Asianet Suvarna News Asianet Suvarna News

ಎನ್‌ಇಪಿ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಹೆಚ್ಚಿಸಲಿದೆ: ತಮಿಳುನಾಡು ರಾಜ್ಯಪಾಲ

ಉದ್ಯೋಗಕ್ಕೆ ಪದವಿ, ಪಶ್ಚಿಮದ್ದು ಶ್ರೇಷ್ಠ ಎಂಬ ಮನೋಭಾವವನ್ನು ರಾಷ್ಟ್ರೀಯ ಶಿಕ್ಷಣ ನೀತಿ ಬದಲಿಸಿ, ಸಾಕಷ್ಟುಸುಧಾರಣೆ ತರಲಿದೆ ಎಂದು ತಮಿಳುನಾಡು ರಾಜ್ಯಪಾಲ ಆರ್‌.ಎನ್‌. ರವಿ ಅಭಿಪ್ರಾಯಪಟ್ಟರು.

NEP will increase the confidence of students says governor of tamil nadu rn ravi gvd
Author
Bangalore, First Published Jul 28, 2022, 9:56 PM IST

ಮೈಸೂರು (ಜು.28): ಉದ್ಯೋಗಕ್ಕೆ ಪದವಿ, ಪಶ್ಚಿಮದ್ದು ಶ್ರೇಷ್ಠ ಎಂಬ ಮನೋಭಾವವನ್ನು ರಾಷ್ಟ್ರೀಯ ಶಿಕ್ಷಣ ನೀತಿ ಬದಲಿಸಿ, ಸಾಕಷ್ಟುಸುಧಾರಣೆ ತರಲಿದೆ ಎಂದು ತಮಿಳುನಾಡು ರಾಜ್ಯಪಾಲ ಆರ್‌.ಎನ್‌. ರವಿ ಅಭಿಪ್ರಾಯಪಟ್ಟರು. ಮೈಸೂರು ವಿವಿ ಕ್ರಾಫರ್ಡ್‌ ಭವನದಲ್ಲಿ ಬುಧವಾರ ನಡೆದ ವಿವಿಯ ಸಂಸ್ಥಾಪನಾ ದಿನಾಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಜನರಲ್ಲಿ ಪಶ್ಚಿಮದಿಂದ ಬರುವುದೆಲ್ಲವೂ ಶ್ರೇಷ್ಠ ಎಂಬ ಮನೋಭಾವವಿದೆ. ಆದ್ದರಿಂದ ಶಿಕ್ಷಣ ವ್ಯವಸ್ಥೆಯಲ್ಲಿ ಸುಧಾರಣೆ ತರುವ ಉದ್ದೇಶದಿಂದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. 

ಲಕ್ಷಾಂತರ ಮಂದಿ ಪ್ರತಿ ವರ್ಷ ಪದವೀಧರರಾಗುತ್ತಿದ್ದಾರೆ. ಅಷ್ಟೇ ಪ್ರಮಾಣದಲ್ಲಿ ನಿರುದ್ಯೋಗಿಗಳು ಇದ್ದಾರೆ. ಆದ್ದರಿಂದ ಪದವಿ ಎಂಬುದು ಉದ್ಯೋಗಕ್ಕಾಗಿ ಅಲ್ಲ ಎಂಬ ಮನೋಭಾವ ಬದಲಾಗಬೇಕು ಎಂದರು. ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಹೆಚ್ಚಿಸುವ ಕೆಲಸವನ್ನು ರಾಷ್ಟ್ರೀಯ ಶಿಕ್ಷಣ ನೀತಿ ಪಠ್ಯಕ್ರಮ ಮಾಡುತ್ತದೆ. ಮೂಲಭೂತ ವ್ಯವಸ್ಥೆಯನ್ನು ಸುಸ್ಥಿರಗೊಳಿಸುತ್ತದೆ. ಸಮರ್ಪಕವಾದ ಕೌಶಲ, ಜ್ಞಾನ ಮತ್ತು ವಿಜ್ಞಾನದ ಟಿಸಲನ್ನು ಒಂದಕ್ಕೊಂದನ್ನು ಬೆಸೆಯುವ ಸಾಧನವಾಗಿ ಇದು ಕೆಲಸ ಮಾಡುತ್ತದೆ. ಭಾರತೀಯ ಪರಂಪರೆಯ ಶಿಕ್ಷಣ ವ್ಯವಸ್ಥೆಯನ್ನು ಪುನರುಜ್ಜೀವನಗೊಳಿಸ ಕೆಲವನ್ನು ಈ ಶಿಕ್ಷಣ ನೀತಿ ಮಾಡುತ್ತದೆ ಎಂದು ಅವರು ಹೇಳಿದರು.

ಕೋಟಿ ಒಡತಿಯಾದ ಚಾಮುಂಡಿ ತಾಯಿ: ಒಂದೇ ತಿಂಗಳಲ್ಲಿ ಬರೋಬ್ಬರಿ ಕಾಣಿಕೆ

ಪಶ್ಚಿಮದ ಜ್ಞಾನವು ಮಾನವನೇ ಸರ್ವೋಚ್ಛ ಎಂದು ಹೇಳಿದರೆ, ಮಾನವೀಯತೆಯೇ ಶ್ರೇಷ್ಠ ಎಂದು ನಮ್ಮ ಸಂಸ್ಕೃತಿ ತಿಳಿಸುತ್ತದೆ. ಭೂಮಿಯಲ್ಲಿ ಇರುವ ಎಲ್ಲ ಸಕಲ ಜೀವರಾಶಿಗಳ ಜತೆ ಹೊಂದಾಣಿಕೆಯಿಂದ ಬದುಕಬೇಕು ಹಾಗೂ ಪ್ರಕೃತಿಯನ್ನು ಗೌರವಿಸಬೇಕು ಎನ್ನುವುದನ್ನು ಕಲಿಸಿಕೊಡುತ್ತದೆ. ಇದೆಲ್ಲವನ್ನೂ ರಾಷ್ಟ್ರೀಯ ಶಿಕ್ಷಣ ನೀತಿ ಒಳಗೊಂಡಿದೆ ಎಂದು ಅವರು ತಿಳಿಸಿದರು. ಭಾರತಕ್ಕೆ ವ್ಯಾಪಾರಕ್ಕೆಂದು ಬಂದ ಬ್ರಿಟಿಷರು, ಹಂತ-ಹಂತವಾಗಿ ಪ್ರದೇಶಗಳನ್ನು ವಶಪಡಿಸಿಕೊಳ್ಳುತ್ತಾ ಆಡಳಿತ ನಡೆಸಲು ಶುರು ಮಾಡಿದರು. ಇದೇ ಸಮಯದಲ್ಲಿ ಅವರು ಅಮೆರಿಕಾವನ್ನು ವಸಾಹತುವನ್ನಾಗಿ ಮಾಡಿಕೊಂಡಿದ್ದರು. 

ಅಲ್ಲಿ ಜನರಿಂದ ದೊಡ್ಡ ಮಟ್ಟದ ಕ್ರಾಂತಿ ನಡೆಯುತ್ತಿತ್ತು. ಈ ಕ್ರಾಂತಿಯು ಭಾರತದಲ್ಲಿ ಪ್ರಭಾವ ಬೀರುವುದನ್ನು ತಪ್ಪಿಸಲು ಬ್ರಿಟಿಷರು ನಮ್ಮ ಪಾರಂಪರಿಕ ಶಿಕ್ಷಣ ಪದ್ಧತಿಯನ್ನು ಹಾಳುಗೆಡವಿದರು. ತಮ್ಮ ಆಡಳಿತದ ಅನುಕೂಲಕ್ಕೆ ತಕ್ಕಂತೆ ಕಾರುಕೂನರಾಗಿ ಕೆಲಸ ಮಾಡಲಷ್ಟೇ ಲಾಯಕ್ಕಾಗುವ ಮಟ್ಟದ ಶಿಕ್ಷಣವನ್ನು ಕಲಿಸಿದ್ದಾಗಿ ಅವರು ಟೀಕಿಸಿದರು. ಹೊಸ ನೀತಿಯನ್ನು ಅಳವಡಿಸುವಾಗ ಟೀಕೆ ಟಿಪ್ಪಣಿಗಳು ಸಹಜ.ಶಿಕ್ಷಣ ಸಂಸ್ಥೆಗಳು, ಸಂಪನ್ಮೂಲ ವ್ಯಕ್ತಿಗಳು ಈ ನೀತಿಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಅಗತ್ಯವಿದೆ ಎಂದರು.

ಸರ್ಕಾರಗಳು ರಾಜ ಮನೆತನಗಳನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ, ಪ್ರಮೋದಾದೇವಿ ಅಸಮಾಧಾನ

ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಮಾತನಾಡಿ, ಹಿಂದುಳಿದವರಿಗೆ ಶಿಕ್ಷಣ ಎಂಬ ಬೀಜವನ್ನು ಮುಮ್ಮಡಿ ಕೃಷ್ಣರಾಜ ಒಡೆಯರ್‌ ಅವರು ನೆಟ್ಟರು. ನಾಲ್ವಡಿಯವರು ಆ ಪರಂಪರೆ ಮುಂದುವರಿಸಿ ಮೈಸೂರು ವಿವಿಯನ್ನು ಸ್ಥಾಪನೆ ಮಾಡಿದರು. ಎಲ್ಲದರಲ್ಲೂ ಮೊದಲು ಎನ್ನುವ ಹೆಗ್ಗಳಿಕೆಯನ್ನು ಹೊಂದಿರುವ ಮೈಸೂರು ವಿವಿಯು ಅದನ್ನು ಮುಂದುವರಿಸಿಕೊಂಡು ಹೋಗಬೇಕು ಎಂದರು. ಕಾರ್ಯಕ್ರಮದಲ್ಲಿ ಮೈಸೂರು ವಿವಿ ಕುಲಪತಿ ಪ್ರೊ.ಜಿ. ಹೇಮಂತಕುಮಾರ್‌ ಇದ್ದರು.

Follow Us:
Download App:
  • android
  • ios