Kalaburagi; ಪಠ್ಯಪುಸ್ತಕ ಪರಿಷ್ಕರಣೆ ವಿರೋಧಿಸಿ ಜೂ.15ರಿಂದ ಅಹೋರಾತ್ರಿ ಸತ್ಯಾಗ್ರಹ
ಪಠ್ಯಪುಸ್ತಕ ಪರಿಷ್ಕರಣೆ ವಿರೋಧಿಸಿ ಜೂನ್ 15 ರಿಂದ ಜೂನ್ 16 ರಂದು ಬೆಳಿಗ್ಗೆ 10.00 ಗಂಟೆಯವರೆಗೆ ಕಲಬುರಗಿಯಲ್ಲಿ ಪ್ರಿಯಾಂಕ ಖರ್ಗೆ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಲಿದ್ದಾರೆ.
ಕಲಬುರಗಿ (ಜೂ.14): ತಿರುಚಿದ ಪಠ್ಯಪುಸ್ತಕ ವಿರೋಧಿಸಿ ಜೂನ್ 15 ರಂದು ಬೆಳಗ್ಗೆ10 ಗಂಟೆಯಿಂದ ಜೂನ್ 16 ರಂದು ಬೆಳಿಗ್ಗೆ 10.00 ಗಂಟೆಯವರೆಗೆ ಕಲಬುರಗಿಯಲ್ಲಿ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಶಾಸಕ ಮಾಜಿ ಸಚಿವ ಪ್ರಿಯಾಂಕ ಖರ್ಗೆ ತಿಳಿಸಿದ್ದಾರೆ.
ಕಲಬುರ್ಗಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಪಠ್ಯ ಪುಸ್ತಕ ತಿದ್ದುಪಡಿಯ ಮೂಲಕ ಬಿಜೆಪಿ ಸರಕಾರ ಕರ್ನಾಟಕದ ಅಸ್ಮಿತೆ ನಾಶಕ್ಕೆ ಮುಂದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕದ ಅಸ್ಮಿತೆ ರಕ್ಷಣೆಗಾಗಿ ನಾಳೆ ಜೂನ್ 15 ರ ಬೆಳಿಗ್ಗೆ 10 ಗಂಟೆಯಿಂದ ಜೂನ 16 ರ ಬೆಳಿಗ್ಗೆ 10 ಗಂಟೆಯವರೆಗೆ ಕಲಬುರಗಿಯಲ್ಲಿ ಆಹೋರಾತ್ರಿ ಸತ್ಯಾಗ್ರಹ ನಡೆಸಲಾಗುವುದು. ಕರ್ನಾಟಕ ಅಸ್ಮಿತೆ ರಕ್ಷಣೆ ಜನಾಂದೋಲನ ಸಮಿತಿ ವತಿಯಿಂದ ಪಕ್ಷ ಬೇಧ ಮರೆತು ಹೋರಾಟ ಕೈಗೊಳ್ಳಲಾಗುತ್ತಿದೆ. ಈ ಹೋರಾಟಕ್ಕೆ ಪೋಷಕರು, ಸಾರ್ವಜನಿಕರು ಬಂದು ನಮ್ಮ ಜೊತೆ ಕೈ ಜೋಡಿಸಿ ಎಂದು ಮನವಿ ಮಾಡಿಕೊಂಡರು. ಪಕ್ಷ ಬೇಧ ಮರೆತು ಎಲ್ಲರೂ ಕೂಡ ಒಗ್ಗೂಡಿ ಕರ್ನಾಟಕದ ಅಸ್ಮಿತೆ ಉಳಿಸಬೇಕಾಗಿದೆ ಎಂದರು.
ಈ ಊರು ತುಂಬಾ ಹುಳುವಿನ ಕಾಟ, ನಿವಾಸಿಗಳ ಬದುಕು ಹೈರಾಣ!
ಹೊಸ ಪಠ್ಯ ಪುಸ್ತಕ ಕೊಡಬೇಡಿ: ಪರಿಷ್ಕೃತ ಪಠ್ಯ ಪುಸ್ತಕದಲ್ಲಿ ಇತಿಹಾಸವನ್ನು ತಿರುಚಲಾಗಿದೆ. ಬಸವೇಶ್ವರ ಸೇರಿದಂತೆ ನಾಡಿನ, ರಾಷ್ಟ್ರದ ಮಹಾನ್ ವ್ಯಕ್ತಿಗಳಿಗೆ ಅವಮಾನ ಮಾಡುವ ರೀತಿಯಲ್ಲಿ ಪಠ್ಯ ತಿರುಚಲಾಗಿದೆ. ತಿರುಚಿದ ಪಠ್ಯಪುಸ್ತಕವನ್ನು ಮಕ್ಕಳಿಗೆ ಕೊಡಬೇಡಿ. ಸಧ್ಯಕ್ಕೆ ಹಳೆಯ ಪಠ್ಯಪುಸ್ತಕವನ್ನು ಮುಂದುವರಿಸಿ ಎಂದು ಪ್ರಿಯಾಂಕ್ ಖರ್ಗೆ ಒತ್ತಾಯ ಮಾಡಿದರು.
ಪರಿಷ್ಕರಣೆಗೆ ವಿರೋಧ ಇಲ್ಲ: ಹಾಗಂತ ಪಠ್ಯಪುಸ್ತಕ ಪರಿಷ್ಕರಣೆಗೆ ನಮ್ಮ ವಿರೋಧ ಇಲ್ಲ. ಕಾಲಕಾಲಕ್ಕೆ ಪಠ್ಯಪುಸ್ತಕಗಳ ಪರಿಷ್ಕರಣೆ ಅತ್ಯಗತ್ಯವಾಗಿದೆ. ಆದರೆ ದುರುದ್ದೇಶದಿಂದ ಇತಿಹಾಸವನ್ನು ತಿರುಚಿ ರೂಪಿಸಲಾಗಿರುವ ಪಠ್ಯಪುಸ್ತಕ ಬೇಡ. ಪಠ್ಯಪುಸ್ತಕ ಪರಿಷ್ಕರಣೆಗಾಗಿ ಸರ್ಕಾರ ಬೇಕಾದರೆ ಹೊಸ ಸಮಿತಿ ರಚಿಸಲಿ. ನಂತರ ಇತಿಹಾಸ ತಿರುಚದೇ ವಾಸ್ತವದ ರೀತಿಯಲ್ಲಿ ಹೊಸ ಪಠ್ಯಪುಸ್ತಕಗಳು ಇರಲಿ ಎಂದು ಆಗ್ರಹಿಸಿದರು.
ಬಾಡಿಗೆ ಭಾಷಣಕಾರರು: ಬಿಜೆಪಿಯ ಬಾಡಿಗೆ ಭಾಷಣಕಾರರ ಹೆಸರನ್ನ ಪಠ್ಯಪುಸ್ತಕದಲ್ಲಿ ಹಾಕಲಾಗಿದೆ ಎಂದು ಅವರು ಚಕ್ರವರ್ತಿ ಸೂಲಿಬೇಲೆ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು. ಭಗತ್‌ಸಿಂಗ್ ಕುರಿತು ಬರೆಯುವುದಕ್ಕೆ ಚಕ್ರವರ್ತಿ ಸೂಲಿಬೇಲೆ ಸೊಕ್ಕರಾ ? ಸಮಾಜಕ್ಕೆ ಚಕ್ರವರ್ತಿ ಸೂಲಿಬೇಲೆ ಕೊಡುಗೆ ಏನಿದೆ ? ಎಂದು ಪ್ರೀಯಾಂಕ್ ಖರ್ಗೆ ಪ್ರಶ್ನಿಸಿದರು.
ಅನೈತಿಕ ಚಟುವಟಿಕೆಗಳ ತಾಣವಾದ Arkavathy Layout
ಸಿಎಂ ಚಡ್ಡಿ ಅಭಿಯಾನ ಮಾಡಲಿ: ಕಾಂಗ್ರೆಸ್ ಕಚೇರಿಗೆ ಚಡ್ಡಿ ಕಳುಹಿಸುವ ಅಭಿಯಾನವನ್ನು ಬಿಜೆಪಿ ಕೈಗೊಂಡಿತ್ತು. ಚಡ್ಡಿ ಸಂಗ್ರಹಿಸುವ ಕೆಲಸವನ್ನು ಬಿಜೆಪಿ ತನ್ನ ಎಸ್ಸಿ-ಎಸ್ಟಿ ಮೋರ್ಚಾಗೆ ವಹಿಸಿದೆ. ಯಾಕೆ ? ಸಿಎಂ ಬೊಮ್ಮಾಯಿ ಅವರೇ ಚಡ್ಡಿ ಕಲೆಕ್ಟ್ ಮಾಡುವ ಅಭಿಯಾನಕ್ಕೆ ಚಾಲನೆ ನೀಡಬಹುದಿತ್ತಲ್ವಾ ? ,ನಳಿನಕುಮಾರ ಕಟೀಲ್, ಮುರುಗೇಶ ನಿರಾಣಿ, ಸೋಮಣ್ಣ, ಅಶೋಕ ಇತರ ನಾಯಕರು ಈ ಕೆಲಸ ಮಾಡಬಹುದಿತ್ತಲ್ವಾ ? ಎಸ್ಸಿ ಎಸ್ಟಿ ಮೋರ್ಚಾಗೆ ಯಾಕೆ ಚಡ್ಡಿ ಸಂಗ್ರಹ ಕೆಲಸ ಕೊಟ್ರಿ ? ಇದು ಬಿಜೆಪಿಯ ಮನು ವಾದದ ಸಿದ್ದಾಂತದ ಪ್ರತೀಕ ಎಂದರು.
ಇದನ್ನು ನಾನು ಹೇಳಿದ್ರೆ ಚಲುವಾದಿ ನಾರಾಯಣ ಸ್ವಾಮಿ ನನ್ನ ಬಗ್ಗೆ ಮಾತಾಡ್ತಾರೆ. ಖರ್ಗೆ ಸಿಎಂ ಆಗುವುದನ್ನು ತಪ್ಪಿಸಲು ನಾನು ಕಾರಣ ಅಂತ ಚಲುವಾದಿ ಹೇಳ್ತಾರೆ. ನಾರಾಸ್ವಾಮಿ ಹೋರಾಟದಿಂದ ಬಂದವರು, ಅವರ ಬಗ್ಗೆ ನಾನು ಮಾತನಾಡಲಾರೆ. ಸಿಎಂ ಹುದ್ದೆಯನ್ನು ತಪ್ಪಿಸುವಸ್ಟು ಶಕ್ತಿ ನನಗಿದೆ ಅಂದಂಗಾಯ್ತು. ಈ ಶಕ್ತಿ ಮುಂದೆ ಬಳಸಿಕೊಳ್ತಿನಿ ಬಿಡಿ ಎಂದರು..