ಪಠ್ಯವಿವಾದಕ್ಕೆ ಎಂಟ್ರಿ ಕೊಟ್ಟ JNU professors ವಿರುದ್ಧ ಸಚಿವ ನಾಗೇಶ್ ಕಿಡಿ
- ತಿರುಚಿದ ಇತಿಹಾಸ ಮಕ್ಕಳಿಗೆ ಕಲಿಸಿಕೊಡಬೇಡಿ ಎಂದು ಪತ್ರ
- ರಾಜ್ಯದ ವಿದ್ಯಾರ್ಥಿ ಸಂಘಟನೆಗಳಿಗೆ ಪತ್ರ ಬರೆದ ಜೆಎನ್ ಯು ಪ್ರೊಫೆಸರ್ಸ್
- ಪ್ರೊ ರೋಮಿಳಾ ಥಾಪರ್ , ಪ್ರೊ.ಆದಿತ್ಯ ಮುಖರ್ಜಿ ಪತ್ರ
ವರದಿ: ಮಾರುತೇಶ್ ಹುಣಸನಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್
ಬೆಂಗಳೂರು(ಜೂ.14): ರಾಜ್ಯದಲ್ಲಿ ಪಠ್ಯ ಪುಸ್ತಕ ಪರಿಷ್ಕರಣೆ ವಿವಾದ ಸದ್ಯಕ್ಕೆ ಮುಗಿಯುವ ಲಕ್ಷಣಗಳು ಕಾಣ್ತಿಲ್ಲ. ಇದೀಗ ಪಠ್ಯ ವಿವಾದಕ್ಕೆ ಜೆಎನ್ ಯು ಪ್ರೊಫೆಸರ್ ಗಳು ಎಂಟ್ರಿಯಾಗಿದ್ದು, ಹೋರಾಟ ಮಾಡುತ್ತಿರುವ ವಿದ್ಯಾರ್ಥಿ ಸಂಘಟನೆಗಳಿಗೆ ಸಂದೇಶದ ಪತ್ರ ರವಾನಿಸಿದ್ದಾರೆ. ಮಳೆ ನಿಂತರೂ ಮರದ ಹನಿ ನಿಲ್ಲಲ್ಲ ಎಂಬಂತೆ ಪಠ್ಯ ವಿವಾದ ಹಲವು ರೂಪಗಳನ್ನ ಪಡೆದುಕೊಳ್ಳುತ್ತಿದೆ. ಇದೀಗ ವಿವಾದಕ್ಕೆ ದೆಹಲಿಯ ಜವಾಹರಲಾಲ್ ನೆಹರು ಯೂನಿವರ್ಸಿಟಿ ಪ್ರೊಫೆಸರ್ ಗಳು ಪ್ರತಿಕ್ರಯಿಸಿದ್ದಾರೆ. ಖ್ಯಾತ ಜೆಎನ್ ಯು ಇತಿಹಾಸ ತಜ್ಞರಾದ ಪ್ರೊ ರೋಮಿಳಾ ಥಾಪರ್ (Romila Thapar) , ಪ್ರೊ ಆದಿತ್ಯ ಮುಖರ್ಜಿ (Aditya Mukherjee) ಪತ್ರ ಬರೆದಿದ್ದಾರೆ.
ಜೆಎನ್ ಯು ಇತಿಹಾಸ ತಜ್ಞೆ ರೋಮಿಳಾ ಥಾಪರ ಪತ್ರದ ಸಾರಾಂಶ ಹೀಗಿದೆ: ಒಳ್ಳೆಯ ಶಿಕ್ಷಣಕ್ಕೆ ಉತ್ತಮ ಪಠ್ಯಪುಸ್ತಕವೇ ಅಡಿಪಾಯ ಇತಿಹಾಸ ಪಠ್ಯದಲ್ಲಿ ಏನೆಲ್ಲಾ ಮಾಹಿತಿ ಇರಬೇಕು ಎಂಬುದನ್ನು ಖ್ಯಾತ ಇತಿಹಾಸಕಾರರು ತೀರ್ಮಾನಿಸಬೇಕು. ಇತಿಹಾಸದಲ್ಲಿ ಏನು ತೆಗೆದುಕೊಳ್ಳಬೇಕು ಎಂದು ರಾಜಕಾರಣಿಗಳು, ಅಧಿಕಾರಿಗಳು ನಿರ್ಧರಿಸಬಾರದು. ಸಾರ್ವಜನಿಕರ ಅಭಿಪ್ರಾಯ ಅಥವಾ ರಾಜಕಾರಣಿಗಳ ಪ್ರೊಪಗಂಡಾ ಮೇಲೆ ಪಠ್ಯ ರಚಿಸಲು ಸಾದ್ಯವಿಲ್ಲ. ದ್ರಾವಿಡ ಇತಿಹಾಸ ಮಹತ್ವದ ಘಟ್ಟ. ದಕ್ಷಿಣ ಭಾರತಕ್ಕೆ ದ್ರಾವಿಡ ಇತಿಹಾಸ ಅತ್ಯಂತ ಮಹತ್ವ. ಹೇಗೆ ಉತ್ತರ ಭಾರತಕ್ಕೆ ಆರ್ಯ ಸಮಾಜ ಮಹತ್ವವೋ ಹಾಗೆ. ಉತ್ತರ ಭಾರತದಲ್ಲಿ ಸುಲ್ತಾನಗಳು, ಮೊಘಲರ ಇತಿಹಾಸವನ್ನು ತಿರಸ್ಕರಿಸಲು ಸಾಧ್ಯವಿಲ್ಲ. ಪಠ್ಯದಲ್ಲಿ ಸಮಾಜಶಾಸ್ತ್ರದ ಇತಿಹಾಸ ಪಾಠವನ್ನು ಇತಿಹಾಸ ತಜ್ಞರು ನಿರ್ಧರಿಸಬೇಕು. ವಿದ್ಯಾರ್ಥಿಗಳಿಗೆ ಪುರಾತನ ಕಾಲದ ಇತಿಹಾಸ ತಿಳಿಸಿಕೊಡುವುದು ಅತ್ಯಂತ ಮಹತ್ವ. ಯಾಕೆಂದರೆ ಇದರ ಮೇಲೆ ವಿದ್ಯಾರ್ಥಿಗಳು ಹೇಗೆ, ಯಾವಾಗ, ಏನು ಎಂಬ ಪ್ರಶ್ನೆಗಳನ್ನು ಕೇಳಲು ಸಾಧ್ಯ. ಇತಿಹಾಸ ಫಿಕ್ಷನ್ ಅಲ್ಲ. ಕೆಲ ದಾಖಲೆಗಳ ಮೇಲೆ ಇತಿಹಾಸ ಅವಲಂಬಿತವಾಗಿರುತ್ತದೆ.
KALABURAGI; ಪಠ್ಯಪುಸ್ತಕ ಪರಿಷ್ಕರಣೆ ವಿರೋಧಿಸಿ ಜೂ.15ರಿಂದ ಅಹೋರಾತ್ರಿ ಸತ್ಯಾಗ್ರಹ
ಪ್ರೊ. ಆದಿತ್ಯ ಮುಖರ್ಜಿ ಪತ್ರದ ಸಾರಾಂಶ ಹೀಗಿದೆ: ಕರ್ನಾಟಕ ರಾಜ್ಯದಲ್ಲಿ ಆಗುತ್ತಿರುವ ಬೆಳವಣಿಗಳು ಆಶ್ಚರ್ಯ ಉಂಟು ಮಾಡಿದೆ. ಶಿಕ್ಷಣದಲ್ಲಿ ಅತ್ಯುನ್ನತ ಮೈಲಿಗಲ್ಲು ಸಾಧಿಸಿ, ಶ್ರೀಮಂತ ಸಾಂಸ್ಕೃತಿಕ ನೆಲೆ ಹೊಂದಿರುವ ರಾಜ್ಯದಲ್ಲಿ ಈ ಬೆಳವಣಿಗೆ ನಡೆಯುತ್ತಿರುವುದು ಆಶ್ಚರ್ಯ ಮೂಡಿಸಿದೆ. ಕರ್ನಾಟಕ ರಾಜ್ಯದಲ್ಲಿ ಸದ್ಯದ ಬೆಳವಣಿಗೆ ನೋಡಿದ್ರೆ ಇತಿಹಾಸವನ್ನು ತಿರುಚುವ ಕೆಲಸ ಆಗಿದೆ. ಹೊಸ ವಿಚಾರವನ್ನು ತುರುಕುವ ಮೂಲಕ ದೇಶದ ಜಾತ್ಯತೀತ ಮನೋಭಾವಕ್ಕೆ ಧಕ್ಕೆ ತರುವ ಪ್ರಯತ್ನ ಮಾಡಲಾಗಿದೆ. ರಾಜ್ಯದ ಪಠ್ಯಪುಸ್ತಕ ಪರಿಷ್ಕರಣೆ ಮಾಡಿರುವ ಅಂಶಗಳನ್ನು ನೋಡಿ ನಮಗೆ ಗಾಬರಿ ಉಂಟಾಗಿದೆ
ಖ್ಯಾತ ಇತಿಹಾಸಕಾರ ರಾಮ್ ಪುನಿಯಾನಿ ಬೇಸರ: ಇದರ ನಡುವೆ ಪಠ್ಯಪುಸ್ತಕ ಪರಿಷ್ಕರಣೆ ಕುರಿತು 76 ವರ್ಷ ವಯಸ್ಸಿನ ಖ್ಯಾತ ಇತಿಹಾಸಕಾರ ರಾಮ್ ಪುನಿಯಾನಿ ಕೂಡ ಬೇಸರ ವ್ಯಕ್ತಪಡಿಸಿದ್ದಾರೆ. ದೇಶದಲ್ಲಿ ಹಿಂದೂ ಬಲಪಂಥೀಯ ವಿಚಾರಧಾರೆ ಹಾಗು ಹಿಂದೂ ರಾಷ್ಟ್ರೀಯತೆ ರಾಜಕೀಯ, ಇವೆರಡೇ ಈಗ ದೇಶದ ಮೂಲೆಮೂಲೆಗೂ ಹಬ್ಬಿದಂತಾಗಿದೆ. ಕರ್ನಾಟಕದಲ್ಲಂತೂ ಅತಿ ಹೆಚ್ಚು ಪ್ರಾಬಲ್ಯ ಸಾಧಿಸುತ್ತಿದೆ. ಸರ್ಕಾರ ಪಠ್ಯದಲ್ಲಿರೋ ಅಂಶಗಳನ್ನು ಬದಲಾಯಿಸುವ ಪ್ರಯತ್ನದಲ್ಲಿದೆ.
ಜೂನ್ 18ಕ್ಕೆ ಚಿತ್ರದುರ್ಗಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ JP NADDA ಆಗಮನ
ಬಲಪಂಥೀಯ ದಿಕ್ಕಿನತ್ತ ವಿದ್ಯಾರ್ಥಿಗಳನ್ನು ಕೊಂಡೊಯ್ಯುತ್ತಿದ್ದಾರೆ. ಇದು ಸಾಮಾಜಿಕವಾಗಿ ಖಂಡಿತವಾಗಿಯೂ ಒಳ್ಳೆಯ ಬೆಳವಣಿಗೆಯಲ್ಲ ಎಂದು ಹೇಳಿದ್ದಾರೆ. ಹರಪ್ಪ ಮೋಹೆಂಜದಾರೋ ಸಿವಿಲೈಸೇಷನ್ ಅನ್ನು ಹಿಂದುತ್ವದೆಡೆ ವಾಲಿಸಿದ್ದಾರೆ. ಅವರಿಗೆ ಅವಶ್ಯವಿರೋ ರೀತಿ ಬಿಂಬಿಸುವ ಪ್ರಯತ್ನದಲ್ಲಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಈ ಬೆಳವಣಿಗೆ ಕುರಿತು ಆಕ್ರೋಶ ಹೊರಹಾಕಿರುವ ಶಿಕ್ಷಣ ಸಚಿವ ಬಿಸಿ ನಾಗೇಶ್, ಜೆಎನ್ ಯು ಅವರು ಭಾರತವನ್ನ ತುಕ್ಡೇ ತುಕ್ಡೇ ಮಾಡುವ ಉದ್ದೇಶ ಹೊಂದಿದ್ದಾರೆ ಹಾಗೂ ಪಾಕಿಸ್ತಾನ ಧ್ವಜ ಹಾರಿಸಿದ್ದರು ಅವರು. ಇದೇ ಕಾರಣಕ್ಕೆ ರಾಜ್ಯದ ಪಠ್ಯದ ಬಗ್ಗೆ ಅವರು ಪ್ರತಿಕ್ರಿಯೆ ನೀಡುತ್ತಿದ್ದಾರೆ. ತುಕ್ಡೇ ಗ್ಯಾಂಗ್ ಮಾಡಿದ ಕೆಲ್ಸವನ್ನೇ ನಮ್ಮ ರಾಜ್ಯದಲ್ಲಿ ಬರಗೂರು ಸಮಿತಿ ಮಾಡಿದೆ. ಬರಗೂರು ಪಠ್ಯಪುಸ್ತಕ ಸಮಿತಿಯಲ್ಲಿ ಜೆಎನ್ ಯು ಪ್ರಾಧ್ಯಾಪಕ ಇದ್ದರು. ಭಾರತವನ್ನ ಒಡೆಯುವ ಹಾಗೂ ಹಿಂದು ಸಮಾಜವನ್ನ ಒಡೆಯುವ ದೊಡ್ಡ ಗ್ಯಾಂಗ್ ಜೆಎಸ್ ಯು ನಲ್ಲಿದೆ ಅಂತ ಕಿಡಿಕಾರಿದ್ದಾರೆ.
ಪಠ್ಯ ಪರಿಷ್ಕರಣೆ ಮುಗಿದಿದೆ. ಪಠ್ಯ ಪರಿಷ್ಕರಣೆ ಮಾಡಿದ ಸಮಿತಿ ವಿಸರ್ಜನೆ ಕೂಡ ಮಾಡಲಾಗಿದೆ. ಬಸವಣ್ಣ ವಿಚಾರವನ್ನ ಪುನರ್ ಪರಿಷ್ಕರಣೆ ಮಾಡುತ್ತೇವೆ ಎಂದು ಸರ್ಕಾರವೂ ಒಪ್ಪಿಕೊಂಡಿದೆ. ಶೇ.75 ರಷ್ಟು ಪುಸ್ತಕಗಳ ವಿತರಣೆಯೂ ಆಗಿದೆ. ಆದರೆ ಪಠ್ಯದ ಮೇಲಿನ ವಿವಾದ ಯಾಕೋ ತಣ್ಣಗಾಗುವ ಲಕ್ಷಣಗಳು ಮಾತ್ರ ಕಾಣಿಸ್ತಿಲ್ಲ.