Skill India ಕಿರ್ಲೊಸ್ಕರ್ ನಿರ್ವಹಣಾ ಸಂಸ್ಥೆಯೊಂದಿಗೆ ಕುವೆಂಪು ವಿವಿ ಶೈಕ್ಷಣಿಕೆ ಒಪ್ಪಂದ!

  • ಉದ್ಯಮ ಕೇಂದ್ರಿತ ಶಿಕ್ಷಣಕ್ಕೆ ಒತ್ತು, ಪ್ರೊ.ವೀರಭದ್ರಪ್ಪ 
  • ಜ್ಞಾನ, ಕೌಶಲ್ಯಗಳು , ಸ್ಪರ್ಧಾತ್ಮಕ ಉದ್ಯಮದ ಚಿಂತನೆಗೆ ಸಹಕಾರಿ
  •  ಕಲಿಕೆ ಮತ್ತು ಸಂಶೋಧನಾ ಚಟುವಟಿಕೆಗಳ ನೆರವು
Knowledge skills for competitive industry kuvempu university signed an agreement with Kirloskar Management Company karnataka ckm

ವರದಿ : ರಾಜೇಶ್ ಕಾಮತ್, ಶಿವಮೊಗ್ಗ

ಶಿವಮೊಗ್ಗ(ಮೇ.25):  ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಆಗಮಿಸಿ ಕುವೆಂಪು ವಿವಿಯಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರುವ ಯುವ ಸಮುದಾಯದಲ್ಲಿ ಜ್ಞಾನ, ಕೌಶಲ್ಯಗಳು ಹಾಗೂ ಇಂದಿನ ಸ್ಪರ್ಧಾತ್ಮಕ ಉದ್ಯಮದ ಚಿಂತನೆಗಳನ್ನು ಉದ್ದೀಪಿಸಿ ಉದ್ಯೋಗ ಜಗತ್ತಿಗೆ ನೀಡುವ ಗುರಿಯನ್ನು ಇರಿಸಿಕೊಂಡು ಕುವೆಂಪು ವಿವಿಯು ಹೊಸಹೊಸ ಒಡಂಬಡಿಕೆಗಳನ್ನು ಮಾಡಿಕೊಳ್ಳುತ್ತಿದೆ ಎಂದು ಕುವೆಂಪು ವಿವಿಯ ಕುಲಪತಿ ಪ್ರೊ. ಬಿ. ಪಿ. ವೀರಭದ್ರಪ್ಪ ಅಭಿಪ್ರಾಯಪಟ್ಟರು.

ಶಿವಮೊಗ್ಗ ಜಿಲ್ಲೆಯ ಶಂಕರಘಟ್ಟದಲ್ಲಿರುವ ಕುವೆಂಪು ವಿಶ್ವವಿದ್ಯಾಲಯದ ಹೊಸ ಸಿಂಡಿಕೇಟ್ ಸಭಾಂಗಣದಲ್ಲಿಂದು ಹರಿಹರದ ಕಿರ್ಲೊಸ್ಕರ್ ನಿರ್ವಹಣಾ ವಿಜ್ಞಾನ ಸಂಸ್ಥೆ ಮತ್ತು ಕುವೆಂಪು ವಿಶ್ವವಿದ್ಯಾಲಯದ ನಿರ್ವಹಣಾ ವಿಜ್ಞಾನ ವಿಭಾಗಗಳು ಮಾಡಿಕೊಂಡ ದ್ವಿಸದಸ್ಯ ಶೈಕ್ಷಣಿಕ- ಸಂಶೋಧನಾ ಒಪ್ಪಂದಕ್ಕೆ ಸಹಿ ಹಾಕುವ ಕಾರ್ಯಕ್ರಮ ಜರುಗಿತು. ಈ ಒಪ್ಪಂದವು ವಿದ್ಯಾರ್ಥಿ ಮತ್ತು ಶಿಕ್ಷಕರಲ್ಲಿ ಸಾಮರ್ಥ್ಯ ವೃದ್ಧಿ, ಬಹುಶಿಸ್ತೀಯ ಶಿಕ್ಷಣ ಚಟುವಟಿಕೆಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಸಹಕಾರಿಯಾಗಲಿದೆ. ಸಾಂಸ್ಕೃತಿಕ, ಸಾಹಿತ್ಯಿಕ ಶ್ರೀಮಂತಿಕೆಯುಳ್ಳ ರಾಜ್ಯದ ವಿಶ್ವವಿದ್ಯಾಲಯಗಳಲ್ಲಿನ ವಿನೂತನ ಕಲಿಕೆ ಮತ್ತು ಸಂಶೋಧನಾ ಚಟುವಟಿಕೆಗಳ ಮೂಲಕ ಅಂತಾರಾಷ್ಟ್ರೀಯ ಮಟ್ಟಕ್ಕೆ ತಲುಪಿಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಬೇಕಿದೆ ಎಂದು ಕುಲಪತಿ ಅಭಿಪ್ರಾಯಿಸಿದರು. 

ಜಗತ್ತಿನ ಶ್ರೇಷ್ಠ ವಿಜ್ಞಾನಿಗಳ ಪಟ್ಟಿಯಲ್ಲಿ ಕುವೆಂಪು ವಿವಿಯ ಇಬ್ಬರು

ಹರಿಹರದ ಕಿರ್ಲೊಸ್ಕರ್ ನಿರ್ವಹಣಾ ವಿಜ್ಞಾನ ಸಂಸ್ಥೆಯ ಆಡಳಿತಾಧಿಕಾರಿ ಡಾ. ಮಹೇಶ್ ರೇವಣ್‌ಕರ್ ಮಾತನಾಡಿ, ಎರಡೂ ಸಂಸ್ಥೆಗಳ ಮಟ್ಟದಲ್ಲಿ ವಿದ್ಯಾರ್ಥಿ-ಶಿಕ್ಷಕರ ಪರಸ್ಪರ ವಿನಿಮಯ, ಸಂಶೋಧನಾ ಚಟುವಟಿಕೆಗಳಲ್ಲಿನ ಸಹಕಾರ, ಉಭಯ ಸಂಸ್ಥೆಗಳಿಂದ ವಿಶೇಷ-ವಿಷಯಗಳ ಮೇಲೆ ಪದವಿಗಳ ಆರಂಭ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಕುವೆಂಪು ವಿವಿ ಮತ್ತು ಕಿರ್ಲೋಸ್ಕರ್ ಸಂಸ್ಥೆಗಳು ನಿರ್ಧರಿಸಿವೆ. ನಮ್ಮ ಸಂಸ್ಥೆಗಳ ನಡುವಿನ ಈ ಶೈಕ್ಷಣಿಕ ಸಂಶೋಧನಾ ಒಪ್ಪಂದ ಈ ನಿಟ್ಟಿನಲ್ಲಿ ಒಂದು ಆರಂಭ ಮಾತ್ರವಾಗಿದ್ದು, ಪ್ರತಿಭಾನ್ವಿತ, ಕೌಶಲ್ಯಪೂರ್ಣ ಮಾನವ ಸಂಪನ್ಮೂಲ ಸೃಷ್ಟಿಸುವ ಕಡೆಗೆ ಇದು ಮಹತ್ವದ ಹೆಜ್ಜೆಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ವಿವಿಯ ಕುಲಸಚಿವೆ ಅನುರಾಧ ಜಿ., ಕಿರ್ಲೊಸ್ಕರ್ ಸಂಸ್ಥೆಯ ನಿರ್ವಹಣಾ ವಿಭಾಗದ ಡೀನ್ ಡಾ. ನಾಗರಾಜ್ ಬೇವಿನಮರದ್, ವಿವಿಯ ನಿರ್ವಹಣಾ ವಿಜ್ಞಾನ ವಿಭಾಗದ ಅಧ್ಯಕ್ಷ ಪ್ರೊ. ರಮೇಶ್ ಹೆಚ್. ಎನ್., ಡಾ. ಯೋಗಿಶ್ ನಾಯ್ಕ್ ಸೇರಿದಂತೆ ಹಲವರು ಹಾಜರಿದ್ದರು.

ಉದ್ಯೋಗಿಗಳ  ಕ್ಷೇಮಾಭಿವೃದ್ಧಿಗೆ ಒಪ್ಪಂದ
ಟೊಯೊಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) ತನ್ನ ಉದ್ಯೋಗಿಗಳು, ಸಮಾಜ ಮತ್ತು ಕಂಪನಿಯ ಅಭಿವೃದ್ಧಿಗಾಗಿ ಶ್ರಮಿಸುವ ನಿಟ್ಟಿನಲ್ಲಿ ತನ್ನ ನಿರಂತರ ಪ್ರಯತ್ನಗಳಿಗೆ ಅನುಗುಣವಾಗಿ ಪರಸ್ಪರ ನಂಬಿಕೆ ಮತ್ತು ಎಲ್ಲರನ್ನೂ ಗೌರವಿಸುವ ತತ್ವದ ಆಧಾರದ ಮೇಲೆ ಧನಾತ್ಮಕ ಕೆಲಸದ ವಾತಾವರಣವನ್ನು ನಿರ್ಮಿಸಲು ಇತ್ತೀಚೆಗೆ ಒಪ್ಪಂದದ ಜ್ಞಾಪಕ ಪತ್ರಕ್ಕೆ (ಎಂಒಎಸ್) ಸಹಿ ಹಾಕಿದೆ.

ಕುವೆಂಪು ವಿವಿಗೆ ದೇಶದಲ್ಲಿ 83 ರಾಜ್ಯದಲ್ಲಿ 3ನೇ ಸ್ಥಾನ

2020-2022 ರ ಎರಡು ಆರ್ಥಿಕ ವರ್ಷಗಳ ಅವಧಿಯ ಬೇಡಿಕೆಯ ಚಾರ್ಟರ್ ಅನ್ನು ಪೂರೈಸುವ ಹೊಸ ಒಪ್ಪಂದಕ್ಕೆ ಕರ್ನಾಟಕ ಸರ್ಕಾರದ ಹೆಚ್ಚುವರಿ ಕಾರ್ಮಿಕ ಆಯುಕ್ತ ಡಾ. ಮಂಜುನಾಥ್ ಜಿ ಮತ್ತು ಟಿಕೆಎಂನ ಹಿರಿಯ ಆಡಳಿತ ಮಂಡಳಿ ಮತ್ತು ಟಿಕೆಎಂ-ಇಯುನ ಯೂನಿಯನ್ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ಸಹಿ ಹಾಕಲಾಯಿತು.

ಎಂಒಎಸ್ ಬಗ್ಗೆ ಮಾತನಾಡಿದ ಟಿಕೆಎಂನ ಹಿರಿಯ ಅಧಿಕಾರಿಯೊಬ್ಬರು, "ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ನಲ್ಲಿ, ನಾವು ಉದ್ಯೋಗಿಗಳ ಅಭಿವೃದ್ಧಿಗೆ ಅತ್ಯುನ್ನತ ಬದ್ಧತೆಯನ್ನು ಹೊಂದಿದ್ದೇವೆ ಮತ್ತು "ಪರಸ್ಪರ ನಂಬಿಕೆ ಮತ್ತು ಗೌರವ" ದ ತತ್ವದ ಆಧಾರದ ಮೇಲೆ ಆಕರ್ಷಕ ಕೆಲಸದ ಸ್ಥಳವನ್ನು ರಚಿಸುತ್ತೇವೆ. ಉದ್ಯೋಗಿಗಳು ನಮ್ಮ ಪಾಲುದಾರರು; ಆದ್ದರಿಂದ, ಬಲವಾದ ಕಂಪನಿಯನ್ನು ನಿರ್ಮಿಸುವಾಗ ಪ್ರತಿಯೊಬ್ಬ ಉದ್ಯೋಗಿಗೂ ಸಕಾರಾತ್ಮಕ ಚಿಂತನೆ ಮತ್ತು ಬೆಳವಣಿಗೆಯ ಅವಕಾಶಗಳನ್ನು ಸುಗಮಗೊಳಿಸುವ ಕಾರ್ಯಕ್ಷೇತ್ರವನ್ನು ಅಭಿವೃದ್ಧಿಪಡಿಸುವತ್ತ ನಮ್ಮ ಪ್ರಯತ್ನಗಳು ಇವೆ ಎಂದರು.

Latest Videos
Follow Us:
Download App:
  • android
  • ios