ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ ಯುಜಿ ತರಗತಿ CUET ಪರೀಕ್ಷೆ ಕಡ್ಡಾಯ

ಕೇಂದ್ರೀಯ ವಿಶ್ವವಿದ್ಯಾಲಯಗಳ ಪ್ರವೇಶಕ್ಕೆ ವಿದ್ಯಾರ್ಥಿಗಳು ಕಾಮನ್ ಪ್ರವೇಶ ಪರೀಕ್ಷೆಯನ್ನು ಬರೆದೇ ದಾಖಲಾಗಬೇಕು ಎಂದು ಯುಜಿಸಿ ಕಡ್ಡಾಯ ಮಾಡಿ ಅಧಿಸೂಚನೆ ಹೊರಡಿಸಿದೆ.

common university entrance test will be conducted in July gow

ನವದೆಹಲಿ (ಮಾ.24): ಕೇಂದ್ರೀಯ ವಿಶ್ವವಿದ್ಯಾಲಯಗಳ (Central universities ) ಯುಜಿ ತರಗತಿಗಳಿಗೆ ಇನ್ನು ಮುಂದೆ ವಿದ್ಯಾರ್ಥಿಗಳು ಕಾಮನ್ ಪ್ರವೇಶ ಪರೀಕ್ಷೆಯನ್ನು (common university entrance test - CUET) ಬರೆದೇ ದಾಖಲಾಗಬೇಕು ಎಂದು ಯುಜಿಸಿ ಚೇರ್ಮೆನ್ ಜಗದೀಶ್ ಕುಮಾರ್  (UGC chairman M Jagadesh Kumar ) ಹೇಳಿದ್ದಾರೆ.

ಈ ವರ್ಷದ ಜುಲೈನಿಂದಲೇ ಈ ನಿಯಮ ಜಾರಿಗೆ ಬರಲಿದ್ದು, ಎಲ್ಲಾ 45 ಕೇಂದ್ರೀಯ ವಿಶ್ವವಿದ್ಯಾನಿಲಯಗಳಲ್ಲಿ ಪದವಿಪೂರ್ವ ಕಾರ್ಯಕ್ರಮಗಳ ಪ್ರವೇಶಕ್ಕಾಗಿ ಪರೀಕ್ಷೆ ನಡೆಯಲಿದ್ದು, ಯುಜಿ ತರಗತಿ ದಾಖಲಾತಿಗೆ ವಿದ್ಯಾರ್ಥಿಗಳು 12ನೇ ತರಗತಿಯಲ್ಲಿ ಗಳಿಸಿದ ಅಂಕಗಳನ್ನು ಪರಿಗಣಿಸಲಾಗುವುದಿಲ್ಲ ಎಂದಿದ್ದಾರೆ.

ಯುಜಿ ತರಗತಿ ದಾಖಲಾತಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಎಪ್ರಿಲ್ ಮೊದಲ ವಾರದಿಂದ ಶುರುವಾಗುವುದು ಎಂದು ಜಗದೀಶ್ ಕುಮಾರ್ ತಿಳಿಸಿದ್ದಾರೆ. 2022-23 ಶೈಕ್ಷಣಿಕ ವರ್ಷದಲ್ಲಿ ಯುಜಿ ಮತ್ತು ಪಿಜಿ ತರಗತಿ ದಾಖಲಾತಿಗೆ ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರ (National Testing Agency - NAT) CUET ಪರೀಕ್ಷೆ ಕೈಗೊಳ್ಳಲಿದೆ. 

ಬಡ್ತಿಯನ್ನು ನೌಕರರು ಹಕ್ಕು ಎಂದು ಹೇಳಲು ಸಾಧ್ಯವಿಲ್ಲ: ಮದ್ರಾಸ್ ಹೈಕೋರ್ಟ್‌

CUET ಪ್ರವೇಶ ಪರೀಕ್ಷೆಯನ್ನು 12ನೇ ತರಗತಿಯ ಸಿಲಬಸ್ ಆಧಾರದಲ್ಲಿ ರೂಪಿಸಲಾಗುವುದು ಎಂದು ಯುಜಿಸಿ ತಿಳಿಸಿದೆ. NCERT (National Council of Educational Research and Training) ಪಠ್ಯಪುಸ್ತಕಗಳ ಆಧಾರದ ಮೇಲೆ ಬಹು ಆಯ್ಕೆಯ ಪ್ರಶ್ನೆಗಳು ಇರಲಿದ್ದು,  ತಪ್ಪು ಉತ್ತರಗಳಿಗಾಗಿ ವಿದ್ಯಾರ್ಥಿಗಳಿಗೆ ಋಣಾತ್ಮಕವಾಗಿ ಅಂಕಗಳಿರುತ್ತವೆ. ಇಂಗ್ಲಿಷ್, ಹಿಂದಿ, ಅಸ್ಸಾಮಿ, ಬೆಂಗಾಲಿ, ಗುಜರಾತಿ, ಕನ್ನಡ, ಮಲಯಾಳಂ, ಮರಾಠಿ, ಒಡಿಯ, ಪಂಜಾಬಿ, ತಮಿಳು, ತೆಲುಗು ಮತ್ತು ಉರ್ದು ಹೀಗೆ 13 ಭಾಷೆಗಳಲ್ಲಿ ಇರಲಿದ್ದು,    ಯಾವುದಾದರೂ ಭಾಷೆಯನ್ನು ಅಭ್ಯರ್ಥಿ ಆರಿಸಿಕೊಳ್ಳಬಹುದು.

ದೆಹಲಿ ವಿಶ್ವವಿದ್ಯಾನಿಲಯ, ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ, ಜಾಮಿಯಾ ಮಿಲಿಯಾ ಇಸ್ಲಾಮಿಯಾ ಮತ್ತು ರಾಷ್ಟ್ರ ರಾಜಧಾನಿಯ ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾನಿಲಯ, ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯ ಮತ್ತು ಯುಪಿಯ ಬನಾರಸ್ ಹಿಂದೂ ವಿಶ್ವವಿದ್ಯಾಲಯ, ಈಗ CUET ವ್ಯಾಪ್ತಿಗೆ ಒಳಪಡುವ ಪ್ರಸಿದ್ಧ ಕೇಂದ್ರೀಯ ವಿಶ್ವವಿದ್ಯಾಲಯಗಳಾಗಿವೆ.

Zomato Instant ಸೇವೆ ಪ್ರಕಟಿಸಿದ ಬೆನ್ನಲ್ಲೇ, ಟೀಕೆಗೊಳಗಾದ ಸಂಸ್ಥಾಪಕ ಗೋಯಲ್

ಅಲ್ಪಸಂಖ್ಯಾತರಿಗೆ ಸೀಟುಗಳನ್ನು ಮೀಸಲಿಡುವ ಕೇಂದ್ರೀಯ ವಿಶ್ವವಿದ್ಯಾಲಯಗಳಾದ ಎಎಂಯು ಮತ್ತು ಜಾಮಿಯಾ ಕೂಡ ಸಿಯುಇಟಿಯನ್ನು ಅಳವಡಿಸಿಕೊಳ್ಳಬೇಕೆ? ಎಂಬ ಪ್ರಶ್ನೆಗೆ ಉತ್ತರಿಸಿದ ಜಗದೀಶ್ ಕುಮಾರ್ ಯುಜಿಸಿಯಿಂದ ಅನುದಾನಿತ ಎಲ್ಲಾ 45 ಕೇಂದ್ರೀಯ ವಿಶ್ವವಿದ್ಯಾಲಯಗಳಿಗೆ ಪರೀಕ್ಷೆಯು ಕಡ್ಡಾಯವಾಗಿದೆ  ಎಂದು ಸ್ಪಷ್ಟಪಡಿಸಿದ್ದಾರೆ. 

ಅಂತಹ ಸಂಸ್ಥೆಗಳಲ್ಲಿ ಕಾಯ್ದಿರಿಸಿದ ಸೀಟುಗಳ ಕೋಟಾದ ಮೇಲೆ CUET ಪರಿಣಾಮ ಬೀರುವುದಿಲ್ಲ, ಆದರೆ ಎಲ್ಲಾ ವಿದ್ಯಾರ್ಥಿಗಳನ್ನು ಸಾಮಾನ್ಯ ಪರೀಕ್ಷೆಯ ಮೂಲಕ ಕಡ್ಡಾಯವಾಗಿ ಸೇರಿಸಿಕೊಳ್ಳಬೇಕು. ಒಂದೇ ವ್ಯತ್ಯಾಸವೆಂದರೆ ಈ ವಿದ್ಯಾರ್ಥಿಗಳು ಸಾಮಾನ್ಯ ಸೀಟುಗಳಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳಂತೆ CUET ಮೂಲಕ ಬರಬೇಕಾಗುತ್ತದೆ. ವಿಶ್ವವಿದ್ಯಾನಿಲಯಗಳ ಮೀಸಲಾತಿ ನೀತಿಗಳು ಮತ್ತು ಸುಗ್ರೀವಾಜ್ಞೆಗಳು ಬದಲಾಗದೆ ಉಳಿಯುತ್ತವೆ ಎಂದು ಜಗದೀಶ್  ಹೇಳಿದ್ದಾರೆ.

ಪ್ರವೇಶ ಪರೀಕ್ಷೆಗೆ ಸೇರುವ ಕುರಿತು ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯ  ಮತ್ತು ಜಾಮಿಯಾ ಮಿಲಿಯಾ ಇಸ್ಲಾಮಿಯಾ  ಇನ್ನೂ ತಮ್ಮ ನಿಲುವನ್ನು ಸ್ಪಷ್ಟಪಡಿಸಿಲ್ಲ.

ಪರೀಕ್ಷೆಯನ್ನು ಎರಡು ಪಾಳಿಯಲ್ಲಿ ನಡೆಸಲಾಗುತ್ತದೆ. ಮೊದಲ ಶಿಫ್ಟ್‌ನಲ್ಲಿ, ಅಭ್ಯರ್ಥಿಗಳು ವಿಭಾಗ 1 (ಭಾಷೆಗಳು), ಎರಡು ಆಯ್ಕೆ ಮಾಡಿದ ಡೊಮೇನ್ ವಿಷಯಗಳು ಮತ್ತು ಸಾಮಾನ್ಯ ಪರೀಕ್ಷೆ ಬರೆಯಬೇಕು. ಎರಡನೇ ಶಿಫ್ಟ್‌ನಲ್ಲಿ, ಅವರು ಇತರ ನಾಲ್ಕು ಡೊಮೇನ್ ವಿಷಯಗಳಿಗೆ ಮತ್ತು ಹೆಚ್ಚುವರಿ ಭಾಷಾ ಪರೀಕ್ಷೆಯನ್ನು ಆಯ್ಕೆ ಮಾಡಿಕೊಂಡವರು ಬರೆಯಲಿದ್ದಾರೆ.

ಅಂತರರಾಷ್ಟ್ರೀಯ ವಿದ್ಯಾರ್ಥಿಗಳಿಗೆ CUET ನಿಂದ ವಿನಾಯಿತಿ ನೀಡಲಾಗಿದೆ. ಅವರ ಪ್ರವೇಶಗಳನ್ನು ಅಸ್ತಿತ್ವದಲ್ಲಿರುವ ಸೂಪರ್‌ನ್ಯೂಮರರಿ (supernumerary) ಆಧಾರದ ಮೇಲೆ ಕೈಗೊಳ್ಳಲಾಗುತ್ತದೆ.

Latest Videos
Follow Us:
Download App:
  • android
  • ios