ದಾವಣಗೆರೆ ವಿವಿಯಲ್ಲಿ 10 ನೇ ಘಟಿಕೋತ್ಸವದ ಸಂಭ್ರಮ, 5 ಸ್ವರ್ಣ ಪದಕ ಪಡೆದ ಕೂಲಿ ಕಾರ್ಮಿಕನ ಪುತ್ರಿ
ದಾವಣಗೆರೆ ವಿಶ್ವವಿದ್ಯಾನಿಲಯದ ತೋಳ ಹುಣಸೆ ಕ್ಯಾಂಪಸ್ ನಲ್ಲಿ 2021-22ನೇ ಸಾಲಿನ 10ನೇ ವಾರ್ಷಿಕ ಘಟಿಕೋತ್ಸವ ನಡೆಯಿತು. ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಸ್ನಾತಕ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಮಾಡಿದರು.
ವರದಿ: ವರದರಾಜ್ , ಏಷ್ಯಾನೆಟ್ ಸುವರ್ಣನ್ಯೂಸ್
ದಾವಣಗೆರೆ (ಫೆ.28): ದಾವಣಗೆರೆ ವಿಶ್ವವಿದ್ಯಾನಿಲಯದ ತೋಳ ಹುಣಸೆ ಕ್ಯಾಂಪಸ್ ನಲ್ಲಿ 2021-22ನೇ ಸಾಲಿನ 10ನೇ ವಾರ್ಷಿಕ ಘಟಿಕೋತ್ಸವ ನಡೆಯಿತು. ರಾಜ್ಯದ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅಧ್ಯಕ್ಷತೆ ವಹಿಸಿ ಸ್ನಾತಕ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಮಾಡಿದರು. ನವದೆಹಲಿಯ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯ ಅಧ್ಯಕ್ಷ ಪ್ರೊ.ಟಿ.ಜಿ.ಸೀತಾರಾಮ್ ಮುಖ್ಯ ಅತಿಥಿಗಳಾಗಿ ಘಟಿಕೋತ್ಸವ ಭಾಷಣ ಮಾಡಿದರು. 14 ಜನ ಸಂಶೋಧನಾ ವಿದ್ಯಾರ್ಥಿಗಳಿಗೆ ಡಾಕ್ಟರ್ ಆಫ್ ಫಿಲಾಸಫಿ (ಪಿ.ಹೆಚ್‌ಡಿ) ಪದವಿ ಪ್ರಧಾನ ಮಾಡಿದರು.
2021-22ನೇ ಸಾಲಿನಲ್ಲಿ ವಿವಿಧ ವಿಭಾಗಗಳಲ್ಲಿ ಸ್ನಾತಕ ಮತ್ತು ಸ್ನಾತಕೋತ್ತರ ಪದವಿಗಳು ಸೇರಿ ಒಟ್ಟು 13,978 ವಿದ್ಯಾರ್ಥಿಗಳು ಪದವಿ ಪಡೆಯಲು ಅರ್ಹರಾಗಿರುತ್ತಾರೆ. 2021-22 ನೇ ಸಾಲಿನಲ್ಲಿ ಒಟ್ಟು 81 ಸ್ವರ್ಣ ಪದಕಗಳು ಇದ್ದು, ಸ್ನಾತಕ ಪದವಿಯಲ್ಲಿ 14 ವಿದ್ಯಾರ್ಥಿಗಳು 22 ಸ್ವರ್ಣ ಪದಕಗಳನ್ನು ಪಡೆದರು. ಸ್ನಾತಕೋತ್ತರ ಪದವಿಯಲ್ಲಿ ಒಟ್ಟು 31 ವಿದ್ಯಾರ್ಥಿಗಳು 59 ಸ್ವರ್ಣ ಪದಕಗಳನ್ನು ಪಡೆದಿದ್ದಾರೆ. ಸ್ನಾತಕ ಮತ್ತು ಸ್ನಾತಕೋತ್ತರ ಪದವಿಗಳಲ್ಲಿ ಒಟ್ಟು 32 ಮಹಿಳಾ ವಿದ್ಯಾರ್ಥಿಗಳು ಹಾಗೂ 13 ಪುರುಷ ವಿದ್ಯಾರ್ಥಿಗಳು ಸೇರಿ ಒಟ್ಟು 45 ವಿದ್ಯಾರ್ಥಿಗಳು 81 ಚಿನ್ನದ ಪದಕಗಳನ್ನು ಹಂಚಿಕೊಂಡಿರುತ್ತಾರೆ. (ಎಂ.ಕಾಂ.,) ವಿಭಾಗದ ಹಾಲಮ್ಮ ಬಿ., ಸ್ನಾತಕೋತ್ತರ ಜೀವರಸಾಯನಶಾಸ್ತ್ರ ವಿಭಾಗದ ಕೆ. ಅರುಣ್ ಶರ್ಮ ವಿದ್ಯಾರ್ಥಿ ಯು ತಲಾ 5 ಸ್ವರ್ಣ ಪದಕಗಳನ್ನು ಪಡೆದಿರುತ್ತಾರೆ.
ಸ್ನಾತಕ ಬಿ.ಎ.,/ಬಿ.ಎಸ್.ಡಬ್ಲ್ಯೂ./ಬಿ.ವಿ.ಎ.. ಡಿಪ್ಲೋಮಾ ಅಂಡ್ ಮಲ್ಟಿಮೀಡಿಯಾ ಬಿ.ಎಸ್ಸಿ./ಬಿ.ಸಿ.ಎ./ಬಿ.ಕಾಂ./ಬಿ.ಬಿ.ಎ./ಬಿ.ಇಡಿ., ಹಾಗೂ ಬಿ.ಪಿ.ಇಡಿ., ಪದವಿಗಳಲ್ಲಿ 2021-22ನೇ ಸಾಲಿನಲ್ಲಿ 7,219 ಮಹಿಳಾ ಹಾಗೂ 4,960 ಪುರುಷ ವಿದ್ಯಾರ್ಥಿಗಳು ಸೇರಿ ಒಟ್ಟು 12,179 ವಿದ್ಯಾರ್ಥಿಗಳು ಪದವಿ ಪಡೆಯಲು ಅರ್ಹರಾಗಿರುತ್ತಾರೆ.
ಸ್ನಾತಕೋತ್ತರ ಪದವಿಗಳಾದ ಎಂ.ಎ., ಎಂ.ಎಸ್.ಡಬ್ಲ್ಯೂ/ಎಂ.ಎಸ್ಸಿ./ಎಂ.ಕಾಂ./ಎಂ.ಬಿ.ಎ./ಎಂ.ಇಡಿ../ ಎಂ.ಪಿ.ಇಡಿ., ಪದವಿಗಳಲ್ಲಿ 2021-22ನೇ ಸಾಲಿನಲ್ಲಿ 1,161 ಮಹಿಳಾ ವಿದ್ಯಾರ್ಥಿಗಳು ಹಾಗೂ 638 ಪುರುಷ ವಿದ್ಯಾರ್ಥಿಗಳು ಸೇರಿ ಒಟ್ಟು 1,799 ವಿದ್ಯಾರ್ಥಿಗಳು ಪದವಿ ಪಡೆಯಲು ಅರ್ಹರಾಗಿರುತ್ತಾರೆ. ಸ್ನಾತಕ ಮತ್ತು ಸ್ನಾತಕೋತ್ತರ ಪದವಿಗಳು ಸೇರಿ ಒಟ್ಟು 13,978 ವಿದ್ಯಾರ್ಥಿಗಳು ಪದವಿ ಪಡೆಯಲು ಅರ್ಹರಾಗಿರುತ್ತಾರೆ.
2021-22 ನೇ ಸಾಲಿನಲ್ಲಿ ಒಟ್ಟು 81 ಸ್ವರ್ಣ ಪದಕಗಳು ಇದ್ದು, ಸ್ನಾತಕ ಪದವಿಯಲ್ಲಿ 10 ಮಹಿಳಾ ಹಾಗೂ 04 ಪುರುಷ ವಿದ್ಯಾರ್ಥಿಗಳು ಸೇರಿ ಒಟ್ಟು 14 ವಿದ್ಯಾರ್ಥಿಗಳು 22 ಸ್ವರ್ಣ ಪದಕಗಳನ್ನು ಪಡೆದಿದ್ದಾರೆ.. ಸ್ನಾತಕೋತ್ತರ ಪದವಿಯಲ್ಲಿ 22 ಮಹಿಳಾ ಹಾಗೂ 09 ಪುರುಷ ವಿದ್ಯಾರ್ಥಿಗಳು ಸೇರಿ ಒಟ್ಟು 31 ವಿದ್ಯಾರ್ಥಿಗಳು 59 ಸ್ವರ್ಣ ಪದಕಗಳನ್ನು ಹಂಚಿಕೊಂಡಿದ್ದಾರೆ.
ಭಾರತ ವಿಶ್ವಗುರು ಸ್ಥಾನದಲ್ಲಿದೆ: ರಾಜ್ಯಪಾಲ ಥಾವರ್ ಚಂದ್ ಗೆಹ್ಲೊಟ್
ಸ್ನಾತಕ ಮತ್ತು ಸ್ನಾತಕೋತ್ತರ ಪದವಿಗಳಲ್ಲಿ ಒಟ್ಟು 32 ಮಹಿಳಾ ವಿದ್ಯಾರ್ಥಿನಿಯರು ಹಾಗೂ 13 ಪುರುಷ ವಿದ್ಯಾರ್ಥಿಗಳು ಸೇರಿ ಒಟ್ಟು 45 ವಿದ್ಯಾರ್ಥಿಗಳು 81 ಚಿನ್ನದ ಪದಕಗಳನ್ನು ಹಂಚಿಕೊಂಡಿರುತ್ತಾರೆ. ದಾವಣಗೆರೆ ವಿಶ್ವವಿದ್ಯಾನಿಲಯ, ಶಿವಗಂಗೋತ್ರಿ, ದಾವಣಗೆರೆ. 2021-2022ರಲ್ಲಿ ನಡೆದ ಪರೀಕ್ಷೆಗಳಲ್ಲಿ ಸ್ನಾತಕೋತ್ತರ ವಾಣಿಜ್ಯಶಾಸ್ತ್ರ (ಎಂ.ಕಾಂ.,) ವಿಭಾಗದ ಹಾಲಮ್ಮ ಬಿ. ಹಾಗು ಸ್ನಾತಕೋತ್ತರ ಜೀವರಸಾಯನಶಾಸ್ತ್ರ ವಿಭಾಗದ ಕೆ. ಅರುಣ್ ಶರ್ಮ ವಿದ್ಯಾರ್ಥಿ ತಲಾ 5 ಸ್ವರ್ಣ ಪದಕಗಳನ್ನು ಪಡೆದಿರುತ್ತಾರೆ. 2021-22ನೇ ಶೈಕ್ಷಣಿಕ ವರ್ಷದಲ್ಲಿ ಸ್ನಾತಕ ಪದವಿಯಲ್ಲಿ ಶೇಕಡ 73.22 ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಶೇಕಡ 96.82ರಷ್ಡು ಫಲಿತಾಂಶ ಬಂದಿದೆ.
18 ಚಿನ್ನದ ಪದಕ ಗೆದ್ದ ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿ: ವಿಟಿಯು ಇತಿಹಾಸದಲ್ಲೇ ಮೊದಲು!
ಕೂಲಿಕಾರ್ಮಿಕ ಮಗಳಿಗೆ ಐದು ಚಿನ್ನದ ಪದಕ:
ಹಾಲಮ್ಮ ಬಿ ಎಂ ಕಾಂ ವಿಭಾಗದಲ್ಲಿ ಐದು ಚಿನ್ನದ ಪದಕ ಪಡೆದಿರುವುದು ಇಡೀ ಕುಟುಂಬಕ್ಕೆ ಸಂತಸತಂದಿದೆ. ತಾಯಿ ಇಲ್ಲದೆ ಅಜ್ಜಿ ಆಸರೆಯಲ್ಲಿ ಬೆಳೆದ ಹಾಲಮ್ಮ ಬಿಸಿಎಂ ಹಾಸ್ಟಲ್ ನಲ್ಲಿದ್ದುಕೊಂಡು ಎಂ ಕಾ ವಿಭಾಗದಲ್ಲಿ ರ್ಯಾಂಕ್ ಗಳಿಸಿ ಐದು ಚಿನ್ನದ ಪದಕಗಳನ್ನು ಮಾಲೆಯನ್ನಾಗಿಸಿಕೊಂಡಿದ್ದಾರೆ. ತಂದೆ ಕೂಲಿಕಾರ್ಮಿಕರು ಅಜ್ಜಿ ಅಂಗನವಾಡಿ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು. 3 ನೇ ಕ್ಲಾಸ್ ನಲ್ಲಿ ತಾಯಿಯನ್ನು ಕಳೆದುಕೊಂಡು ಅಜ್ಜಿಯ ಆಶ್ರಯದಲ್ಲಿ ಬೆಳೆದ ಹಾಲಮ್ಮ ಬಡತನದಲ್ಲು ಅರಳಿದ ಪ್ರತಿಭೆಯಾಗಿದ್ದಾರೆ. ಯುಜಿಯಲ್ಲಿ 10 ನೇ ರ್ಯಾಂಕ್ ಕೈತಪ್ಪಿತ್ತು ಆದ್ರೆ ಪಿಜಿಯಲ್ಲಿ ಮೆರಿಟ್ ನಲ್ಲಿ ಆಯ್ಕೆಯಾಗಿ ಪ್ರಥಮ ರ್ಯಾಂಕ್ ಪಡೆದು ಐದು ಚಿನ್ನದ ಪದಕ ಪಡೆದಿದ್ದಾರೆ. ನೆಟ್ ಪರೀಕ್ಷೆ ಮುಗಿಸಿ ಪಿಹೆಚ್ ಡಿ ಪಡೆದು ಉಪನ್ಯಾಸಕಿ ಆಸೆಯನ್ನು ಹೊಂದಿರುವ ಹಾಲಮ್ಮ ನಿಜಕ್ಕು ಸಾಧನೆಗೆ ಬಡತನ ಸವಾಲ್ ಅಲ್ಲ ಎಂಬುದನ್ನು ಸಾಬೀತು ಮಾಡಿದ್ದಾರೆ.