ಪರೀಕ್ಷೆಗೆ ಗೈರಾದ ಮಂಡ್ಯದ ಮುಸ್ಕಾನ್, ಶಿಕ್ಷಣಕ್ಕಿಂತ ಹೆಚ್ಚಾಯ್ತಾ ಹಿಜಾಬ್?
- ಬಿಕಾಂ 2ನೇ ವರ್ಷದ 3ನೇ ಸೆಮಿಸ್ಟರ್ ಪರೀಕ್ಷೆಗೆ ಗೈರು.
- ಪ್ರವೇಶ ಪತ್ರವನ್ನು ಪಡೆಯದೆ ಎಕ್ಸಾಂ ನಿರ್ಲಕ್ಷ್ಯ.
- ಅಲ್ಲಾ ಹು ಅಕ್ಬರ್ ಘೋಷಣೆ ಬಳಿಕ ಕಾಲೇಜಿಗೆ ಬಾರದ ಮುಸ್ಕಾನ್.
ವರದಿ : ನಂದನ್ ರಾಮಕೃಷ್ಣ, ಏಷ್ಯಾನೆಟ್ ಸುವರ್ಣ ನ್ಯೂಸ್
ಮಂಡ್ಯ(ಮಾ.24): ಹಿಜಾಬ್ (Hijab) ವಿಚಾರ ರಾಜ್ಯದಲ್ಲಿ ಸಾಕಷ್ಟು ಚರ್ಚೆಗೆ ಹುಟ್ಟು ಹಾಕಿತ್ತು. ಶಾಲಾ, ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ಅವಕಾಶ ಕೋರಿ ಕೆಲ ವಿದ್ಯಾರ್ಥಿನಿಯರು ಕೋರ್ಟ್ ಮೆಟ್ಟಿಲೇರಿದ್ದರು. ಈ ಗಲಾಟೆ ನಡುವೆ ಜೈ ಶ್ರೀ ರಾಮ್ ಘೋಷಣೆ ಪ್ರತಿಯಾಗಿ ಅಲ್ಲಾ ಹು ಅಕ್ಬರ್ ಘೋಷಣೆ ಕೂಗಿದ್ದ ಮಂಡ್ಯ ಪಿಇಎಸ್ ಕಾಲೇಜು ವಿದ್ಯಾರ್ಥಿನಿ ಮುಸ್ಕಾನ್ ಖಾನ್ (Muskan Khan) 'ಐಕಾನ್ ಲೇಡಿ ಆಫ್ ಹಿಜಾಬ್' ಅಂತಲೇ ಗುರುತಿಸಿಕೊಂಡಿದ್ದಳು. ಘೋಷಣೆ ಬಳಿಕ ಸನ್ಮಾನ, ಉಡುಗೊರೆಗಳನ್ನು ಪಡೆದಿದ್ದ ವಿದ್ಯಾರ್ಥಿನಿ ಕಾಲೇಜಿಗೆ ಬಂದಿರಲಿಲ್ಲ. ಕೋರ್ಟ್ ತೀರ್ಪಿನ ಬಳಿಕ ಮುಸ್ಕಾನ್ ಸಮವಸ್ತ್ರ ಆದೇಶ ಪಾಲನೆ ಮಾಡುತ್ತಾರ ಇಲ್ಲವ ಎಂಬ ಪ್ರಶ್ನೆ ಎಲ್ಲರಲ್ಲೂ ಇತ್ತು. ಇದೀಗ ಆ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ.
ಬಿಕಾಂ ಪರೀಕ್ಷೆಗೆ ಗೈರಾಗಿ ಶಿಕ್ಷಣಕ್ಕಿಂತ ಹಿಜಾಬ್ ಮುಖ್ಯ ಎಂಬ ಸಂದೇಶ ರವಾನಿಸಿದ್ದಾರೆ. ಬೆಳಿಗ್ಗೆ 9:30ಕ್ಕೆ ಪರೀಕ್ಷೆ ಆರಂಭವಾದ್ರು ಪರೀಕ್ಷೆಗೆ ಹಾಜರಾಗಲು ಕಾಲೇಜು ಆಡಳಿತ ಮಂಡಳಿ ಹೆಚ್ಚುವರಿ ಅರ್ಧಗಂಟೆ ಸಮಯ ನೀಡಿದ್ರು. ಎಲ್ಲಾ ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ಪರೀಕ್ಷಾ ಕೊಠಡಿ ಪ್ರವೇಶಿಸಿದ್ರೆ. ಪ್ರವೇಶ ಪತ್ರವನ್ನು ಪಡೆಯದ ಮುಸ್ಕಾನ್ ಎಕ್ಸಾಂಗೆ ಗೈರಾಗಿದ್ದಾರೆ.
ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ ಯುಜಿ ತರಗತಿ CUET ಪರೀಕ್ಷೆ ಕಡ್ಡಾಯ
ಸಂವಿಧಾನದ ಮೇಲೆ ನಂಬಿಕೆ ಇದೆ ಎಂದಿದ್ದ ಮುಸ್ಕಾನ್, ತೀರ್ಪಿನ ಬಳಿಕ ಪರೀಕ್ಷೆಗೆ ಗೈರು
ಮಾ.15 ರಂದು ಹಿಜಾಬ್ ಕುರಿತು ಮಹತ್ವದ ತೀರ್ಪು ಪ್ರಕಟಿಸಿದ ರಾಜ್ಯ ಹೈಕೋರ್ಟ್ ಸಮವಸ್ತ್ರ ಆದೇಶ ಎತ್ತಿ ಹಿಡಿದಿತ್ತು. ಮಂಡ್ಯದಲ್ಲಿ ತೀರ್ಪಿಗೂ ಮುನ್ನ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದ ಮುಸ್ಕಾನ್ ಸಂವಿಧಾನದ ಮೇಲೆ ನಮಗೆ ನಂಬಿಕೆ ಇದೆ ಎಂದಿದ್ದರು. ಆದ್ರೆ ಸಮವಸ್ತ್ರ ಆದೇಶ ಪಾಲಿಸುವಂತೆ ಕೋರ್ಟ್ ತೀರ್ಪು ಹೊರಬಿದ್ದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.
ತೀರ್ಪು ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಮುಸ್ಕಾನ್ ತಂದೆ ಮಹಮದ್ ಹುಸೇನ್. ಆದೇಶದ ಪ್ರತಿ ಬರಲಿ ಸಮುದಾಯದ ಹಿರಿಯರ ಜೊತೆ ಚರ್ಚಿಸಿ ಮಗಳನ್ನು ಕಾಲೇಜಿಗೆ ಕಳುಹಿಸುವ ಬಗ್ಗೆ ನಿರ್ಧಾರ ಮಾಡ್ತೀನಿ ಎಂದಿದ್ದರು. ಇಂದಿನಿಂದ ಬಿಕಾಂ 2ನೇ ವರ್ಷದ 3ನೇ ಸೆಮಿಸ್ಟರ್ ಪರೀಕ್ಷೆ ಆರಂಭವಾಗಿದೆ. ಆದ್ರೆ ಎಕ್ಸಾಂಗೆ ಬಾರದೆ ಮುಸ್ಕಾನ್ ಗೈರು ಹಾಜರಿ ಆಗಿದ್ದಾರೆ.
CSIR NAL RECRUITMENT 2022: ಟ್ರೇಡ್ ಅಪ್ರೆಂಟಿಸ್ ಹುದ್ದೆಗಳಿಗೆ ನೇಮಕಾತಿ
ಎಕ್ಸಾಂಗೆ ಚಕ್ಕರ್, ಪಾಸ್‌ಪೋರ್ಟ್ ಪರಿಶೀಲನೆ ಹಾಜರ್
ಇಂದು ಪರೀಕ್ಷೆಗೆ ಗೈರಾಗಿರುವ ಮುಸ್ಕಾನ್ ಪಾಸ್‌ಪೋರ್ಟ್ ಪರಿಶೀಲನೆಗೆ ತೆರಳಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ. ಸಮವಸ್ತ್ರ ಕಡ್ಡಾಯ ತೀರ್ಪಿನ ಬಳಿಕ ಬೇರೆ ಕಾಲೇಜಿಗೆ ಮಗಳನ್ನ ಸೇರಿಸುವ ಬಗ್ಗೆ ಮಹಮ್ಮದ್ ಹುಸೇನ್ ಚಿಂತಿಸಿದ್ದಾರೆ ಎನ್ನಲಾಗಿದೆ. ಇಂದು ಪರೀಕ್ಷೆಗೆ ಗೈರಾಗಿ ಪಾಸ್‌ಪೋರ್ಟ್ ಪರಿಶೀಲನೆಗೆ ತೆರಳಿರುವ ಮುಸ್ಕಾನ್ ವಿದೇಶದಲ್ಲಿ ವಿದ್ಯಾಭ್ಯಾಸ ಮುಂದುವರೆಸುತ್ತಾರ ಎಂಬ ಅನುಮಾನಗಳು ಮೂಡಿವೆ.