SSLC 2022 Exam ಹಿಜಾಬ್ ಧರಿಸಿದ್ರೆ ಪರೀಕ್ಷೆಗಿಲ್ಲ ಎಂಟ್ರಿ, ಶಿಕ್ಷಣ ಇಲಾಖೆ ಆದೇಶ
- ಸೋಮವಾರದಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಆರಂಭ
- ಹಿಜಾಬ್ ಧರಿಸಿ ಬರುವ ವಿದ್ಯಾರ್ಥಿಗಳಿಗೆ ಪರಿಕ್ಷಾ ಕೊಠಡಿಗೆ ಪ್ರವೇಶವಿಲ್ಲ
- ಆದೇಶ ಹೊರಡಿಸಿದ ಶಿಕ್ಷಣ ಇಲಾಖೆ
ಬೆಂಗಳೂರು(ಮಾ.25): ಸೋಮವಾರದಿಂದ (ಮಾರ್ಚ್ 28) ಎಸ್‌ಎಸ್‌ಎಲ್‌ಸಿ ಪರೀಕ್ಷೆ (SSLC Examination) ಆರಂಭವಾಗಲಿದ್ದು, ಹಿಜಾಬ್ (Hijab) ಧರಿಸಿ ಬರುವ ವಿದ್ಯಾರ್ಥಿಗಳಿಗೆ ಪ್ರವೇಶಿಸಲು ಅನುಮತಿ ಇಲ್ಲ ಎಂದು ಶಿಕ್ಷಣ ಇಲಾಖೆ (Karnataka Education Department) ಸ್ಪಷ್ಟಪಡಿಸಿದೆ.
ನಿಯಮ1995 ರ ನಿಯಮ 11ರಲ್ಲಿ ಪ್ರದತ್ತವಾಗಿರುವ ಅಧಿಕಾರದನ್ವಯ ಸಮವಸ್ತ್ರ ಜಾರಿಯಾಗಿದೆ. ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಸರ್ಕಾರ ನಿಗಧಿಪಡಿಸಿರುವ ಶಾಲಾ ಸಮವಸ್ತ್ರ ಕಡ್ಡಾಯವಾಗಿ ಧರಿಸಬೇಕು. ಸಮವಸ್ತ್ರ ಹೊರತುಪಡಿಸಿ ಬೇರೆ ವಸ್ತ್ರಗಳಿಗೆ ಅವಕಾಶವಿಲ್ಲ. ನ್ಯಾಯಾಲಯದ ಆದೇಶದಂತೆ ಎಲ್ಲರೂ ಇದನ್ನು ಪಾಲನೆ ಮಾಡಬೇಕು. ಖಾಸಗಿ ಶಾಲೆಗಳಲ್ಲಿ ಆಯಾ ಆಡಳಿತ ಮಂಡಳಿಗಳು ನಿರ್ಧರಿಸಿರುವ ಸಮವಸ್ತ್ರ ಕಡ್ಡಾಯ ಎಂದು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
'ಪರೀಕ್ಷೆಯ ಸಮಯದಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯವಲ್ಲ'
ಸಚಿವ ನಾಗೇಶ್ ಕೂಡ ಸ್ಪಷ್ಟನೆ: ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ ಸಿ ನಾಗೇಶ್ (BC Nagesh) ಪರೀಕ್ಷೆಗಳನ್ನು ಆಫ್‌ಲೈನ್‌ನಲ್ಲಿ ನಡೆಸಲು ವ್ಯವಸ್ಥೆ ಮಾಡಲಾಗಿದೆ.ಧಾರವಾಡದಲ್ಲಿ ಪರೀಕ್ಷಾ ಕೇಂದ್ರಗಳ ಸುತ್ತ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದು, ಇತರ ಜಿಲ್ಲೆಗಳಲ್ಲಿಯೂ ಹಿಜಾಬ್ ವಿವಾದ ಪಸರಿಸಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮಗಳ ಕೈಗೊಳ್ಳಲಾಗಿದೆ ಎಂದು ಹೇಳಿದರು.
ವಿದ್ಯಾರ್ಥಿಗಳು ಹಿಜಾಬ್ ಧರಿಸಿ ಪರೀಕ್ಷಾ ಕೊಠಡಿಗೆ ಪ್ರವೇಶಿಸುವಂತಿಲ್ಲ. ವಿದ್ಯಾರ್ಥಿಗಳು ಹೈಕೋರ್ಟ್ ಆದೇಶವನ್ನು ಗಮನದಲ್ಲಿಟ್ಟುಕೊಂಡು ಡ್ರೆಸ್ ಕೋಡ್ ಪಾಲಿಸಬೇಕು ಎಂದು ಮನವಿ ಮಾಡಿದರು. ಈ ವರ್ಷ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ 8.73 ಲಕ್ಷ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ.
ಪಠ್ಯದಿಂದ ಟಿಪ್ಪು ವಿಚಾರ ಕೈಬಿಟ್ಟಿಲ್ಲ: ಸಚಿವ ನಾಗೇಶ್
ಇದೇ 28ರಿಂದ SSLC ಪರೀಕ್ಷೆ ಪ್ರಾರಂಭ: ಕೊರೋನಾ ನಂತರ ಇದೇ ಮೊದಲ ಬಾರಿಗೆ SSLC ಪರೀಕ್ಷೆ ನಡೆಸಲು ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಸಿದ್ಧತೆ ಮಾಡಿಕೊಂಡಿದೆ. ಕೋವಿಡ್ ನಂತರ ನಡೆಯುತ್ತಿರುವ ಮೊದಲ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಇದಾಗಿದ್ದು, ಪರೀಕ್ಷೆಯಲ್ಲಿ ಯಾವುದೇ ಅಕ್ರಮ ನಡೆಯದಂತೆ ಬೋರ್ಡ್ ಕಠಿಣ ಕ್ರಮ ವಹಿಸಿದೆ. ಇದೇ 28 ರಿಂದ ಪರೀಕ್ಷೆ ಪ್ರಾರಂಭವಾಗಲಿದ್ದು, ಏಪ್ರಿಲ್ 11 ರವರೆಗೆ ನಡೆಯಲಿದೆ. ಈ ಬಾರಿ ವಿದ್ಯಾರ್ಥಿಗಳು ಹಾಲ್ ಟಿಕೆಟ್‌ನ್ನ ಸ್ಕೂಲ್ ಲಾಗಿನ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಇಂದಿನಿಂದ ಎಲ್ಲಾ ಶಾಲೆಗಳಲ್ಲಿ ಹಾಲ್ ಟಿಕೆಟ್ ಡೌನ್‌ಲೋಡ್ ಮಾಡಿ ವಿದ್ಯಾರ್ಥಿಗಳಿಗೆ ಕೊಡಲಾಗಿದೆ.
ಪರೀಕ್ಷೆ ಬರೆಯುತ್ತಿರುವ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ
-ಈ ಬಾರಿ ಒಟ್ಟು 8 ಲಕ್ಷದ 73 ಸಾವಿರದ 846 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ
-ಹೆಣ್ಣು ಮಕ್ಕಳು 4 ಲಕ್ಷದ 21ಸಾವಿರದ 110 ವಿದ್ಯಾರ್ಥಿನಿಯರು ಪರೀಕ್ಷೆ ತೆಗೆದುಕೊಂಡಿದ್ದಾರೆ
-ಗಂಡು ಮಕ್ಕಳು 4 ಲಕ್ಷದ 52 ಸಾವಿರದ 765 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ
-ತೃತೀಯ ಲಿಂಗಿ 4 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ
-ಈ ಬಾರಿ 3,444 ಪರೀಕ್ಷಾ ಕೇಂದ್ರಗಳನ್ನ ತೆರೆಯಲಾಗಿದೆ
-ಖಾಸಗಿ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಪರೀಕ್ಷಾ ತೆರಯಲಾಗಿದೆ
-ಈಗಾಗಲೇ ಪರೀಕ್ಷಾ ಕೇಂದ್ರಗಳಿಗೆ ಅಧಿಕ್ಷರು, ಮುಖ್ಯ ಅಧಿಕ್ಷರನ್ನ ನೇಮಕ ಮಾಡಲಾಗಿದೆ
-ಪರೀಕ್ಷಾ ಅಕ್ರಮ ತಡೆಯಲು ಸಿಸಿಟಿವಿ ಅಳವಡಿಕೆ
-ಕೊಠಡಿ ಮೆಲ್ವೀಚಾರಕರು, ಸ್ಥಳೀಯ ಜಾಗೃತದಳದ ನೇಮಕ ಕೂಡ ಮಾಡಲಾಗಿದೆ
SSLC 2022 Exam ಹಾಲ್ ಗಳಲ್ಲಿ ಹಿಜಾಬ್ ಧರಿಸುವಂತಿಲ್ಲ: ಸಚಿವ ನಾಗೇಶ್
ಈ ಬಾರಿ ಪ್ರಶ್ನೆ ಪತ್ರಿಕೆ ಹೇಗಿರಲಿದೆ
-ಈ ವರ್ಷದ ಪ್ರಶ್ನೆ ಪತ್ರಿಕೆಯಲ್ಲಿ ಶೇ.20% ಸಿಲಬಸ್ ಕಡಿತ
-ಉಳಿದ ಶೇ.80% ಸಿಲಬಸ್‌ನಲ್ಲಿ ಪ್ರಶ್ನೆಗಳನ್ನ ಕೇಳಲಾಗಿದೆ
-ಹಳೆ ಪದ್ಧತಿಯಲ್ಲಿ SSLC ಪರೀಕ್ಷೆ ನಡೆಯಲಿದೆ
-ಬೆಳ್ಳಿಗೆ 10.30 ರಿಂದ 1.45 ರವರೆಗೆ ಪರೀಕ್ಷೆ ನಡೆಯಲಿದೆ
-ಒಟ್ಟು 3 ಗಂಟೆ 15 ನಿಮಿಷಗಳ ಕಾಲ ಪರೀಕ್ಷೆ ನಡೆಯಲಿದೆ
ಎಸ್‌ಎಸ್‌ಎಲ್‌ಸಿ ಪರೀಕ್ಷೆ ವೇಳಾಪಟ್ಟಿ
-ಮಾರ್ಚ್ 28-ಕನ್ನಡ ,ತೆಲುಗು, ಹಿಂದಿ, ಮರಾಠಿ,ತಮಿಳು,ಉರ್ದು, ಇಂಗ್ಲಿಷ್, ಇಂಗ್ಲಿಷ್, ಸಂಸ್ಕೃತ
-ಮಾರ್ಚ್-30 ಇಂಗ್ಲಿಷ್, ಕನ್ನಡ
-ಏಪ್ರಿಲ್ 1-ಎಲಿಮೆಂಟ್ಸ್ ಆಫ್ ಮೆಕಾನಿಕಲ್ & ಎಲೆಕ್ಟ್ರಿಕ್ ಇಂಜಿನಿಯರಿಂಗ್, ಇಂಜಿನಿಯರಿಂಗ್ ಗ್ರಾಫಿಕ್ಸ್ -2, ಎಲಿಮೆಂಟ್ಸ್ ಆಫ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್, ಅರ್ಥಶಾಸ್ತ್ರ
-ಏಪ್ರಿಲ್- 4 ಗಣಿತ,ಸಮಾಜಶಾಸ್ತ್ರ
-ಏಪ್ರಿಲ್-06 ಸಮಾಜ ವಿಜ್ಞಾನ
-ಏಪ್ರಿಲ್- 08 ಹಿಂದಿ, ಕನ್ನಡ, ಇಂಗ್ಲಿಷ್, ಅರೇಬಿಕ್, ಪರ್ಷಿಯನ್, ಉರ್ದು, ಸಂಸ್ಕೃತ, ಕೊಂಕಣಿ, ತುಳು
ಎನ್‌ಎಸ್‌ಕ್ಯೂ ಪರೀಕ್ಷಾ ವಿಷಯಗಳು
-ಮಾಹಿತಿ ತಂತ್ರಜ್ಞಾನ, ರೀಟೇಲ್, ಆಟೋಮೊಬೈಲ್, ಹೆಲ್ತ್ ಕೇರ್
-ಏಪ್ರಿಲ್-11 ವಿಜ್ಞಾನ, ರಾಜ್ಯಶಾಸ್ತ್ರ