Asianet Suvarna News Asianet Suvarna News

ಕರಾಟೆಯಲ್ಲಿ ಅಂತಾರಾಷ್ಟ್ರೀಯ ಸಾಧನೆ; ಗ್ರಾಮೀಣ ಪ್ರತಿಭೆಗೆ ಬೇಕಿದೆ ಪ್ರೋತ್ಸಾಹ

  • ಗ್ರಾಮೀಣ ಪ್ರತಿಭೆಗೆ ಬೇಕಿದೆ ಪ್ರೋತ್ಸಾಹ
  • ಅಂತಾರಾಷ್ಟ್ರೀಯ ಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಮಾದೇವ್‌ ಸಾಧನೆ
International Achievement in Karate needs encouragement rav
Author
First Published Nov 13, 2022, 11:52 PM IST

ಮಳವಳ್ಳಿ (ನ.13) : ಪಟ್ಟಣದಲ್ಲಿ 2ನೇ ತರಗತಿ ಓದುತ್ತಿರುವ ಗ್ರಾಮೀಣ ಕ್ರೀಡಾಪಟು ಎಂ.ಮಾದೇವ್‌ 7ನೇ ವಯಸ್ಸಿನಲ್ಲಿಯೇ ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟಿ್ರಯ ಕರಾಟೆ ಪಂದ್ಯಾವಳಿಯಲ್ಲಿ ಭಾಗವಹಿಸಿ ಚಾಂಪಿಯನ್‌ ಟ್ರೋಪಿ, ಚಿನ್ನ ಸೇರಿದಂತೆ ಹಲವು ಪದಕಗಳನ್ನು ತನ್ನದಾಗಿಸಿಕೊಂಡು ತಾಲೂಕಿಗೆ ಕೀರ್ತಿ ತಂದಿದ್ದಾನೆ.

ಪಟ್ಟಣದ ಸಮಾಜದ ಸೇವಕ ಮಹೇಶ್‌ ನಾಯಕ್‌ ಪುತ್ರ ವೆಸ್ಟ್‌ ಹ್ಯಾಂಡ್‌ ಕಾನ್ವೆಂಟ್‌ನಲ್ಲಿ 2ನೇ ತರಗತಿ ಓದುತ್ತಿರುವ ಮಾದೇಶ್‌ ಜೆನ್‌ ಮಾಷ್ಟಲ… ಆರ್ಚ್‌ ಕರಾಟೆ ಸ್ಕೂಲ್‌ನಲ್ಲಿ ತರಬೇತುದಾರ ಶಿವು ಅವರಿಂದ ತರಬೇತಿ ಪಡೆದು 25ಕ್ಕೂ ಹೆಚ್ಚು ರಾಜ್ಯ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನಗಳಿಸಿ ತಂದೆ ತಾಯಿಗಳಿಗೆ ಸ್ಫೂರ್ತಿ ತುಂಬಿದ್ದಾರೆ.

ಕಷ್ಟ ಯಾರಿಗ್ ಬರೋಲ್ಲ ಹೇಳಿ, ಇಂಥ ದೃತಿಗೆಡದ ನಾರಿ ಎಲ್ಲರಿಗೂ ಆಗ್ತಾರೆ ಮಾದರಿ!

ಬೆಂಗಳೂರು, ಮೈಸೂರು, ಮಂಡ್ಯ, ಹಾಸನ, ಕೆ.ರ್‌.ನಗರ, ಶಿವಮೊಗ್ಗ, ತಮಿಳುನಾಡು, ಚನ್ನೈ, ಕೊಡೆಕನಲ…, ಕೊಯಂತೂರು ಸೇರಿದಂತೆ ಹಲವು ಜಿಲ್ಲೆ ಹಾಗೂ ರಾಜ್ಯ ಸೇರಿದಂತೆ ದೇಶ ವಿದೇಶಗಳಲ್ಲಿ ಪ್ರತಿಭೆಯನ್ನು ಪ್ರದರ್ಶಿಸಿದ್ದಾನೆ.

ಶಿವಮೊಗ್ಗದಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ ಪಂದ್ಯಾವಳಿಯಲ್ಲಿ ಬಲಿಷ್ಠ 7 ದೇಶದ ಕರಾಟೆ ಪಟುವನ್ನು ಸೋಲಿಸಿ ಚಿನ್ನದ ಪದಕ ಗೆದ್ದಿದ್ದಾರೆ. ಎಳೆ ಮರೆಯಂತೆ ಸದ್ದಿಲ್ಲದೇ ಸಾಧನೆ ಮಾಡುತ್ತಿರುವ ಗ್ರಾಮೀಣ ಪ್ರತಿಭೆಗೆ ತಾಲೂಕು ಮತ್ತು ಜಿಲ್ಲಾಡಳಿತ ಪ್ರೋತ್ಸಾಹಿಸುವ ಮೂಲಕ ಗ್ರಾಮೀಣ ಕ್ರೀಡಾಪಟುವಿಗೆ ತುಂಬಬೇಕು ಎಂಬುದು ಪ್ರತಿಯೊಬ್ಬರ ಅಶಯವಾಗಿದೆ.

ತರಬೇತುದಾರ ಶಿವು ಮಾತನಾಡಿ, ಚಿಕ್ಕ ವಯಸ್ಸಿನಲ್ಲಿಯೇ ಎಂ.ಮಾದೇಶ್‌ ಹಲವು ಪ್ರಶಸ್ತಿ ಪಡೆದುಕೊಂಡಿರುವುದು ಹೆಮ್ಮೆಯ ವಿಷಯ. ಇನ್ನೂ ಹೆಚ್ಚಿನ ತರಬೇತಿ ನೀಡಿ ಹಲವು ಪಂದ್ಯಾವಳಿಗಳಲ್ಲಿ ಭಾಗವಹಿಸುವಂತೆ ಮಾಡಲಾಗುವುದು ಎಂದರು. ತಂದೆ ಮಹೇಶ್‌ ಮಾತನಾಡಿ, ಎಷ್ಟೇ ಕಷ್ಟವಾದರೂ ಕೂಡ ತಮ್ಮ ಮಗನಿಗೆ ಉತ್ತಮ ತರಬೇತಿ ಕೊಡಿಸಲಾಗುವುದು. ಶಾಲೆಗೆ ಜೊತೆಗೆ ಸಾರ್ವಜನಿಕರು ಪ್ರೋತ್ಸಾಹಿಸಬೇಕೆಂದು ಕೋರಿದರು. Zero To Hero: ಟೆಕ್ಸ್​ಟೈಲ್ಸ್​ ಅಧಿಪತಿಯಾಗಿದ್ದೇಗೆ ಗಣಪತ್‌ರಾವ್‌ ಹಜಾರೆ..?

Follow Us:
Download App:
  • android
  • ios