ಭಾರತದಲ್ಲಿ 40ಕ್ಕೂ ಹೆಚ್ಚು ವೈದ್ಯಕೀಯ ಕಾಲೇಜುಗಳಿವೆ, ಅವುಗಳಲ್ಲಿ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಿವೆ. NEET, INI CET ಪ್ರಮುಖ ಪ್ರವೇಶ ಪರೀಕ್ಷೆಗಳು. AIIMS ದೆಹಲಿ, CMC ವೆಲ್ಲೂರು, ನಿಮ್ಹಾನ್ಸ್ ಬೆಂಗಳೂರು ಟಾಪ್ ಕಾಲೇಜುಗಳಲ್ಲಿ ಸೇರಿವೆ. ವೈದ್ಯಕೀಯ ಪದವಿಗಳಾದ MBBS, MD, MSಗೆ ಹೆಚ್ಚಿನ ಬೇಡಿಕೆಯಿದೆ. NEET UG 2025 ಮೇ 4 ರಂದು ಮತ್ತು NEET PG 2025 ಜೂನ್ 15 ರಂದು ನಡೆಯಲಿದೆ. ಪದವಿಪೂರ್ವ ಕೋರ್ಸ್‌ಗಳು 4-5 ವರ್ಷಗಳು ಮತ್ತು ಸ್ನಾತಕೋತ್ತರ ಕೋರ್ಸ್‌ಗಳು 3 ವರ್ಷಗಳ ಅವಧಿಯನ್ನು ಹೊಂದಿರುತ್ತವೆ.
ಭಾರತದಲ್ಲಿ ಸುಮಾರು 40ಕ್ಕೂ ಹೆಚ್ಚು ಉನ್ನತ ವೈದ್ಯಕೀಯ ಕಾಲೇಜುಗಳಿವೆ. ಇವುಗಳಲ್ಲಿ 31 ಕಾಲೇಜುಗಳು ಸರ್ಕಾರಿ ಸಂಸ್ಥೆಗಳ ಒಡೆತನದಲ್ಲಿವೆ ಮತ್ತು 15 ಕಾಲೇಜುಗಳು ಖಾಸಗಿ ಒಡೆತನದಲ್ಲಿವೆ. ಭಾರತದ ಟಾಪ್ 10 ವೈದ್ಯಕೀಯ ಕಾಲೇಜುಗಳಿಗೆ ಪ್ರವೇಶ ಪಡೆಯಲು NEET ಅತ್ಯುತ್ತಮ ಪ್ರವೇಶ ಪರೀಕ್ಷೆಯಾಗಿದೆ, ಇದಲ್ಲದೆ INI CET, KEAM ಕೂಡ ಪರೀಕ್ಷೆ ಬರೆದು ಕೂಡ ಸೀಟು ಗಿಟ್ಟಿಸಿಕೊಳ್ಳಬಹುದು. CMC, MS ರಾಮಯ್ಯ ವೈದ್ಯಕೀಯ ಕಾಲೇಜು, ಸರ್ಕಾರಿ ವೈದ್ಯಕೀಯ ಕಾಲೇಜು, ವೈದ್ಯಕೀಯ ಕಾಲೇಜು ಮತ್ತು SMS ವೈದ್ಯಕೀಯ ಕಾಲೇಜುಗಳು ಭಾರತದ ಟಾಪ್ 5 ವೈದ್ಯಕೀಯ ಕಾಲೇಜುಗಳಾಗಿವೆ. MBBS ಮತ್ತು ವೈದ್ಯಕೀಯ ಶಿಕ್ಷಣಕ್ಕೆ ಹೆಸರುವಾಸಿಯಾದ ಭಾರತದ ಕೆಲವು ಉನ್ನತ ಶ್ರೇಣಿಯ ಸರ್ಕಾರಿ ವೈದ್ಯಕೀಯ ಕಾಲೇಜುಗಳ ಬಗ್ಗೆ ಇಲ್ಲಿ ತಿಳಿದುಕೊಳ್ಳೋಣ
ಎಂಡಿ, ಎಂಎಸ್ ಮತ್ತು ಪಿಜಿ ಡಿಪ್ಲೊಮಾ ಕೋರ್ಸ್‌ಗಳಿಗೆ ಪ್ರವೇಶಕ್ಕಾಗಿ ನೀಟ್ ಪಿಜಿ 2025 ನೋಂದಣಿ ಏಪ್ರಿಲ್ 2025 ರ ಕೊನೆಯ ವಾರದಲ್ಲಿ ಪ್ರಾರಂಭವಾಗುವ ನಿರೀಕ್ಷೆಯಿದೆ. ಇದಲ್ಲದೆ ನೀಟ್ ಪಿಜಿ 2025 ಪರೀಕ್ಷೆಯು ಜೂನ್ 15, 2025 ರಂದು ನಡೆಯಲಿದೆ . MBBS ಮತ್ತು BDS ಕೋರ್ಸ್‌ಗಳಿಗೆ ಪ್ರವೇಶಕ್ಕಾಗಿ NEET UG 2025 ಪರೀಕ್ಷೆಯನ್ನು ಮೇ 4, 2025 ರಂದು ನಡೆಸಲಾಗುವುದು.
ಲಿಖಿತ ರೂಪದಲ್ಲಿಯೇ ನೀಟ್, ಯುಜಿಸಿ ಪರೀಕ್ಷೆ ಮುಂದುವರಿಕೆ
MBBS , BDS , BAMS , BUMS , ಮತ್ತು BSc (ಆನರ್ಸ್) ನರ್ಸಿಂಗ್‌ನಂತಹ ಪದವಿಪೂರ್ವ ವೈದ್ಯಕೀಯ ಕೋರ್ಸ್‌ಗಳಿಗೆ , NEET UG ಅಂಕವನ್ನು ಪರಿಗಣಿಸಲಾಗುತ್ತದೆ. ಫಾರ್ಮಸಿಯಂತಹ ಇತರ ವಿಶೇಷ ಕೋರ್ಸ್‌ಗಳಿಗೆ AP NEET , SAAT ಇತ್ಯಾದಿ ಪ್ರವೇಶ ಪರೀಕ್ಷೆಗಳನ್ನು ನಡೆಸಿ ಆಯ್ಕೆ ಮಾಡಲಾಗುತ್ತದೆ. ಭಾರತದ ಹೆಚ್ಚಿನ ಟಾಪ್ 100 ವೈದ್ಯಕೀಯ ಕಾಲೇಜುಗಳು ದೆಹಲಿ/NCR, ತಮಿಳುನಾಡು, ಕರ್ನಾಟಕ, ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶದಲ್ಲಿವೆ. ಪದವಿಪೂರ್ವ ವೈದ್ಯಕೀಯ ಕೋರ್ಸ್‌ಗಳ ಅವಧಿ ನಾಲ್ಕರಿಂದ ಐದು ವರ್ಷಗಳವರೆಗೆ ಇರುತ್ತದೆ, ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳ ಅವಧಿ ಮೂರು ವರ್ಷಗಳಾಗಿರುತ್ತದೆ.
ನೀಟ್ - ಯುಜಿ ಪರೀಕ್ಷೆ ಸುಧಾರಣೆಗೆ ತಜ್ಞರ ಸಮಿತಿ ಶಿಫಾರಸು ಜಾರಿ: ಕೇಂದ್ರ ಸರ್ಕಾರ
ಪ್ರತೀ ವರ್ಷ ಹಲವು ಮಾನದಂಡಗಳ ಆಧಾರದಲ್ಲಿ ಭಾರತದ ಟಾಪ್ 10 ಉನ್ನತ ವೈದ್ಯಕೀಯ ಕಾಲೇಜುಗಳನ್ನು ಪಟ್ಟಿ ಮಾಡಲಾಗುತ್ತದೆ.NIRF ಶ್ರೇಯಾಂಕ 2024ರ ಪ್ರಕಾರ ಟಾಪ್ 10 ಕಾಲೇಜುಗಳ ಪಟ್ಟಿ ಇಲ್ಲಿ ನೀಡಲಾಗಿದೆ.
1.ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (AIIMS) ದೆಹಲಿ
2.ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ, (PGIMER) ಚಂಡೀಗಢ
3.ಕ್ರಿಶ್ಚಿಯನ್ ವೈದ್ಯಕೀಯ ಕಾಲೇಜು, (ಸಿಎಮ್‌ಸಿ) ವೆಲ್ಲೂರು
4.ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ, (ನಿಮ್ಹಾನ್ಸ್) ಬೆಂಗಳೂರು
5.ಜವಾಹರಲಾಲ್ ಇನ್ಸ್ಟಿಟ್ಯೂಟ್ ಆಫ್ ಪೋಸ್ಟ್ ಗ್ರಾಜುಯೇಟ್ ಮೆಡಿಕಲ್ ಎಜುಕೇಶನ್ ಅಂಡ್ ರಿಸರ್ಚ್, (JIPMER) ಪುದುಚೇರಿ
6.ಸಂಜಯ್ ಗಾಂಧಿ ಸ್ನಾತಕೋತ್ತರ ವೈದ್ಯಕೀಯ ವಿಜ್ಞಾನ ಸಂಸ್ಥೆ, (SGPGIMS) ಲಕ್ನೋ
7.ಬನಾರಸ್ ಹಿಂದೂ ವಿಶ್ವವಿದ್ಯಾಲಯ
8.ಅಮೃತ ವಿಶ್ವ ವಿದ್ಯಾಪೀಠಂ, (ಅಮೃತ ವಿಶ್ವವಿದ್ಯಾಲಯ) ಕೊಯಮತ್ತೂರು
9.ಕಸ್ತೂರ್ಬಾ ವೈದ್ಯಕೀಯ ಕಾಲೇಜು, (ಕೆಎಂಸಿ) ಮಣಿಪಾಲ, ಉಡುಪಿ
10.ಮದ್ರಾಸ್ ವೈದ್ಯಕೀಯ ಕಾಲೇಜು ಮತ್ತು ಸರ್ಕಾರಿ ಜನರಲ್ ಆಸ್ಪತ್ರೆ ಚೆನ್ನೈ
ಭಾರತದಲ್ಲಿ ವೈದ್ಯಕೀಯ ಶಿಕ್ಷಣವನ್ನು ಪ್ರಾಥಮಿಕವಾಗಿ ಪದವಿಪೂರ್ವ ಮತ್ತು ಸ್ನಾತಕೋತ್ತರ ಪದವಿಗಳ ಮೂಲಕ ನೀಡಲಾಗುತ್ತದೆ. ಜನಪ್ರಿಯತೆ ಮತ್ತು ಮನ್ನಣೆಯ ಆಧಾರದ ಮೇಲೆ, ಭಾರತದಲ್ಲಿನ ಅಗ್ರ ಐದು ವೈದ್ಯಕೀಯ ಪದವಿಗಳೆಂದರೆ.
ವೈದ್ಯಕೀಯ ಪದವಿ, ಶಸ್ತ್ರಚಿಕಿತ್ಸೆ ಪದವಿ ( MBBS )
ಡಾಕ್ಟರ್ ಆಫ್ ಮೆಡಿಸಿನ್ ( MD )
ಮಾಸ್ಟರ್ ಆಫ್ ಸರ್ಜರಿ (MS)
ಡಾಕ್ಟರ್ ಆಫ್ ಮೆಡಿಸಿನ್ (DM)
ಮಾಸ್ಟರ್ ಆಫ್ ಚೈರರ್ಜಿಯೆ (MCh)
