ಆಂಧ್ರ ಪ್ರದೇಶದಲ್ಲಿ ಶಾಲಾ ಮಕ್ಕಳಿಗೆ ರಾಗಿ ಮಾಲ್ಟ್
ಆಂಧ್ರಪ್ರದೇಶ ಸರ್ಕಾರ ಇನ್ನು ಮುಂದೆ ಶಾಲಾ ಮಕ್ಕಳಿಗೆ ರಾಗಿ ಮಾಲ್ಟ್ ನೀಡಲು ತೀರ್ಮಾನಿಸಿದೆ. ಈ ಯೋಜನೆಯನ್ನು ಈಗಿರುವ ಜಗನಾನ್ನ ಗೋರುಮುದ್ದ ಯೋಜನೆ ಅಡಿಯಲ್ಲೆ ತರಲಾಗಿದೆ.
ಅಮರಾವತಿ: ಆಂಧ್ರಪ್ರದೇಶ ಸರ್ಕಾರ ಇನ್ನು ಮುಂದೆ ಶಾಲಾ ಮಕ್ಕಳಿಗೆ ರಾಗಿ ಮಾಲ್ಟ್ ನೀಡಲು ತೀರ್ಮಾನಿಸಿದೆ. ಈ ಯೋಜನೆಯನ್ನು ಈಗಿರುವ ಜಗನಾನ್ನ ಗೋರುಮುದ್ದ ಯೋಜನೆ ಅಡಿಯಲ್ಲೆ ತರಲಾಗಿದೆ. ಇದಕ್ಕಾಗಿ ವರ್ಷಕ್ಕೆ 86 ಕೋಟಿ ವೆಚ್ಚವಾಗಲಿದ್ದು, ಸತ್ಯ ಸಾಯಿ ಕೇಂದ್ರ ಟ್ರಸ್ಟ್ 42 ಕೋಟಿ ನೀಡಲಿದೆ. ಈ ಯೋಜನೆಯಿಂದಾಗಿ ಸರ್ಕಾರಿ ಹಾಗೂ ಅನುದಾನಿತ ಶಾಲೆಯ ಒಟ್ಟು 37.6 ಲಕ್ಷ ಮಕ್ಕಳಿಗೆ ಅನುಕೂಲವಾಗಲಿದೆ. ಇದರಿಂದಾಗಿ ರಾಜ್ಯದ ಶಾಲಾ ಮಕ್ಕಳಿಗೆ ಬೇಯಿಸಿದ ಮೊಟ್ಟೆ(Egg), ಕಡ್ಲೆ ಚಿಕ್ಕಿ ಜೊತೆಗೆ ಇದೀಗ ರಾಗಿ ಮಾಲ್ಟ್ ಲಭಿಸಿದಂತಾಗುತ್ತದೆ.
ಶಾಲಾ ಮಕ್ಕಳಿಗೆ ವಿಶೇಷ ಭೋಜನ ಯೋಜನೆ
ರಾಜ್ಯದ ಎಲ್ಲಾ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ (Govt school) ಪಿಎಂ ಪೋಷಣ್ (ಮಧ್ಯಾಹ್ನದ ಬಿಸಿಯೂಟ) ಯೋಜನೆಯಡಿ ಮಕ್ಕಳಿಗೆ ‘ವಿಶೇಷ ಭೋಜನ ಮತ್ತು ಶಾಲೆಗಾಗಿ ನಾವು ನೀವು’ ಕಾರ್ಯಕ್ರಮ ಆಯೋಜಿಸಲು ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ. ಹಬ್ಬ ಹರಿದಿನಗಳು ಹಾಗೂ ವಿಶೇಷ ಸಂದರ್ಭಗಳಲ್ಲಿ ಈ ಸವಲತ್ತು ಮಕ್ಕಳಿಗೆ ಲಭಿಸಲಿದೆ.
ಈ ಕಾರ್ಯಕ್ರಮದಡಿ ದಾನಿಗಳು, ಟ್ರಸ್ಟ್, ಸಂಘ ಸಂಸ್ಥೆಗಳು, ಎಸ್‌ಡಿಎಂಸಿಗಳು, ಸಾರ್ವಜನಿಕರು ಸೇರಿದಂತೆ ಸಮುದಾಯದವರು ತಮ್ಮದೇ ಆರ್ಥಿಕ ಅಥವಾ ಆಹಾರ ಸಹಕಾರ, ನೆರವಿನೊಂದಿಗೆ ಮಕ್ಕಳಿಗೆ ಸಂಪೂರ್ಣ ವಿಶೇಷ ಭೋಜನ ವ್ಯವಸ್ಥೆ ಅಥವಾ ಬಿಸಿಯೂಟಕ್ಕೆ ಪೂರಕವಾಗಿ ವಿಶೇಷ ಪೌಷ್ಟಿಕ ಆಹಾರ ಪದಾರ್ಥಗಳನ್ನು ಮಕ್ಕಳಿಗೆ ನೀಡಬಹುದಾಗಿದೆ. ಈ ರೀತಿ ನೀಡುವ ಆಹಾರ ಸಂಪೂರ್ಣ ಸಸ್ಯಾಹಾರವಾಗಿರಬೇಕು ಹಾಗೂ ಬಿಸಿಯೂಟ ಯೋಜನೆಯಡಿ ಇಲಾಖೆ ಗುರುತಿಸಿರುವ ಆಹಾರ ಪದಾರ್ಥಗಳ ಪಟ್ಟಿಯಿಂದ ಕೂಡಿರಬೇಕು ಎಂದು ಶಿಕ್ಷಣ ಇಲಾಖೆ ಸೂಚಿಸಿದೆ.
Tamil Nadu: ಮಕ್ಕಳಿಗೆ ವೈಜ್ಞಾನಿಕ ಆಸಕ್ತಿ ಬೆಳೆಸಲು ರೈನ್‌ಬೋ ಫೋರ್ಮ್
ಈಗಾಗಲೇ ಅಸ್ಸಾಂ, ಆಂಧ್ರಪ್ರದೇಶ, ತೆಲಂಗಾಣ, ಪಂಜಾಬ್, ಚಂಡೀಗಢ ಸೇರಿದಂತೆ ಹಲವು ರಾಜ್ಯಗಳಲ್ಲಿ ಬೇರೆ ಬೇರೆ ಹೆಸರಲ್ಲಿ ಜಾರಿಗೊಳಿಸಿರುವ ಈ ಕಾರ್ಯಕ್ರಮವನ್ನು ರಾಜ್ಯದಲ್ಲೂ ಪ್ರಸಕ್ತ ಸಾಲಿನಿಂದ ಜಾರಿಗೆ ತರುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಡಾ.ಆರ್.ವಿಶಾಲ್ ಸುತ್ತೋಲೆ ಹೊರಡಿಸಿದ್ದಾರೆ. ವಿಶೇಷವಾಗಿ ಊರಿನ ಹಬ್ಬ, ಜಾತ್ರೆ, ತೇರು, ರಾಷ್ಟ್ರೀಯ ಹಬ್ಬಗಳು, ಜನ್ಮದಿನ, ಜಯಂತಿ, ವಿವಾಹ, ವಾರ್ಷಿಕೋತ್ಸವ ಸೇರಿದಂತೆ ಸ್ಥಳೀಯವಾಗಿ ಸಮುದಾಯದಿಂದ ಸಾಮೂಹಿಕವಾಗಿ ಆಚರಿಸುವ ವಿಶೇಷ ಕಾರ್ಯಕ್ರಮಗಳ ಅಂಗವಾಗಿ ವಿಶೇಷ ಭೋಜನ, ವಿಶೇಷ ಪೌಷ್ಟಿಕ ಆಹಾರ ಪದಾರ್ಥಗಳನ್ನು ಮಕ್ಕಳಿಗೆ ನೀಡಬಹುದಾಗಿದೆ. ಯಾವುದೇ ವರ್ಗ, ಜಾತಿ, ಮತ, ಲಿಂಗ ಭೇದವಿಲ್ಲದೆ ನಾವೆಲ್ಲರೂ ಒಂದು ಎಂಬ ಏಕತಾ ಭಾವನೆಯನ್ನು ಮಕ್ಕಳಲ್ಲಿ ಬೆಳೆಸುವುದು. ಜತೆಗೆ ಸಮುದಾಯದಲ್ಲೂ ಒಗ್ಗಟ್ಟು, ಸಹಬಾಳ್ವೆ, ಬಾಂಧವ್ಯ, ಐಕ್ಯತೆ ಮೂಡಿಸುವುದು ಈ ಕಾರ್ಯಕ್ರಮ ಉದ್ದೇಶವಾಗಿದೆ ಎಂದು ಇಲಾಖೆ ಹೇಳಿದೆ.
ಪೌಷ್ಟಿಕ ಆಹಾರ ವಿತರಣೆ: ಶಾಲಾ ಮಕ್ಕಳಿಗೆ ಸದ್ಯಕ್ಕಿಲ್ಲ ರಾಗಿ ಮುದ್ದೆ, ಜೋಳದ ರೊಟ್ಟಿ ಭಾಗ್ಯ..!