Udupi:ಸಶಕ್ತ ಸಮಾಜಕ್ಕೆ ಸಶಕ್ತ ನಾರಿ, ನೂರಾರು ವಿದ್ಯಾರ್ಥಿನಿಯರಿಂದ ಸಾಮೂಹಿಕ ಸಾಹಸ ಪ್ರದರ್ಶನ

ಉಡುಪಿಯ  ಅಜ್ಜರಕಾಡಿನ ಜಿಲ್ಲಾ ಕ್ರೀಡಾಂಗಣದಲ್ಲಿ  ಏಕಕಾಲದಲ್ಲಿ 1000 ಕ್ಕೂ ಅಧಿಕ ವಿದ್ಯಾರ್ಥಿನಿಯರು ತಾವು ಕಲಿತ ವಿದ್ಯೆಯ ಪ್ರದರ್ಶನ ನೀಡಿ ಆತ್ಮವಿಶ್ವಾಸ ವ್ಯಕ್ತಪಡಿಸಿದರು. ಉಡುಪಿಯ ವಿದ್ಯಾರ್ಥಿನಿಯರಿಗೆ ಕಳೆದ ಹಲವು ದಿನಗಳಿಂದ ವಿಶೇಷವಾಗಿ ಕರಾಟೆ ತರಬೇತಿ ನೀಡಲಾಗಿತ್ತು. ಎಬಿವಿಪಿ ಈ ಕಾರ್ಯಕ್ರಮ ಹಮ್ಮಿಕೊಂಡಿತ್ತು.

Mass karate performance by hundreds of female students in Udupi gow

ಉಡುಪಿ (ನ.19): ನಗರದ ಅಜ್ಜರಕಾಡಿನ ಜಿಲ್ಲಾ ಕ್ರೀಡಾಂಗಣದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಉಡುಪಿ ನಗರ ವತಿಯಿಂದ ಸಶಕ್ತ ಸಮಾಜಕ್ಕಾಗಿ ಸಶಕ್ತ ನಾರಿ ಎಂಬ ಅಡಿ ಬರಹದೊಂದಿಗೆ ಮಿಷನ್ ಸಾಹಸಿ ಸಾಹಸ ಪ್ರದರ್ಶನ ಮತ್ತು ಸಮಾರೋಪ ಸಮಾರಂಭವು ಶನಿವಾರ ನಡೆಯಿತು. ಉಡುಪಿಯ ಸುಮಾರು ಒಂದು ಸಾವಿರ ವಿದ್ಯಾರ್ಥಿನಿಯರಿಗೆ ಕಳೆದ ಹಲವು ದಿನಗಳಿಂದ ವಿಶೇಷವಾಗಿ ಕರಾಟೆ ತರಬೇತಿ ನೀಡಲಾಗಿತ್ತು. ಸ್ವಯಂ ರಕ್ಷಣೆ ಹಾಗೂ ಸಮಾಜದ ಹಿತ ಕಾಯುವ ಉದ್ದೇಶದಿಂದ ಈ ಅಪರೂಪದ ತರಬೇತಿ ವ್ಯವಸ್ಥೆಗೊಳಿಸಲಾಗಿತ್ತು. ಅಜ್ಜರ ಕಾಡು ಮೈದಾನದಲ್ಲಿ ಏಕಕಾಲದಲ್ಲಿ 1000 ಕ್ಕೂ ಅಧಿಕ ವಿದ್ಯಾರ್ಥಿನಿಯರು ತಾವು ಕಲಿತ ವಿದ್ಯೆಯ ಪ್ರದರ್ಶನ ನೀಡಿ ಆತ್ಮವಿಶ್ವಾಸ ವ್ಯಕ್ತಪಡಿಸಿದರು. ಕಾರ್ಯಕ್ರಮವನ್ನು ಉಡುಪಿ ಮಹಿಳಾ ಪೋಲಿಸ್ ಠಾಣಾ ಉಪನಿರೀಕ್ಷಕಿ ವೈಲೆಟ್ ಫೆಮಿನಾ ಉದ್ಘಾಟಿಸಿದರು. ಬಳಿಕ, ಮಾತನಾಡಿದ ಅವರು ವಿದ್ಯಾರ್ಥಿನಿಯರಿಗೆ ಸಮಸ್ಯೆ ಉಂಟಾದಾಗ ಸಮಯಪ್ರಜ್ಞೆಯಿಂದ ಪರಿಸ್ಥಿತಿಯನ್ನು ಎದುರಿಸಬೇಕು ಎಂದು ಸಲಹೆ ನೀಡಿದರು. ಇಂದಿನ ಪೀಳಿಗೆ ಮೊಬೈಲ್ ಬಳಕೆಯಿಂದ ತಮ್ಮ ಸುತ್ತಲೂ ಏನು ನಡೆಯುತ್ತಿದೆ ಎಂಬುದನ್ನು ಗಮನಿಸುವುದಿಲ್ಲ. ವಿಶೇಷವಾಗಿ ವಿದ್ಯಾರ್ಥಿನಿಯರು ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗಲೂ, ಬಸ್ಸಿನಲ್ಲಿ ಮತ್ತು ಸಾರ್ವಜನಿಕ ಪ್ರದೇಶಗಳಲ್ಲಿ ಮೊಬೈಲ್ ಬಳಕೆಯನ್ನು ಕಡಿಮೆಗೊಳಿಸಿ ಜಾಗೃತಪ್ರಜ್ಞೆಯಲ್ಲಿರಬೇಕು ಎಂದು ಕಿವಿಮಾತು ಹೇಳಿದರು.

ಸಮಾಜದಲ್ಲಿ ಪುರುಷ ಮತ್ತು ಸ್ತ್ರೀ ಎರಡು ಸೃಷ್ಟಿಯಾಗಿದ್ದು, ಪುರುಷರಿಗಿಂತ ನಾವು ಅಸಾಮರ್ಥ್ಯರು ಎಂದು ಭಾವಿಸಿಕೊಳ್ಳದೇ, ಮಹಿಳೆ ಆತ್ಮಬಲ, ಮನೋಬಲವನ್ನು ಹೆಚ್ಚಿಸಿಕೊಳ್ಳಬೇಕು ಎಂದರು.

ಹೊಸಬೆಳಕು ಸೇವಾ ಟ್ರಸ್ಟ್ (ರಿ) ಸಂಸ್ಥಾಪಕರಾದ ತನುಲಾ ತರುಣ್ ಫಾಯ್ದೆ ಮಾತನಾಡಿ, ಪ್ರತಿಯೊಬ್ಬರು ತಪ್ಪು ಮಾಡುವುದು ಸಹಜ. ಆತ್ಮೀಯರೊಂದಿಗೆ ಚರ್ಚಿಸಿ ತಪ್ಪಿಗೆ  ಪರಿಹಾರವನ್ನು ಬಗೆಹರಿಸಿಕೊಳ್ಳಿ ಎಂದು ನುಡಿದರು.

ಉಡುಪಿ ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಎಬಿವಿಪಿ ಕರ್ನಾಟಕ ಪ್ರಾಂತ ಕಾರ್ಯ ಸಮಿತಿ ಸದಸ್ಯ ಡಾ| ರವಿ ಮಂಡ್ಯ, ಉಡುಪಿ ಜಿಲ್ಲಾ ಕರಾಟೆ ಶಿಕ್ಷಕರ ಸಂಘದ ಜಿಲ್ಲಾ ಕೋಶಾಧಿಕಾರಿ ವಾಮನ್ ಪಾಲನ್, ಮಾಜಿ ಅಧ್ಯಕ್ಷ ರವಿ ಸಾಲಿಯಾನ್, ಜಿಲ್ಲಾ ಕಾರ್ಯದರ್ಶಿ ರೋಹಿತಾಕ್ಷ ಉದ್ಯಾವರ ಉಪಸ್ಥಿತರಿದ್ದರು.

ಎಬಿವಿಪಿ ಕಲಾಮಂಚ್ ವಿಭಾಗ ಪ್ರಮುಖ್ ಐಶ್ವರ್ಯ ಪ್ರಸ್ತಾವಿಸಿ, ಎಬಿವಿಪಿ ಕಾರ್ಯಕರ್ತೆರಾದ ಕೃತಿ ಸ್ವಾಗತಿಸಿ, ವೃದ್ದಿ ವಂದಿಸಿದರು. ಶ್ರೀ ಶೆಟ್ಟಿ ನಿರೂಪಿಸಿದರು. 

Tumakur : ಒನಕೆ ಓಬವ್ವನ ಸಾಹಸ ಹೆಣ್ಣು ಮಕ್ಕಳಿಗೆ ಸ್ಫೂರ್ತಿ

ಕಳೆದ ಒಂದು ವಾರದಿಂದ ನಗರದ ಪ್ರಮುಖ ಕಾಲೇಜಿನಲ್ಲಿ ಎಬಿವಿಪಿ ಮತ್ತು ಜಿಲ್ಲಾ ಕರಾಟೆ ಶಿಕ್ಷಕರ ಸಂಘದ ಜಂಟಿ ಸಹಯೋಗದಲ್ಲಿ ಉಚಿತವಾಗಿ ಕರಾಟೆ ತರಬೇತಿಯನ್ನು ನೀಡಲಾಗಿದ್ದು, ಪ್ರಮುಖ ಕಸರತ್ತುಗಳನ್ನು ಶನಿವಾರ ಜಿಲ್ಲಾ ಕ್ರೀಡಾಂಗಣದಲ್ಲಿ 800 ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಏಕಕಾಲದಲ್ಲಿ ಪ್ರದರ್ಶಿಸಿದರು.

 

ಕರಾಟೆಯಲ್ಲಿ ಅಂತಾರಾಷ್ಟ್ರೀಯ ಸಾಧನೆ; ಗ್ರಾಮೀಣ ಪ್ರತಿಭೆಗೆ ಬೇಕಿದೆ ಪ್ರೋತ್ಸಾಹ

ಅತಿಥಿ ಗಣ್ಯರ ಸಾಲಿನಲ್ಲಿ ಆರ್‌.ಎಸ್.ಎಸ್. ಹಿರಿಯ ಪ್ರಚಾರಕ ದಾಮ ರವೀಂದ್ರ, ಎಬಿವಿಪಿ ಹಿರಿಯ ಕಾರ್ಯಕರ್ತರಾದ ಡಾ| ಶಿವಾನಂದ್ ನಾಯಕ್, ಮಾಜಿ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಶ್ಯಾಮಾಲಾ ಕುಂದರ್ ಭಾಗಿಯಾಗಿದ್ದರು.

Latest Videos
Follow Us:
Download App:
  • android
  • ios