ಹಿಜಾಬ್ ಧರಿಸದೇ SSLC ಪರೀಕ್ಷೆ ಬರೆಯುವಂತೆ ಮುಸ್ಲಿಂ ಮುಖಂಡನ ಮನವಿ
ಮುಸ್ಲಿಂ ಮುಖಂಡ ಶೆರಿಯಾರ್ ಖಾನ್ ಹಿಜಾಬ್ ವಿಷಯವಾಗಿ ಸುಪ್ರೀಂಕೋರ್ಟ್ ನಲ್ಲಿ ಹೋರಾಟ ಮಾಡಲಾಗುತ್ತಿದೆ. ದಯವಿಟ್ಟು ಪರೀಕ್ಷೆಗೆ ಹಿಜಾಬ್ ಪಟ್ಟು ಹಿಡಿದು ಗೈರಾಗಬೇಡಿ ಎಂದು ಮನವಿ ಮಾಡಿಕೊಡಿದ್ದಾರೆ.
ಬೆಂಗಳೂರು(ಮಾ.27): ಸೋಮವಾರದಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ (SSLC Examination) ಆರಂಭವಾಗಲಿದ್ದು, ಹಿಜಾಬ್ (Hijab) ಧರಿಸಿ ಬರುವ ವಿದ್ಯಾರ್ಥಿಗಳಿಗೆ ಪ್ರವೇಶಿಸಲು ಅನುಮತಿ ಇಲ್ಲ ಎಂದು ಶಿಕ್ಷಣ ಇಲಾಖೆ (Karnataka Education Department) ಸ್ಪಷ್ಟಪಡಿಸಿದೆ.
ಈ ಹಿನ್ನೆಲೆಯಲ್ಲಿ ಮುಸ್ಲಿಂ ಯುವತಿಯರಿಗೆ ಮನವಿ ಮಾಡಿಕೊಂಡಿರುವ ಮುಸ್ಲಿಂ ಮುಖಂಡ ಶೆರಿಯಾರ್ ಖಾನ್ (Sheriar khan) ಹಿಜಾಬ್ (Hijab) ವಿಷಯವಾಗಿ ಸುಪ್ರೀಂಕೋರ್ಟ್ ನಲ್ಲಿ ಹೋರಾಟ ಮಾಡಲಾಗುತ್ತಿದೆ. ದಯವಿಟ್ಟು ಪರೀಕ್ಷೆಗೆ ಹಿಜಾಬ್ ಪಟ್ಟು ಹಿಡಿದು ಗೈರಾಗಬೇಡಿ. ನಮ್ಮ ಕುರಾನ್ ನಲ್ಲಿ ಶಿಕ್ಷಣ ಬಗ್ಗೆ ಹೆಚ್ಚಿನ ಮಹತ್ವ ನೀಡಲಾಗಿದೆ. ಸಮುದಾಯದವರು ಯಾರೂ ಕೂಡ ಶಿಕ್ಷದಿಂದ ವಂಚಿತರಾಗಬಾರದು. ನಮ್ಮ ಸಮುದಾಯದ ಎಲ್ಲಾ ಮುಖಂಡರಿಗೂ ಇದನ್ನೇ ಮನವಿ ಮಾಡಬೇಕು.
ಕಾನೂನಿ ಹೋರಾಟ ಇದ್ದೇ ಇದೆ, ಆದರೆ ಪರೀಕ್ಷೆ ನಿಮ್ಮ ಜೀವನದ ಪ್ರಶ್ನೆ. ಉತ್ತಮ ಭವಿಷ್ಯ ರೂಪಿಸಿಕೊಳ್ಳುವ ನಿಟ್ಟಿನಲ್ಲಿ ನೀವು ಪರೀಕ್ಷೆ ಹಾಜರಾಗಲೇಬೇಕು. ಕೋರ್ಟ್ ಆದೇಶ ಏನಿದೆ ಅದರ ಪ್ರಕಾರವೇ ನಡೆದುಕೊಂಡು ಪರೀಕ್ಷೆ ಬರೆಯಿರಿ. ಮುಸ್ಲಿಂ ವಿದ್ಯಾರ್ಥಿನಿಯರಿಗೆ ಮುಸ್ಲಿಂ ಮುಖಂಡ ಶೆರಿಯಾರ್ ಖಾನ್ ಮನವಿ ಮಾಡಿಕೊಂಡಿದ್ದಾರೆ.
SSLC Exam: ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಪಾಸಾಗಲು ತ್ರಾಸಾಗಲ್ಲ..!
ಹಿಜಾಬ್ ನಿಷೇಧ ಸಮವಸ್ತ್ರ ಕಡ್ಡಾಯ: ಬೆಂಗಳೂರಿನಲ್ಲಿ ಪರೀಕ್ಷಾ ಕೇಂದ್ರಗಳ ಸುತ್ತ ನಿಷೇದಾಜ್ಞೆ ಹೇರಲಾಗಿದೆ. ಈ ಬಾರಿ ಕಠಿಣ ಪರೀಕ್ಷೆ ಇಲ್ಲ. ಜೊತೆಗೆ ಬಹು ಆಯ್ಕೆ ಮಾದರಿಯ ಪ್ರಶ್ನೆಗಳನ್ನು ಹೆಚ್ಚಿಸಲಾಗಿದೆ. ಇನ್ನು ಹಿಜಾಬ್ ಧರಿಸಿ ಬಂದರೆ ಅಂತಹ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಅವಕಾಶವಿಲ್ಲ ಎಂದು ಈಗಾಗಲೇ ಶಿಕ್ಷಣ ಇಲಾಖೆ (Karnataka Education Department) ಸ್ಪಷ್ಟಪಡಿಸಿದೆ. ಮಾತ್ರವಲ್ಲ ಪರೀಕ್ಷೆಗೆ ಗೈರಾದ ಯಾರೇ ಆಗಲಿ ಅಂತವರಿಗೆ ಮತ್ತೆ ಎರಡನೇ ಅವಕಾಶ ಸಿಗುವುದಿಲ್ಲ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ (BC Nagesh) ಅವರು ಸ್ಪಷ್ಟಪಡಿಸಿದ್ದಾರೆ.
ಹಿಜಾಬ್ (Hijab) ವಿಚಾರದಲ್ಲಿ ಹೈಕೋರ್ಟ್ ನೀಡಿರುವ ಆದೇಶವನ್ನು ಈಗಾಗಲೇ ಆಯಾ ಶಾಲೆಗಳ ಮುಖ್ಯಸ್ಥರು ಪಾಲಿಸುತ್ತಿದ್ದಾರೆ. ಶಾಲೆಯ ಕಾಂಪೌಂಡ್ ಒಳಗೆ ಹಿಜಾಬ್ ಧರಿಸಿಬರಬಹುದು. ಆದರೆ ಕೊಠಡಿಯೊಳಗೆ ಧರಿಸಲು ಅವಕಾಶವಿಲ್ಲ. ಯಾವುದೇ ಉದ್ದೇಶದಿಂದ ಪರೀಕ್ಷೆಗೆ ಗೈರು ಹಾಜರಾದವರಿಗೆ ಮರು ಪರೀಕ್ಷೆ ಮಾಡುವುದಿಲ್ಲ. ಬದಲಿಗೆ ಪೂರಕ ಪರೀಕ್ಷೆ ಬರೆಯಬಹುದು ಎಂದಿದ್ದಾರೆ.
SSLC 2022 Exam ಹಿಜಾಬ್ ಧರಿಸಿದ್ರೆ ಪರೀಕ್ಷೆಗಿಲ್ಲ ಎಂಟ್ರಿ, ಶಿಕ್ಷಣ ಇಲಾಖೆ ಆದೇಶ
ಈ ಬಾರಿ ಪ್ರಶ್ನೆ ಪತ್ರಿಕೆ ಹೇಗಿರಲಿದೆ
-ಈ ವರ್ಷದ ಪ್ರಶ್ನೆ ಪತ್ರಿಕೆಯಲ್ಲಿ ಶೇ.20% ಸಿಲಬಸ್ ಕಡಿತ
-ಉಳಿದ ಶೇ.80% ಸಿಲಬಸ್‌ನಲ್ಲಿ ಪ್ರಶ್ನೆಗಳನ್ನ ಕೇಳಲಾಗಿದೆ
-ಹಳೆ ಪದ್ಧತಿಯಲ್ಲಿ SSLC ಪರೀಕ್ಷೆ ನಡೆಯಲಿದೆ
-ಬೆಳ್ಳಿಗೆ 10.30 ರಿಂದ 1.45 ರವರೆಗೆ ಪರೀಕ್ಷೆ ನಡೆಯಲಿದೆ
-ಒಟ್ಟು 3 ಗಂಟೆ 15 ನಿಮಿಷಗಳ ಕಾಲ ಪರೀಕ್ಷೆ ನಡೆಯಲಿದೆ
ಎಸ್‌ಎಸ್‌ಎಲ್‌ಸಿ ಪರೀಕ್ಷೆ ವೇಳಾಪಟ್ಟಿ
-ಮಾರ್ಚ್ 28-ಕನ್ನಡ ,ತೆಲುಗು, ಹಿಂದಿ, ಮರಾಠಿ,ತಮಿಳು,ಉರ್ದು, ಇಂಗ್ಲಿಷ್, ಇಂಗ್ಲಿಷ್, ಸಂಸ್ಕೃತ
-ಮಾರ್ಚ್-30 ಇಂಗ್ಲಿಷ್, ಕನ್ನಡ
-ಏಪ್ರಿಲ್ 1-ಎಲಿಮೆಂಟ್ಸ್ ಆಫ್ ಮೆಕಾನಿಕಲ್ & ಎಲೆಕ್ಟ್ರಿಕ್ ಇಂಜಿನಿಯರಿಂಗ್, ಇಂಜಿನಿಯರಿಂಗ್ ಗ್ರಾಫಿಕ್ಸ್ -2, ಎಲಿಮೆಂಟ್ಸ್ ಆಫ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್, ಅರ್ಥಶಾಸ್ತ್ರ
-ಏಪ್ರಿಲ್- 4 ಗಣಿತ,ಸಮಾಜಶಾಸ್ತ್ರ
-ಏಪ್ರಿಲ್-06 ಸಮಾಜ ವಿಜ್ಞಾನ
-ಏಪ್ರಿಲ್- 08 ಹಿಂದಿ, ಕನ್ನಡ, ಇಂಗ್ಲಿಷ್, ಅರೇಬಿಕ್, ಪರ್ಷಿಯನ್, ಉರ್ದು, ಸಂಸ್ಕೃತ, ಕೊಂಕಣಿ, ತುಳು
ಎನ್‌ಎಸ್‌ಕ್ಯೂ ಪರೀಕ್ಷಾ ವಿಷಯಗಳು
-ಮಾಹಿತಿ ತಂತ್ರಜ್ಞಾನ, ರೀಟೇಲ್, ಆಟೋಮೊಬೈಲ್, ಹೆಲ್ತ್ ಕೇರ್
-ಏಪ್ರಿಲ್-11 ವಿಜ್ಞಾನ, ರಾಜ್ಯಶಾಸ್ತ್ರ