ಕೊನೆಗೂ ಪಿಯು ಉತ್ತರಪತ್ರಿಕೆ ಡೌನ್‌ಲೋಡ್‌ಗೆ ಲಭ್ಯ, PUC ದಾಖಲಾತಿ ಜು.22ರವರೆಗೆ ವಿಸ್ತರಣೆ

  • ಅಂತೂ ಪಿಯು ಉತ್ತರಪತ್ರಿಕೆ ಪ್ರತಿ ಡೌನ್‌ಲೋಡ್‌ಗೆ ಲಭ್ಯ
  • ತಾಂತ್ರಿಕ ಸಮಸ್ಯೆ ನಿವಾರಣೆ 5 ದಿನ ಹೆಚ್ಚುವರಿ ಟೈಮ್‌
  • ಪಿಯು ಪ್ರವೇಶಕ್ಕೆ 22ರವರೆಗೆ ಅವಕಾಶ
karnataka 2nd puc scanned copy 2022 date extended gow

 ಬೆಂಗಳೂರು (ಜು.9): ದ್ವಿತೀಯ ಪಿಯುಸಿ ಪರೀಕ್ಷಾ ಉತ್ತರ ಪತ್ರಿಕೆಗಳ ಸ್ಕ್ಯಾನ್ ಪ್ರತಿಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳಲು ಕಳೆದ ಎರಡು ದಿನಗಳಿಂದ ಸಮಸ್ಯೆಯಾದ ಹಿನ್ನೆಲೆಯಲ್ಲಿ ಪ್ರತಿಗಳ ಡೌನ್‌ಲೋಡ್‌ಗೆ ಜು.15ರವರೆಗೆ ಹಾಗೂ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಜು.18ರವರೆಗೆ ಪಿಯು ಇಲಾಖೆ ಕಾಲಾವಕಾಶ ವಿಸ್ತರಿಸಿದೆ.

ಸ್ಕ್ಯಾನ್ ಪ್ರತಿಗೆ ಅರ್ಜಿ ಸಲ್ಲಿಸಿದ್ದವರು ಜು.6ರಿಂದ ಇಲಾಖೆಯ ವೆಬ್‌ಸೈಟ್‌ನಲ್ಲಿ ಡೌನ್‌ಲೋಡ್‌ ಮಾಡಿಕೊಳ್ಳಬಹುದೆಂದು ತಿಳಿಸಲಾಗಿತ್ತಾದರೂ ತಾಂತ್ರಿಕ ಕಾರಣಗಳಿಂದ ಸಾಧ್ಯವಾಗಿರಲಿಲ್ಲ. ಶುಕ್ರವಾರ ಸಮಸ್ಯೆ ಸರಿಪಡಿಸಿದ ಇಲಾಖೆಯು ಪ್ರತಿಗಳ ಡೌನ್‌ಲೋಡ್‌ಗೆ ಜು.10ರವರೆಗೆ ಇದ್ದ ಸಮಯವನ್ನು 15ರವರೆಗೆ ವಿಸ್ತರಿಸಿದೆ.

ರಾಜ್ಯದ 541 ಪಿಯು ಕಾಲೇಜಲ್ಲಿ 3 ವರ್ಷದಿಂದ ಒಂದೂ ಅಡ್ಮಿಷನ್‌ ಇಲ್ಲ!

ಅದೇ ರೀತಿ ಸ್ಕ್ಯಾನ್ ಪ್ರತಿ ಪಡೆದವರಿಗೆ ಮಾತ್ರ ಮರು ಮೌಲ್ಯಮಾಪನಕ್ಕೆ ಅವಕಾಶ ನೀಡಲಾಗಿದೆ. ತಮ್ಮ ಉತ್ತರ ಪತ್ರಿಕೆಗಳನ್ನು ಪರಿಶೀಲಿಸಿದಾಗ ಇನ್ನೂ ಹೆಚ್ಚಿನ ಅಂಕ ಬರಬೇಕೆಂಬುದು ಖಚಿತವಾದರೆ ವಿದ್ಯಾರ್ಥಿಗಳು ಮರು ಮೌಲ್ಯಮಾಪನ ಮತ್ತು ಅಂಕ ಮರು ಎಣಿಕೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಸ್ಕ್ಯಾನ್ ಪ್ರತಿ ಡೌನ್‌ಲೋಡ್‌ ಆಗುವುದು ತಡವಾದ ಹಿನ್ನೆಲೆಯಲ್ಲಿ ಇದೀಗ ಅರ್ಜಿ ಸಲ್ಲಿಸಲು ಜು.13ರವರೆಗೆ ಇದ್ದ ಕಾಲಾವಕಾಶವನ್ನು ಜು.18ರವರೆಗೆ ಇಲಾಖೆ ವಿಸ್ತರಿಸಿದೆ.

ಶಾಲಾ ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್, ಶೂ, ಸಾಕ್ಸ್‌ಗೆ ಹಣ ರಿಲೀಸ್..

‘ಎಲ್ಲ ವಿದ್ಯಾರ್ಥಿಗಳು ಒಮ್ಮೆಲೆ, ಡೌನ್‌ಲೋಡ್‌ಗೆ ಮುಂದಾಗಿದ್ದರಿಂದ ಸರ್ವರ್‌ ಲೋಡ್‌ ಜಾಸ್ತಿಯಾಗಿ ಸಮಸ್ಯೆ ಉಂಟಾಗಿತ್ತು. ಈ ತಾಂತ್ರಿಕ ಸಮಸ್ಯೆಯನ್ನು ಪರಿಹರಿಸಿದ್ದೇವೆ. ವಿದ್ಯಾರ್ಥಿಗಳು ಈಗ ಸುಲಭವಾಗಿ ಪ್ರತಿಗಳ ಡೌನ್‌ಲೋಡ್‌ ಮಾಡಬಹುದು. ಸಮಸ್ಯೆ ಇದ್ದುದ್ದರಿಂದ ದಿನಾಂಕವನ್ನು ಸಹ ವಿಸ್ತರಿಸಿದ್ದೇವೆ’ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕ ಆರ್‌.ರಾಮಚಂದ್ರನ್‌ ಹೇಳಿದ್ದಾರೆ.

ಶಿಕ್ಷಣ ಇಲಾಖೆ ಮೇಲೆ ಕೋವಿಡ್ ಎಫೆಕ್ಟ್: ಸರ್ಕಾರದ ವಿರುದ್ಧ ಅಸಮಾಧಾನ

ಪಿಯು ಪ್ರವೇಶಕ್ಕೆ 22ರವರೆಗೆ ಅವಕಾಶ: ರಾಜ್ಯದ ಎಲ್ಲ ಪದವಿ ಪೂರ್ವ ಕಾಲೇಜುಗಳಲ್ಲಿ 2022-23ನೇ ಸಾಲಿನಲ್ಲಿ ಪ್ರಥಮ ಹಾಗೂ ದ್ವಿತೀಯ ಪಿಯುಸಿ ತರಗತಿಗಳ ದಾಖಲಾತಿಗೆ ಇದ್ದ ಕಾಲಾವಕಾಶವನ್ನು ವಿಶೇಷ ದಂಡ ಶುಲ್ಕದೊಂದಿಗೆ ಜು.22ರವರೆಗೆ ವಿಸ್ತರಿಸಿ ಪದವಿ ಪೂರ್ವ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ. ದಂಡ ಶುಲ್ಕದೊಂದಿಗೆ ಪ್ರವೇಶಕ್ಕೆ ಜು.8 ಕೊನೆಯ ದಿನವಾಗಿತ್ತು.

Latest Videos
Follow Us:
Download App:
  • android
  • ios