ನವಲಗುಂದ: ರೈತ ಬಂಡಾಯದ ನೆಲದಲ್ಲಿ ಅಕ್ಷರ ಕ್ರಾಂತಿ, ಸಚಿವ ಮುನೇನಕೊಪ್ಪ ಸಾಧನೆ

*  ಸರ್ಕಾರಿ ಶಾಲೆಗಳಲ್ಲಿ ‘ಅಕ್ಷರದ ಹೊಳಪು’
*  ನೂರು ಕೋಟಿಯಲ್ಲಿ ಶಾಲೆಗಳಲ್ಲಿ ಮೂಲಸೌಲಭ್ಯ
*  ಕೇಂದ್ರ ಸಚಿವ ಜೋಶಿ ಸಿಎಸ್‌ಆರ್‌ ಅನುದಾನದ ಮೂಲಕ ನವಲಗುಂದ ಕ್ಷೇತ್ರಕ್ಕೆ ಸಾಕಷ್ಟು ಅನುಕೂಲ 
 

Minister Shankar Patil Munenakoppa Provided Infrastructure for Government Schools in Navalgund grg

ಹುಬ್ಬಳ್ಳಿ(ಜು.09):  ಜನಪ್ರತಿನಿಧಿಯಾದವರಿಗೆ ತನ್ನ ಕ್ಷೇತ್ರ ಹೇಗಿರಬೇಕೆನ್ನುವ ಸ್ಪಷ್ಟಕಲ್ಪನೆ ಹೊಂದಿದರೆ ಸಾಲದು. ಆ ಕಲ್ಪನೆಯನ್ನು ಸಾಕಾರಗೊಳಿಸುವುದು ಮುಖ್ಯ. ಆ ಕೆಲಸವನ್ನು ಸದ್ದಿಲ್ಲದೇ ಮಾಡುತ್ತಿರುವ ಅಪರೂಪದ ಜನಪ್ರತಿನಿಧಿ ಶಂಕರ ಪಾಟೀಲ ಮುನೇನಕೊಪ್ಪ. ಸರ್ಕಾರಿ ಶಾಲೆಗಳಿಗೆ ಸಕಲ ಮೂಲಸೌಲಭ್ಯ ಕಲ್ಪಿಸುವ ಮೂಲಕ ನವಲಗುಂದ ವಿಧಾನಸಭಾ ಕ್ಷೇತ್ರದಲ್ಲಿ ‘ಅಕ್ಷರ ಕ್ರಾಂತಿ’ಯನ್ನೇ ಮಾಡಿದ್ದು, ಶಿಕ್ಷಣ ಪ್ರೇಮಿಗಳಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಕೈಮಗ್ಗ, ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಖಾತೆ ಸಚಿವರೂ ಆಗಿರುವ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ, ಕ್ಷೇತ್ರದಲ್ಲಿ ಮಾಡಿರುವ ಸಾಧನೆ ಅಷ್ಟಿಷ್ಟಲ್ಲ. ಅದರಲ್ಲೂ ನವಲಗುಂದ ಎಂದರೆ ರೈತ ಹೋರಾಟದಿಂದಲೇ ದೇಶದ ಗಮನ ಸೆಳೆದಿರುವ ಕ್ಷೇತ್ರ. ಈ ಬಂಡಾಯದ ನೆಲದಲ್ಲಿನ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸಿ ಅಕ್ಷರ ಕ್ರಾಂತಿ ಮಾಡಿದವರು ಮುನೇನಕೊಪ್ಪ.

ರಾಜ್ಯದ ಸಚಿವರಾಗಿಯೂ ಹಲವು ಜನಪರ ಕಾರ್ಯ ಮಾಡುತ್ತ, ತಮ್ಮ ಕ್ಷೇತ್ರದ ಅಭಿವೃದ್ಧಿಗೆ ಯಾವುದೇ ತರದಲ್ಲೂ ಹಿಂದೆ ಸರಿಯದ ವ್ಯಕ್ತಿತ್ವ ವರದು. ಅದೇ ಕಾರಣಕ್ಕೆ ರೈತರ ಮಕ್ಕಳು ಕೂಡಾ ಉನ್ನತ ಸ್ಥಾನಕ್ಕೆ ಹೋಗಲು ಬೇಕಾಗುವ ಭದ್ರ ಬುನಾದಿಯನ್ನು ತಳಮಟ್ಟದಲ್ಲೇ ಮಾಡಿ ಮುಗಿಸಿದ್ದಾರೆ. ಬರೋಬ್ಬರಿ .100 ಕೋಟಿ ವೆಚ್ಚದಲ್ಲಿ ಶಿಕ್ಷಣದ ಮೂಲಭೂತ ಸೌಲಭ್ಯ ಒದಗಿಸಿದ್ದಾರೆ.

MA ಪದವೀಧರ ಯುವಕನಿಂದ ಸಾಮಾಜಿಕ ಕಾರ್ಯ: ತಳ್ಳುವ ಗಾಡಿಯಲ್ಲೇ ವಾಸ್ತವ್ಯ, ಕೊಟ್ಟವರ ಬಳಿ ಊಟ..!

ಸಚಿವ ಶಂಕರ ಪಾಟೀಲರ ಆಸಕ್ತಿ ನೋಡಲು ಹೊರಟರೆ ಇಡೀ ಕರ್ನಾಟಕವೇ, ಅವರಲ್ಲಿನ ಶೈಕ್ಷಣಿಕ ಪ್ರೇಮವನ್ನು ಕೊಂಡಾಡುವಂತಾಗುತ್ತದೆ. ಪ್ರಾಥಮಿಕ, ಮಾಧ್ಯಮಿಕ, ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳಿಗೆ ಹೋಗುವ ಯಾವೊಬ್ಬ ವಿದ್ಯಾರ್ಥಿಗೂ ಸಮಸ್ಯೆಯಾಗಬಾರದೆಂದು ಬರೋಬ್ಬರಿ 265 ಕೊಠಡಿ ನಿರ್ಮಾಣ ಮಾಡಲಾಗುತ್ತಿದೆ. ಬರೀ ಕೊಠಡಿಗಳನ್ನಷ್ಟೇ ಕಟ್ಟಿಸುವುದಲ್ಲ. ಬದಲಿಗೆ ಮಕ್ಕಳಿಗೆ ಗುಣಮಟ್ಟದ ಕಲಿಕೆಯೂ ಸಿಗುವಂತಾಗಬೇಕು ಎಂಬ ಇರಾದೆ ಸಚಿವರದು. ಇದಕ್ಕೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕೊಡುಗೆಯೂ ಸಾಕಷ್ಟಿದೆ.

ಸ್ಪೋಕನ್‌ ಇಂಗ್ಲೀಷ್‌:

ಹಳ್ಳಿ ಮಕ್ಕಳು ಇಂಗ್ಲೀಷನಲ್ಲಿ ಹಿಂದುಳಿಯಬಾರದು. ಜಗತ್ತಿನ ಯಾವುದೇ ಮೂಲೆಗೂ ತೆರಳಿದರೂ ಸಮರ್ಪಕವಾಗಿ ನಿಭಾಯಿಸುವಂತಾಗಬೇಕು ಎಂಬ ಕಾರಣದಿಂದ ದೇಶಪಾಂಡೆ ಪೌಂಡೇಷನ್‌ ಸಹಕಾರದಿಂದ ಸ್ಪೋಕನ್‌ ಇಂಗ್ಲೀಷ್‌ ಕಲಿಸುವ ವ್ಯವಸ್ಥೆಯನ್ನು ಕ್ಷೇತ್ರದ ಸರ್ಕಾರಿ ಶಾಲೆಗಳಲ್ಲಿ ಮಾಡಿರುವುದು ವಿಶೇಷ. ಇದರಿಂದ ಮಕ್ಕಳು ಅರಳು ಹುರಿದಂತೆ ಪಟಪಟನೆ ಇಂಗ್ಲೀಷ ಮಾತನಾಡುತ್ತಾರೆ. ಜತೆಗೆ ಮಕ್ಕಳ ಆಟೋಟಕ್ಕೆ ತೊಂದರೆಯಾಗಬಾರದೆಂಬ ಸದುದ್ದೇಶದಿಂದ ಮೈದಾನಗಳ ಅಭಿವೃದ್ಧಿ ಪಡಿಸಿ ಫೇವರ್ಸ್‌ ಹಾಕುವ ಕೆಲಸ ಮಾಡಲಾಗುತ್ತಿದೆ.

ಸ್ಮಾರ್ಟ್‌ ಕ್ಲಾಸ್‌:

ಆಧುನಿಕತೆಗೆ ತಕ್ಕಂತೆ, ಖಾಸಗಿ ಶಾಲೆಗಳಿಗೆ ಕಮ್ಮಿಯಿಲ್ಲದಂತೆ ಸೌಲಭ್ಯ ಕಲ್ಪಿಸುತ್ತಿರುವ ಸಚಿವರು, ಪ್ರತಿ ಶಾಲೆಗೂ ‘ಸ್ಮಾರ್ಟ್‌ ಕ್ಲಾಸ್‌’ ಮಾಡಿಸುತ್ತಿದ್ದಾರೆ. ಶುದ್ಧ ಕುಡಿಯುವ ನೀರು ಸಿಗುವ ವ್ಯವಸ್ಥೆ ಮಾಡಲಾಗಿದೆ. ಯಾವುದೇ ವಿದ್ಯಾರ್ಥಿಗಳು ಶಾಲೆಯಿಂದ ದೂರವುಳಿಯಬಾರದೆಂಬ ಮನೋಭಾವನೆ ಶಂಕರ ಪಾಟೀಲರದ್ದು, ಸಕಲ ಸೌಲಭ್ಯ ಕಲ್ಪಿಸಿ ಮಕ್ಕಳನ್ನು ಶಾಲೆಯತ್ತ ಆಕರ್ಷಿಸುವಂತೆ ಮಾಡಿರುವುದು ವಿಶೇಷ. ಮೊರಾರ್ಜಿ ವಸತಿ ಶಾಲೆಗಳು, ಅಲ್ಪಸಂಖ್ಯಾತ ಶಾಲೆಗಳು, ನವೋದಯ ಶಾಲೆಗಳಿಗೂ ನಿರಂತರವಾಗಿ ತಮ್ಮದೇ ರೀತಿಯಲ್ಲಿ ಅಭಿವೃದ್ಧಿ ಮಾಡುತ್ತ ಮುನ್ನಡೆದಿದ್ದಾರೆ.

ಸ್ಪೋರ್ಟ್ಸ್‌ ಪಾರ್ಕ್:

ಕ್ಷೇತ್ರದ ಯುವ ಸಮೂಹ ರಾಜ್ಯ ಹಾಗೂ ರಾಷ್ಟ್ರಮಟ್ಟದ ಕ್ರೀಡೆಗಳಲ್ಲಿ ಸಾಧನೆ ಮಾಡಬೇಕೆಂಬ ಇರಾದೆ ಮುನೇನಕೊಪ್ಪ ಅವರದ್ದು. ಅದಕ್ಕಾಗಿ ಅಣ್ಣಿಗೇರಿಯಲ್ಲಿ .5 ಕೋಟಿ ವೆಚ್ಚದಲ್ಲಿ ಸ್ಪೋರ್ಟ್ಸ್‌ ಪಾರ್ಕ್ ನಿರ್ಮಾಣ ಮಾಡಲು ಕ್ರಮ ಕೈಗೊಂಡಿದ್ದಾರೆ. ಮುಂದೆ ನವಲಗುಂದದಲ್ಲೂ ಸ್ಪೋರ್ಟ್ಸ್‌ ಪಾರ್ಕ್ ನಿರ್ಮಿಸಲು ರೂಪರೇಷೆ ಸಿದ್ಧಪಡಿಸಿರುವುದು ವಿಶೇಷ. ಈ ಮೂಲಕ ಕ್ರೀಡಾ ಚಟುವಟಿಕೆಗಳಿಗೂ ಉತ್ತೇಜನ ನೀಡುತ್ತಿದ್ದಾರೆ.

ಕಳೆದ ಎರಡ್ಮೂರು ವರ್ಷಗಳ ಕೊರೋನಾದ ಹಾವಳಿಯ ಸಮಯದಲ್ಲೇ ಸರ್ಕಾರಿ ಶಾಲೆಗಳಿಗೆ ಕಾಯಕಲ್ಪ ನೀಡಿದ್ದರ ಪರಿಣಾಮದಿಂದಲೇ ನವಲಗುಂದ ವಿಧಾನಸಭಾ ಕ್ಷೇತ್ರದ ಪ್ರತಿಯೊಂದು ಶಾಲೆಯಲ್ಲೂ ಮಕ್ಕಳ ಪ್ರವೇಶಾತಿ ಹೆಚ್ಚಾಗಿದ್ದು,ಇದಕ್ಕೆ ಶಂಕರ ಪಾಟೀಲ ಮುನೇನಕೊಪ್ಪ ಅವರ ದೂರದೃಷ್ಟಿಯೇ ಕಾರಣ ಎಂದರೆ ತಪ್ಪಾಗಲಾರದು.

ಇದೇ ಸಮಯದಲ್ಲಿ ಶಾಲೆಯ ಮೈದಾನದಲ್ಲೂ ಸಸಿ ನೆಡುವ ಕಾರ್ಯಕ್ರಮ ಆರಂಭಿಸಿದ್ದು, ಶಾಲೆಗಳನ್ನು ಹಸಿರುಕರಣಗೊಳಿಸಲು ಶ್ರಮಿಸುತ್ತಿದ್ದಾರೆ. ಬಂಡಾಯದ ರೈತ ನಾಡಿನಲ್ಲಿ ರೈತನ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಸಿಗಬೇಕು. ಆ ಶಿಕ್ಷಣ ಪಡೆಯುವಾಗ ಒಳ್ಳೆಯ ವಾತಾವರಣವಿರಬೇಕು. ಪರಿಸರ ಬೆಳೆಸಬೇಕು. ಖಾಸಗಿ ಶಾಲೆಗಳಲ್ಲಿ ಸಿಗುವ ಸಕಲ ಸೌಲಭ್ಯಗಳ ಜತೆಗೆ ಭಾಷೆಯ ತೊಂದರೆ ರೈತನ ಮಕ್ಕಳಿಗೆ ಆಗಬಾರದೆಂದು ಸ್ಪೋಕನ್‌ ಇಂಗ್ಲಿಷ್‌, ಇದಕ್ಕೆ ಕಳಶವಿಟ್ಟಂತೆ ಪ್ರಮುಖ ಅಣ್ಣಿಗೇರಿ ಮತ್ತು ನವಲಗುಂದ ಪಟ್ಟಣದಲ್ಲಿ ಸ್ಪೋಟ್ಸ್‌ರ್‍ ಪಾರ್ಕ್ ನಿರ್ಮಾಣ...ಹೀಗೆ ಹೇಳುತ್ತಾ ಸಾಗಿದರೆ ಸರ್ಕಾರಿ ಶಾಲೆಗಳಲ್ಲಿ ನಡೆಯುತ್ತಿರುವ ಅಭಿವೃದ್ಧಿಗೆ ಪದಗಳೇ ಸಾಕಾಗುವುದಿಲ್ಲ. ಓರ್ವ ಮನುಜವಾದಿ ವ್ಯಕ್ತಿ ಜನಪ್ರತಿನಿಧಿಯಾದರೆ ಏನೆಲ್ಲ ಮಾಡಬಹುದು ಎಂಬುದಕ್ಕೆ ಉದಾಹರಣೆಯಾಗಿ ನಿಲ್ಲುತ್ತದೆ.

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸಿಎಸ್‌ಆರ್‌ ಅನುದಾನದ ಮೂಲಕ ನವಲಗುಂದ ಕ್ಷೇತ್ರಕ್ಕೆ ಸಾಕಷ್ಟು ಅನುಕೂಲ ಮಾಡಿದ್ದಾರೆ. ಈ ಮೂಲಕ ಮುನೇನಕೊಪ್ಪ ಅವರ ಕಾರ್ಯಕ್ಕೆ ಸಾಥ್‌ ನೀಡುತ್ತಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್‌.ಯಡಿಯೂರಪ್ಪ, ಜಗದೀಶ ಶೆಟ್ಟರ ಕೂಡಾ ನವಲಗುಂದ ಕ್ಷೇತ್ರದ ಬಗ್ಗೆ ವಿಶೇಷ ಆಸಕ್ತಿ ಹೊಂದಿರುವುದು ಕ್ಷೇತ್ರದಲ್ಲಿ ಕಂಡು ಬರುತ್ತದೆ.

ಸ್ವತಃ ಸರ್ಕಾರಿ ಶಾಲೆಯಲ್ಲಿ ಕಲಿತು ಸರ್ಕಾರಿ ಶಾಲೆಯಲ್ಲಿ ಏನಿದ್ದರೆ ಚೆನ್ನ ಎಂದು ಅರಿತುಕೊಂಡಿರುವ ಶಂಕರ ಪಾಟೀಲ ಮುನೇನಕೊಪ್ಪ ಅವರ ಮನೋಭಾವನೆ ಈ ಮೂಲಕ ಗೋಚರವಾಗತ್ತೆ.ಕೇವಲ ಮತ ಕ್ರೋಢಿಕರಣ ಮಾಡುವುದಕ್ಕಾಗಿಯೇ ಜನರ ದಾರಿ ತಪ್ಪಿಸುವ ನೂರಾರೂ ಜನರ ನಡುವೆ ಸಚಿವರು ವಿಭಿನ್ನವಾಗಿ ಕಾಣುತ್ತಾರೆ. ಶಿಕ್ಷಣದ ಮಹತ್ವ ಅರಿತಿದ್ದರಿಂದಲೇ ಶಂಕರ ಪಾಟೀಲರು ಇಂತಹ ಸಾಧನೆ ಮಾಡಿ ಮುಗಿಸಿದ್ದಾರೆ. ಮುನೇನಕೊಪ್ಪ ಅವರ ಕಾರ್ಯವೈಖರಿಗೆ ಕ್ಷೇತ್ರಾದ್ಯಂತ ಮೆಚ್ಚುಗೆಗೆ ಪಾತ್ರವಾಗಿದೆ.

ನವಲಗುಂದ ಕ್ಷೇತ್ರದಲ್ಲಿ ನಡೆಯುತ್ತಿರುವ ಶಿಕ್ಷಣ ಕ್ರಾಂತಿ ನೋಡಲು ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಅವರ ಮಗಳು ಇಲ್ಲಿಗೆ ಬಂದು ಹೋಗಿರುವುದು ವಿಶೇಷ. ಸರ್ಕಾರಿ ಶಾಲೆಯ ಮಕ್ಕಳು ಸರಳವಾಗಿ ಇಂಗ್ಲಿಷನಲ್ಲಿ ಮಾತನಾಡುವುದನ್ನು ನೋಡಿ, ಅವರು ದಂಗಾಗಿ ಹೋಗಿದ್ದರು.

ಕೊನೆಗೂ ಪಿಯು ಉತ್ತರಪತ್ರಿಕೆ ಡೌನ್‌ಲೋಡ್‌ಗೆ ಲಭ್ಯ, PUC ದಾಖಲಾತಿ ಜು.22ರವರೆಗೆ ವಿಸ್ತರಣೆ

ನವಲಗುಂದ ತಾಲೂಕಲ್ಲಿ ಸರ್ಕಾರಿ ಶಾಲೆಗಳಲ್ಲಿ ಹೊಸ ಕೊಠಡಿಗಳು ಬಂದಿವೆ. ಸಚಿವರೂ ಆಗಿರುವ ಕ್ಷೇತ್ರದ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಸರ್ಕಾರಿ ಶಾಲೆಗಳಲ್ಲಿ ಯಾವುದೇ ಸಮಸ್ಯೆಯಾಗದಂತೆ ಮೂಲಸೌಲಭ್ಯ ಕಲ್ಪಿಸುತ್ತಿದ್ದಾರೆ. ಇದರಿಂದ ಸರ್ಕಾರಿ ಶಾಲೆಗಳಿಗೆ ಮಕ್ಕಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ ಅಂತ ನವಲಗುಂದ ಬಿಇಒ ಬಸವರಾಜ ಮಾಯಾಚಾರ ತಿಳಿಸಿದ್ದಾರೆ.  

ಪ್ರಾಥಮಿಕ-ಮಾಧ್ಯಮಿಕ-ಪ್ರೌಢಶಾಲೆ ಒಟ್ಟು ನಿರ್ಮಾಣಗೊಂಡ ಕೊಠಡಿಗಳ ಸಂಖ್ಯೆ- 265

(ಪ್ರತಿ ಕೊಠಡಿಗೂ 12.5 ಲಕ್ಷ ರೂಪಾಯಿ)
- ಪದವಿ ಪೂರ್ವ ಕಾಲೇಜ್‌
ಮೊರಬ- . 2.80 ಕೋಟಿ
ಅಣ್ಣಿಗೇರಿ- . 1.80 ಕೋಟಿ
ಶಲವಡಿ- . 2 ಕೋಟಿ
ಕರ್ನಾಟಕ ಪಬ್ಲಿಕ್‌ ಶಾಲೆ (ಶಲವಡಿ)- . 2 ಕೋಟಿ
ಹೆಬ್ಬಾಳ- . 96 ಲಕ್ಷ
ಹೆಬಸೂರು- . 51 ಲಕ್ಷ
ಅಮರಗೋಳ ಪ್ರೌಢಶಾಲೆ- . 1 ಕೋಟಿ
ಫೇವರ್ಸ್‌- . 1.90 ಕೋಟಿ ಕಾಮಗಾರಿ ಮುಕ್ತಾಯ
ಫೇವರ್ಸ್‌- . 4.60 ಕೋಟಿ ಬಿಡುಗಡೆ
ಸ್ಮಾರ್ಚ್‌ ಕ್ಲಾಸ್‌- 29 ಶಾಲೆಗಳಿಗೆ ಅಳವಡಿಕೆ (ಇನ್ನುಳಿದ ಶಾಲೆಗಳಿಗೂ ಹಣ ಬಿಡುಗಡೆ)
 

Latest Videos
Follow Us:
Download App:
  • android
  • ios