Asianet Suvarna News Asianet Suvarna News

ಸಿಇಟಿ-2023 ದಾಖಲಾತಿ ಪರಿಶೀಲನೆಗೆ ಕೊನೇ ಅವಕಾಶ: ಜು.17ರಂದು ಅಂತಿಮ

ಸಿಇಟಿ ಬರೆದು ವೃತ್ತಿಪರ ಕೋರ್ಸುಗಳಿಗೆ 'ಎ' ಕಂಡಿಕೆಯಲ್ಲಿ ಸೀಟು ಬಯಸಿರುವ ಅಭ್ಯರ್ಥಿಗಳಿಗೆ ಜುಲೈ 17ರಂದು ದಾಖಲಾತಿ ಪರಿಶೀಲನೆಗೆ ಕೊನೆಯ ಅವಕಾಶ ನೀಡಲಾಗಿದೆ.

Last Chance for CET 2023 Enrollment Verification Final on 17th June sat
Author
First Published Jul 15, 2023, 8:57 PM IST

ಬೆಂಗಳೂರು (ಜು.15): ಇಂಜಿನಿಯರಿಂಗ್ ಸೇರಿದಂತೆ ಹಲವು ವೃತ್ತಿಪರ ಕೋರ್ಸುಗಳಿಗೆ ಪ್ರವೇಶ ಬಯಸಿ, 'ಎ' ಕಂಡಿಕೆಯಲ್ಲಿ ಸೀಟು ಬಯಸಿರುವ ಅಭ್ಯರ್ಥಿಗಳಿಗೆ ಕೊನೆಯದಾಗಿ ಜುಲೈ 17ರಂದು ಅಂತಿಮ ಅವಕಾಶ ನೀಡಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಶನಿವಾರ ತಿಳಿಸಿದೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್.ರಮ್ಯಾ, 'ಕಳೆದ 15 ದಿನಗಳಿಂದ ಅಭ್ಯರ್ಥಿಗಳ ವ್ಯಾಸಂಗ ಪ್ರಮಾಣಪತ್ರ ಮತ್ತಿತರ ದಾಖಲೆಗಳ ಪರಿಶೀಲನೆಯು ಬಿಇಒ ಕಚೇರಿಗಳಲ್ಲಿ ನಡೆದಿದ್ದು, ಇಂದು ಕೊನೆ ದಿನವಾಗಿತ್ತು. ಆದರೂ ಕೆಲವು ವಿದ್ಯಾರ್ಥಿಗಳು ಈ ಪ್ರಕ್ರಿಯೆ ಪೂರೈಸಿಲ್ಲ. ಆದ್ದರಿಂದ ಈಗ ಕೊನೆಯ ಅವಕಾಶವನ್ನು ಕೊಡಲಾಗುತ್ತಿದೆ. ವೃತ್ತಿಪರ ಕೋರ್ಸುಗಳಿಗೆ ಪ್ರವೇಶ ಪಡೆಯಲು ಇದು ಕಡ್ಡಾಯವಾಗಿದೆ' ಎಂದಿದ್ದಾರೆ.

ನೀಟ್‌ ಪಾಸಾದವರು ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ಜು.21 ಕೊನೆ ದಿನ: ಇಂದೇ ಅರ್ಜಿ ಸಲ್ಲಿಸಿ

ರಾಜ್ಯದಲ್ಲಿ ಸಿಇಟಿ ಪರೀಕ್ಷೆ ಬರೆದಿರುವ ಅಭ್ಯರ್ಥಿಗಳು ಇಂಜಿನಿಯರಿಂಗ್, ಆರ್ಕಿಟೆಕ್ಚರ್, ಯೋಗ ಮತ್ತು ನ್ಯಾಚುರೋಪಥಿ, ವೆಟರ್ನರಿ, ಕೃಷಿ ವಿಜ್ಞಾನ, ಬಿ.ಫಾರ್ಮ ಮತ್ತು ಡಿ.ಫಾರ್ಮ ಕೋರ್ಸುಗಳಿಗೆ ಈ ಪ್ರಕ್ರಿಯೆ ಅನ್ವಯಿಸುತ್ತದೆ ಎಂದು ಪ್ರಕಟಣೆ ತಿಳಿಸಿದೆ. ಈ ದಿನಾಂಕದೊಳಗೆ ಸಿಇಟಿ ಬರೆದ ಅಭ್ಯರ್ಥಿಗಳು ತಮ್ಮ ದಾಖಲಾತಿಗಳನ್ನು ಪರಿಶೀಲನೆ ಮಾಡಿಕೊಳ್ಳದಿದ್ದಲ್ಲಿ ಮುಂದಿನ ಆಗು-ಹೋಗುಗಳಿಗೆ ಪ್ರಾಧಿಕಾರ ಜವಾಬ್ದಾರಿ ಆಗಿರುವುದಿಲ್ಲ. ಇನ್ನು ಮುಂದಿನ ಪ್ರವೇಶಾತಿ ಪ್ರಕ್ರಿಯೆ ಆರಂಭವಾಗಲಿದೆ. 

ರಾಜ್ಯದಲ್ಲಿ 2022-23ನೇ ಸಾಲಿನಲ್ಲಿ ಪಿಯುಸಿ ವಿಜ್ಞಾನ ವಿಷಯದಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಹಾಗೂ ಇಂಜಿನಿಯರಿಂಗ್ ಪ್ರವೇಶಾತಿ ಸೇರ ಬಯಸುವ ವಿದ್ಯಾರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಪರೀಕ್ಷೆಯನ್ನು ನಡೆಸಿದೆ. ಇನ್ನು ಪರೀಕ್ಚೆಯ ಫಲಿತಾಂಶವನ್ನೂ ಬಿಡುಗಡೆ ಮಾಡಿದ್ದು, ವಿದ್ಯಾರ್ಥಿಗಳು ಪಡೆದ ರ್ಯಾಂಕಿಂಗ್‌ ಪಟ್ಟಿಯನ್ನೂ ಬಿಡುಗಡೆ ಮಾಡಲಾಗಿದೆ. ಈಗ ಕೆಲವು ವೃತ್ತಿಪರ ಕೋರ್ಸ್‌ಗಳಿಗೆ ಸರ್ಕಾರಿ ಕೋಟಾದಡಿ ಪ್ರತಿಷ್ಠಿತ ಕಾಲೇಜುಗಳಿಗೆ ಪ್ರವೇಶ ಪಡೆಯಲು ಅನುಕೂಲ ಆಗುವಂತೆ ದಾಖಲಾತಿ ಪರಿಶೀಲನೆ ಕಾರ್ಯವನ್ನು ಮಾಡಲಾಗುತ್ತಿದೆ. ಈಗ ಇಂಜಿನಿಯರಿಂಗ್‌ ಸೇರಬಯಸುವ ವಿದ್ಯಾರ್ಥಿಗಳಿಗೆ ಅನುಕೂಲ ಆಗುವಂತೆ ದಾಖಲಾತಿ ಪರಿಶೀಲನೆ ಕಾರ್ಯಕ್ಕೆ ಕೆಇಎ ಮುಮದಾಗಿದೆ.

ನೀಟ್‌ ಪಾಸಾದವರು ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ಜು.21 ಕೊನೆ ದಿನ: ಬೆಂಗಳೂರು (ಜು.15): ರಾಜ್ಯದಲ್ಲಿ ನೀಟ್ ಪರೀಕ್ಷೆಯಲ್ಲಿ ಪಾಸ್ ಆಗಿರುವ ಅಭ್ಯರ್ಥಿಗಳು ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಜು.21 ಕೊನೆಯ ದಿನಾಂಕವಾಗಿದೆ. ಕೂಡಲೇ ನೀಟ್‌ ಉತ್ತೀರ್ಣರಾದ ಅಭ್ಯರ್ಥುಗಳು ಇನ್ನು ಒಂದು ವಾರದೊಳಗೆ ಅರ್ಜಿ ಸಲ್ಲಿಕೆ ಮಾಡುವಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಸೂಚನೆ ನೀಡಲಾಗಿದೆ. ರಾಜ್ಯದಲ್ಲಿ ಆನ್ ಲೈನ್ ಅರ್ಜಿ ಸಲ್ಲಿಸಲು ಜುಲೈ 21 ಕೊನೆಯ ದಿನವಾಗಿದೆ. ನೀಟ್ ಪರೀಕ್ಷೆಯಲ್ಲಿ ಪಾಸ್ ಆಗಿರುವ ಅಭ್ಯರ್ಥಿಗಳು ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸೂಚನೆ ನೀಡಿದೆ. ವೈದ್ಯಕೀಯ, ದಂತ ವೈದ್ಯಕೀಯ, ಆರ್ಯುವೇದ, ಯುನಾನಿ , ಹೋಮಿಯೋಪತಿ ಕೋರ್ಸ್‌ ಗಳಿಗೆ ಸೇರುವ ವಿದ್ಯಾರ್ಥಿಗಳಿಗೆ ಈ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಅನ್ವಯ ಆಗಲಿದೆ. ನಿಗದಿತ ಶುಲ್ಕ ಪಾವತಿ ಮಾಡಲು ಜುಲೈ 22 ಕೊನೆಯ ದಿನವಾಗಿದೆ.

ಎಂಜಿನಿಯರಿಂಗ್‌ ಸೀಟು 10% ದುಬಾರಿ, ಇದು ಬಿಜೆಪಿ ಸರ್ಕಾರದಲ್ಲೇ ತೀರ್ಮಾನವಾಗಿತ್ತು: ಸಚಿವ ಡಾ.ಎಂ.ಸಿ.ಸುಧಾಕರ್‌ 

ಅರ್ಜಿ ಸಲ್ಲಿಕೆಗೆ ವೆಬ್‌ಸೈಟ್‌ ಲಿಂಕ್‌: ಇನ್ನು ನೀಟ್‌ ಪರೀಕ್ಷೆ ಪಾಸಾದ ಅಭ್ಯರ್ಥಿಗಳು ಅರ್ಜಿ ತುಂಬಲು ಕೆಇಎ ವೆಬ್ ಸೈಟ್ ಪ್ರಕಟಗೊಳಿಸಿದೆ. http://kea.kar.nic.in ನಲ್ಲಿ ಪ್ರಕಟಿಸಿರುವ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಿ ನಮೂದಿಸಬೇಕು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿವಾರ್ಹಕ ನಿರ್ದೇಶಕಿ ಎಸ್.ರಮ್ಯಾ ಮಾಹಿತಿ ನೀಡಿದ್ದಾರೆ.  ಇನ್ನು ಆನ್‌ಲೈನ್‌ನಲ್ಲಿ ಅರ್ಜಿ ಭರ್ತಿ ಮಾಡುವ ವಿಧಾನಗಳನ್ನು ಕೂಡ ನೀಡಲಾಗಿದೆ. ಅಗತ್ಯ ದಾಖಲೆಗಳು, ಪ್ರಮಾಣಪತ್ರಗಳನ್ನು ಇಟ್ಟುಕೊಂಡು ವಿದ್ಯಾರ್ಥಿಗಳೇ ಆನ್‌ಲೈನ್‌ನಲ್ಲಿ ಅರ್ಜಿ ಭರ್ತಿ ಮಾಡಬಹುದು.

Follow Us:
Download App:
  • android
  • ios