ಯುಪಿಎಸ್ಸಿಯಲ್ಲಿ ರಾಜ್ಯದ 35 ಮಂದಿ ಪಾಸ್: ದೇಶಕ್ಕೆ 55ನೇ ರ‍್ಯಾಂಕ್ ಪಡೆದ ಭಾವನಾ ರಾಜ್ಯಕ್ಕೆ ನಂ. 1
ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ಐಆರ್‌ಎಸ್ ಸೇವೆಯಲ್ಲಿರುವ ರಾಜ್ಯದ ಎಚ್.ಎಸ್.ಭಾವನಾ 55ನೇ ರ‍್ಯಾಂಕ್ ಪಡೆದು ರಾಜ್ಯದ ಟಾಪರ್ ಆಗಿದ್ದಾರೆ. ಭಾವನಾ ಅವರು ನಗರದ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಮುಗಿಸಿ ಬಳಿಕ ಯಲಹಂಕದ ವೆಂಕಟೇಶ್ವರ ಕಾಲೇಜಿನಲ್ಲಿ ಎಂಜಿನಿಯರಿಂಗ್ ಪೂರ್ಣಗೊಳಿಸಿದ್ದರು.
ಬೆಂಗಳೂರು (ಮೇ 24, 2023): ಕೇಂದ್ರ ಲೋಕ ಸೇವಾ ಆಯೋಗದ (ಯುಪಿಎಸ್‌ಸಿ) ಬಹುನಿರೀಕ್ಷಿತ ನಾಗರಿಕ ಸೇವಾ ಪರೀಕ್ಷೆಗಳ 2022ನೇ ಸಾಲಿನ ಫಲಿತಾಂಶ ಪ್ರಕಟವಾಗಿದ್ದು, ರಾಜ್ಯದ 35ಕ್ಕೂ ಅಧಿಕ ಅಭ್ಯರ್ಥಿಗಳು ರ‍್ಯಾಂಕ್ ಪಡೆದು ಸಾಧನೆ ಮಾಡಿದ್ದಾರೆ.
ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ಐಆರ್‌ಎಸ್ ಸೇವೆಯಲ್ಲಿರುವ ರಾಜ್ಯದ ಎಚ್.ಎಸ್.ಭಾವನಾ 55ನೇ ರ‍್ಯಾಂಕ್ ಪಡೆದು ರಾಜ್ಯದ ಟಾಪರ್ ಆಗಿದ್ದಾರೆ. ಭಾವನಾ ಅವರು ನಗರದ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಮುಗಿಸಿ ಬಳಿಕ ಯಲಹಂಕದ ವೆಂಕಟೇಶ್ವರ ಕಾಲೇಜಿನಲ್ಲಿ ಎಂಜಿನಿಯರಿಂಗ್ ಪೂರ್ಣಗೊಳಿಸಿದ್ದರು. ಐಎಎಸ್ ಅಧಿಕಾರಿ ಆಗಬೇಕು ಎಂದು ಯುಪಿಎಸ್‌ಸಿ ಪರೀಕ್ಷೆ ಬರೆದು 2018ರಲ್ಲಿ ತೇರ್ಗಡೆಯಾಗಿದ್ದರು. ಆದರೆ ಆಗ ಐಆರ್‌ಎಸ್ ಸೇವೆಗೆ ಮಾತ್ರ ಅವಕಾಶ ಸಿಕ್ಕಿತ್ತು. ಈಗ ಐಎಎಸ್ ಹಾದಿ ಸುಗಮವಾಗಿದೆ.
ಇದನ್ನು ಓದಿ: UPSC Civil Services: ಯುಪಿಎಸ್‌ಸಿ ಫಲಿತಾಂಶ ಪ್ರಕಟ: ಟಾಪ್ 4 ರ‍್ಯಾಂಕ್ ಮಹಿಳೆಯರ ಪಾಲು
ಬೆಳಗಾವಿಯ ಗೋಕಾಕದ ಶೃತಿ 362ನೇ ರ‍್ಯಾಂಕ್, ಮೈಸೂರಿನ ಎಂ.ಪೂಜಾ (390), ನೆಲಮಂಗಲದ ಸಿದ್ದಾರ್ಥ ಆಸ್ಪತ್ರೆಯಲ್ಲಿ ಮಕ್ಕಳ ತಜ್ಞರಾಗಿ ಕಾರ್ಯನಿರ್ವಹಿಸುವ ಡಾ.ಭಾನುಪ್ರಕಾಶ್ (448), ನಾಗರಬಾವಿಯ ಇಂಡಿಯನ್ 4 ಐಎಎಸ್ ಅಕಾಡೆಮಿಯಲ್ಲಿ ತರಬೇತಿ ಪಡೆದಿದ್ದ ಹುಬ್ಬಳ್ಳಿಯ ಬಸ್ ನಿರ್ವಾಹಕರ ಪುತ್ರ ಸಿದ್ದಲಿಂಗಪ್ಪ 589ನೇ ರ‍್ಯಾಂಕ್ ಪಡೆದಿದ್ದಾರೆ.
ಡಾ. ರಾಜ್‌ಕುಮಾರ್ ಸಿವಿಲ್ ಸರ್ವೀಸ್ ಅಕಾಡೆಮಿಯ 11 ಅಭ್ಯರ್ಥಿಗಳು, ಯೂನಿರ್ವಸಲ್ ಕೋಚಿಂಗ್ ಸೆಂಟರ್‌ನ 10 ಅಭ್ಯರ್ಥಿಗಳು ಸೇರಿದಂತೆ ನಗರದ ಹಲವು ತರಬೇತಿ ಕೇಂದ್ರಗಳ ವಿದ್ಯಾರ್ಥಿಗಳು ರ‍್ಯಾಂಕ್‌ಗೆ ಭಾಜನರಾಗಿದ್ದಾರೆ. ವಿಜಯನಗರದ ಆರ್‌ಪಿಸಿ ಲೇಔಟ್‌ನ ಯೂನಿವರ್ಸಲ್ ಕೋಚಿಂಗ್ ಸೆಂಟರ್ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, ನಮ್ಮಲ್ಲಿ ಅಣಕು ಪರೀಕ್ಷೆ ತೆಗೆದುಕೊಂಡಿದ್ದ ಹೊರ ರಾಜ್ಯದ ಗರೀಮಾ ಲೋಯಾ 2ನೇ ರ‍್ಯಾಂಕ್ ಪಡೆದಿದ್ದಾರೆ ಎಂದು ತಿಳಿಸಿದೆ.
ಇದನ್ನೂ ಓದಿ: ಯುಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆಯಾದ ಬೆಳಗಾವಿಯ ಶೃತಿ ಯರಗಟ್ಟಿ; ವಿಜಯಪುರ ತಾಂಡಾ ಹುಡುಗನಿಂದ್ಲೂ ಸಾಧನೆ
ದೇಶಾದ್ಯಂತ ಯುಪಿಎಸ್‌ಸಿಯಲ್ಲಿ 933 ಅಭ್ಯರ್ಥಿಗಳು ರ‍್ಯಾಂಕ್ ಪಡೆದಿದ್ದು, ಇದರಲ್ಲಿ ಈ ಬಾರಿ ರಾಜ್ಯದ ಅಭ್ಯರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಭಾರತೀಯ ಆಡಳಿತ ಸೇವೆ(ಐಎಎಸ್), ಭಾರತೀಯ ವಿದೇಶಾಂಗ ಸೇವೆ(ಐಎಫ್‌ಎಸ್), ಭಾರತೀಯ ಪೊಲೀಸ್ ಸೇವೆ(ಐಪಿಎಸ್) ಸೇರಿದಂತೆ ವಿವಿಧ ಸೇವೆಗಳಿಗೆ ರಾಜ್ಯದ ಅಭ್ಯರ್ಥಿಗಳು ಆಯ್ಕೆಯಾಗಲಿದ್ದಾರೆ.
ರಾಜ್ಯದ ಟಾಪರ್‌ಗಳು
- ಅಭ್ಯರ್ಥಿ ರ‍್ಯಾಂಕ್
- ಭಾವನಾ ಎಚ್.ಎಸ್. 55
- ಮೆಲ್ವಿನ್ ವರ್ಗೀಸ್ 155
- ಸೂರಜ್ ಡಿ. 197
- ಸೌರಭ ನರೇಂದ್ರ 198
- ಆಕಾಶ್ ಎ.ಎಲ್. 210
- ಪಿ.ಶ್ರವಣಕುಮಾರ್ 222
- ರವಿರಾಜ್ ಅಶ್ವತಿ 224
- ಚಲುವರಾಜ್ 238
- ಸೌರಭ್ ಕೆ. 260
- ದಾಮಿನಿ ಎಂ.ದಾಸ್ 345
- ಶೃತಿ ಯರಗಟ್ಟಿ 362
- ಪೂಜಾ ಮುಕುಂದ್ 390
- ಭಾನುಪ್ರಕಾಶ್ ಜೆ. 448
- ಸಿ.ಸಮೀರ್ ರಾಜಾ 464
- ಕೈಲಾಶ್ ಟಿ. 465
- ಧನುಷ್‌ಕುಮಾರ್ ಬಿ.ಎಸ್. 501
- ಶ್ರೀದೇವಿ ಬಿ.ವಿ. 525
- ಆದಿನಾಥ್ ಪದ್ಮಣ್ಣ ತಮದಡ್ಡಿ 566
- ರಾಹುಲ್ ಆರ್. 582
- ಸಿದ್ದಲಿಂಗಪ್ಪ ಕೆ.ಪೂಜಾರ್ 589
- ಡಾ.ವರುಣ್ ಕೆ.ಗೌಡ 594
- ಮೇಘನಾ ಐ.ಎಸ್. 617
- ನಿಮಿಷಾಂಬ ಸಿ.ಪಿ. 659
- ತನ್ಮಯ್ ಎಂ.ಎಸ್. 690
- ಮೊಹಮ್ಮದ್ ಸಿದ್ದಿಕ್ ಶರೀಫ್ 745
- ಅಭಿಷೇಕ್ ಕೆ.ಎಚ್. 813
- ಪದ್ಮನಾಭ ಎಚ್.ಎಸ್. 923
- ಮನೋಜ್ ಎಚ್.ಪಿ. 929
ಇದನ್ನೂ ಓದಿ: 15 ವರ್ಷದಿಂದ ಅನಾರೋಗ್ಯ ರಜೇಲಿದ್ರೂ ಸಂಬಳ ಜಾಸ್ತಿ ಮಾಡಿಲ್ಲ ಅಂತ ಕಂಪನಿ ವಿರುದ್ಧ ಕೇಸ್ ಹಾಕಿದ ಉದ್ಯೋಗಿ!