Ramanagara: ಯಾವ ಖಾಸಗಿ ಶಾಲೆಗೂ ಕಡಿಮೆ ಇಲ್ಲ ಈ ಅಂಗನವಾಡಿ: ಇಲ್ಲಿ ಎಲ್ಲವೂ ಸ್ಮಾರ್ಟ್!
ಹಾಯಾಗಿ ಕೊಠಡಿಯಲ್ಲಿ ಲವಲವಿಕೆಯಿಂದ ಕುಳಿತಿರುವ ಮಕ್ಕಳು. ಟಿವಿ ಪರದೆ ಮೇಲೆ ಸ್ಮಾರ್ಟ್ ಆಗಿ ಪಾಠ ಮಾಡುತ್ತಿರುವ ಶಿಕ್ಷಕಿ. ಅಂದಹಾಗೇ ಇದು ಯಾವುದೊ ಖಾಸಗಿ ಪ್ಲೇ ಹೋಂ ಅಲ್ಲಾ ಸರ್ಕಾರಿ ಅಂಗನವಾಡಿ. ಇಲ್ಲಿ ಎಲ್ಲವು ಸ್ಮಾರ್ಟ್ ಆಗಿ ನಡೆಯುತ್ತಿದೆ.
ವರದಿ: ಜಗದೀಶ್, ಏಷ್ಯಾನೆಟ್ ಸುವರ್ಣನ್ಯೂಸ್, ರಾಮನಗರ
ರಾಮನಗರ (ಮೇ.27): ಹಾಯಾಗಿ ಕೊಠಡಿಯಲ್ಲಿ ಲವಲವಿಕೆಯಿಂದ ಕುಳಿತಿರುವ ಮಕ್ಕಳು. ಟಿವಿ ಪರದೆ ಮೇಲೆ ಸ್ಮಾರ್ಟ್ ಆಗಿ ಪಾಠ ಮಾಡುತ್ತಿರುವ ಶಿಕ್ಷಕಿ. ಅಂದಹಾಗೇ ಇದು ಯಾವುದೊ ಖಾಸಗಿ ಪ್ಲೇ ಹೋಂ ಅಲ್ಲಾ ಸರ್ಕಾರಿ ಅಂಗನವಾಡಿ. ಇಲ್ಲಿ ಎಲ್ಲವು ಸ್ಮಾರ್ಟ್ ಆಗಿ ನಡೆಯುತ್ತಿದೆ. ಹೌದು! ಸರ್ಕಾರಿ ಅಂಗನವಾಡಿ ಅಂದ್ರೆ ಮೂಗು ಮುರಿಯುವವರೆ ಹೆಚ್ಚು. ಆದ್ರೆ ರಾಮನಗರ ತಾಲ್ಲೂಕಿನ ಚೌಡೇಶ್ವರಿಪುರ ಎಂಬ ಪುಟ್ಟ ಗ್ರಾಮದಲ್ಲಿ ಹೈಟೆಕ್ ಆಗಿ ಸ್ಮಾರ್ಟ್ ಅಂಗನವಾಡಿ ನಿರ್ಮಾಣ ಮಾಡಲಾಗಿದೆ. ಈ ಅಂಗನವಾಡಿ ಯಾವುದೇ ಖಾಸಗಿ ಪ್ಲೇ ಹೋಂ ಗಳಿಗೇನು ಕಮ್ಮಿ ಇಲ್ಲಾ. ಈ ಅಂಗನವಾಡಿಯಲ್ಲಿ ಎಲ್.ಇ.ಡಿ ಟಿವಿ ಪರದೆ ಮೇಲೆ ಸ್ಮಾರ್ಟ್ ಕ್ಲಾಸ್‌ನಲ್ಲಿ ಮಕ್ಕಳಿಗೆ ಕಲಿಕಾ ಅಭ್ಯಾಸ ಮಾಡಲಾಗುತ್ತಿದೆ.
ಸುಸಜ್ಜಿತವಾದ ಅಡುಗೆ ಮನೆ ಹಾಗು ಹಚ್ಚ ಹಸಿರಿನ ಲಾನ್ ಇದ್ದು, ಆಕರ್ಷಕ ಆಟದ ಸಲಕರಣೆಗಳಿವೆ. ವಿದ್ಯುತ್ ಸಮಸ್ಯೆ ಆಗಬಾರದು ಅಂತಾ ಯುಪಿಎಸ್ ವ್ಯವಸ್ಥೆಯನ್ನ ಸಹ ಮಾಡಲಾಗಿದೆ. ಗ್ರಾ.ಪಂ ಸದಸ್ಯರ ಇಚ್ಛಾಶಕ್ತಿಯಿಂದ ಇಂದು ಸ್ಮಾರ್ಟ್ ಅಂಗನವಾಡಿ ನಿರ್ಮಾಣವಾಗಿದೆ. ಅಂದಹಾಗೇ ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್ ಹಾಗೂ ಗ್ರಾಮ ಪಂಚಾಯತಿ ಸಹಯೋಗದಲ್ಲಿ 20 ಲಕ್ಷ ವೆಚ್ಚದಲ್ಲಿ ಈ ಸ್ಮಾರ್ಟ್ ಅಂಗನವಾಡಿ ನಿರ್ಮಾಣ ಮಾಡಲಾಗಿದೆ. ಜಿಲ್ಲೆಯಲ್ಲೆ ಹೈಟೆಕ್ ಅಂಗನವಾಡಿ ಎಂಬ ಕೀರ್ತಿಗೆ ಪಾತ್ರವಾಗಿದೆ. ಜಿ.ಪಂ ಸಿಇಒ ಇಕ್ರಂ ಅವರ ಇಚ್ಛಾಶಕ್ತಿಯಿಂದ ಇದು ಕಾರ್ಯಗತವಾಗಿದೆ.
Karnataka Politics: 2023ಕ್ಕೆ ಜೆಡಿಎಸ್ ಅಧಿಕಾರಕ್ಕೆ ಬರುವುದು ನಿಶ್ಚಿತ: ಅನಿತಾ ಕುಮಾರಸ್ವಾಮಿ
ನಗರ ಪ್ರದೇಶಗಳಲ್ಲಿನ ಪ್ಲೇ ಹೋಂಗಳಿಗೆ ಮಾರು ಹೋಗಿರುವ ಈ ಭಾಗದ ಜನ್ರು ಈ ಸ್ಮಾರ್ಟ್ ಅಂಗನವಾಡಿ ನೋಡಿ ಇದನ್ನ ಸದುಪಯೋಗ ಪಡಿಸಿಕೊಳ್ಳಬೇಕಿದೆ. ಸದ್ಯ ರಾಜ್ಯದ ಅಂಗನವಾಡಿಗಳ ಬಗ್ಗೆ ರಿಸರ್ಚ್ ಮಾಡುತ್ತಿರುವ ತಂಡ ಕೂಡ ಈ ಅಂಗನವಾಡಿಗೆ ಭೇಟಿಕೊಟ್ಟು ನೋಡಿ ಸಂತಸ ವ್ಯಕ್ತಪಡಿಸಿದ್ದಾರೆ. ಸರ್ಕಾರಿ ಶಾಲೆ ಅಂಗನವಾಡಿ ಕೇಂದ್ರ ಅಂದ್ರೆ ತಿರುಗಿಯು ನೋಡದ ಜನರೇ ಹೆಚ್ಚಾಗಿದ್ದಾರೆ. ಇಂತಹ ಕಾಲಘಟ್ಟದಲ್ಲಿ ಸರಕಾರಿ ಅಂಗನವಾಡಿಯನ್ನ ಸ್ಮಾರ್ಟ್ ಆಗಿ ನಿರ್ಮಾಣ ಮಾಡಿ ನಾವು ಖಾಸಗಿಯವರಿಗಿಂತ ಕಡಿಮೆ ಇಲ್ಲಾ ಎಂಬುದನ್ನ ಸಾಬೀತು ಮಾಡಿದ್ದಾರೆ.
SSLC ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳನ್ನ ಪರೀಕ್ಷೆ ಆರಂಭಕ್ಕೂ ಮುನ್ನವೇ ವಾಟ್ಸಾಪ್ ಮೂಲಕ ಕಳುಹಿಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅನುಕೂಲ ಮಾಡಿಕೊಟ್ಟ ಖಾಸಗಿ ಶಾಲೆಯ ಶಿಕ್ಷಕರು ಸೇರಿದಂತೆ ಕೆಲವರು ಇದೀಗ ಪೊಲೀಸರ ಅತಿಥಿಯಾಗಿದ್ದಾರೆ. ಹೌದು! ರಾಜ್ಯದಲ್ಲಿ ಪಿಎಸ್‌ಐ ಆಕ್ರಮ ನೇಮಕಾತಿ ವಿಚಾರ ಸಾಕಷ್ಟು ಸದ್ದು ಮಾಡಿತ್ತು. ಪ್ರಕರಣ ಸಂಬಂಧ ಸಿಐಡಿ ಪೊಲೀಸರು ಸಾಕಷ್ಟು ಜನರನ್ನ ಬಂಧಿಸಿ ಜೈಲಿಗೂ ಅಟ್ಟಿದ್ದಾರೆ. ಅದು ಮಾಸುವ ಮುನ್ನವೇ ಮತ್ತೊಂದು ಆಕ್ರಮ, ಸಿಲಿಕಾನ್ ಸಿಟಿ ಬೆಂಗಳೂರಿನ ಪಕ್ಕದಲ್ಲೇ ಇರುವ ರೇಷ್ಮೆನಗರಿ ರಾಮನಗರ ಜಿಲ್ಲೆಯಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಎಚ್‌ಡಿಕೆಗೆ ಶಾಕ್ ಕೊಟ್ಟ ಡಿಕೆ ಬ್ರದರ್ಸ್, ಚನ್ನಪಟ್ಟಣದ ಜೆಡಿಎಸ್ ಮುಖಂಡರು ಕಾಂಗ್ರೆಸ್ ಸೇರ್ಪಡೆ
ಅಂದಹಾಗೆ ಕಳೆದ ತಿಂಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆದು ಇದೀಗ ಫಲಿತಾಂಶ ಕೂಡ ಬಂದಿದೆ. ಆದರೆ ಪರೀಕ್ಷೆಯಲ್ಲಿ ಬಾರಿ ಆಕ್ರಮ ನಡೆದಿರುವುದು ಇದೀಗ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಪೊಲೀಸರು ಇದುವರೆಗೂ ಹತ್ತು ಜನರನ್ನ ಬಂಧಿಸಿದ್ದಾರೆ. ಸದ್ಯ ರಾಮನಗರ ಜಿಲ್ಲೆ ಮಾಗಡಿ ಪಟ್ಟಣದ ಕೆಂಪೇಗೌಡ ಪ್ರೌಢಶಾಲೆಯ ಗುಮಾಸ್ತ ರಂಗೇಗೌಡ ಎಂಬಾತ, ಏಪ್ರಿಲ್ 11ರಂದು ವಿಜ್ಷಾನ ಪ್ರಶ್ನೆ ಪತ್ರಿಕೆಯನ್ನ, ಕೆಂಪೇಗೌಡ ಪ್ರೌಢಶಾಲೆಯ ಮುಖ್ಯಶಿಕ್ಷಕರು ಹಾಗೂ ಶಿಕ್ಷಕರು ಇರುವ ಎಚ್‌ಎಮ್ ಮಾಗಡಿ ಟೌನ್ ಎಂಬ ವಾಟ್ಸಾಪ್ ಗ್ರೂಪ್‌ಗೆ ಹರಿಬಿಟ್ಟಿದ್ದ. ಈ ವಿಚಾರ ಗೊತ್ತಿದ್ದರು ಕೆಲವರು ಸುಮ್ಮನೇ ಇದ್ದರು.