Asianet Suvarna News Asianet Suvarna News

Karnataka Textbook Revision: ಸರಕಾರದಿಂದ 2023-24ನೇ ಸಾಲಿನ ಹೊಸ ಪಠ್ಯಗಳ ಪಟ್ಟಿ ಬಿಡುಗಡೆ

2023-24ನೇ ಸಾಲಿನ ಪಠ್ಯಪುಸ್ತಕಗಳ ತಿದ್ದೋಲೆ ಆಗಿದೆ. ಕೈಬಿಟ್ಟಿರೋ ಪಠ್ಯಗಳು, ಹೊಸ ಪಠ್ಯಗಳ ಬಗ್ಗೆ ಸರಕಾರ ಪಟ್ಟಿ ಬಿಡುಗಡೆ ಮಾಡಿದೆ. 

Karnataka Textbook Revision government released the  2023-24 year new chapter list gow
Author
First Published Jul 1, 2023, 4:27 PM IST

ಬೆಂಗಳೂರು (ಜು.1): 2023-24ನೇ ಸಾಲಿನ ಪಠ್ಯಪುಸ್ತಕಗಳ ತಿದ್ದೋಲೆ ಆಗಿದೆ. ಹಳೇ ಪಠ್ಯಗಳನ್ನ ಕೈಬಿಟ್ಟು ಹೊಸ ಪಠ್ಯ ಸೇರ್ಪಡೆ ಮಾಡಲಾಗಿದೆ. ಕೈಬಿಟ್ಟಿರೋ ಪಠ್ಯಗಳು, ಹೊಸ ಪಠ್ಯಗಳ ಬಗ್ಗೆ ಸರಕಾರ ಪಟ್ಟಿ ಬಿಡುಗಡೆ ಮಾಡಿದೆ. 

ಯಾವ್ಯಾವ ಪಠ್ಯ ಕೈಬಿಡಲಾಗಿದೆ?:
ಪ್ರಥಮ ಭಾಷೆ ಕನ್ನಡ 6 ನೇ ತರಗತಿಯಲ್ಲಿ ನಿರ್ಮಲಾ ಸೂರತ್ಕಲ್ ಬರೆದ  'ನಮ್ಮದೇನಿದೆ' ಪದ್ಯಕ್ಕೆ ಕತ್ತರಿ ಪ್ರಯೋಗ ಮಾಡಲಾಗಿದೆ. ಇದರ ಬದಲಾಗಿ 'ನೀವೋದ ಮರುದಿನ'-ಚನ್ನಣ್ಣ ವಾಲೇಕರ್ ಎಂಬ ಪದ್ಯವನ್ನು  ಸೇರ್ಪಡೆ ಮಾಡಲಾಗಿದೆ.

7 ನೇ ತರಗತಿಯಲ್ಲಿ 
1) ಪೂರಕ ಗದ್ಯ-ಸಾಮಾಜಿಕ ಕಳಕಳಿಯ ಮೊದಲ ಶಿಕ್ಷಕಿ- ರಮಾನಂದಚಾರ್ಯ  ಅವರ ಗದ್ಯವನ್ನು ಪರಿಗಣಿಸಬಾರದು ಎಂದು ಸೂಚಿಸಲಾಗಿದೆ. ಅದರ ಬದಲಾಗಿ ಸಾವಿತ್ರ ಭಾಯಿಪುಲೆ-ಡಾ.ಹೆಚ್.ಎಸ್.ಅನುಪಮ ಅವರ ಗದ್ಯ ಸೇರ್ಪಡೆ ಮಾಡಲಾಗಿದೆ.

ಶಾಲೆಯಲ್ಲಿ ಶಿಕ್ಷಕ, ಹೊರಗಡೆ ಶಿಕ್ಷಕರ ಪುತ್ರನಿಂದ ಕಿರುಕುಳ: 16ರ ಹರೆಯದ ಸಾರಾ ಆತ್ಮಹತ್ಯೆಗೆ

ಇನ್ನು 8 ನೇ ತರಗತಿಯಲ್ಲಿ
1) ಗದ್ಯ-ಭೂ ಕೈಲಾಸ-ಪಾರಂಪಲ್ಲಿ ನರಸಿಂಹ ಐತಾಳ ಇದನ್ನು ಪರಿಗಣಿಸಬಾರದು ಎಂದು ತಿಳಿಸಲಾಗಿದೆ. ಇದರ ಬದಲಾಗಿ ಮಗಳಿಗೊಂದು ಪತ್ರ-ಜವಹಾರ್ ಲಾಲ್ ನೆಹರೂ ಅವರ ಗದ್ಯ ಸೇರಿಸಲಾಗಿದೆ.

8ನೇ ತರಗತಿ:
ಸಾಲವನ್ನು ಗೆದ್ದವರು-ಜೆ.ಟಿ.ಗಟ್ಟಿ  ಅವರ ಪಾಠವನ್ನು ಪರಿಗಣಿಸಬಾರದು.  ಬದಲಾಗಿ ಬ್ಲಡ್ ಗ್ರೂಪ್ - ವಿಜಯಮಾಲಾ ರಂಗನಾಥ್ ಅವರ ಪಾಠವನ್ನು ಸೇರ್ಪಡೆ ಮಾಡಲಾಗಿದೆ.

10 ನೇ ತರಗತಿ
1) ನಿಜವಾದ ಆದರ್ಶ ಪುರುಷ ಯಾರಾಗಬೇಕು-ಕೇಶವ ಹೆಡ್ಗೆವಾರ್  ಅವರ ಗದ್ಯವನ್ನು ಪರಿಗಣಿಸಬಾರದು. ಬದಲಾಗಿ ಸುಕುಮಾರಸ್ವಾಮಿಯ ಕಥೆ (ಶಿವಕೋಟಾಚಾರ್ಯ)ಯನ್ನು ಸೇರ್ಪಡೆಗೊಳಿಸಲಾಗಿದೆ.

ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆ: 41.39% ಮಕ್ಕಳು ಪಾಸ್‌, ಬಾಲಕಿಯರು, ಹಳ್ಳಿ ವಿದ್ಯಾರ್ಥಿಗಳ

10ನೇ ತರಗತಿ
ಶ್ರೇಷ್ಠ ಭಾರತೀಯ ಚಿಂತನೆಗಳು-ಶತಾವಧಾನಿ ಡಾ.ಆರ್.ಗಣೇಶ್ ಇದನ್ನು ಪರಿಗಣಿಸಬಾರದು, ಬದಲಾಗಿ ಸಾರಾ ಅಬೂಬಕ್ಕರ್ ಅವರ ಯುದ್ಧ ಎನ್ನುವ ಪಾಠವನ್ನು ಸೇರ್ಪಡೆ ಮಾಡಲಾಗಿದೆ. 

10 ನೇ ತರಗತಿ
ತಾಯಿ ಭಾರತೀಯ ಅಮರಪುತ್ರರು-ಚಕ್ರವರ್ತಿ ಸೂಲಿಬೆಲೆ ಅವರ ಸಂಪೂರ್ಣ ಪಾಠ ಕೈಬಿಡಲಾಗಿದೆ. 

10 ನೇ ತರಗತಿ
ವೀರಲವ (ಲಕ್ಷ್ಮೀಶ)  ಪದ ತಿದ್ದುಪಡಿ ಮಾಡಲಾಗಿದೆ.

9ನೇ ತರಗತಿಯಲ್ಲಿ 
ಅಚ್ಚರಿಯ ಜೀವಿ ಇಂಬಳ-ಸತ್ಯನಾರಾಯಣ ಭಟ್ ಅವರ ಪಾಠವನ್ನು ಕೈ ಬಿಡಲಾಗಿದೆ. ಅದರ ಬದಲಾಗಿ ಉರುಸ್ ಗಳಲ್ಲಿ ಭಾವೈಕ್ಯತೆ-ದಸ್ತಗಿರ್ ಅಲಿಬೈ ಎಂಬ ಗದ್ಯ ಸೇರ್ಪಡೆ ಮಾಡಲಾಗಿದೆ.

ಸಮಾಜ ವಿಜ್ಞಾನ 6 ನೇ ತರಗತಿ
1) ನಮ್ಮ ಹೆಮ್ಮೆಯ ರಾಜ್ಯ ಕರ್ನಾಟಕ (371 ಎ ಸೇರ್ಪಡೆ)
ಕಲಬುರಗಿ ಪುಟ ಸಂಖ್ಯೆ 33 ವಿಶೇಷ ಸ್ಥಾನಮಾನ ನೀಡಿದೆ ಪದ ಸೇರ್ಪಡೆ

6 ನೇ ತರಗತಿ
ವೇದ ಕಾಲದ ಸಂಸ್ಕೃತಿ(ಅಧ್ಯಾಯವನ್ನ ನಮ್ಮ ಹೆಮ್ಮೆಯ ರಾಜ್ಯ ಕರ್ನಾಟಕಕ್ಕೆ ಸೇರ್ಪಡೆ)

6ನೇ ತರಗತಿ ಭಾಗ-1
ಹೊಸ ಧರ್ಮಗಳ ಉದಯ (ಕೈಬಿಡಲಾಗಿದೆ)
ವೇದ ಕಾಲದ ಸಂಸ್ಕೃತಿ ಅಧ್ಯಾಯದ ಬಳಿಕ ಸೇರ್ಪಡೆ

6 ನೇ ತರಗತಿ ಪೌರನೀತಿ
ಮೂಲಭೂತ ಹಕ್ಕುಗಳು & ಕರ್ತವ್ಯಗಳು 
(ಕೈಬಿಡಲಾಗಿದೆ)
ಮಾನವ ಹಕ್ಕುಗಳು & ಕರ್ತವ್ಯ ಸೇರ್ಪಡೆ

7ನೇ ತರಗತಿ ಭಾಗ-1 ಇತಿಹಾಸ
ಜಗತ್ತಿನ ಪ್ರಮುಖ ಘಟನೆಗಳು (ರಿಲಿಜನ್ ಬದಲು ಧರ್ಮ ಸೇರ್ಪಡೆ)

7 ನೇ ತರಗತಿ ಇತಿಹಾಸ ಭಾಗ-1
ಮೈಸೂರು & ಇತರ ಸಂಸ್ಥಾನಗಳು (ಮೈಸೂರಿನ ಒಡೆಯರ್ ಸೇರ್ಪಡೆ)

7 ನೇ ತರಗತಿ ಭಾಗ-2 ಇತಿಹಾಸ
ಸಾಮಾಜಿಕ & ಧಾರ್ಮಿಕ ಸುಧಾರಣೆಗಳು (5 ರಲ್ಲಿ ಮಹಿಳಾ ಸುಧಾರಕರ ಸೇರ್ಪಡೆ)

7ನೇ ತರಗತಿ ಇತಿಹಾಸ ಭಾಗ-2
ಸ್ವಾತಂತ್ರ್ಯ ಸಂಗ್ರಾಮ (ಸೇರ್ಪಡೆ)
ಸ್ವಾತಂತ್ರ್ಯ ಸಂಗ್ರಾಮ( ಮಾಪಿಲಿ ದಂಗೆ ಅನುಬಂಧ 6 ರ ಮಹಿಳಾ ಸ್ವಾತಂತ್ರ್ಯ ಹೋರಾಟಗಾರರ ಸೇರ್ಪಡೆ)

10 ನೇ ತರಗತಿ ರಾಜ್ಯಶಾಸ್ತ್ರ ಭಾಗ-1
ಭಾರತಕ್ಕಿರುವ ಸವಾಲುಗಳು & ಪರಿಹಾರೋಪಾಯಗಳು (ಪದಗಳ ಸೇರ್ಪಡೆ)

Follow Us:
Download App:
  • android
  • ios