ಓದಿ ಓದಿಯೇ ಅಜ್ಜ ಆಗ್ಬಿಡ್ತೀನಿ ಎಂದು ಪುಟ್ಟ ಬಾಲಕನ ಅಳು: ವಿಡಿಯೋ ವೈರಲ್

ಹೋಮ್ ವರ್ಕ್ ಮಾಡುವುದಕ್ಕೆ ಯಾರಿಗೆ ತಾನೇ ಇಷ್ಟ ಇದೆ ಹೇಳಿ. ಹೊರಗಡೆ ಬಯಲಿನಲ್ಲಿ ಸ್ನೇಹಿತರ ಜೊತೆ ಆಡುವುದರಲ್ಲಿ ಸಿಗುವ ಖುಷಿ ಹೋಮ್‌ವರ್ಕ್‌ನಲ್ಲಿ ಸಿಗುವುದಿಲ್ಲ. ಆದರೆ ಅಪ್ಪ ಅಮ್ಮ ಟೀಚರ್‌ಗಳು ಮಕ್ಕಳ ಮಾತು ಎಲ್ಲಿ ಕೇಳ್ತಾರೆ ಅಲ್ವಾ ಇದೇ ಕಾರಣಕ್ಕೆ ಇಲ್ಲೊಬ್ಬ ಪುಟ್ಟ ಬಾಲಕ ಅಮ್ಮನೊಂದಿಗೆ ಕಿತ್ತಾಡುತ್ತಿದ್ದಾನೆ

Little boy not liking to do home work crying with mom video goes viral akb

ಹೋಮ್ ವರ್ಕ್ ಮಾಡುವುದಕ್ಕೆ ಯಾರಿಗೆ ತಾನೇ ಇಷ್ಟ ಇದೆ ಹೇಳಿ. ಹೊರಗಡೆ ಬಯಲಿನಲ್ಲಿ ಸ್ನೇಹಿತರ ಜೊತೆ ಆಡುವುದರಲ್ಲಿ ಸಿಗುವ ಖುಷಿ ಹೋಮ್‌ವರ್ಕ್‌ನಲ್ಲಿ ಸಿಗುವುದಿಲ್ಲ. ಆದರೆ ಅಪ್ಪ ಅಮ್ಮ ಟೀಚರ್‌ಗಳು ಮಕ್ಕಳ ಮಾತು ಎಲ್ಲಿ ಕೇಳ್ತಾರೆ ಅಲ್ವಾ ಇದೇ ಕಾರಣಕ್ಕೆ ಇಲ್ಲೊಬ್ಬ ಪುಟ್ಟ ಬಾಲಕ ಅಮ್ಮನೊಂದಿಗೆ ಕಿತ್ತಾಡುತ್ತಿದ್ದಾನೆ. ಹೀಗಾದ್ರೆ ನಾನು ಹೋಮ್ ವರ್ಕ್ ಮಾಡ್ತಾ ಮಾಡ್ತಾನೆ ಅಜ್ಜ ಆಗ್ಬಿಡ್ತೀನಿ ಅಂತ ಗೋಳಾಡ್ತಿದ್ದಾನೆ. ಬಾಲಕನ ಈ ಸಂಕಟದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇತ್ತೀಚೆಗೆ ಮಕ್ಕಳ ಕೈಯಲ್ಲಿ ಹೋಮ್‌ವರ್ಕ್(Home work) ಮಾಡಿಸುವುದು ಪೋಷಕರಿಗೆ ದೊಡ್ಡ ತಲೆನೋವಿನ ವಿಚಾರವಾಗಿದೆ. ಹೋಮ್‌ವರ್ಕ್ ಮಾಡುವ ವೇಳೆ ಮಕ್ಕಳು ತಾಯಂದಿರೊಂದಿಗೆ, ಶಾಲೆಯಲ್ಲಿ ಶಿಕ್ಷಕಿಯರೊಂದಿಗೆ ಅತ್ತು ಕರೆದು ಗೋಳಾಡುವುದು ಸಾಮಾನ್ಯವಾಗಿದೆ. ಪುಟ್ಟ ಮಕ್ಕಳು ಹೋಮ್‌ವರ್ಕ್ ಮಾಡಲು ಇಷ್ಟಪಡದೇ ಜಗಳ ಮಾಡುವ ವಿಡಿಯೋಗಳು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ (Viral )ಆಗುತ್ತಿವೆ. ಕೆಲ ದಿನಗಳ ಹಿಂದಷ್ಟೇ ಶಾಲೆಯಲ್ಲಿ ತಂಟೆ ಮಾಡಿ ಬಳಿಕ ಟೀಚರ್ ಬಳಿ ಮುದ್ದು ಮುದ್ದಾಗಿ ಕ್ಷಮೆ ಕೇಳಿ ಮುತ್ತು ನೀಡಿದ ಪುಟ್ಟ ಬಾಲಕನ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಅದೇ ರೀತಿ ಈಗ ಪುಟ್ಟ ಬಾಲಕ ಹೋಮ್ ವರ್ಕ್ ಮಾಡಿಸುತ್ತಿರುವ ತಾಯಿಯ ಬಳಿ ಅತ್ತು ಕರೆದು ಗೋಳಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ.

ಕಬಡ್ಡಿ ಕಬಡ್ಡಿ ಕಬಡ್ಡಿ... ಈ ಪುಟ್ಟ ಪೋರನ ರೋಚಕ ಆಟ ನೋಡಿ

ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ (Twitter) ಗುಲ್ಜರ್ ಸಾಹಬ್ (@Gulzar_sahab) ಎಂಬುವವರು ಪೋಸ್ಟ್ ಮಾಡಿದ್ದಾರೆ. ವಿಡಿಯೋದಲ್ಲಿ ಕಾಣಿಸುವಂತೆ ಪುಟಾಣಿಯೊಬ್ಬ ಹೋಮ್ ವರ್ಕ್ ಮಾಡಲು ಮನಸ್ಸೊಪ್ಪದೇ ಜೋರಾಗಿ ಅಳುತ್ತಾ ನೌಟಂಕಿ ಮಾಡ್ತಿದ್ದಾನೆ. ಆದರೆ ಅಮ್ಮ ಬಿಡಬೇಕಲ್ಲ? ಮಕ್ಕಳನ್ನು ಹೇಗೆ ಬಗ್ಗಿಸಬೇಕು ಎಂಬುದು ಅಮ್ಮನಿಗೆ ಚೆನ್ನಾಗಿ ತಿಳಿದಿದೆ. ಹಾಗೆಯೇ ಇಲ್ಲಿ ಬಾಲಕ ಅತ್ತರೂ ಕರಗದ ಅಮ್ಮ ಹೋಮ್‌ವರ್ಕ್ ಮಾಡಿಸ್ತಿದ್ದಾಳೆ. ಹಿಂದಿ (Hindi) ಭಾಷೆಯ ಹೋಮ್‌ವರ್ಕ್‌ ಮಾಡುವಂತೆ ತಾಯಿ ಮಗನಿಗೆ ಹೇಳಿದ್ದಾಳೆ. ಇದಕ್ಕೆ ಬಾಲಕನಿಗೆ ಸಿಟ್ಟು ಹಾಗೂ ಅಳು ಒಟ್ಟೊಟ್ಟಿಗೆ ಬರುತ್ತಿದ್ದು, ಹೀಗಾದರೆ ನಾನು ಓದಿ ಓದಿಯೇ ಅಜ್ಜ ಆಗಿ ಬಿಡುವೆ ಎಂದು ಬಾಲಕ ಹೇಳ್ತಾನೆ. ಬಾಲಕನ ಈ ಅನಿರೀಕ್ಷಿತ ಉತ್ತರಕ್ಕೆ ಒಂದು ಕ್ಷಣ ದಂಗಾದ ತಾಯಿ ಮತ್ತೆ ಸವರಿಸಿಕೊಂಡು, 'ಅಜ್ಜ ಆದ್ರೆ ಏನು? ಆಗಲಿ ಬಿಡು,  ಓದಿ ಓದಿಯೇ ಅಜ್ಜ ಆಗು, ಓದದೆ ಅನಕ್ಷರಸ್ಥನಾಗಿ ಅಜ್ಜ ಏಕೆ ಆಗಬೇಕು ಎಂದು ಬಾಲಕನಿಗೆ ತಾಯಿ ಸ್ಮಾರ್ಟ್ ಆಗಿ ಉತ್ತರಿಸಿದ್ದಾಳೆ. 

 

ಈ ವಿಡಿಯೋವನ್ನು ಸೆಪ್ಟೆಂಬರ್ 28 ರಂದು ಯುಟ್ಯೂಬ್‌ನಲ್ಲಿ(Youtube) ಪೋಸ್ಟ್ ಮಾಡಲಾಗಿದ್ದು, ನಾಲ್ಕು ಲಕ್ಷಕ್ಕೂ ಅಧಿಕ ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ಅಲ್ಲದೇ ಮೂರು ಸಾವಿರಕ್ಕೂ ಅಧಿಕ ಮಂದಿ ಈ ವಿಡಿಯೋವನ್ನು ರಿಟ್ವಿಟ್ ಮಾಡಿದ್ದಾರೆ. ಅನೇಕರು ಈ ವಿಡಿಯೋಗೆ ಇದು ನಮ್ಮ ಮನೆಗೂ ಸಂಬಂಧಿಸಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಅಧ್ಯಯನ (Study)ಮಾಡುವ ವೇಳೆ ಮಗು ಅಳುವುದನ್ನು ನೋಡುವುದಕ್ಕೆ ಬೇಸರವಾಗುತ್ತಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಅಲ್ಲದೇ ಮಕ್ಕಳಿಗೆ ಖುಷಿ ನೀಡುವ ಬೇರೆ ಬೇರೆ ವಿಧಾನದ ಮೂಲಕ ಶಿಕ್ಷಣ ನೀಡುವಂತೆ ಅನೇಕರು ಸಲಹೆ ನೀಡಿದ್ದಾರೆ.

ಕುಡಿತಕ್ಕೆ ದಾಸನಾದ ಅಪ್ಪ: ಪೊಲೀಸ್‌ ಠಾಣೆ ಮೆಟ್ಟಿಲೇರಿದ 7 ವರ್ಷದ ಮಗ

ಇತ್ತೀಚಿನ ದಿನಗಳಲ್ಲಿ ತಮ್ಮ ಮಕ್ಕಳಿಗೆ ಪಾಠ ಹೇಳಿ ಕೊಡುವುದೇ ಪೋಷಕರಿಗೆ (Parents) ದೊಡ್ಡ ಸವಾಲಾಗಿದೆ. ಶಾಲೆಯಲ್ಲಿ ಶಿಕ್ಷಕರು ಅಷ್ಟೇ ಸಣ್ಣ ಮಕ್ಕಳ ವರ್ತನೆಗೆ ತಾಳ್ಮೆಗೆಡುವ ಸ್ಥಿತಿ ತಲುಪುತ್ತಾರೆ. ದುಡ್ಡಿರುವ ಪೋಷಕರು ಮಕ್ಕಳನ್ನು ಟ್ಯೂಷನ್‌ ಕ್ಲಾಸ್‌ಗೆ ಕಳುಹಿಸಿ ಕೈ ತೊಳೆದುಕೊಂಡು ಬಿಡುತ್ತಾರೆ. ದುಡ್ಡು ಕೊಟ್ಟರೆ ತಲೆನೋವು ತಪ್ಪುತ್ತದೆ ಎಂದು ನಿಟ್ಟುಸಿರು ಬಿಡುತ್ತಾರೆ. ಆದರೆ ಮನೆಯಲ್ಲೇ ತಾವೇ ಪಾಠ ಹೇಳಿ ಕೊಡುವ ಪೋಷಕರು ಮಕ್ಕಳ ಈ ನೌಟಂಕಿ ಆಟಕ್ಕೆ ಬೇಸತ್ತು ಹೋಗುತ್ತಾರೆ. ಇದು ಕೆಲ ಪೋಷಕರನ್ನು ಖಿನ್ನತೆಗೂ ದೂಡುತ್ತಿದೆ. ಇದು ಪೋಷಕರೇ ಹೇಳುವ ಮಾತು. ಹೋಮ್‌ ವರ್ಕ್‌ ಮಾಡಲು ಹಠ ಮಾಡುವ ಮಕ್ಕಳು, ಅತ್ತು ಕರೆದು ಗೋಳಾಡುತ್ತಾರೆ. ಜೊತೆಗೆ ಪೋಷಕರನ್ನು ಕೂಡ ನಿಂದಿಸುತ್ತಾರೆ.

ಬಹುಶ: ಇದು ಪ್ರತಿಯೊಂದು ಪುಟ್ಟ ಮಕ್ಕಳಿರುವ ಮನೆಯ ವಾಸ್ತವ ಸ್ಥಿತಿಯಾಗಿದೆ. ಪೋಷಕರು ಕೂಡ ಪುಟ್ಟ ಮಕ್ಕಳನ್ನು ನಿಭಾಯಿಸುವಲ್ಲಿ ಮಾರ್ಗ ತೋರದಾಗುತ್ತಿದ್ದಾರೆ. ಉತ್ತಮ ಪೋಷಕರು ಆಗಬೇಕೆಂದು ಪ್ರತಿಯೊಬ್ಬ ತಂದೆ ತಾಯಿಯ ಬಯಕೆ. ಅಲ್ಲದೇ ತನ್ನ ಮಕ್ಕಳು ತನಗಿಂತ ಉತ್ತಮರಾಗಬೇಕು ಉತ್ತಮ ಸಾಧನೆ ತೋರಬೇಕು ಎಂದು ಎಲ್ಲಾ ಪೋಷಕರು ಬಯಸುತ್ತಾರೆ. ಇದೇ ಒತ್ತಡವೂ ಮಗುವಿನ ಮೇಲೆ ತೀವ್ರ ಪರಿಣಾಮ ಬೀರಿ ಹಠಮಾರಿಗಳಾಗುತ್ತಿದ್ದಾರೆ. 
 

Latest Videos
Follow Us:
Download App:
  • android
  • ios