ಬಾಲಿವುಡ್ ಸ್ಟಾರ್‌ಕಿಡ್‌ಗಳೇ ಓದುವ ಅಂಬಾನಿ ಶಾಲೆಯ ಯುನಿಫಾರ್ಮ್ ಡಿಸೈನ್ ಮಾಡಿದ್ದು ಮನೀಶ್ ಮಲ್ಹೋತ್ರಾ ನಾ?
ಉದ್ಯಮಿ ಅಂಬಾನಿ ಮಾಲೀಕತ್ವದ ಧೀರುಬಾಯ್ ಅಂಬಾನಿ ಶಾಲೆ ಇತ್ತೀಚೆಗೆ ಸಾಕಷ್ಟು ಸುದ್ದಿಯಲ್ಲಿದೆ. ಬಾಲಿವುಡ್ ಸೆಲೆಬ್ರಿಟಿಗಳ, ಐಎಎಸ್, ಐಪಿಎಸ್ ಅಧಿಕಾರಿಗಳ, ಖ್ಯಾತ ಉದ್ಯಮಿಗಳ ಮಕ್ಕಳು ಈ ಪ್ರತಿಷ್ಠಿತ ಶಾಲೆಯಲ್ಲಿ ಓದುತ್ತಿದ್ದು, ಕೆಲ ದಿನಗಳ ಹಿಂದೆ ಶಾಲೆಯ ವಾರ್ಷಿಕೋತ್ಸವನ್ನು ಅದ್ದೂರಿಯಾಗಿ ಆಚರಿಸುವ ಮೂಲಕ ಮಾಧ್ಯಮಗಳಲ್ಲಿ ಹೆಡ್‌ಲೈನ್ ಆಗಿತ್ತು.
ಉದ್ಯಮಿ ಅಂಬಾನಿ ಮಾಲೀಕತ್ವದ ಧೀರುಬಾಯ್ ಅಂಬಾನಿ ಶಾಲೆ ಇತ್ತೀಚೆಗೆ ಸಾಕಷ್ಟು ಸುದ್ದಿಯಲ್ಲಿದೆ. ಬಾಲಿವುಡ್ ಸೆಲೆಬ್ರಿಟಿಗಳ, ಐಎಎಸ್, ಐಪಿಎಸ್ ಅಧಿಕಾರಿಗಳ, ಖ್ಯಾತ ಉದ್ಯಮಿಗಳ ಮಕ್ಕಳು ಈ ಪ್ರತಿಷ್ಠಿತ ಶಾಲೆಯಲ್ಲಿ ಓದುತ್ತಿದ್ದು, ಕೆಲ ದಿನಗಳ ಹಿಂದೆ ಶಾಲೆಯ ವಾರ್ಷಿಕೋತ್ಸವನ್ನು ಅದ್ದೂರಿಯಾಗಿ ಆಚರಿಸುವ ಮೂಲಕ ಮಾಧ್ಯಮಗಳಲ್ಲಿ ಹೆಡ್‌ಲೈನ್ ಆಗಿತ್ತು. ಇದರ ಜೊತೆಗೆ ಶಾಲೆಯ ವಾರ್ಷಿಕ ಫೀಸ್, ಶಾಲೆಯ ಹಾಡು, ಶಾಲೆಯ ಮಕ್ಕಳ ಯುನಿಫಾರ್ಮ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗಳಾಗಿದ್ದವು.
ಇದೇ ಕಾರ್ಯಕ್ರಮದಲ್ಲಿ ಐಶ್ವರ್ಯಾ ರೈ ಅಭಿಷೇಕ್ ಬಚ್ಚನ್ ಮಗಳು ಆರಾಧ್ಯ ಅವರು ಸ್ಕಿಟ್ ಒಂದರಲ್ಲಿ ನಟಿಸಿ ಜನಮನ ಸೆಳೆದಿದ್ದರೆ, ಶಾರುಖ್ ಪುತ್ರ ಅಬ್ರಾಮ್ ಕೂಡ ಈ ಶಾಲಾ ವಾರ್ಷಿಕೋತ್ಸವದಲ್ಲಿ ಭಾಗವಹಿಸುವ ಮೂಲಕ ಅಭಿಮಾನಿಗಳ ಮೆಚ್ಚುಗೆ ಗಳಿಸಿದ್ದಲ್ಲದೇ ಇಂಟರ್‌ನೆಟ್‌ನಲ್ಲಿ ಸಂಚಲನ ಸೃಷ್ಟಿಸಿದ್ದರು. ಆದರೀಗ ಚರ್ಚೆಯಲ್ಲಿರುವ ವಿಚಾರ ಈ ಪ್ರತಿಷ್ಠಿತ ಶಾಲೆಯ ಮಕ್ಕಳ ಯುನಿಫಾರ್ಮ್. ಹೌದು ಈ ಅಂಬಾನಿ ಶಾಲೆಯ ಮಕ್ಕಳ ಸಮವಸ್ತ್ರವನ್ನು ಸಿದ್ಧ ಮಾಡಿದ್ದು, ಬಾಲಿವುಡ್‌ನ ಖ್ಯಾತ ಡಿಸೈನರ್ ಮನೀಶ್ ಮಲ್ಹೋತ್ರಾ ಅವರಂತೆ.
ಮನೀಶ್ ಮಲ್ಹೋತ್ರಾ ಅವರು ಈ ಧೀರುಬಾಯಿ ಅಂಬಾನಿ ಅಂತಾರಾಷ್ಟ್ರೀಯ ಶಾಲೆಯ ಮಕ್ಕಳ ಯುನಿಫಾರ್ಮ್ ಅನ್ನು ಡಿಸೈನ್ ಮಾಡಿದ್ದಾರೆ. ಅಲ್ಲದೇ ಈ ಶಾಲೆಯಲ್ಲಿ ನೀಡುವ ಊಟದ ಮೆನುವನ್ನು ಭಾರತದ ಖ್ಯಾತ ಚೆಫ್ ಸಂಜೀವ್ ಕಪೂರ್ ಸಿದ್ಧಪಡಿಸಿದ್ದಾರೆ ಎಂದು ರೆಡಿಟ್ ಯೂಸರ್ ಒಬ್ಬರು ಹೇಳಿಕೊಂಡಿದ್ದು ಈ ಸುದ್ದಿ ಈಗ ವೈರಲ್ ಆಗಿದೆ. ರೆಡಿಟ್ ಬಳಕೆದಾರರೊಬ್ಬರ ಪ್ರಕಾರ, ಈ ಶಾಲೆಯ ಶಾಲಾಗೀತೆಯನ್ನು ಖ್ಯಾತ ಖ್ಯಾತ ಗೀತ ರಚನೆಕಾರ ಜಾವೇದ್ ಅಖ್ತರ್ ಅವರು ರಚಿಸಿದ್ದಾರಂತೆ, ಇದಕ್ಕೆ ಸಂಗೀತಾವನ್ನು ಶಂಕರ್ ಇಶಾನ್ ಹಾಘೂ ಲೋಯ್ ನೀಡಿದ್ದಾರಂತೆ ಇನ್ನು ಶಾಲೆಯಲ್ಲಿರುವ ಕೆಪಿಟೇರಿಯ(ಕ್ಯಾಂಟಿನ್) ಅಲ್ಟ್ರಾ ಮಾಡರ್ನ್ ಆಗಿದ್ದು ಎರಡು ಡೈನಿಂಗ್ ಹಾಲ್‌ಗಳನ್ನು ಹೊಂದಿದೆ. ಈ ಶಾಲೆಯಲ್ಲಿರುವ ಆಹಾರದ ಮೆನು ಖ್ಯಾತ ಪಾಕತಜ್ಞ ಸಂಜಯ್ ಕಪೂರ್ ಅವರ ನಿರ್ದೇಶನದಲ್ಲೇ ನಡೆಯುತ್ತದೆಯಂತೆ.
ಮುಕೇಶ್ ಅಂಬಾನಿಯ ಬಣ್ಣ ಬದಲಾಯಿಸೋ ಲಕ್ಸುರಿಯಸ್ ಕಾರ್; ಅಬ್ಬಬ್ಬಾ ಬೆಲೆ ಇಷ್ಟೊಂದಾ?
ನೀತಾ ಅಂಬಾನಿ ಅವರು ಶಾಲೆಯ ಗೀತೆಯನ್ನು ಹಾಡುವ ವೀಡಿಯೋ ಪೋಸ್ಟ್ ಮಾಡಿ ನೆಟ್ಟಿಗರೊಬ್ಬರು ಈ ವಿಚಾರ ಹಂಚಿಕೊಂಡಿದ್ದಾರೆ. ಈ ಪೋಸ್ಟ್‌ಗೆ ಸಾಕಷ್ಟು ಜನ ಪ್ರತಿಕ್ರಿಯಿಸಿದ್ದು, ಅಚ್ಚರಿಯ ಜೊತೆ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ಧೀರುಬಾಯ್ ಅಂಬಾನಿ ಶಾಲೆಯ ಈ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಫಿಲಂಫೇರ್ ಪ್ರಶಸ್ತಿ ಸಮಾರಂಭದಲ್ಲಿ ಭಾಗವಹಿಸುವುದಕ್ಕಿಂತ ಹೆಚ್ಚಿನ ಸೆಲೆಬ್ರಿಟಿಗಳು ಭಾಗವಹಿಸಿದ್ದಾರೆ. ಎಲ್ಲಾ ಸೆಲೆಬ್ರಿಟಿ ಮಕ್ಕಳು ಇಲ್ಲಿ ಶಾಲೆಗೆ ಹೋಗುತ್ತಿದ್ದಾರೆ ಎಂಬುದನ್ನು ಕೇಳಲು ಅಚ್ಚರಿಯಾಗುತ್ತಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಇನ್ನು ಈ ಧೀರುಬಾಯ್ ಅಂಬಾನಿ ಅಂತಾರಾಷ್ಟ್ರೀಯ ಶಾಲೆಯ ವಾರ್ಷಿಕ ಶುಲ್ಕದ ಬಗ್ಗೆಯೂ ಜನ ಚರ್ಚಿಸಿದ್ದು, ಕೆಲ ಮೂಲಗಳ ಪ್ರಕಾರ, ಈ ಶಾಲೆಯಲ್ಲಿ ಮಕ್ಕಳನ್ನು ಓದಿಸಬೇಕೆಂದರೆ ವೆಚ್ಚವಾಗುವ ವಾರ್ಷಿಕ ಶುಲ್ಕ ಒಂದು ಲಕ್ಷದಿಂದ 20 ಲಕ್ಷದವರೆಗೆ ಇದೆ. ಅಲ್ಲದೇ ಇದು ತರಗತಿಯಿಂದ ತರಗತಿಗೆ ಬೇರೆ ಬೇರೆಯಾಗಿದೆ. ಎಲ್‌ಕೆಜಿಯಿಂದ 7ನೇ ತರಗತಿವರೆಗಿನ ಮಕ್ಕಳ ತಿಂಗಳ ಶುಲ್ಕ 1 ಲಕ್ಷದ 70 ಸಾವಿರದವರೆಗೆ ಇದ್ದರೆ 8 ರಿಂದ 10 ತರಗತಿ ಓದುವ ಮಕ್ಕಳ ತಿಂಗಳ ಶುಲ್ಕ 4.48 ಲಕ್ಷದವರೆಗೆ ಇದೆ. ಹಾಗೆಯೇ ಅಲ್ಲಿ 11 ಹಾಗೂ 12ನೇ ತರಗತಿ ಓದುವ ಮಕ್ಕಳು ಅಂದಾಜು 9.65 ಲಕ್ಷ ಶುಲ್ಕ ಪಾವತಿ ಮಾಡಬೇಕಾಗುತ್ತದೆ.
ನೀತಾ ಅಂಬಾನಿಯ ಮೇಕಪ್ ಕಲಾವಿದೆ, ಗೌರಿ ಖಾನ್, ಕಿಯಾರಾ ಅಡ್ವಾಣಿ ಸೇರಿ ಬಾಲಿವುಡ್ ತಾರೆಯರ ಫೇವರಿಟ್ ಈಕೆಯ ಶುಲ್ಕ?
ಇನ್ನು ಧೀರುಭಾಯ್ ಅಂಬಾನಿ ಅಂತಾರಾಷ್ಟ್ರೀಯ ಶಾಲೆಯ ಬಗ್ಗೆ ಹೆಚ್ಚಿಗೆ ಹೇಳುವುದಾದರೆ ಇದು ನೀತಾ ಅಂಬಾನಿ ಅವರ ಕನಸಿನ ಕೂಸಾಗಿದ್ದು, ದೇಶದಲ್ಲಿ ವಿಶ್ವದರ್ಜೆಯ ಶಿಕ್ಷಣ ನೀಡುವ ಉದ್ದೇಶದೊಂದಿದೆ 2003ರಲ್ಲಿ ಈ ಶಾಲೆಯನ್ನು ಆರಂಭಿಸಲಾಯ್ತು. 1,30,000 ಚದರ ಅಡಿಯಲ್ಲಿ ಸ್ಥಾಪಿಸಲ್ಪಟ್ಟಿರುವ ಈ 7 ಅಂತಸ್ತಿನ ಶಾಲೆಯನ್ನು ಸ್ಥಾಪಿಸಲಾಗಿದ್ದು, ಬಾಲಿವುಡ್ ಸೆಲೆಬ್ರಿಟಿಗಳ ಮಕ್ಕಳಾದ ಅಬ್ರಾಮ್ ಖಾನ್, ಆರಾಧ್ಯ ಬಚ್ಚನ್, ಸುಹಾನಾ ಖಾನ್ ಮುಂತಾದವರು ಇದೇ ಶಾಲೆಯಲ್ಲಿ ಓದ್ತಿದ್ದಾರೆ. ಶಾಲೆ ಯುನಿಫಾರ್ಮ್‌ನ್ನು ಡಿಸೈನರ್ ಜೊತೆ ವಿನ್ಯಾಸ ಮಾಡಿಸಿದ ಬಗ್ಗೆ ಏನಂತೀರಾ ನೀವು...