ನೀಟ್‌ ಪಾಸಾದವರು ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ಜು.21 ಕೊನೆ ದಿನ: ಇಂದೇ ಅರ್ಜಿ ಸಲ್ಲಿಸಿ

ರಾಜ್ಯದಲ್ಲಿ ನೀಟ್‌ ಉತ್ತೀರ್ಣರಾದ ಅಭ್ಯರ್ಥಿಗಳು ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶ ಪಡೆಯುವುದಕ್ಕೆ ಅರ್ಜಿ ಸಲ್ಲಿಸಲು ಜು.21 ಕೊನೆಯ ದಿನವಾಗಿದೆ.

NEET Passed students June 21 Last date for admission to medical courses Apply today sat

ಬೆಂಗಳೂರು (ಜು.15): ರಾಜ್ಯದಲ್ಲಿ ನೀಟ್ ಪರೀಕ್ಷೆಯಲ್ಲಿ ಪಾಸ್ ಆಗಿರುವ ಅಭ್ಯರ್ಥಿಗಳು ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಜು.21 ಕೊನೆಯ ದಿನಾಂಕವಾಗಿದೆ. ಕೂಡಲೇ ನೀಟ್‌ ಉತ್ತೀರ್ಣರಾದ ಅಭ್ಯರ್ಥುಗಳು ಇನ್ನು ಒಂದು ವಾರದೊಳಗೆ ಅರ್ಜಿ ಸಲ್ಲಿಕೆ ಮಾಡುವಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಸೂಚನೆ ನೀಡಲಾಗಿದೆ. 

ರಾಜ್ಯದಲ್ಲಿ ಆನ್ ಲೈನ್ ಅರ್ಜಿ ಸಲ್ಲಿಸಲು ಜುಲೈ 21 ಕೊನೆಯ ದಿನವಾಗಿದೆ. ನೀಟ್ ಪರೀಕ್ಷೆಯಲ್ಲಿ ಪಾಸ್ ಆಗಿರುವ ಅಭ್ಯರ್ಥಿಗಳು ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸೂಚನೆ ನೀಡಿದೆ. ವೈದ್ಯಕೀಯ, ದಂತ ವೈದ್ಯಕೀಯ, ಆರ್ಯುವೇದ, ಯುನಾನಿ , ಹೋಮಿಯೋಪತಿ ಕೋರ್ಸ್‌ ಗಳಿಗೆ ಸೇರುವ ವಿದ್ಯಾರ್ಥಿಗಳಿಗೆ ಈ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಅನ್ವಯ ಆಗಲಿದೆ. ನಿಗದಿತ ಶುಲ್ಕ ಪಾವತಿ ಮಾಡಲು ಜುಲೈ 22 ಕೊನೆಯ ದಿನವಾಗಿದೆ. 

ಜುಲೈ 18ರಿಂದ ಸಿಇಟಿ ದಾಖಲಾತಿ ಪರಿಶೀಲನೆ: ಈ ದಾಖಲೆ ತರುವುದು ಕಡ್ಡಾಯ

ಅರ್ಜಿ ಸಲ್ಲಿಕೆಗೆ ಇಲ್ಲಿದೆ ಲಿಂಕ್‌:  ಇನ್ನು ನೀಟ್‌ ಪರೀಕ್ಷೆ ಪಾಸಾದ ಅಭ್ಯರ್ಥಿಗಳು ಅರ್ಜಿ ತುಂಬಲು ಕೆಇಎ ವೆಬ್ ಸೈಟ್ ಪ್ರಕಟಗೊಳಿಸಿದೆ. http://kea.kar.nic.in ನಲ್ಲಿ ಪ್ರಕಟಿಸಿರುವ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಿ ನಮೂದಿಸಬೇಕು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿವಾರ್ಹಕ ನಿರ್ದೇಶಕಿ ಎಸ್.ರಮ್ಯಾ ಮಾಹಿತಿ ನೀಡಿದ್ದಾರೆ.  ಇನ್ನು ಆನ್‌ಲೈನ್‌ನಲ್ಲಿ ಅರ್ಜಿ ಭರ್ತಿ ಮಾಡುವ ವಿಧಾನಗಳನ್ನು ಕೂಡ ನೀಡಲಾಗಿದೆ. ಅಗತ್ಯ ದಾಖಲೆಗಳು, ಪ್ರಮಾಣಪತ್ರಗಳನ್ನು ಇಟ್ಟುಕೊಂಡು ವಿದ್ಯಾರ್ಥಿಗಳೇ ಆನ್‌ಲೈನ್‌ನಲ್ಲಿ ಅರ್ಜಿ ಭರ್ತಿ ಮಾಡಬಹುದು.

ಅರ್ಜಿ ಸಲ್ಲಿಕೆಗೆ ಬೇಕಾದ ದಾಖಲೆಗಳು:  UG NEET-2023 ಅಭ್ಯರ್ಥಿಗಳಿಗೆ ಆನ್‌ಲೈನ್ ಅಪ್ಲಿಕೇಶನ್ (ವೈದ್ಯಕೀಯ, ದಂತ ಆಯುಷ್) ಹಾಕುವಾಗ ಈ ದಾಖಲೆಗಳನ್ನು ಕಡ್ಡಾಯವಾಗಿ ತಮ್ಮ ಬಳಿ ಇಟ್ಟುಕೊಂಡಿರಬೇಕು. SSLC/10 ನೇ ಮಾರ್ಕ್ಸ್ ಕಾರ್ಡ್ - ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ನಮೂದಿಸಲು. 12ನೇ / 2 ನೇ ಪಿಯುಸಿ ಮಾರ್ಕ್ಸ್ ಕಾರ್ಡ್ - (ಹಿಂದಿನ ವರ್ಷದ ವಿದ್ಯಾರ್ಥಿಗಳ ಸಂದರ್ಭದಲ್ಲಿ). UGNEET-2023 ಅಂಕ ಪಟ್ಟಿ, ಆರ್‌ಡಿ ಸಂಖ್ಯೆ/ಜಾತಿ (ವರ್ಗ, ಆದಾಯ, ಕೆನೆರಹಿತ ಲೇಯರ್ ಪ್ರಮಾಣಪತ್ರ (ಎನ್‌ಸಿಎಲ್‌ಸಿ), ಹೈದ್ರಾಬಾದ್-ಕರ್ನಾಟಕ (ಎಚ್‌ಕೆ) ಪ್ರಮಾಣಪತ್ರಗಳನ್ನು ನಮೂದಿಸಲು ಎಲ್ಲಾ ಮೀಸಲಾತಿ ಪ್ರಮಾಣಪತ್ರಗಳು. ಜೊತೆಗೆ,
ಕರ್ನಾಟಕದಲ್ಲಿ ಅಧ್ಯಯನ ಮಾಡಿದ ವಿವರಗಳನ್ನು ಇಟ್ಟುಕೊಂಡಿರಬೇಕು. 

ಎಂಜಿನಿಯರಿಂಗ್‌ ಸೀಟು 10% ದುಬಾರಿ, ಇದು ಬಿಜೆಪಿ ಸರ್ಕಾರದಲ್ಲೇ ತೀರ್ಮಾನವಾಗಿತ್ತು: ಸಚಿವ ಡಾ.ಎಂ.ಸಿ.ಸುಧಾಕರ್‌

ಫೋಟೋಗಳ ಅಳತೆ ಎಷ್ಟಿರಬೇಕು:  ಅರ್ಜಿ ಅಪ್ಲೋಡ್‌ ಮಾಡುವಾಗ ಅಭ್ಯರ್ಥಿಗಳು ಜೆಪಿಜಿ (.jpg) ಸ್ವರೂಪದಲ್ಲಿ ಅಭ್ಯರ್ಥಿಯ ಇತ್ತೀಚಿನ ಪಾಸ್‌ಪೋರ್ಟ್ ಗಾತ್ರದ ಛಾಯಾಚಿತ್ರ (ಗರಿಷ್ಠ 50 KB ಗಾತ್ರ), ಅಭ್ಯರ್ಥಿಯ ಸಹಿ (ಗರಿಷ್ಠ 50 KB ಗಾತ್ರ) ಹಾಗೂ ಅಭ್ಯರ್ಥಿ ಎಡಗೈ ಹೆಬ್ಬೆರಳು (ಗರಿಷ್ಠ 50 KB ಗಾತ್ರ) ಮಸಿಗುರುತು ಅಪ್ಲೋಡ್‌ ಮಾಡಬೇಕು. 

Latest Videos
Follow Us:
Download App:
  • android
  • ios