surathkal Student gets Rs 2.3 crore package from US-based company in off-campus drive gow
Author
First Published Jul 3, 2023, 4:12 PM IST

ಮಂಗಳೂರು (ಜು.3): ಎನ್‌ಐಟಿಕೆ ಸುರತ್ಕಲ್ ನ (National Institute of Technology Karnataka) ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿಯೊಬ್ಬರು 2023 ರ ವಾರ್ಷಿಕ ಕ್ಯಾಂಪಸ್ ಡ್ರೈವ್‌ನಲ್ಲಿ US ಮೂಲದ ಕಂಪನಿಯಿಂದ 2.3 ಕೋಟಿ  ರೂ ಪ್ಯಾಕೇಜ್ ಅನ್ನು ಪಡೆದುಕೊಂಡಿದ್ದಾರೆ. ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಸಾಮಾನ್ಯವಾಗಿ ಕನಿಷ್ಠ 5 ಲಕ್ಷ ವರೆಗಿನ ಅತ್ಯಂತ ಬೇಡಿಕೆಯ ಪ್ಯಾಕೇಜ್‌ನೊಂದಿಗೆ  ಕೆಲಸ ಗಿಟ್ಟಿಸಿಕೊಳ್ಳುತ್ತಾರೆ. ಇಂತಹ ಸಂದರ್ಭದಲ್ಲಿ, ಕಂಪ್ಯೂಟರ್ ಸೈನ್ಸ್‌ನ ಪದವೀಧರರನ್ನು ಆಫ್-ಕ್ಯಾಂಪಸ್ ಡ್ರೈವ್‌ನಿಂದ ಅಮೆರಿಕದ  ಡಾಟಾಬ್ರಿಕ್ಸ್ ಕಂಪನಿಯು 2.3 ಕೋಟಿ ಪ್ಯಾಕೇಜ್ ನೀಡಿ  ಕೆಲಸಕ್ಕೆ ಸೇರಿಸಿಕೊಂಡಿದೆ. 

ಇದು ಕ್ಯಾಂಪಸ್ ಡ್ರೈವ್ ನಿಂದ ದಾಖಲಾದ ಈವರೆಗಿನ ಅತ್ಯಧಿಕ ಪ್ಯಾಕೇಜ್ ಆಗಿ ಹೊರಹೊಮ್ಮಿದೆ. ಆನ್-ಕ್ಯಾಂಪಸ್ ಪ್ಲೇಸ್‌ಮೆಂಟ್‌ಗಳು ಅತ್ಯಧಿಕ ಪ್ಯಾಕೇಜ್ 55 ಲಕ್ಷವನ್ನು ಪಡೆದುಕೊಂಡಿರುವ ಬಗ್ಗೆ ಉಲ್ಲೇಖವಿದೆ. ಆದರೆ ಈಗ ಕಾಲೇಜು ವಿದ್ಯಾರ್ಥಿ ಪಡೆದಿರುವ ಪ್ಯಾಕೇಜ್ ಕಳೆದ ವರ್ಷದ ಅತ್ಯಧಿಕ ಅಂದರೆ 45 ಲಕ್ಷಕ್ಕಿಂತ ಹೆಚ್ಚು ಪ್ಯಾಕೇಜ್ ಎಂಬುದು ಗಮನಾರ್ಹ ಸಂಗತಿಯಾಗಿದೆ. ಇನ್ನು ಈ ಕ್ಯಾಂಪಸ್ ಡ್ರೈವ್ ನಲ್ಲಿ ಕನಿಷ್ಠ ಪ್ಯಾಕೇಜ್ ಪಡೆದಿರುವುದೆಂದರೆ  5 ಲಕ್ಷ. ಕಳೆದ ವರ್ಷದ  ಬ್ಯಾಚ್‌ ನ ವಿದ್ಯಾರ್ಥಿಗಳು  ಕನಿಷ್ಠ 3.7 ಲಕ್ಷ ಪಡೆದುಕೊಂಡಿದ್ದರು. ಈ ವರ್ಷ  55 ಲಕ್ಷ ಗರಿಷ್ಠ ಪ್ಯಾಕೇಜ್‌ನಲ್ಲಿ ಹಲವು ವಿದ್ಯಾರ್ಥಿಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. ಒಟ್ಟಾರೆಯಾಗಿ ಶೇ.94ರಷ್ಟು ಬಿ.ಟೆಕ್. ವಿದ್ಯಾರ್ಥಿಗನ್ನು ಜೂನ್ 28ರಂದು ಹಲವು ಕಂಪೆನಿಗೆ ಆಯ್ಕೆಯಾಗಿದ್ದಾರೆ.

Karnataka Textbook Revision: ಸರಕಾರದಿಂದ 2023-24ನೇ ಸಾಲಿನ ಹೊಸ ಪಠ್ಯಗಳ ಪಟ್ಟಿ ಬಿಡುಗಡೆ

ಈ ಬಗ್ಗೆ ಮಾತನಾಡಿದ ವೃತ್ತಿ ಅಭಿವೃದ್ಧಿಯ ಅಧ್ಯಕ್ಷ ಅಣ್ಣಪ್ಪ ಬಿ, ಈ ಋತುವಿನಲ್ಲಿ ಟೆಕ್ಕಿಗಳಿಂದ ಹೆಚ್ಚಿನ ಪ್ರಮಾಣದಲ್ಲಿ ವಿದ್ಯಾರ್ಥಿಗಳನ್ನು ನೇಮಿಸಿಕೊಳ್ಳಲಾಗಿದೆ. ಇದು ಆನ್-ಕ್ಯಾಂಪಸ್ ಡ್ರೈವ್‌ನಿಂದ ನೇಮಕಗೊಳ್ಳುವ ಕಂಪನಿಗಳ ಸಂಖ್ಯೆಯಲ್ಲಿ ಗಮನಾರ್ಹ ಇಳಿಕೆಗೆ ಕಾರಣವಾಗಿದೆ. ಹೆಚ್ಚಿನ ವಿದ್ಯಾರ್ಥಿಗಳು ಉತ್ತಮ ಆರಂಭದೊಂದಿಗೆ ತೊಡಗಿಸಿಕೊಂಡರು. ವಜಾಗೊಳಿಸುವ ಅವಧಿಯು ಕೊನೆಗೊಂಡಿದೆ ಎಂದು ಭಾವಿಸುತ್ತೇವೆ ಎಂದು ಹೇಳಿದ್ದಾರೆ. 

ಕರ್ನಾಟಕದಲ್ಲಿ ರಾಷ್ಟ್ರೀಯ ಬದಲಿಗೆ ರಾಜ್ಯ ಶಿಕ್ಷಣ ನೀತಿ ಜಾರಿ: ಸಚಿವ ಎಂ.ಸಿ.ಸುಧಾಕರ

ಕಂಪ್ಯೂಟರ್ ಸೈನ್ಸ್‌ ವಿದ್ಯಾರ್ಥಿಗಳು ಹೆಚ್ಚಾಗಿ 45 ಲಕ್ಷ ಪ್ಯಾಕೇಜ್‌ಗಳಿಗಿಂತ ಹೆಚ್ಚಿನದನ್ನು ಪಡೆದಿದ್ದಾರೆ. ಅವುಗಳ ಜೊತೆಗೆ ಮಾಹಿತಿ ತಂತ್ರಜ್ಞಾನ, ಇ & ಸಿ  ವಿದ್ಯಾರ್ಥಿಗಳು ಕೂಡ ಅತ್ಯುತ್ತಮ ಪ್ರೊಫೈಲ್‌ಗಳನ್ನು ಪಡೆದುಕೊಂಡಿದ್ದಾರೆ. 2022 ಟ್ವಿಟರ್, ಗೂಗಲ್, ಅಮೆಜಾನ್, ಹೆಚ್‌ಸಿಎಲ್ ಮುಂತಾದ ಟೆಕ್ ದೈತ್ಯರಿಂದ ಅನೇಕ ಟೆಕ್ಕಿಗಳನ್ನು ವಜಾಗೊಳಿಸಿದ ವರ್ಷವಾಗಿದೆ. ಇದು ವಿದ್ಯಾರ್ಥಿಗಳು ಆಫ್-ಕ್ಯಾಂಪಸ್ ಡ್ರೈವ್‌ಗಳು, ಇತರ ಸ್ಟ್ರೀಮ್‌  ಇತ್ಯಾದಿಗಳಿಗೆ ಹೋಗಲು ಕಾರಣವಾಯಿತು. 

Follow Us:
Download App:
  • android
  • ios