ಕೋಟಿ ಒಡತಿಯಾದ ಚಾಮುಂಡಿ ತಾಯಿ: ಒಂದೇ ತಿಂಗಳಲ್ಲಿ ಬರೋಬ್ಬರಿ ಕಾಣಿಕೆ

ನಾಡ ದೇವತೆ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಆಷಾಢ ಸಂಭ್ರಮ ಜೋರಾಗಿದೆ. ಕಳೆದ ಒಂದು ತಿಂಗಳಲ್ಲಿ ದೇವಿ ದರ್ಶನಕ್ಕೆ ಲಕ್ಷ ಲಕ್ಷ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದು, ಧಾರಾಳವಾಗಿ ದೇವಿಗೆ ಕಾಣಿಕೆ ಸಮರ್ಪಿಸಿದ್ದಾರೆ. ಭಕ್ತರ ಕಾಣಿಕೆಯಿಂದಾಗಿ ಒಂದೇ ತಿಂಗಳಲ್ಲಿ ದೇವಿ ಕೋಟಿ ಕೋಟಿ ಸಂಪಾದನೆ ಮಾಡಿದ್ದಾಳೆ.

Mysore chamundi temple receives highest hundi collection in month akb

ಮೈಸೂರು: ನಾಡ ದೇವತೆ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಆಷಾಢ ಸಂಭ್ರಮ ಜೋರಾಗಿದೆ. ಕಳೆದ ಒಂದು ತಿಂಗಳಲ್ಲಿ ದೇವಿ ದರ್ಶನಕ್ಕೆ ಲಕ್ಷ ಲಕ್ಷ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದು, ಧಾರಾಳವಾಗಿ ದೇವಿಗೆ ಕಾಣಿಕೆ ಸಮರ್ಪಿಸಿದ್ದಾರೆ. ಭಕ್ತರ ಕಾಣಿಕೆಯಿಂದಾಗಿ ಒಂದೇ ತಿಂಗಳಲ್ಲಿ ದೇವಿ ಕೋಟಿ ಕೋಟಿ ಸಂಪಾದನೆ ಮಾಡಿದ್ದಾಳೆ.

ಇತಿಹಾಸ ಪ್ರಸಿದ್ಧ ಚಾಮುಂಡಿ ಬೆಟ್ಟಕ್ಕೆ ಪ್ರತಿನಿತ್ಯ ಸಾವಿರಾರು ಭಕ್ತರು ಭೇಟಿ ನಿಡ್ತಾರೆ. ಆಷಾಢ ಮಾಸದಲ್ಲಿ ನಾಡ ದೇವತೆ ಚಾಮುಂಡಿ ತಾಯಿಯ ದರ್ಶನ ಪಡೆದ್ರೆ ಇಷ್ಟಾರ್ಥಗಳು ಈಡೇರುತ್ತೆ ಎಂಬ ನಂಬಿಕೆ ಇದೆ. ರಾಜ್ಯದ ಮೂಲೆ ಮೂಲೆಗಳಿಂದ ಈ ಭಾರಿಯ ಆಷಾಢ ಮಾಸಕ್ಕೆ ಚಾಮುಂಡಿ ಬೆಟ್ಟಕ್ಕೆ ಲಕ್ಷಾಂತರ ಭಕ್ತರು ಆಗಮಿಸಿದ್ರು. ಈ ಬಾರಿಯ ಆಷಾಢ ಮಾಸದ ಒಟ್ಟು 37 ದಿನಗಳಲ್ಲಿ ಚಾಮುಂಡಿ ಬೆಟ್ಟದ ದೇವಸ್ಥಾನದ ಹುಂಡಿಯಲ್ಲಿ 2,33,51,270 ಹಣ ಸಂಗ್ರಹವಾಗಿದೆ.‌ ಇದರ ಜೊತೆಗೆ 270 ಗ್ರಾಂ ಚಿನ್ನ, 1 ಕೆ.ಜಿ‌ ಬೆಳ್ಳಿ ಹಾಗೂ ವಿದೇಶಿ ಕರೆನ್ಸಿಗಳನ್ನು ಸಹ ಭಕ್ತರು ಸಮರ್ಪಿಸಿದ್ದಾರೆ. ನಿನ್ನೆ ಬೆಳಗ್ಗೆಯಿಂದ ಸಂಜೆಯವರೆಗೂ 250 ಮಂದಿಯಿಂದ ಹುಂಡಿ ಏಣಿಕೆ ಕಾರ್ಯ ನಡೆದಿದೆ.

ಮೋದಿ ಪೂಜೆ ಬಗ್ಗೆ ಚಾಮುಂಡಿ ಬೆಟ್ಟದ ಪ್ರಧಾನ ಅರ್ಚಕರು ಹೇಳಿದ್ದಿಷ್ಟು

ಇನ್ನೂ ಇತಿಹಾಸದಲ್ಲಿ ಇದೇ  ಮೊದಲ ಬಾರಿಗೆ ಚಾಮುಂಡಿ ಬೆಟ್ಟದ ದೇವಸ್ಥಾ‌ನದ ಹುಂಡಿಯಲ್ಲಿ ಎರಡು ಕೋಟಿಗೂ ಹೆಚ್ಚು ಹಣ ಸಂಗ್ರಹವಾಗಿರುವುದು. ಜೊತೆ ಈ ಬಾರಿ 1,33,69,270 ರೂಪಾಯಿ ಕಾಣಿಕೆ ವಿಶೇಷ ದರ್ಶನ ಟಿಕೆಟ್‌ನಿಂದ ಬಂದಿರುವ ಆದಾಯವಾಗಿದೆ. ಚಾಮುಂಡಿ ಬೆಟ್ಟದ ಕಾರ್ಯನಿರ್ವಾಹಕ ಅಧಿಕಾರಿ ಸಿ.ಜಿ. ಕೃಷ್ಣ ನೇತೃತ್ವದಲ್ಲಿ 250 ಸಿಬ್ಬಂದಿ ಹುಂಡಿ ಎಣಿಕೆ ಕಾರ್ಯದಲ್ಲಿ ಭಾಗಿಯಾಗಿದ್ದರು. ಪ್ರತಿ‌ವರ್ಷದಂತೆ ಈ ಬಾರಿಯೂ ಸಹ ಚಾಮುಂಡಿ ಬೆಟ್ಟಕ್ಕೆ ಖಾಸಗಿ ವಾಹನಗಳ ಪ್ರವೇಶವನ್ನ ನಿರ್ಬಂಧಿಸಿ ಉಚಿತವಾಗಿ ಕೆಎಸ್ಆರ್ ಟಿಸಿ ಬಸ್ ವ್ಯವಸ್ಥೆ ಮಾಡಲಾಗಿತ್ತು. ಭಕ್ತರು ಸರತಿ ಸಾಲಿನಲ್ಲಿ ನಿಂತು ಚಾಮುಂಡಿ ತಾಯಿಗೆ ದರ್ಶನ ಪಡೆದು ಪುನೀತರಾಗಿದ್ದಾರೆ.

ವಾ.ಓ : ಒಟ್ಟಾರೆ ಭಕ್ತರ ಕಷ್ಟಗಳನ್ನ ಪರಿಹರಿಸುವ ಚಾಮುಂಡಿ ತಾಯಿಗೆ ಭಕ್ತರು ಕಾಣಿಕೆ ರೂಪದಲ್ಲಿ ಕೋಟಿ ಕೋಟಿ ಹಣವನ್ನ ಸಮರ್ಪಸಿ ಪುನೀತರಾಗಿದ್ದಾರೆ. 

Chamundi Hills Ropeway Project ಪರಿಸರವಾದಿಗಳು ಮತ್ತು ರಾಜಮನೆತನದಿಂದಲೂ ವಿರೋಧ

Latest Videos
Follow Us:
Download App:
  • android
  • ios