ಕರ್ನಾಟಕ ಪರೀಕ್ಷಾ ಪ್ರಾಧಿಕಾರ KCET, NEET ಅಣುಕು ಸೀಟು ಹಂಚಿಕೆ ಫಲಿತಾಂಶ ಪ್ರಕಟಿಸಿದೆ. ಕೌನ್ಸಲಿಂಗ್ ಪ್ರಕ್ರಿಯೆ ಮುಗಿಸಿರುವ ಅಭ್ಯರ್ಥಿಗಳು ಇದೀಗ ತಮ್ಮ ಮಾಕ್ ಅಲಾಟ್‌ಮೆಂಟ್ ಸೀಟು ಪರೀಕ್ಷಿಸಬಹುದು. ಎಲ್ಲಿ ಚೆಕ್ ಮಾಡಬೇಕು? ಇಲ್ಲಿದೆ.

ಬೆಂಗಳೂರು (ಜು.25) ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ನೀಟ್ (NEET UG) ಹಾಗೂ ಕೆಸೆಟ್ (KCET) ವಿಭಾಗ ಅಣುಕು ಸೀಟು ಹಂಚಿಕೆಯ ಫಲಿತಾಂಶ ಪ್ರಕಟ ಮಾಡಿದೆ. ಅಭ್ಯರ್ಥಿಗಳ ರ್ಯಾಂಕ್ ಆಧಾರದ ಮೇಲೆ ಅಣುಕು ಸೀಟು ಹಂಚಿಕೆಯನ್ನು ಮಾಡಲಾಗಿದೆ. ಇದೀಗ ಅಭ್ಯರ್ಥಿಗಳು ನೋಡಿಕೊಂಡು ಜುಲೈ 22ರ ಸಂಜೆ 6 ಗಂಟೆ ಒಳಗೆ ತಮ್ಮ ತಮ್ಮ ಕಾಲೇಜು, ಕೋರ್ಸ್ ಸೇರಿದಂತೆ ಇತರ ಮಾಹಿತಿ ಖಚಿತಪಡಿಸಿ ನೋಂದಣಿ ಮಾಡಿಕೊಳ್ಳಬಹುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಹೇಳಿದೆ.

NEET UG ಕೌನ್ಸಲಿಂಗ್ ವೇಳಾಪಟ್ಟಿ

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅಧಿಕೃತ ವೆಬ್‌ಸೈಟ್ ಮೂಲಕ ಅಭ್ಯರ್ಥಿಗಳು ತಮ್ಮ ತಮ್ಮ ಅಣುಕು ಸೀಟು ಹಂಚಿಕೆ ಫಲಿತಾಂಶವನ್ನು ಪರೀಕ್ಷಿಸಬಹುದು. ಮೊದಲ ಹಂತದ ನೋಂದಣಿ ಪ್ರಕ್ರಿಯೆ ಜೈಲು 17ಕ್ಕೆ ಅಂತ್ಯವಾಗಿದೆ. ಶೀಘ್ರದಲ್ಲೇ ಕರ್ನಾಟಕ ಪರೀಕ್ಷಾ ಪ್ರಾಧಿಕಾರ NEET UG ಕೌನ್ಸಲಿಂಗ್ ವೇಳಾಪಟ್ಟಿಯನ್ನು ಶೀಘ್ರದಲ್ಲೇ ಪ್ರಕಟಿಸಲಿದೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರ KCET 2025ರ ಮಾಕ್ ಸೀಟ್ ಅಲಾಟ್‌ಮೆಂಟ್ ಫಲಿತಾಂಶವನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಅಭ್ಯರ್ಥಿಗಳು ತಮ್ಮ ಅಣುಕು ಸೀಟ್ ಹಂಚಿಕೆಯನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ತಮ್ಮ ಕರ್ನಾಟಕ CET ನಂಬರ್ ದಾಖಲಿಸಿ ಪರೀಕ್ಷಿಸಬಹುದು.

ಅಣುಕು ಸೀಟ್ ಹಂಚಿಕೆ ಪರೀಕ್ಷಿಸುವುದು ಹೇಗೆ

ಅಧಿಕೃತ ವೆಬ್‌ಸೈಟ್‌ಗೆ kea.kar.nic.in ಅಥವಾ cetonline.karnataka.gov.in ತೆರಳಿ ಪರೀಕ್ಷಿಸಬೇಕು

ಈ ವೆಬ್‌ಸೈಟ್‌ನಲ್ಲಿ ಮಾಕ್ ಅಲಾಟ್‌ಮೆಂಟ್ ರಿಸಲ್ಟ್ ಲಿಂಕ್ ಕ್ಲಿಕ್ ಮಾಡಬೇಕು

ಕರ್ನಾಟಕ CET ನಂಬರ್ ದಾಖಲಿಸಿ ಲಾಗಿನ್ ಆಗಬೇಕು

ಲಾಗಿನ್ ಬೆನ್ನಲ್ಲೇ ಮಾಕ್ ಅಲಾಟ್‌ಮೆಂಟ್ ಫಲಿತಾಂಶ ಕಾಣಸಿಕೊಳ್ಳಲಿದೆ

ನಿಮ್ಮ ಫಲತಾಂಶವನ್ನು ಡೌನ್ಲೋಡ್ ಮಾಡಿಕೊಂಡು ಸೇವ್ ಮಾಡಿ ಇಟ್ಟುಕೊಳ್ಳಿ