Hijab Row: ದ್ವಿತೀಯ ಪಿಯು ಪರೀಕ್ಷೆಗೂ ಹಿಜಾಬ್‌ ನಿಷಿದ್ಧ: ನಾಗೇಶ್‌

*  ಎಸ್ಸೆಸ್ಸೆಲ್ಸಿ ರೀತಿಯ ನಿಯಮ ಜಾರಿ
*  ಶೀಘ್ರದಲ್ಲೇ ಆದೇಶ
*  ಆದೇಶವನ್ನು ವಿದ್ಯಾರ್ಥಿಗಳು ಹಾಗೂ ಪೋಷಕರು ಕಡ್ಡಾಯವಾಗಿ ಪಾಲಿಸಬೇಕು 
 

Hijab Banned for PUC Exam says Minister BC Nagesh grg

ಬೆಂಗಳೂರು(ಏ.08): ‘ಎಸ್‌ಎಸ್‌ಎಲ್‌ಸಿ(SSLC) ಪರೀಕ್ಷೆ ಮಾದರಿಯಲ್ಲೇ ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ(PUC) ಪರೀಕ್ಷೆಗೂ ಹಿಜಾಬ್‌(Hijab) ಸೇರಿದಂತೆ ಯಾವುದೇ ಧರ್ಮ ಸೂಚಕ ವಸ್ತ್ರಗಳನ್ನು ಧರಿಸಿ ಬರುವಂತಿಲ್ಲ. ಈ ಸಂಬಂಧ ಪದವಿಪೂರ್ವ ಶಿಕ್ಷಣ ಇಲಾಖೆಯಿಂದ ಶೀಘ್ರದಲ್ಲೇ ಅಧಿಕೃತ ಆದೇಶ ಹೊರಬೀಳಲಿದೆ’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ತಿಳಿಸಿದ್ದಾರೆ.

‘ಹೈಕೋರ್ಟ್‌(High Court) ತೀರ್ಪಿನ ಅನ್ವಯವೇ ನಾವು ಈ ತೀರ್ಮಾನ ಕೈಗೊಂಡಿದ್ದೇವೆ’ ಎಂದು ಸ್ಪಷ್ಟಪಡಿಸಿರುವ ಸಚಿವರು, ‘ಈಗಾಗಲೇ ನಡೆಯುತ್ತಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಇರುವ ಕಾನೂನನ್ನೇ ಏಪ್ರಿಲ್‌ 22ರಿಂದ ಮೇ 18ರವರೆಗೆ ನಡೆಯುವ ದ್ವಿತೀಯ ಪಿಯುಸಿ ಪರೀಕ್ಷೆಗೂ ಅನ್ವಯ ಮಾಡಲಾಗುವುದು’ ಎಂದು ಹೇಳಿದ್ದಾರೆ.

II PUC 2022 exam: ದ್ವಿತೀಯ ಪಿಯುಸಿ ಅಂತಿಮ ಪರೀಕ್ಷಾ ವೇಳಾಪಟ್ಟಿ ಬದಲಾವಣೆ

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪಿಯು ಇಲಾಖೆಯು ಈ ಸಂಬಂಧ ಪರೀಕ್ಷೆ ವೇಳೆಗೆ ಅಧಿಕೃತ ಆದೇಶ ಹೊರಡಿಸಲಿದ್ದು, ಆದೇಶವನ್ನು ವಿದ್ಯಾರ್ಥಿಗಳು ಹಾಗೂ ಪೋಷಕರು ಕಡ್ಡಾಯವಾಗಿ ಪಾಲಿಸಬೇಕು. ಈ ಆದೇಶದ ಅನ್ವಯ ಹಿಜಾಬ್‌ ಮಾತ್ರವಲ್ಲ, ಯಾವುದೇ ಧರ್ಮ9Religion)ಸೂಚಕ ವಸ್ತ್ರಗಳನ್ನು ಧರಿಸಿ ಪರೀಕ್ಷಾ ಕೇಂದ್ರಗಳಿಗೆ ವಿದ್ಯಾರ್ಥಿಗಳು(Students) ಬರುವಂತಿಲ್ಲ. ಆಯಾ ಕಾಲೇಜಿನಲ್ಲಿ ನಿಗದಿಪಡಿಸಿರುವ ಸಮವಸ್ತ್ರ ಧರಿಸಿ ಮಾತ್ರ ಬರಬೇಕು’ ಎಂದು ತಿಳಿಸಿದರು.

‘ಶಾಲಾ ಮಕ್ಕಳ ರೀತಿ ಎಲ್ಲಾ ಪಿಯು ಕಾಲೇಜುಗಳಲ್ಲೂ ಸಮವಸ್ತ್ರ ನಿಗದಿಯಾಗಿಲ್ಲ. ಅಂತಹ ಕಾಲೇಜಿನ ಮಕ್ಕಳಿಗೆ ಯಾವ ವಸ್ತ್ರಸಂಹಿತೆ ಇರುತ್ತದೆ?’ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ಹಾಗೆ ನೋಡಿದರೆ ರಾಜ್ಯದಲ್ಲೆಡೆಯ ಜಿಲ್ಲಾ ಮಟ್ಟದ ಶೇ.90 ರಷ್ಟುಕಾಲೇಜುಗಳಲ್ಲಿ ಸಮವಸ್ತ್ರ ಇದೆ. ಶೇ.10ರಷ್ಟು ಕಾಲೇಜುಗಳಲ್ಲಿ ಮಾತ್ರ ಇಲ್ಲ. ಯಾವ್ಯಾವ ಕಾಲೇಜಿನಲ್ಲಿ ಆಯಾ ಕಾಲೇಜಿನ ಅಭಿವೃದ್ಧಿ ಸಮಿತಿಗಳು (ಸಿಡಿಸಿ) ಸಮವಸ್ತ್ರ ನಿಗದಿಪಡಿಸಿವೆಯೇ ಅಲ್ಲಿ ಮಕ್ಕಳು ಸಮವಸ್ತ್ರ ಧರಿಸಿ ಬರಬೇಕು. ಸಮವಸ್ತ್ರ ಇಲ್ಲದ ವಿದ್ಯಾರ್ಥಿಗಳು ಯಾವುದೇ ಧರ್ಮ ಸೂಚಕ ವಸ್ತ್ರಗಳಲ್ಲದ ಉಡುಪು ತೊಟ್ಟು ಬಂದು ಪರೀಕ್ಷೆ ಬರೆಯಬಹುದು. ಸಿಡಿಸಿ ನಿಗದಿಪಡಿಸಿರುವ ಸಮವಸ್ತ್ರ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕು’ ಎಂದರು.

ಶಿಕ್ಷಣಕ್ಕಿಂತ ಧರ್ಮ ಮೇಲು ಎಂಬುದನ್ನು ಸಾಬೀತು ಮಾಡಿದ ಉಡುಪಿ ಹಿಜಾಬ್ ಹೋರಾಟಗಾರ್ತಿಯರು

ಉಡುಪಿ: ಹಿಜಾಬ್ (Hijab Row)  ಹೋರಾಟಗಾರ್ತಿಯರು ಕೊನೆಗೂ ಶಿಕ್ಷಣಕ್ಕಿಂತ ಧರ್ಮ ಮೇಲು ಎಂಬುದನ್ನು ಸಾಬೀತು ಮಾಡಿದ್ದಾರೆ. ಮಾ.29 ರಂದು ನಡೆದ ಪ್ರಥಮ ಪಿಯುಸಿ ಪರೀಕ್ಷೆಯಲ್ಲಿ ಇಬ್ಬರು ಬಾಲಕಿಯರು ಗೈರು ಹಾಜರಾಗಿದ್ದಾರೆ. ಈ ಮೂಲಕ ತಮ್ಮ ಅಮೂಲ್ಯ ಒಂದು ವರ್ಷದ ಶಿಕ್ಷಣವನ್ನು ಹಿಜಾಬ್ ಹೋರಾಟಕ್ಕೆ ಬಲಿ ಕೊಟ್ಟಿದ್ದರು. 

ಎಡವಟ್ಟು ಮೌಲ್ಯಮಾಪನಕ್ಕೆ ಬರೀ 400 ದಂಡ: ತಪ್ಪೊಪ್ಪಿಕೊಂಡ ಸಚಿವ ನಾಗೇಶ್‌

ಹಿಜಾಬ್ ಹೋರಾಟಕ್ಕೆ ಉಡುಪಿಯೇ ಮೂಲ ಕೇಂದ್ರ ಅನ್ನೋದು ಎಲ್ಲರಿಗೂ ಗೊತ್ತಿದೆ. ಉಡುಪಿ(Udupi) ಬಾಲಕಿಯರ ಸರಕಾರಿ ಪದವಿಪೂರ್ವ ಕಾಲೇಜಿನ ಆರು ಮಂದಿ ವಿದ್ಯಾರ್ಥಿನಿಯರು ಹಿಜಾಬ್ ನಮ್ಮ  ಹಕ್ಕು ಎಂದು ಹೋರಾಟ ಆರಂಭಿಸಿ ಹೈ ಕೋರ್ಟ್ ಮೆಟ್ಟಿಲೇರಿ ಸೋತಿದ್ದರು. ಹಿಜಾಬ್ ಕುರಿತಾದ ತಮ್ಮ ಹೋರಾಟವನ್ನು ಮುಂದುವರೆಸಿದ್ದಾರೆ. ಹೋರಾಟದ ಭಾಗವಾಗಿ ಇಂದು ಇಬ್ಬರು ಬಾಲಕಿಯರು ತಮ್ಮ ಪ್ರಥಮ ಪಿಯುಸಿಯ ಅಂತಿಮ ಪರೀಕ್ಷೆಯಲ್ಲಿ ಗೈರಾಗಿದ್ದರು.

ಮುಸ್ಕಾನ್ ಮತ್ತು ಸಫಾ ಪ್ರಥಮ ಪಿಯುಸಿ ಪರೀಕ್ಷೆಗೆ ಗೈರಾದ ವಿದ್ಯಾರ್ಥಿನಿಯರು. ಹೋರಾಟ ನಡೆಸುತ್ತಿರುವ ಆರು ಮಂದಿ ಬಾಲಕಿಯರಲ್ಲಿ, ನಾಲ್ವರು ದ್ವಿತೀಯ ಪಿಯುಸಿಯಲ್ಲಿ ಕಲಿಯುತ್ತಿದ್ದರೆ, ಇಬ್ಬರು ಬಾಲಕಿಯರು ಪ್ರಥಮ ಪಿಯುಸಿ ವಿದ್ಯಾರ್ಥಿಗಳಾಗಿದ್ದಾರೆ. ಮುಸ್ಕಾನ್ ವಿಜ್ಞಾನ ವಿಭಾಗದಲ್ಲಿ ಕಲಿಯುತ್ತಿದ್ದು ಇಂದು ಆಕೆಗೆ ಫಿಸಿಕ್ಸ್ ಪರೀಕ್ಷೆ ಇತ್ತು. ಕಾಮರ್ಸ್ ಓದುವ ಸಫಾಗೆ ಇಂದು ಬಿಸಿನೆಸ್ ಸ್ಟಡೀಸ್ ಪರೀಕ್ಷೆ ಇತ್ತು. ಇಬ್ಬರೂ ಪರೀಕ್ಷೆಗೆ ಗೈರಾಗುವ ಮೂಲಕ ತಮ್ಮ ಹಠ ಮುಂದುವರಿಸಿದ್ದರು.
 

Latest Videos
Follow Us:
Download App:
  • android
  • ios