Asianet Suvarna News Asianet Suvarna News

Breaking: ಸಿಇಟಿ ಪರೀಕ್ಷೆ ಫಲಿತಾಂಶ ಪ್ರಕಟ: ನಿಮ್ಮ ರಿಸಲ್ಟ್‌ ಚೆಕ್‌ ಮಾಡಲು ಇಲ್ಲಿದೆ ವಿವರ..

ವಿದ್ಯಾರ್ಥಿಗಳು ತಮ್ಮ ಫಲಿತಾಂಶ ಚೆಕ್‌ ಮಾಡಬೇಕಾದರೆ KEA ವೆಬ್ ಸೈಟ್ http://kea.kar.nic.in ನಲ್ಲಿ ಪರಿಶೀಲನೆ ಮಾಡಬಹುದು..

kcet 2023 results announced details here kannada news ash
Author
First Published Jun 15, 2023, 10:06 AM IST

ಬೆಂಗಳೂರು (ಜೂನ್‌ 15): ವೃತ್ತಿಪರ ಕೋರ್ಸ್‌ಗಳಿಗೆ ನಡೆದಿದ್ದ ಸಿಇಟಿ ಪರೀಕ್ಷೆಯ (CET Result) ಫಲಿತಾಂಶ ಪ್ರಕಟವಾಗಿದೆ  2 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆ ಬರೆದಿದ್ದರು. ಬೆಳಿಗ್ಗೆ 9:30 ರ ವೇಳೆ ಸಿಇಟಿ ಫಲಿತಾಂಶ ಪ್ರಕಟವಾಗಿದ್ದು,  ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಫಲಿತಾಂಶ ಪ್ರಕಟ ಮಾಡಿದ್ದಾರೆ. ಕೆಇಎ ವೆಬ್‌ಸೈಟ್‌ನಲ್ಲಿ ಅಭ್ಯರ್ಥಿಗಳು ತಮ್ಮ ಫಲಿತಾಂಶ ‌ನೋಡಬಹುದು. 

ವಿದ್ಯಾರ್ಥಿಗಳು ತಮ್ಮ ಫಲಿತಾಂಶ ಚೆಕ್‌ ಮಾಡಬೇಕಾದರೆ KEA ವೆಬ್ ಸೈಟ್ http://kea.kar.nic.in ನಲ್ಲಿ  ಫಲಿತಾಂಶವನ್ನು ಪರಿಶೀಲನೆ ಮಾಡಬಹುದು.

 ಉನ್ನತ ಶಿಕ್ಷಣ ಸಚಿವ ಎಮ್.ಸಿ.ಸುಧಾಕರ್ ಫಲಿತಾಂಶ ಪ್ರಕಟಿಸಿದ್ದು, ಉನ್ನತ ಶಿಕ್ಷಣ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ  ಉಮಾಶಂಕರ್ , KEA ಕಾರ್ಯನಿರ್ವಾಹಕ ನಿರ್ದೇಶಕಿ ರಮ್ಯಾ ಉಪಸ್ಥಿತಿ ಇದ್ದರು. 

ಇದನ್ನು ಓದಿ: IAS ಅಧಿಕಾರಿಯಾದ ರಿಕ್ಷಾ ಎಳೆಯುವವರ ಮಗ ಗೋವಿಂದ್‌ ಜೈಸ್ವಾಲ್‌: ಹೋರಾಟದ ಹಾದಿ ಹೀಗಿದೆ..

ವಿವಿಧ ವಿಭಾಗಗಳ ಟಾಪರ್ಸ್‌ ವಿವರ ಹೀಗಿದೆ.. 
ಕೃಷಿ
1. ಭೈರೇಶ್​​​ ​              ಎಕ್ಸ್​ಪರ್ಟ್​​ ಕಾಲೇಜು​​ ಮಂಗಳೂರು
2. ಅನುರಾಗ             ಪ್ರಮಾಣ ಪಿಯು ಕಾಲೇಜು​​ ರಾಯಚೂರು
3. ಕಾರ್ತಿಕ್‌​​ ಸಿಂಹಾಸನ್    ಲೇಡಿ ಅನೂಸೂಯ ಕಾಲೇಜು​ ರಾಜಸ್ಥಾನ್​​

ವೆಟರ್ನರಿ
1. ಮಾಳವಿಕಾ ಕಪೂರ್​​        ಮಹೇಶ್​ ಪಿಯು ಕಾಲೇಜು​ ಬೆಂಗಳೂರು
2. ಪ್ರತೀಕ್ಷಾ ಆರ್​​.                ಶ್ರೀ ಕುಮಾರನ್ಸ್​​ ಕಾಲೇಜು​​ ಬೆಂಗಳೂರು
3. ಚಂದನ್​ ಗೌಡ               ಮಹೇಶ್​​ ಪಿಯು ಕಾಲೇಜು​​​ ಬೆಂಗಳೂರು

ಇದನ್ನೂ ಓದಿ: ರೈತನ ಮಗಳು, ಕಂಡಕ್ಟರ್‌ ಪುತ್ರ ಐಎಎಸ್‌ ಪಾಸ್‌: ರಾಜ್ಯದ 35 ಮಂದಿ ತೇರ್ಗಡೆ

ಬಿ.ಫಾರ್ಮಾ 
1 ಪ್ರತೀಕ್ಷಾ ಆರ್​​.              ಶ್ರೀ ಕುಮಾರನ್ಸ್​​ ಕಾಲೇಜು​​ ಬೆಂಗಳೂರು
2. ಮಾಳವಿಕಾ ಕಪೂರ್​​      ಮಹೇಶ್​ ಪಿಯು ಕಾಲೇಜು​ ಬೆಂಗಳೂರು
3. ಮಾಧವ್​ ತಡೆಪಲ್ಲಿ        ನಾರಾಯಣ ಇ-ಟೆಕ್ನೋ ಬೆಂಗಳೂರು

ಡಿ. ಫಾರ್ಮಾ

1 ಪ್ರತೀಕ್ಷಾ ಆರ್​​.             ಶ್ರೀ ಕುಮಾರನ್ಸ್​​ ಕಾಲೇಜು​​ ಬೆಂಗಳೂರು
2. ಮಾಳವಿಕಾ ಕಪೂರ್​​      ಮಹೇಶ್​ ಪಿಯು ಕಾಲೇಜು​ ಬೆಂಗಳೂರು
3. ಮಾಧವ್​ ತಡೆಪಲ್ಲಿ        ನಾರಾಯಣ ಇ-ಟೆಕ್ನೋ ಬೆಂಗಳೂರು

ಇದನ್ನೂ ಓದಿ: ಯುಪಿಎಸ್ಸಿಯಲ್ಲಿ ರಾಜ್ಯದ 35 ಮಂದಿ ಪಾಸ್‌: ದೇಶಕ್ಕೆ 55ನೇ ರ‍್ಯಾಂಕ್‌ ಪಡೆದ ಭಾವನಾ ರಾಜ್ಯಕ್ಕೆ ನಂ. 1

ನರ್ಸಿಂಗ್​​
1. ಮಾಳವಿಕಾ ಕಪೂರ್​​      ಮಹೇಶ್​ ಪಿಯು ಕಾಲೇಜು​ ಬೆಂಗಳೂರು
2. ಪ್ರತೀಕ್ಷಾ ಆರ್​​.            ಶ್ರೀ ಕುಮಾರನ್ಸ್​​ ಕಾಲೇಜು​​ ಬೆಂಗಳೂರು
3. ಚಂದನ್​ ಗೌಡ            ಮಹೇಶ್​​ ಪಿಯು ಕಾಲೇಜು​​​ ಬೆಂಗಳೂರು

ಎಂಜಿನಿಯರಿಂಗ್​
1. ವಿಘ್ನೇಶ್​ ಕುಮಾರ್​​         ಶ್ರೀ ಕುಮಾರನ್ಸ್​​ ಕಾಲೇಜು​​ ಬೆಂಗಳೂರು
2. ಅರ್ಜುನ್​​ ಕೃಷ್ಣಸ್ವಾಮಿ         V ಪಿಯು ಕಾಲೇಜು ಬೆಂಗಳೂರು
3. ಸಮೃದ್ಧ ಶೆಟ್ಟಿ            ವಿಧ್ಯಾನಿಕೇತನ್​​ ಕಾಲೇಜು​​ ಧಾರವಾಡ

ಇದನ್ನೂ ಓದಿ: ಯುಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆಯಾದ ಬೆಳಗಾವಿಯ ಶೃತಿ ಯರಗಟ್ಟಿ; ವಿಜಯಪುರ ತಾಂಡಾ ಹುಡುಗನಿಂದ್ಲೂ ಸಾಧನೆ

ಬ್ಯಾಚುಲರ್ ಆಫ್ ನ್ಯಾಚುರೋಪತಿ ಮತ್ತು ಯೋಗಿಕ್ ಸೈನ್ಸಸ್ ( BNYS

1. ಪ್ರತೀಕ್ಷಾ ಆರ್‌.                        ಶ್ರೀ ಕುಮಾರನ್ಸ್​​ ಕಾಲೇಜು​​ ಬೆಂಗಳೂರು
2. ಭೈರೇಶ್ ಎಸ್‌.ಎಚ್‌.            ಎಕ್ಸ್​​​​ಪರ್ಟ್  ಕಾಲೇಜು, ಮಂಗಳೂರು
3. ಶ್ರೀಜಾನ್. ಎಂ.ಎಚ್‌.          ಬೇಸ್ ಪಿಯು ಕಾಲೇಜು, ಹುಬ್ಬಳ್ಳಿ
 

ಫಲಿತಾಂಶ ಪ್ರಕಟ ಮಾಡಿದ ಉನ್ನತ ಶಿಕ್ಷಣ ಸಚಿವ ಎಂ.ಸಿ. ಸುಧಾಕರ್, ರಾಜ್ಯದಲ್ಲಿ ಸಿಇಟಿ ಪರೀಕ್ಷೆಗೆ 1,21,174 ಹುಡುಗರು ಅರ್ಜಿ ಸಲ್ಲಿಸಿದ್ದು 1,14,565 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಅಲ್ಲದೆ, ಪರೀಕ್ಷೆಗೆ 1,40,436 ಹುಡುಗಿಯರು ಅರ್ಜಿ ಸಲ್ಲಿಸಿದ್ದು 1,29,780 ಜನ ಪರೀಕ್ಷೆ ಬರೆದಿದ್ದಾರೆ ಎಂದೂ ಹೇಳಿದ್ದಾರೆ. ಒಟ್ಟಾರೆ, ಈ ಬಾರಿ ರಾಜ್ಯದ 592 ಕೇಂದ್ರಗಳಲ್ಲಿ ಪರೀಕ್ಷೆ ನಡೆಸಿದ್ದೆವು ಎಂದೂ ಪ್ರಕಟಿಸಿದ್ದಾರೆ.

ಇದನ್ನೂ ಓದಿ: UPSC Civil Services: ಯುಪಿಎಸ್‌ಸಿ ಫಲಿತಾಂಶ ಪ್ರಕಟ: ಟಾಪ್‌ 4 ರ‍್ಯಾಂಕ್‌ ಮಹಿಳೆಯರ ಪಾಲು

ಅಲ್ಲದೆ, 592 ಕೇಂದ್ರಗಳಲ್ಲಿ 2,61,610 ವಿದ್ಯಾರ್ಥಿಗಳು ಪರೀಕ್ಷೆಗೆ  ಅರ್ಜಿ ಸಲ್ಲಿಸಿದ್ರು. ಆ ಪೈಕಿ 2,44,345 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಿದ್ರು. ಸರಿ ಉತ್ತರಗಳನ್ನು ಪ್ರಾಧಿಕಾರದ http://kea.nic.in ವೆಬ್‌ಸೈಟ್‌ನಲ್ಲಿ ಪ್ರಕಟ ಮಾಡಲಾಗಿದೆ ಎಂದೂ ತಿಳಿಸಿದ್ದಾರೆ. 

ಈ ಮಧ್ಯೆ, ಎಂಜಿನಿಯರಿಂಗ್‌ ಕೋರ್ಸಿಗೆ  2,03,381 ಅಭ್ಯರ್ಥಿಗಳು ಮೆರಿಟ್‌ ಪಟ್ಟಿಯಲ್ಲಿ ಆಯ್ಕೆಯಾಗಿದ್ರೆ, ಕೃಷಿ ವಿಜ್ಞಾನ ಕೋರ್ಸಿಗೆ- 1,64,187 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಹಾಗೆ, ಪಶುಸಂಗೋಪನೆ- 1,66,756 ವಿದ್ಯಾರ್ಥಿಗಳು, ಯೋಗ ಮತ್ತು ನ್ಯಾಚುರೋಪತಿ ಗೆ- 2,06,191 ವಿದ್ಯಾರ್ಥಿಗಳು, ಬಿ.ಪಾರ್ಮ್ ಮತ್ತು ಡಿ.ಪಾರ್ಮ್ ಕೋರ್ಸ್ ಗೆ- 2,06,340 ಹಾಗೂ ನರ್ಸಿಂಗ್ ಕೋರ್ಸಿಗೆ - 1,66,808 ಅಭ್ಯರ್ಥಿಗಳು ಅರ್ಹತೆ ಪಡೆದಿದ್ದಾರೆ ಎಂದೂ ಉನ್ನತ ಶಿಕ್ಷಣ ಸಚಿವರು ಮಾಹಿತಿ ನೀಡಿದ್ದಾರೆ. 
 

 

Follow Us:
Download App:
  • android
  • ios