ಸರ್ಕಾರಿ ಶಾಲೆಗಳ ವಿಲೀನ: ಸಚಿವರ ಹೇಳಿಕೆ ವಿರೋಧಿಸಿದ್ದ ಶಿಕ್ಷಕನಿಗೆ ನೊಟೀಸ್!

ಸರ್ಕಾರಿ ಶಾಲೆಗಳ ವಿಲೀನ ಕುರಿತು ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಮಾಧ್ಯಮಗಳಿಗೆ ನೀಡಿದ್ದ ಹೇಳಿಕೆ ವಿರೋಧಿಸಿ ಜಾಲತಾಣದಲ್ಲಿ ಹಂಚಿಕೊಂಡಿದ್ದ ಶಿಕ್ಷಕನಿಗೆ ನೋಟಿಸ್

Merger of government schools Notice to the teacher who opposed the minister's statementrav

ವರದಿ: ಮುಷ್ತಾಕ್, ಏಷಿಯಾನೆಟ್ ಸುವರ್ಣನ್ಯೂಸ್

ಚಿಕ್ಕೋಡಿ (ಜು.25) : 13,800 ಸರ್ಕಾರಿ ಶಾಲೆಗಳ ವಿಲೀನ ಕುರಿತು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಮಾಧ್ಯಮಗಳಿಗೆ ನೀಡಿದ್ದ ಹೇಳಿಕೆ ವಿರೋಧಿಸಿ ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದ ರಾಯಬಾಗ ತಾಲ್ಲೂಕಿನ ನಿಡಗುಂದಿಯ ಅಂಬೇಡ್ಕರ್‌ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ವೀರಣ್ಣ ಮಡಿವಾಳರ ಅವರಿಗೆ ಚಿಕ್ಕೋಡಿ ಡಿಡಿಪಿಐ ಎಂ.ಎಲ್‌.ಹಂಚಾಟೆ ಅವರು ಕಾರಣ ಕೇಳಿ ಜು.22ರಂದು ನೋಟಿಸ್‌ ಜಾರಿಗೊಳಿಸಿದ್ದಾರೆ.

ಕಡಿಮೆ ಮಕ್ಕಳಿರುವ ಸರ್ಕಾರ ಶಾಲೆಗಳ ವಿಲೀನಕ್ಕೆ ನಿರ್ಧಾರ

‘ಸಚಿವರ ಹೇಳಿಕೆಗೆ ನೀವು, ಇದು 13,800 ಶಾಲೆಗಳ ವಿಲೀನವಲ್ಲ. ಅಷ್ಟು ಶಾಲೆಗಳ ಹತ್ಯಾಕಾಂಡ. ಸರ್ಕಾರಿ ಶಾಲೆ(Govt School)ಗಳ ಮಕ್ಕಳ ಭವಿಷ್ಯದ ಮಾರಣಹೋಮ’ ಎಂಬ ಅಭಿಪ್ರಾಯವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದೀರಿ. ಇದು ಕರ್ನಾಟಕ ನಾಗರಿಕ ಸೇವಾ(ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು 1957ಕ್ಕೆ ವ್ಯತಿರಿಕ್ತವಾಗಿದ್ದು, ನಡತೆ ನಿಯಮಗಳು 1966ರ ನಿಯಮ 3 ಅನ್ನು ಉಲ್ಲಂಘಿಸಿರುವುದು ಸ್ಪಷ್ಟವಾಗಿದೆ. ನಿಮ್ಮ ಮೇಲೆ ಏಕೆ ಕ್ರಮ ಜರುಗಿಸಬಾರದು ಎನ್ನುವುದಕ್ಕೆ 3 ದಿನಗಳಲ್ಲಿ ಉತ್ತರ ನೀಡುಬೇಕು’ ಎಂದು ತಿಳಿಸಿದ್ದಾರೆ.

ಕನ್ನಡ ಶಾಲೆಗಳ ವಿಲೀನಕ್ಕೂ, ಮುಚ್ಚೋದಕ್ಕೂ ಏನು ವ್ಯತ್ಯಾಸ?

ಈ ಬಗ್ಗೆ ಪೋನ್ ಮೂಲಕ ಪ್ರತಿಕ್ರಿಯಿಸಿರುವ ವೀರಣ್ಣ ಮಡಿವಾಳರ(Veeranna Madivalar), ‘ನನಗೆ ಯಾರನ್ನೂ ವಿರೋಧಿಸುವ ಅಥವಾ ಪ್ರತಿಭಟಿಸುವ ಉದ್ದೇಶವಿಲ್ಲ. ಸರ್ಕಾರಿ ಶಾಲೆಗಳು ಮುಚ್ಚುತ್ತವೆ ಎಂಬ ಆತಂಕದಿಂದ ನನ್ನ ಸಂವೇದನೆಯನ್ನು ಎರಡು ಸಾಲಿನ ಪದ್ಯದಲ್ಲಿ ಅಭಿವ್ಯಕ್ತಿಸಿದ್ದೇನಷ್ಟೇ’ ಎಂದಿದ್ದಾರೆ. 

13,800 ಸರ್ಕಾರಿ ಶಾಲೆಗಳ ವಿಲೀನ ಬಗ್ಗೆ ಕನ್ನಡಪ್ರಭ ಪತ್ರಿಕೆ(Kannadaprabha)ಯಲ್ಲಿ ಬಂದ ವರದಿಯ ಇಮೇಜ್ ಕ್ಲಿಪ್ ಸ್ಟೇಟಸ್ ಇಟ್ಟು '13800 ಶಾಲೆ ವಿಲೀನ ಅಲ್ಲ.. ಅಷ್ಟು ಶಾಲೆಗಳ ಹತ್ಯಾಕಾಂಡ..  ಸರ್ಕಾರಿ ಶಾಲಾ ಮಕ್ಕಳ ಭವಿಷ್ಯದ ಮಾರಣಹೋಮ' ಎಂಬ ಬರಹ ಬರೆದು ಶಿಕ್ಷಕ ವಾಟ್ಸಪ್ ಸ್ಟೇಟಸ್ ಇಟ್ಟುಕೊಂಡಿದ್ದರು. ಶಿಕ್ಷಕನ ವಾಟ್ಸಪ್ ಸ್ಟೇಟಸ್ ಸ್ಕ್ರೀನ್‌ಶಾಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

Latest Videos
Follow Us:
Download App:
  • android
  • ios