ಪೌಷ್ಟಿಕ ಆಹಾರ ವಿತರಣೆ: ಶಾಲಾ ಮಕ್ಕಳಿಗೆ ಸದ್ಯಕ್ಕಿಲ್ಲ ರಾಗಿ ಮುದ್ದೆ, ಜೋಳದ ರೊಟ್ಟಿ ಭಾಗ್ಯ..!

ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ರಾಗಿ ಮುದ್ದೆ ಮತ್ತು ಜೋಳದ ರೊಟ್ಟಿ ನೀಡಲು ದೊಡ್ಡ ಪ್ರಮಾಣದಲ್ಲಿ ರಾಗಿ ಮತ್ತು ಜೋಳ ಉತ್ಪಾದನೆಯ ಅಗತ್ಯವಿದೆ

Department of Education Not Decide to Give Ragi Mudde Jolada Rotti to School Children grg

ಬೆಂಗಳೂರು(ನ.26):  ಶಾಲಾ ಮಕ್ಕಳಿಗೆ ಪೌಷ್ಟಿಕ ಆಹಾರವಾದ ರಾಗಿಮುದ್ದೆ, ಜೋಳದ ರೊಟ್ಟಿ ಕೊಡ್ತೀವಿ ಅಂತ ಹೇಳಿದ್ದ ಶಿಕ್ಷಣ ಇಲಾಖೆ ಇದೀಗ ಉಲ್ಟಾ ಹೊಡೆದಿದೆ. ಹೌದು, 2023ರನ್ನು ಅಂತಾರಾಷ್ಟ್ರೀಯ ರಾಗಿ ವರ್ಷವನ್ನಾಗಿ ಆಚರಿಸಲು ಶಿಕ್ಷಣ ಇಲಾಖೆ ಸಜ್ಜಾಗಿತ್ತು. ಈ ಹಿನ್ನೆಲೆಯಲ್ಲಿ ಶಾಲಾ ಮಕ್ಕಳ ಮಧ್ಯಾಹ್ನ ಬಿಸಿಯೂಟ ಯೋಜನೆಯಲ್ಲಿ ರಾಗಿ ಮುದ್ದೆ ಹಾಗೂ ಜೋಳದ ರೊಟ್ಟಿ ನೀಡುವ ಕುರಿತು ನಿರ್ಧರಿಸಲಾಗಿತ್ತು. ಆದರೆ ಈ ಯೋಜನೆ ಮುಂದಿನ ವರ್ಷದಿಂದ ಜಾರಿಗೆ ತರಲು ಸಾಧ್ಯವಿಲ್ಲ ಎಂಬ ವಿಚಾರ ಬೆಳಕಿಗೆ ಬಂದಿದೆ. 

ರಾಜ್ಯದ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದಲ್ಲಿ ಲಭ್ಯವಿರುವ ಆಹಾರ ಧಾನ್ಯಗಳು ಕಳಪೆ ಗುಣಮಟ್ಟದ್ದಾಗಿದೆಯಂತೆ. ಹೀಗಾಗಿ ಈ ವರ್ಷ ರಾಗಿ ಮುದ್ದೆ ಮತ್ತು ಜೋಳದ ರೊಟ್ಟಿ ನೀಡುವ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಕಷ್ಟ ಸಾಧ್ಯ ಅಂತ ಹೇಳಲಾಗುತ್ತಿದೆ. 

ಸಿಇಟಿ ಅರ್ಜಿ ತಪ್ಪಿಲ್ಲದೆ ತುಂಬುವುದನ್ನು ಕಲಿಸಲು ಸಹಾಯಕೇಂದ್ರ: ಅಶ್ವತ್ಥನಾರಾಯಣ

ಸಾಮಾನ್ಯವಾಗಿ ಅಕ್ಕಿ ಮತ್ತು ಗೋಧಿಯನ್ನು ಕೇಂದ್ರ ಸರ್ಕಾರದ ಭಾರತೀಯ ಆಹಾರ ನಿಗಮದಿಂದ ಸರಬರಾಜು ಮಾಡಿಕೊಳ್ಳಲಾಗುತ್ತದೆ. ರಾಗಿ ಮತ್ತು ಜೋಳ ಕರ್ನಾಟಕದ ಸ್ಥಳೀಯವಾದ ಬೆಳೆಗಳಾಗಿವೆ.  ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ರಾಗಿ ಮುದ್ದೆ ಮತ್ತು ಜೋಳದ ರೊಟ್ಟಿ ನೀಡಲು ದೊಡ್ಡ ಪ್ರಮಾಣದಲ್ಲಿ ರಾಗಿ ಮತ್ತು ಜೋಳ ಉತ್ಪಾದನೆಯ ಅಗತ್ಯವಿದೆಯಂತೆ.  ಈಗ ಸಂಗ್ರಹವಾಗುತ್ತಿರುವ ಆಹಾರ ಧಾನ್ಯಗಳು ತಾಜಾವಾಗಿಲ್ಲ ಜೊತೆಗೆ ಅವುಗಳ ಪೌಷ್ಟಿಕಾಂಶ ಕಳಪೆಯಾಗಿದೆಯಂತೆ. ಹೀಗಾಗಿ ಈ ಯೋಜನೆ ಮುಂದಿನ ವರ್ಷದಿಂದ ಜಾರಿಗೆ ತರಲು ಸಾಧ್ಯವಿಲ್ಲ ಅಂತ ತಿಳಿದು ಬಂದಿದೆ. 
 

Latest Videos
Follow Us:
Download App:
  • android
  • ios