ಎಚ್‌ಡಿಕೆಗೆ ಶಾಕ್ ಕೊಟ್ಟ ಡಿಕೆ ಬ್ರದರ್ಸ್, ಚನ್ನಪಟ್ಟಣದ ಜೆಡಿಎಸ್‌ ಮುಖಂಡರು ಕಾಂಗ್ರೆಸ್‌ ಸೇರ್ಪಡೆ

* ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿಗೆ ಶಾಕ್ ಕೊಟ್ಟ ಡಿಕೆ ಬ್ರದರ್ಸ್
* ಚನ್ನಪಟ್ಟಣದ ಹಲವು ಜೆಡಿಎಸ್‌ ಮುಖಂಡರು ಕಾಂಗ್ರೆಸ್ ಸೇರ್ಪಡೆ
* ಜಿಲ್ಲೆಯ ಹಲವರು ನನ್ನ ಸಂಪರ್ಕದಲ್ಲಿದ್ದಾರೆ ಎಂದ ಡಿಕೆ ಶಿವಕುಮಾರ್

kumaraswamy constituency Channapatna JDS Leaders Joins Congress rbj

ಬೆಂಗಳೂರು/ ರಾಮನಗರ, (ಮೇ.12): ಕರ್ನಾಟಕ ವಿಧಾನಸಭೆ ಚುನಾವಣೆಗೆ ಇನ್ನೂ ಒಂದು ವರ್ಷ ಬಾಕಿ ಇದೆ. ಆಗಲೇ ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಹಾರುವ ಪಕ್ಷಾಂತರ ಪರ್ವ ಶುರುವಾಗಿದೆ. 

ಒಂದು ಕಡೆ ಮೊನ್ನೆ ಕಾಂಗ್ರೆಸ್‌ನ ಮಾಜಿ ಶಾಸಕರುಗಳನ್ನ ಬಿಜೆಪಿ ಆಪರೇಷನ್ ಕಮಲ ಮಾಡುವ ಮೂಲಕ ಚುನಾಣೆಗೆ ಸಿದ್ಧತೆ ನಡೆಸಿದೆ. ಇದರ ಮಧ್ಯೆ ಕಾಂಗ್ರೆಸ್‌ ಸಹ ಹೋರಾಟ ನಡೆಸಿದೆ.

ಹೌದು... ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರ ಕ್ಷೇತ್ರ ಚನ್ನಪಟ್ಟಣದ ಜೆಡಿಎಸ್‌ ಮುಖಂಡರನ್ನು ಕಾಂಗ್ರೆಸ್ ಸೆಳೆದಿದೆ. ಎಚ್‌ಡಿಕೆ  ಬಲಕುಗ್ಗಿಸುವ ಪ್ರಯತ್ನವನ್ನು ಡಿ.ಕೆ‌.ಬ್ರದರ್ಸ್ ಮಾಡುತ್ತಿದ್ದು, ಇದಕ್ಕೆ ಪೂರಕವೆಂಬಂತೆ ಚನ್ನಪಟ್ಟದ ಜೆಡಿಎಸ್ ಮುಖಂಡರು ಮತ್ತು ನೂರಾರು ಬೆಂಬಲಿಗರು ಕಾಂಗ್ರೆಸ್ ಸೇರ್ಪಡೆಯಾದರು.

ಬಿಜೆಪಿ ತೊರೆದು, ಕಾಂಗ್ರೆಸ್ ಸೇರಿದ ಬಿಬಿಎಂಪಿ ಮಾಜಿ ಕಾರ್ಪೋರೇಟರ್ ಶಕುಂತಲಾ ಲಕ್ಕಪ್ಪ

ಇಂದು (ಗುರುವಾರ) ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿಉದ್ಯಮಿ ಪ್ರಸನ್ನ ಜೊತೆ ನೂರಾರು ಬೆಂಬಲಿಗರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಯಾದರು.

ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ, ಸಿ.ಪಿ. ಯೋಗೇಶ್ವರ್,ಮತ್ತು ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ತಿರುಗೇಟು ನೀಡುವ ಪ್ರಯತ್ನ ಮಾಡಲಾಗುತ್ತಿದ್ದು, ರಾಮನಗರದ ಭಾಗದಲ್ಲಿ ‘ಆಪರೇಷನ್ ಹಸ್ತ’ ಹಮ್ಮಿಕೊಳ್ಳಲಾಗಿದೆ.

ಪಕ್ಷ ಸೇರ್ಪಡೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್, ಜಿಲ್ಲೆಯ ಹಲವರು ನನ್ನ ಸಂಪರ್ಕದಲ್ಲಿದ್ದಾರೆ. ಬಿಜೆಪಿ,ಜೆಡಿಎಸ್ ಮುಖಂಡರು ಇದ್ದಾರೆ. ಶೀಘ್ರದಲ್ಲೇ ಚನ್ನಪಟ್ಟಣದಲ್ಲಿ ಅವರನ್ನ ಸೇರಿಸಿಕೊಳ್ಳುತ್ತೇವೆ. ಜನತಾ ಸರ್ಕಾರವನ್ನ ನಾವು ನೋಡಿದ್ದೇವೆ. ಬಿಜೆಪಿ ಸರ್ಕಾರದ ಆಡಳಿತವನ್ನ ನೋಡಿದ್ದೇವೆ. ನಾವು ಒಂದು ಸರ್ವೆ ಮಾಡಿಸಿದ್ದೇವೆ. ಸರ್ವೆಯಲ್ಲಿ ಕಾಂಗ್ರೆಸ್ ಪರವಾದ ಒಲವಿದೆ ಎಂದರು.

 ಬಿಜೆಪಿಯವರು ಅಭಿವೃದ್ಧಿ ವಿಚಾರದಲ್ಲಿ ಹೇಳಲ್ಲ. ಅವರು ಕೋಮುಸಂಘರ್ಷದ ಮೂಲಕ ಬರುತ್ತಿದ್ದಾರೆ. ಯಾರು ಏನೂ ಮಾಡಲಿ,ಜನ ನಮ್ಮ ಕಡೆ ಇದ್ದಾರೆ. ಅಧಿಕಾರ ಕೊಡದಿದ್ದರೂ ನಮ್ಮ‌ಪ್ರೀತಿ ಇರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿಯ ಹಲವು ನಾಯಕರು ಮಾತನಾಡಿದ್ದಾರೆ. ಅಣ್ಣಾ, ಸ್ವಲ್ಪ ದಿನ ಇರಿ ಅಂತಿದ್ದಾರೆ. ಹಾಗಾಗಿ ನೀವು ಪ್ರತಿ ಮನೆಮನೆಗೆ ಭೇಟಿ ಮಾಡಿ, ಪ್ರತಿಯೊಬ್ಬ ಜನರನ್ನ ತಲುಪುವ ಕೆಲಸ ಮಾಡಿ. ಸ್ಥಳೀಯ ಸಂಸ್ಥೆ ಚುನಾವಣೆ ಯಾವಾಗ ಬೇಕಾದರೂ ಬರಬಹುದು. ನಾವಂತೂ ಚುನಾವಣೆಗೆ ರೆಡಿಯಾಗಿದ್ದೇವೆ. ಕೆಲವರು ನಮ್ಮವರು ಬೇರೆ ಪಕ್ಷಕ್ಕೆ ಸೇರಿದ್ದಾರೆ. ನಾವು ಕೆಲವರನ್ನ ಪಕ್ಷಕ್ಕೆ ಸೇರಿಸಿಕೊಂಡಿದ್ದೇವೆ. ರಾಮನಗರದಲ್ಲಿ ಕಾಂಗ್ರೆಸ್ ಬಲಗೊಳಿಸಬೇಕು. ಚನ್ನಪಟ್ಟಣದಲ್ಲಿ ಹಲವು ಜನರಿದ್ದಾರೆ. ಅಲ್ಪಸಂಖ್ಯಾತರು,ದಲಿತರು ಹೆಚ್ಚಿದ್ದಾರೆ. ಹಾಗಾಗಿ ಪ್ರತಿಕ್ಷೇತ್ರದತ್ತ ಗಮನಹರಿಸಿದ್ದೇವೆ. ಕಾರ್ಯಕರ್ತರಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತಿದ್ದೇವೆ. ಪಕ್ಷದ ಸದಸ್ಯತ್ವವನ್ನ ಹೆಚ್ಚು ಮಾಡುತ್ತಿದ್ದೇವೆ ಎಂದು ಹೇಳಿದರು.

ಪಕ್ಷಕ್ಕೆ ಬರುವವರು ಬಹಳ ಜನ ಅರ್ಜಿ ಹಾಕಿದ್ದಾರೆ. ಅರ್ಜಿಗಳು‌ ಬಹಳಷ್ಟು ಪೆಂಡಿಂಗ್ ಇದೆ. ಹಾಗಾಗಿ ನೋಡಿಕೊಂಡು ಸೇರಿಸಿಕೊಳ್ಳುತ್ತಿದ್ದೇವೆ. ಚನ್ನಪಟ್ಟಣದಲ್ಲಿ ಗೆಲ್ಲೋಕೆ ಸಾಧ್ಯವಿಲ್ಲ ಅಂದುಕೊಳ್ಳಬೇಡಿ. ಅಲ್ಲಿನ ಜನ ಎಲ್ಲರಿಗೂ ಅವಕಾಶ ಕೊಟ್ಟಿದ್ದಾರೆ. ಗುತ್ತಿಗೆ ಕೊಡಬೇಕಾದರೂ ಮಾಡಿದ್ದಾರೆ ಗೊತ್ತಿದೆ. ಈ ವೇದಿಕೆಯಲ್ಲಿ ನಾನು ಹೇಳುವುದಿಲ್ಲ. ಈಗ ಬಿಜೆಪಿ ಸರ್ಕಾರ ರಾಜ್ಯದಲ್ಲಿದೆ. ಜನ ಬದಲಾವಣೆಯನ್ನ ಬಯಸುತ್ತಿದ್ದಾರೆ ಎಂದು ತಿಳಿಸಿದರು.

Latest Videos
Follow Us:
Download App:
  • android
  • ios