SSLC ಪಾಸ್‌ ಕಣ್ಣಿಗೆ ಕೂಲಿಂಗ್ ಗ್ಲಾಸ್: ತನಗೆ ತಾನೇ ಫ್ಲೆಕ್ಸ್ ಹಾಕಿಸಿ ಬಾಲಕನ ಬಿಂದಾಸ್ ಪೋಸ್‌

ಎಸ್‌ಎಸ್‌ಎಲ್‌ಸಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪೋಷಕರು, ಸಂಘ ಸಂಸ್ಥೆಗಳು, ಶಾಲಾ ಆಡಳಿತ ಮಂಡಳಿ ಊರಿನಲ್ಲಿ ಫ್ಲೆಕ್ಸ್‌ಗಳನ್ನು ನಿಲ್ಲಿಸಿ ಅವರ ಮುಂದಿನ ಭವಿಷ್ಯಕ್ಕೆ ಶುಭಾಶಯ ಕೋರುವುದನ್ನು ನೀವೆಲ್ಲಾ ನೋಡಿರಬಹುದು. ಆದರೆ ಇಲ್ಲೊಬ್ಬ ವಿದ್ಯಾರ್ಥಿ ತನಗೆ ತಾನೇ ಫ್ಲೆಕ್ಸ್ ಹಾಕಿಸಿ ಬಿಂದಾಸ್ ಪೋಸ್‌ ಕೊಟ್ಟಿದ್ದಾನೆ.

Kerala teen Jishnu installs flex board to congratulate himself on passing board exam akb

ಎಸ್ಎಸ್‌ಎಲ್‌ಸಿ ಎಂಬುದು ಎಲ್ಲರ ಬದುಕಿನ ಒಂದು ಪ್ರಮುಖ ಮೈಲುಗಲ್ಲು, ಇದು ನಾವು ಮುಂದೆ ಏನಾಗಬಹುದು ಎಂಬುದನ್ನು ನಿರ್ಧರಿಸುವ ಒಂದು ಘಟ್ಟವೂ ಹೌದು. ಹೀಗಾಗಿ ಎಸ್‌ಎಸ್ಎಲ್‌ಸಿ ಓದುತ್ತಿರುವ ಬಹುತೇಕರಿಗೆ ಹೆಚ್ಚು ಅಂಕ ಗಳಿಸುವಂತೆ ಸದಾ ಪೋಷಕರು ಒತ್ತಡ ಹೇರುತ್ತಲೇ ಇರುತ್ತಾರೆ. ಹಾಗೆಯೇ ಎಸ್‌ಎಸ್‌ಎಲ್‌ಸಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪೋಷಕರು, ಸಂಘ ಸಂಸ್ಥೆಗಳು, ಶಾಲಾ ಆಡಳಿತ ಮಂಡಳಿ ಊರಿನಲ್ಲಿ ಫ್ಲೆಕ್ಸ್‌ಗಳನ್ನು ನಿಲ್ಲಿಸಿ ಅವರ ಮುಂದಿನ ಭವಿಷ್ಯಕ್ಕೆ ಶುಭಾಶಯ ಕೋರುವುದನ್ನು ನೀವೆಲ್ಲಾ ನೋಡಿರಬಹುದು. ಆದರೆ ಇಲ್ಲೊಬ್ಬ ವಿದ್ಯಾರ್ಥಿ ತನಗೆ ತಾನೇ ಫ್ಲೆಕ್ಸ್ ಹಾಕಿಸಿ ಬಿಂದಾಸ್ ಪೋಸ್‌ ಕೊಟ್ಟಿದ್ದು ಈಗ ಈತನ ಫ್ಲೆಕ್ಸ್‌ ಎಲ್ಲರ ಗಮನ ಸೆಳೆದಿರುವುದಲ್ಲದೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೇರಳದ ಶಿಕ್ಷಣ ಸಚಿವರು ಕೂಡ ಈಗ ಈತನ ಫ್ಲೆಕ್ಸ್‌ಗೆ ಪ್ರತಿಕ್ರಿಯಿಸಿದ್ದಾರೆ. 


ಹೀಗೆ ಫ್ಲೆಕ್ಸ್‌ ಹಾಕಿ ಫೇಮಸ್ ಆದ ಬಾಲಕನ ಹೆಸರು ಜಿಷ್ಣು. ಪತ್ತನಂತಿಟ್ಟದ ನಿವಾಸಿಯಾಗಿರುವ ಈ ವಿದ್ಯಾರ್ಥಿಯ ಬಿಂದಾಸ್‌ ನಡೆ ಈಗ ಎಲ್ಲರ ಹುಬ್ಬೇರುವಂತೆ ಮಾಡಿದೆ. ಜಿಷ್ಣು ತನ್ನ ಈ ಎಸ್‌ಎಸ್‌ಎಲ್‌ಸಿಯ ಸಾಧನೆಯನ್ನು ಸ್ನೇಹಿತರು, ಸಂಬಂಧಿಕರು, ನೆರೆಹೊರೆಯವರು ಮತ್ತು ಎಲ್ಲರೂ ಗಮನಿಸುವಂತೆ ಮಾಡಿದ್ದಾರೆ. ತನ್ನ ಮನೆಯ ಹೊರಗೆ ಈತ ತನಗೆ ಶುಭಾಶಯ ಕೋರುವ ಫ್ಲೆಕ್ಸ್ ಅಳವಡಿಸಿದ್ದಾನೆ.

ಬಿಜೆಪಿ ಲೀಡರ್ ಬರ್ತಡೇಗೆ ಕಾಂಗ್ರೆಸ್ ಮುಖಂಡನ ಶುಭಾಶಯ ಫೆಕ್ಸ್, ಚರ್ಚೆಗೆ ಗ್ರಾಸ

ಇತಿಹಾಸವು ಕೆಲವು ಜನರಿಗೆ ದಾರಿ ಮಾಡಿಕೊಡುತ್ತದೆ ಎಂದು ಈತ ಫ್ಲೆಕ್ಸ್‌ನಲ್ಲಿ ಬರೆಸಿದ್ದಾನೆ. "2022 ರ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಭಾಗವಹಿಸಿದ್ದಕ್ಕಾಗಿ ನಾನು ನನ್ನನ್ನು ಅಭಿನಂದಿಸುತ್ತೇನೆ. ಕಥೆ ಈಗ ಪ್ರಾರಂಭವಾಗುತ್ತದೆ. ಕುಂಜಕ್ಕು ಆವೃತ್ತಿ 3.0" ಎಂದು ಆತ ಫ್ಲೆಕ್ಸ್‌ನಲ್ಲಿ ಬರೆದಿದ್ದಾನೆ. ಇದರೊಂದಿಗೆ ತಾನು ಕಪ್ಪು ಕೂಲಿಂಗ್ ಗ್ಲಾಸ್ ಹಾಕಿ ತೆಗೆಸಿರುವ ಫೋಟೋವೊಂದನ್ನು ಕೂಡ ಈ ಫ್ಲೆಕ್ಸ್‌ನಲ್ಲಿ ಚಿತ್ರಿಸಲಾಗಿದೆ. 

 

ಈ ಬಾಲಕನ ಫ್ಲೆಕ್ಸ್ ಬೋರ್ಡ್ (flex board) ಕಾಡ್ಗಿಚ್ಚು ಹಬ್ಬಿದಂತೆ ವೈರಲ್ ಆಗಿದ್ದು, ಕೇರಳದ ಶಿಕ್ಷಣ ಸಚಿವ (Education minister) ವಿ ಶಿವನ್‌ಕುಟ್ಟಿ ಅವರ ಗಮನವನ್ನು ಕೂಡ ಸೆಳೆದಿತ್ತು. ಫ್ಲೆಕ್ಸ್‌ನಲ್ಲಿ ಕೆಲವರಿಗೆ ಇತಿಹಾಸವು ದಾರಿ ಮಾಡಿಕೊಡುತ್ತದೆ ಎಂದು ಜಿಷ್ಣು ಕುಂಜಕ್ಕು ಅವರೇ ಹೇಳಿದ್ದಾರೆ. ಅದು ಹಾಗೆ ಆಗಲಿ ಎಂದು ನಾನು ಬಯಸುತ್ತೇನೆ. ಕುಂಜಕ್ಕು ಅವರು ಜೀವನದ ಪರೀಕ್ಷೆಯಲ್ಲೂ ಉತ್ತಮ ಯಶಸ್ಸನ್ನು ಗಳಿಸಲಿ ಎಂದು ಶಿಕ್ಷಣ ಸಚಿವ ಶಿವನ್‌ಕುಟ್ಟಿ (V Sivankutty) ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ.

Exam Result 10ನೇ ತರಗತಿ ಪರೀಕ್ಷೆ ಬರೆದ 43 ವರ್ಷದ ಅಪ್ಪ ಪಾಸ್, ಮಗ ಫೇಲ್!
 

ಈ ಫ್ಲೆಕ್ಸ್ ಬೋರ್ಡ್ ಅಳವಡಿಸಲು ತನ್ನ ಸ್ನೇಹಿತರು ಸಹಾಯ ಮಾಡಿದ್ದಾರೆ ಎಂದು ಜಿಷ್ಣು ಕುಂಜಕ್ಕು, ಕೇರಳದ ಪತ್ರಿಕೆ ಮನೋರಮಾ ನ್ಯೂಸ್‌ಗೆ ತಿಳಿಸಿದರು. ಅವರು ಮುಂದೆ ಪಿಯುಸಿ ಉತ್ತೀರ್ಣರಾದಾಗ ಮತ್ತೊಂದು ಫ್ಲೆಕ್ಸ್‌ ಬೋರ್ಡ್  ಸ್ಥಾಪಿಸಲು ಅವರು ಹೇಳಿದ್ದಾರೆ. ಅಂದ ಹಾಗೆ ಇವರು ಎಸ್‌ಎಸ್‌ಎಲ್‌ಸಿಯಲ್ಲಿ ಎಷ್ಟು ಅಂಕ ಗಳಿಸಿದ್ದಾರೆ ಎಂಬ ಬಗ್ಗೆ ಮಾತ್ರ ಈ ಫ್ಲೆಕ್ಸ್‌ನಲ್ಲಿ ಉಲ್ಲೇಖವಿಲ್ಲ.


ಕೆಲ ದಿನಗಳ ಹಿಂದೆ ಎಸ್ಎಸ್‌ಎಲ್‌ಸಿಯಲ್ಲಿ ಜಸ್ಟ್‌ ಪಾಸ್‌ ಆದ ವಿದ್ಯಾರ್ಥಿಯೋರ್ವ ತಾನು ಪಾಸ್‌ ಆಗಿರುವುದಕ್ಕೆ ಸಖತ್ ಆಗಿ ಸ್ಟೆಪ್ ಹಾಕಿ ಡಾನ್ಸ್ ಮಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿತ್ತು. ಸಾಮಾನ್ಯವಾಗಿ ಹುಡುಗರು ತಮ್ಮ ಅಂಕಗಳ ಬಗ್ಗೆ ಹೆಚ್ಚಾಗಿ ತಲೆಕೆಡಿಸಿಕೊಳ್ಳುವುದಿಲ್ಲ. ಮಾರ್ಕ್ಸ್‌ ಎಷ್ಟೇ ಇರಲಿ ಪಾಸ್ ಆದರೆ ಸಾಕು ಅದೇ ಅನೇಕ ಹುಡುಗರ ಪಾಲಿಗೆ ಸಂಭ್ರಮಿಸಲು ಸಾಕಾಗುತ್ತದೆ. ಆದರೆ ಹೆಣ್ಣು ಮಕ್ಕಳು ಹಾಗಲ್ಲ. ಒಂದೇ ಒಂದು ಅಂಕ ಕಡಿಮೆ ಬಂದರೂ ಅತ್ತು ಕರೆದು ಗೋಳಾಡಿದ ಘಟನೆಯನ್ನು ಕೇಳಿದ್ದೇವೆ. ಪಾಸಾಗಿದ್ದರೂ ಡಿಸ್ಟಿಂಕ್ಷನ್ ಬರಲಿಲ್ಲ ಎಂದು ಆತ್ಮಹತ್ಯೆಗೆ ಶರಣಾದ ಘಟನೆಯನ್ನು ಕೂಡ ನೋಡಿದ್ದೇವೆ. ಆದರೆ ಅಂಕಗಳೇ ಎಲ್ಲಾ ಅಲ್ಲ. ಅದರಾಚೆಗೂ ಬದುಕಿದೆ ಎಂಬುದನ್ನು ಈ ಹುಡುಗನ ವಿಡಿಯೋ ತೋರಿಸಿಕೊಟ್ಟಿದೆ. 
 

Latest Videos
Follow Us:
Download App:
  • android
  • ios