ವಿದೇಶದ ವಿಶ್ವವಿದ್ಯಾಲಯದಿಂದ ದಾಖಲೆಯ 2 ಕೋಟಿ ರೂ ವಿದ್ಯಾರ್ಥಿವೇತನ ಪಡೆದ ಎನ್‌ಐಟಿ ವಿದ್ಯಾರ್ಥಿ
ಎನ್‌ಐಟಿ ಹಮೀರ್‌ಪುರದ ಭೌತಶಾಸ್ತ್ರದ ವಿದ್ಯಾರ್ಥಿ ದೀಪಕ್ ಭಾರದ್ವಾಜ್ ಇಂಗ್ಲೆಂಡ್ ನಲ್ಲಿರುವ ಬ್ರಿಸ್ಟಲ್ ವಿಶ್ವವಿದ್ಯಾಲಯದಿಂದ 2 ಕೋಟಿ ರೂಪಾಯಿ ಮೌಲ್ಯದ ವಿದ್ಯಾರ್ಥಿವೇತನವನ್ನು ಪಡೆಯುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ.
ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ( National Institute of Technology -ಎನ್‌ಐಟಿ) ಹಮೀರ್‌ಪುರದ ಭೌತಶಾಸ್ತ್ರ ಮತ್ತು ಫೋಟೊನಿಕ್ಸ್ ವಿಜ್ಞಾನ ವಿಭಾಗದ ಎಂಎಸ್‌ಸಿ ಭೌತಶಾಸ್ತ್ರದ ವಿದ್ಯಾರ್ಥಿ ದೀಪಕ್ ಭಾರದ್ವಾಜ್ ಇಂಗ್ಲೆಂಡ್ ನಲ್ಲಿರುವ ಬ್ರಿಸ್ಟಲ್ ವಿಶ್ವವಿದ್ಯಾಲಯದಿಂದ 2 ಕೋಟಿ ರೂಪಾಯಿ ಮೌಲ್ಯದ ವಿದ್ಯಾರ್ಥಿವೇತನವನ್ನು ಪಡೆಯುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ದೀಪಕ್ ಭಾರದ್ವಾಜ್ ಅವರು ವಿದೇಶದಲ್ಲಿ ಪಿಎಚ್‌ಡಿ ( PhD ) ಮಾಡಲು ಈ ವಿದ್ಯಾರ್ಥಿವೇತನಕ್ಕೆ ಆಯ್ಕೆಯಾಗಿದ್ದಾರೆ.
ಕ್ಯಾಟ್ ಪರೀಕ್ಷೆ ಬರೆದು ಎಂಬಿಎ ಪ್ರವೇಶ ಪಡೆಯಲು ತಯಾರಿಯಲ್ಲಿದ್ದೀರಾ? ನಿಮ್ಮ ತಯಾರಿ ಹೀಗಿರಲಿ
ದೀಪಕ್ ಹರಿಯಾಣದ ಪಾಣಿಪತ್ ನವರು. ನಾಲ್ಕು ವರ್ಷಗಳ ಕಾಲ ಕ್ವಾಂಟಮ್ ಇಂಜಿನಿಯರಿಂಗ್ ನಲ್ಲಿ ( Quantum Engineering) ಸಂಶೋಧನೆ ನಡೆಸಲಿದ್ದಾರೆ. ದೀಪಕ್ ಅವರ ಸಾಧನೆಯು ಐತಿಹಾಸಿಕವಾಗಿದೆ ಏಕೆಂದರೆ ಈವರೆಗೆ ಎನ್‌ಐಟಿ ಹಮೀರ್‌ಪುರದಲ್ಲಿ ಯಾವ ವಿದ್ಯಾರ್ಥಿಗೂ ಕೂಡ ಇಷ್ಟೊಂದು ಮೊತ್ತದ ಅತ್ಯಧಿಕ ವಿದ್ಯಾರ್ಥಿವೇತನ ಸಿಕ್ಕಿರಲಿಲ್ಲ.
ಪ್ರೊಫೆಸರ್ ಜಾರ್ಜ್ ಬ್ಯಾರೆಟ್ ಅವರ ಮಾರ್ಗದರ್ಶನದಲ್ಲಿ ದೀಪಕ್ ಅವರು ಕ್ವಾಂಟಮ್ ಎಂಜಿನಿಯರಿಂಗ್ ಕ್ಷೇತ್ರದಲ್ಲಿ ತಮ್ಮ ಸಂಶೋಧನೆಯನ್ನು ನಡೆಸಲಿದ್ದಾರೆ ಮತ್ತು ಕ್ವಾಂಟಮ್ ಎಂಜಿನಿಯರಿಂಗ್‌ನಲ್ಲಿ ಅವರ ಸಂಶೋಧನೆಗಾಗಿ ಅವರು 2 ಕೋಟಿ ರೂ. ಸ್ಕಾಲರ್‌ಶಿಪ್ ಪಡೆದ ನಂತರ ದೀಪಕ್ ತುಂಬಾ ಸಂತೋಷಗೊಂಡಿದ್ದಾರೆ ಮತ್ತು ಎನ್‌ಐಟಿ ಹಮೀರ್‌ಪುರದ ಅಧ್ಯಾಪಕರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ದೀಪಕ್ ಅವರು ಪಿಎಚ್‌ಡಿ ಸಮಯದಲ್ಲಿ ಅಲ್ಟ್ರಾ-ಕೋಲ್ಡ್ ಅಲ್ಕಾಲಿ ಅಟಮ್ ವಿಥ್ ಶೇಕನ್ ಲ್ಯಾಟಿಸ್ ಇಂಟರ್‌ಫೆರೋಮೀಟರ್ ( Ultra-Cold Alkali Atom with Shaken Lattice Interferometer) ವಿಚಾರವಾಗಿ ಅಧ್ಯಯನ ಮಾಡುತ್ತಾರೆ.
ತೈವಾನ್ ವಿಶ್ವವಿದ್ಯಾಲಯದಲ್ಲಿ ಎಂಜಿನಿಯರಿಂಗ್ ಓದಲು ಆಯ್ಕೆಯಾದ ತಮಿಳುನಾಡಿನ
ಭೌತಶಾಸ್ತ್ರ ಮತ್ತು ಫೋಟೊನಿಕ್ಸ್ ವಿಭಾಗದ ಮುಖ್ಯಸ್ಥ ಡಾ.ಕುಲದೀಪ್ ಶರ್ಮಾ ಅವರು ದೀಪಕ್ ಅವರ ಅದ್ಭುತ ಸಾಧನೆಗಾಗಿ ಶ್ಲಾಘಿಸಿದ್ದಾರೆ ಮತ್ತು ದೀಪಕ್ ಎನ್ಐಟಿಯ ಇತಿಹಾಸದಲ್ಲಿ ಅತ್ಯಧಿಕ ವಿದ್ಯಾರ್ಥಿವೇತನವನ್ನು ಪಡೆದಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಎನ್‌ಐಟಿ-ಹಮೀರ್‌ಪುರದ (Hamirpur) ನಿರ್ದೇಶಕ ಪ್ರೊ.ಎಚ್‌ಎಂ ಸೂರ್ಯವಂಶಿ ಕೂಡ ದೀಪಕ್ ಭಾರದ್ವಾಜ್ ಅವರ ವಿದ್ಯಾರ್ಥಿವೇತನದ ಬಗ್ಗೆ ಸಂತೋಷ ವ್ಯಕ್ತಪಡಿಸಿದ್ದಾರೆ ಮತ್ತು ದೀಪಕ್ ಎನ್‌ಐಟಿ ಹಮೀರ್‌ಪುರಕ್ಕೆ ಪ್ರಶಸ್ತಿಗಳನ್ನು ತರಲಿದ್ದಾರೆ ಎಂದು ಹೇಳಿದರು.
1984 ರಲ್ಲಿ ಸ್ಥಾಪಿತವಾದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಹಮೀರ್‌ಪುರ (NIT ಹಮೀರ್‌ಪುರ್ ಅಥವಾ NITH) ಹಿಮಾಚಲ ಪ್ರದೇಶದ ಹಮೀರ್‌ಪುರದಲ್ಲಿರುವ ಸಾರ್ವಜನಿಕ ತಾಂತ್ರಿಕ ವಿಶ್ವವಿದ್ಯಾಲಯವಾಗಿದೆ. ಈ ಸಂಸ್ಥೆಯನ್ನು ಮೊದಲು ಪ್ರಾದೇಶಿಕ ಇಂಜಿನಿಯರಿಂಗ್ ಕಾಲೇಜಾಗಿ ಸ್ಥಾಪಿಸಲಾಯಿತು ಮತ್ತು 2003 ರಲ್ಲಿ ಭಾರತದ ಸಂಸತ್ತಿನಿಂದ NIT ಗೆ ಮೇಲ್ದರ್ಜೆಗೇರಿಸಲಾಯಿತು.