ಲಿಖಿತ ರೂಪದಲ್ಲಿಯೇ ನೀಟ್, ಯುಜಿಸಿ ಪರೀಕ್ಷೆ ಮುಂದುವರಿಕೆ

ನೀಟ್ ಯುಜಿ ಪರೀಕ್ಷೆಯನ್ನು ಲಿಖಿತ ರೂಪ (ಒಎಂಆರ್)ದಲ್ಲಿ ನಡೆಸಲಾಗುತ್ತದೆ. ಪರೀಕ್ಷೆಯು ಒಂದೇ ದಿನ ಪಾಳಿಯ ಆಧಾರದಲ್ಲಿ ನಡೆಸಲಾಗುತ್ತದೆ ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಗುರುವಾರ ಹೇಳಿದೆ.

NEET UGC exams to continue in written form mrq

ನವದೆಹಲಿ: ವೈದ್ಯಕೀಯ ಪ್ರವೇಶ ಪರೀಕ್ಷೆಯಾದ ನೀಟ್- ಯುಜಿ ಪರೀಕ್ಷೆಯನ್ನು ಲಿಖಿತ ಪರೀಕ್ಷೆಕ್ರಮದಲ್ಲಿಯೇ ನಡೆಸಲಾಗುವುದು ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಹೇಳಿದೆ.

ನೀಟ್ ಯುಜಿ ಪರೀಕ್ಷೆಯನ್ನು ಆನ್‌ಲೈನ್‌ನಲ್ಲಿ ನಡೆಸಬೇಕೆ ಅಥವಾ ಲಿಖಿತ ಪರೀಕ್ಷೆಯಲ್ಲಿ ನಡೆಸಬೇಕೆ ಎಂಬುದರ ಕುರಿತು ಶಿಕ್ಷಣ ಮತ್ತು ಆರೋಗ್ಯ ಸಚಿವಾಲಯಗಳು ನಡೆಸಿದ ಸಭೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ. ರಾಷ್ಟ್ರೀಯ ವೈದ್ಯಕೀಯ ಆಯೋಗ ನಿರ್ಧರಿಸಿದಂತೆ ನೀಟ್ ಯುಜಿ ಪರೀಕ್ಷೆಯನ್ನು ಲಿಖಿತ ರೂಪ (ಒಎಂಆರ್)ದಲ್ಲಿ ನಡೆಸಲಾಗುತ್ತದೆ. ಪರೀಕ್ಷೆಯು ಒಂದೇ ದಿನ ಪಾಳಿಯ ಆಧಾರದಲ್ಲಿ ನಡೆಸಲಾಗುತ್ತದೆ ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಗುರುವಾರ ಹೇಳಿದೆ.

ನೀಟ್‌ಗಾಗಿ ಕಂಪ್ಯೂಟರ್ ಆಧಾರಿತ ಪರೀಕ್ಷಾ ಕ್ರಮವನ್ನು ಬದಲಿಸುವ ಕಲ್ಪನೆ ಇದೇ ಮೊದಲೇನಲ್ಲ. ಈ ಹಿಂದೆಯೇ ಹಲವುಬಾರಿ ಇದರಬಗ್ಗೆ ಚಿಂತನೆ ನಡೆದಿತ್ತು. ಕಳೆದ ವರ್ಷ ನೀಟ್ ಹಗರಣದ ಬಳಿಕ ಪರೀಕ್ಷಾ ಕ್ರಮದಲ್ಲಿ ಮುನ್ನೆಲೆಗೆ ಬಂದಿದೆ.

ಇದನ್ನೂ ಓದಿ: ಕೆಎಎಸ್ ಕನ್ನಡ ಮರುಪರೀಕ್ಷೆ ಬೇಡಿಕೆ ತಿರಸ್ಕರಿಸಿದ ಕೆಪಿಎಸ್‌ಸಿ?

Latest Videos
Follow Us:
Download App:
  • android
  • ios