ಎಸ್ಸೆಸ್ಸೆಲ್ಸಿ, ಪಿಯುಸಿಗೆ ಈ ಬಾರಿ ಪಠ್ಯ ಕಡಿತ ಇಲ್ಲ: ಸಚಿವ ನಾಗೇಶ್‌

*  ಮೇ 16ರಿಂದಲೇ ತರಗತಿ ಆರಂಭ
*  ಆನ್‌ಲೈನ್‌ ಶಿಕ್ಷಣವೂ ಇಲ್ಲ: ಸರ್ಕಾರ
*  ಸಹಜ ಸ್ಥಿತಿ ಬಂದಿದೆ
 

Minister BC Nagesh Talks Over SSLC PUC Examination in Karnataka grg

ಬೆಂಗಳೂರು(ಏ.17): ಕೋವಿಡ್‌(Covid-19) ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷ ಎಸ್ಸೆಸ್ಸೆಲ್ಸಿ(SSLC) ಮತ್ತು ದ್ವಿತೀಯ ಪಿಯುಸಿ(PUC) ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಒಂದಷ್ಟು ಪಠ್ಯಕ್ರಮ ಕಡಿತಗೊಳಿಸಲಾಗಿತ್ತು. ಆದರೆ, 2022-23ನೇ ಶೈಕ್ಷಣಿಕ ಸಾಲಿನಲ್ಲಿ ಪೂರ್ಣ ಪ್ರಮಾಣದ ಪಠ್ಯ ಬೋಧನೆಗೆ ಸರ್ಕಾರ ಮುಂದಾಗಿದೆ.

ಕೇಂದ್ರೀಯ ಪಠ್ಯಕ್ರಮದ ಸಿಬಿಎಸ್‌ಇ(CBSE) ಶಾಲೆಗಳಲ್ಲಿ ಮುಂದಿನ ವರ್ಷವೂ ಪಠ್ಯ ಕಡಿತಗೊಳಿಸುವುದಾಗಿ ಈಗಾಗಲೇ ಘೋಷಿಸಲಾಗಿದೆ. ಆದರೆ, ರಾಜ್ಯ ಪಠ್ಯಕ್ರಮದ(State Syllabus) ಶಾಲೆ, ಪಿಯು ಕಾಲೇಜು ವಿದ್ಯಾರ್ಥಿಗಳಿಗೆ ಮುಂದಿನ ಸಾಲಿನಲ್ಲಿ ಯಾವುದೇ ಪಠ್ಯ ಕಡಿತಗೊಳಿಸದಿರಲು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಈಗಾಗಲೇ ನಿರ್ಧಾರ ತೆಗೆದುಕೊಂಡಿದೆ.

NEP: ಸಮಗ್ರ ಅಭಿವೃದ್ಧಿಗೆ ರಾಷ್ಟೀಯ ಶಿಕ್ಷಣ ನೀತಿ ಅವಶ್ಯಕ: ಸಚಿವ ನಾಗೇಶ

ಕೋವಿಡ್‌ನಿಂದ ಹಿಂದಿನ ಎರಡು ವರ್ಷ ಶೇ.20ರಷ್ಟು ಪಠ್ಯ ಕಡಿತ ಮಾಡಲಾಗಿತ್ತು. ಬೋಧಿಸಿದ ಶೇ.80ರಷ್ಟು ಪಠ್ಯಕ್ಕೇ ಪರೀಕ್ಷೆ ನಡೆಸಲಾಗಿತ್ತು. ಆದರೆ, ಈ ಬಾರಿ ಯಾವುದೇ ಪಠ್ಯ ಕಡಿತಗೊಳಿಸದಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಪದವಿ ಪೂರ್ವ ಶಿಕ್ಷಣ ಇಲಾಖೆಗಳಿಗೆ ಸರ್ಕಾರ ಸೂಚನೆ ನೀಡಿದೆ.

Hijab Row: ದ್ವಿತೀಯ ಪಿಯು ಪರೀಕ್ಷೆಗೂ ಹಿಜಾಬ್‌ ನಿಷಿದ್ಧ: ನಾಗೇಶ್‌

ಕಳೆದ ಎರಡು ವರ್ಷ ಕೋವಿಡ್‌ನಿಂದ ಸಮಯಕ್ಕೆ ಸರಿಯಾಗಿ ಶಾಲೆಗಳು(Schools) ಆರಂಭವಾಗಿರಲಿಲ್ಲ, ತರಗತಿಗಳು ಸಮರ್ಪಕವಾಗಿ ನಡೆದಿರಲಿಲ್ಲ. ಹೀಗಾಗಿ ಮಕ್ಕಳು ಕಲಿಕೆಯಲ್ಲಿ ಸಾಕಷ್ಟುಹಿಂದುಳಿದಿದ್ದಾರೆ. ಕಲಿಕೆಯಲ್ಲಿ ಸಾಕಷ್ಟುಸುಧಾರಣೆ ಆಗಬೇಕಿದೆ. ಈಗ ಕೋವಿಡ್‌ ತಹಬದಿಗೆ ಬಂದಿದೆ. ಈ ಬಾರಿ ಮೇ 16ರಿಂದ ಅಂದರೆ ಪ್ರತೀ ವರ್ಷಕ್ಕಿಂತ 15 ದಿನ ಮೊದಲೇ ಶಾಲೆಗಳನ್ನು ಆರಂಭಿಸಲಾಗುತ್ತಿದೆ. ಭೌತಿಕ ತರಗತಿಗಳು ನಡೆಯಲಿವೆ. ಆನ್‌ಲೈನ್‌ ಮತ್ತಿತರೆ ಪರ್ಯಾಯ ಶಿಕ್ಷಣದ(Education) ಅವಶ್ಯಕತೆ ಇರುವುದಿಲ್ಲ. ಹಾಗಾಗಿ ಮತ್ತೆ ಪಠ್ಯ ಕಡಿತ ಅವಶ್ಯವಿಲ್ಲ ಎಂದು ಯೋಜಿಸಲಾಗಿದೆ. ಕೋವಿಡ್‌ ಪೂರ್ವದಂತೆ ಶೇ.100ರಷ್ಟು ಪಠ್ಯಕ್ರಮದ ಬೋಧನೆ ಹಾಗೂ ಅದರ ಆಧಾರದಲ್ಲಿ ಪರೀಕ್ಷೆ ನಡೆಸಲಾಗುತ್ತದೆ ಎಂದು ಹೇಳಿದೆ.

ಸಹಜ ಸ್ಥಿತಿ ಬಂದಿದೆ

ಶಾಲಾ, ಕಾಲೇಜು ವಾತಾವರಣ ಕೋವಿಡ್‌ ಪೂರ್ವ ಸ್ಥಿತಿಗೆ ಮರಳಿರುವುದರಿಂದ 2022-23ರಲ್ಲಿ ಎಸ್ಸೆಸ್ಸೆಲ್ಸಿಯಲ್ಲಾಗಲಿ, ದ್ವಿತೀಯ ಪಿಯುಸಿಯಲ್ಲಾಗಲಿ ಪಠ್ಯ ಕಡಿತ ಮಾಡುವ ಪ್ರಶ್ನೆ ಉದ್ಭವಿಸುವುದಿಲ್ಲ. ಶಿಕ್ಷಕರು, ಉಪನ್ಯಾಸಕರು, ಶಿಕ್ಷಣ ತಜ್ಞರ ಅಭಿಪ್ರಾಯವೂ ಇದೇ ಆಗಿದೆ. ಹಾಗಾಗಿ ಪಠ್ಯ ಕಡಿತಗೊಳಿಸುವ ಬಗ್ಗೆ ಅಧಿಕಾರಿಗಳಿಗೆ ಯಾವುದೇ ಸಲಹೆ, ಸೂಚನೆ ನೀಡಿಲ್ಲ. ಒಂದು ವೇಳೆ ಮತ್ತೆ ಅಂತಹ ಸನ್ನಿವೇಶವೇನಾದರೂ ಕಂಡುಬಂದಲ್ಲಿ ಶೈಕ್ಷಣಿಕ ವರ್ಷದ ಕೊನೆಯಲ್ಲಿ ಪರಿಶೀಲಿಸಿ ನಿರ್ಧರಿಸಲಾಗುವುದು ಅಂತ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌(BC Nagesh) ತಿಳಿಸಿದ್ದಾರೆ.  
 

Latest Videos
Follow Us:
Download App:
  • android
  • ios