ಸೆ.5ಕ್ಕೆ ಸಿಇಟಿ ಸೀಟ್ ಮ್ಯಾಟ್ರಿಕ್ಸ್ ಪ್ರಕಟ ಸಾಧ್ಯತೆ? ಸೆ.15ರ ವೇಳೆಗೆ ಕೌನ್ಸೆಲಿಂಗ್ ಸಂಭವ
ಎಂಜಿನಿಯರಿಂಗ್ ಸೇರಿದಂತೆ ಇನ್ನಿತರ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಸೀಟು ಹಂಚಿಕೆ ಸಂಬಂಧ ಸೆ.5ರೊಳಗೆ ಸೀಟ್ ಮ್ಯಾಟ್ರಿಕ್ಸ್ ಪ್ರಕಟಿಸಿ ಸೆ.15ರ ವೇಳೆಗೆ ಕೌನ್ಸೆಲಿಂಗ್ ಆರಂಭಿಸುವ ಸಾಧ್ಯತೆಗಳಿವೆ.
ಬೆಂಗಳೂರು (ಸೆ.2): ಎಂಜಿನಿಯರಿಂಗ್ ಸೇರಿದಂತೆ ಇನ್ನಿತರ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಸೀಟು ಹಂಚಿಕೆ ಸಂಬಂಧ ಸೆ.5ರೊಳಗೆ ಸೀಟ್ ಮ್ಯಾಟ್ರಿಕ್ಸ್ ಪ್ರಕಟಿಸಿ ಸೆ.15ರ ವೇಳೆಗೆ ಕೌನ್ಸೆಲಿಂಗ್ ಆರಂಭಿಸುವ ಸಾಧ್ಯತೆಗಳಿವೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಗಳು ತಿಳಿಸಿವೆ. ಸಿಇಟಿ-2022ರ ಫಲಿತಾಂಶ ಪ್ರಕಟವಾಗಿ ತಿಂಗಳಾದರೂ ಪ್ರವೇಶ ಪ್ರಕ್ರಿಯೆ ಆರಂಭ ಮಾಡಿರುವ ಬಗ್ಗೆ ಅಪಸ್ವರಗಳು ಕೇಳಿ ಬರುತ್ತಿವೆ. ಮತ್ತೊಂದೆಡೆ ಖಾಸಗಿ ವಿಶ್ವವಿದ್ಯಾಲಯ ಹಾಗೂ ಕಾಲೇಜುಗಳಲ್ಲಿ ಈಗಾಗಲೇ ಕೆಲವೆಡೆ ತರಗತಿಗಳನ್ನು ಆರಂಭಿಸುವ ಪ್ರಕ್ರಿಯೆ ನಡೆಯುತ್ತಿದೆ. ಖಾಸಗಿ ಕಾಲೇಜುಗಳು ಈ ವಾರಾಂತ್ಯದೊಳಗೆ (ಸೆ.4) ತಮ್ಮ ಕಾಲೇಜುಗಳ ಇನ್‌ಟೇಕ್ ವಿವರಗಳನ್ನು ಕೆಇಎಗೆ ಸಲ್ಲಿಸಲಿವೆ. ಸೆ.5 ಅಥವಾ 6ರಂದು ಸೀಟ್ ಮ್ಯಾಟ್ರಿಕ್ಸ್ ಬಿಡುಗಡೆ ಮಾಡಲಾಗುತ್ತದೆ. ಸೆ.15ರ ವೇಳೆಗೆ ಮೊದಲ ಸುತ್ತಿನ ಕೌನ್ಸೆಲಿಂಗ್ ಪ್ರಕ್ರಿಯೆಯನ್ನು ಆರಂಭಿಸುವುದು. ಎಂಜಿನಿಯರಿಂಗ್ ಸೀಟುಗಳ ಕುರಿತು ಸಾಮಾನ್ಯವಾಗಿ ಕೆಲವು ಕಾಲೇಜುಗಳಲ್ಲಿ ಇನ್‌ಟೇಕ್ ಕಡಿಮೆಯಾಗಿದ್ದು, ಮತ್ತೆ ಕೆಲವು ಕಾಲೇಜುಗಳಲ್ಲಿ ಜಾಸ್ತಿಯಾಗಿದೆ. ಸೀಟುಗಳ ವಿಚಾರವಾಗಿ ಅಜ - ಗಜಾಂತರ ಬದಲಾವಣೆಯಾಗುವ ಸಾಧ್ಯತೆಗಳಿಲ್ಲ. ಮುಂದಿನ 3-4 ದಿನಗಳಲ್ಲಿ ಸ್ಪಷ್ಟಚಿತ್ರಣ ಸಿಗಲಿದೆ. ಆದಷ್ಟುಬೇಗ ಪ್ರಕ್ರಿಯೆ ಆರಂಭ ಮಾಡಲಾಗುತ್ತದೆ ಎಂದು ಕೆಇಎ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.
ವೈದ್ಯಕೀಯ ತಪಾಸಣೆಗೆ ಮತ್ತೊಂದು ಅವಕಾಶ: ಆ.24ರಿಂದ 26ರ ವರೆಗೆ ನಡೆದ ವೈದ್ಯಕೀಯ ತಪಾಸಣೆಗೆ ಗೈರು ಹಾಜರಾದ ವಿಶೇಷಚೇತನ ಅಭ್ಯರ್ಥಿಗಳಿಗೆ ಮತ್ತೊಂದು ಅವಕಾಶ ನೀಡಲಾಗಿದ್ದು, ಸೆ.6ರಂದು ಬೆಂಗಳೂರಿನ ಪರೀಕ್ಷಾ ಪ್ರಾಧಿಕಾರ ಕಚೇರಿಯಲ್ಲಿ ತಪಾಸಣೆ ನಡೆಸಲಾಗುತ್ತದೆ. ಅಂದು ಬೆಳಗ್ಗೆ 9 ಗಂಟೆಗೆ ಸಂಬಂಧಿಸಿದ ದಾಖಲಾತಿಗಳೊಂದಿಗೆ ಹಾಜರಾಗುವಂತೆ ಕೆಇಎ ಪ್ರಕಟಣೆಯಲ್ಲಿ ತಿಳಿಸಿದೆ.
CET: ಅತಿವೃಷ್ಟಿಯಿಂದ ವಿದ್ಯುತ್ ಅಡಚಣೆ; ದಾಖಲಾತಿಗಳ ಪರಿಶೀಲನೆಗೆ ಮತ್ತಷ್ಟು ಅವಕಾಶ
ಆರ್ಕಿಟೆಕ್ಚರ್ ಕೋರ್ಸಿಗೆ ಅರ್ಜಿ ಸಲ್ಲಿಸಲು ಕೊನೆಯ ಅವಕಾಶ
ಪ್ರಸಕ್ತ ಸಾಲಿನ ಸಿಇಟಿ ರಾರಯಂಕಿಂಗ್ ಮೂಲಕ ಆರ್ಕಿಟೆಕ್ಚರ್ ಕೋರ್ಸುಗಳಿಗೆ ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಇದುವರೆಗೆ ಅರ್ಜಿ ಸಲ್ಲಿಸದೆ ಇದ್ದಲ್ಲಿ ಅಂತಹವರಿಗೆ ಮತ್ತೊಂದು ಅವಕಾಶ ನೀಡಲಾಗಿದೆ. ಅರ್ಹ ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್‌ಸೈಟ್ ಮೂಲಕ ನೋಂದಣಿ ಮಾಡಿ. ಆ.30ರಿಂದ ಸೆ.4ರವರ ಸಂಜೆ 6 ಗಂಟೆಯೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ ಸೆ.5ರೊಳಗೆ ಶುಲ್ಕ ಪಾವತಿಸಬಹುದು.
ಶಿಕ್ಷಣ ಇಲಾಖೆಯಲ್ಲಿ ಭ್ರಷ್ಟಾಚಾರ: ರುಪ್ಸಾದಿಂದ ಸಾಕ್ಷ್ಯ ಸಲ್ಲಿಕೆ
ಇದು ಕೊನೆಯ ಅವಕಾಶ ಮತ್ತೊಮ್ಮೆ ಅರ್ಜಿ ಸಲ್ಲಿಕೆಗೆ ಅವಕಾಶ ನೀಡುವುದಿಲ್ಲ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ. ಅದೇ ರೀತಿ ಜೆಇಇ (ಟಾಪರ್ 2) ಅರ್ಹತೆ ಪಡೆದಿರುವ ಅಭ್ಯರ್ಥಿಗಳು ಸೆ.4ರೊಳಗೆ ತಮ್ಮ ಅಂಕಗಳನ್ನು ನಮೂದಿಸಬಹುದೆಂದು ಕೆಇಎ ಪ್ರಕಟಣೆಯಲ್ಲಿ ತಿಳಿಸಿದೆ.
ಸಿಇಟಿ ದಾಖಲೆ ಪರಿಶೀಲನೆಗೆ ಹೆಚ್ಚು ಸಮಯ
ರಾಜ್ಯಾದ್ಯಂತ ಭಾರೀ ಮಳೆಯಿಂದ ವಿದ್ಯುತ್ ಪೂರೈಕೆಯಲ್ಲಾಗಿರುವ ಅಡಚಣೆಯಿಂದ ಸಿಇಟಿ ಅಭ್ಯರ್ಥಿಗಳಿಗೆ ಆನ್‌ಲೈನ್‌ನಲ್ಲಿ ನಡೆಯುತ್ತಿರುವ ದಾಖಲೆಗಳ ಪರಿಶೀಲನಾ ಕಾರ್ಯಕ್ಕೆ ಕೆಲವೆಡೆ ಸಮಸ್ಯೆಯಾಗಿರುವ ಕಾರಣ ಹೆಚ್ಚಿನ ಕಾಲಾವಕಾಶ ನೀಡಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್.ಅಶ್ವತ್ಥ ನಾರಾಯಣ ಹೇಳಿದ್ದಾರೆ. ಹಲವು ವಿದ್ಯಾರ್ಥಿಗಳ ಮನವಿಗೆ ಸ್ಪಂದಿಸಿರುವ ಸಚಿವರು, ದಾಖಲೆ ಪರಿಶೀಲನೆಗೆ ಹೆಚ್ಚಿನ ಕಾಲಾವಕಾಶ ನೀಡಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಸೂಚಿಸಿದ್ದಾರೆ.