Asianet Suvarna News Asianet Suvarna News

ಯುಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆಯಾದ ಬೆಳಗಾವಿಯ ಶೃತಿ ಯರಗಟ್ಟಿ; ವಿಜಯಪುರ ತಾಂಡಾ ಹುಡುಗನಿಂದ್ಲೂ ಸಾಧನೆ

ರಾಜ್ಯದಲ್ಲೂ ಅನೇಕ ಅಭ್ಯರ್ಥಿಗಳು ಯುಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾರೆ. 

upsc civil services exam 2022 result karnataka s shruti yaragatti s and yalaguresh arjun nayak have cleared the exam ash
Author
First Published May 23, 2023, 4:33 PM IST

ಬೆಂಗಳೂರು (ಮೇ 23, 2023): ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) 2022 ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದೆ.  933 ಅಭ್ಯರ್ಥಿಗಳು ಈ ವರ್ಷದ ನಾಗರಿಕ ಸೇವಾ ಪರೀಕ್ಷೆಯಲ್ಲಿ ಅರ್ಹತೆ ಪಡೆದಿದ್ದಾರೆ ಎಂದು ಯುಪಿಎಸ್‌ಸಿ ಮಾಹಿತಿ ನೀಡಿದೆ. ಈ ಪೈಕಿ ಈ ಪರೀಕ್ಷೆಯಲ್ಲಿ ಮಹಿಳೆಯರ ಮೇಲುಗೈ ಕಂಡುಬಂದಿದೆ. ರಾಜ್ಯದಲ್ಲೂ ಅನೇಕ ಅಭ್ಯರ್ಥಿಗಳು ಈ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾರೆ. 

ಯುಪಿಎಸ್ ಸಿ ಪರೀಕ್ಷೆಯಲ್ಲಿ ರಾಮನಗರ ಮೂಲದ ಯುವಕ ಚಲುವರಾಜು 238ನೇ ಸ್ಥಾನ ಪಡೆದಿದ್ದಾರೆ. ಹಾರೋಹಳ್ಳಿ ತಾಲೂಕಿನ ದೊಡ್ಡಬಾದಿಗೆರೆ ಗ್ರಾಮದ ನಿವಾಸಿ ಚಲುವರಾಜು 3ನೇ ಬಾರಿಯ ಪ್ರಯತ್ನದಲ್ಲಿ ಉತ್ತೀರ್ಣರಾಗಿದ್ದಾರೆ. ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಪದವೀಧರಾಗಿರೋ ಯುವಕ. ಪಿಯುಸಿ ವರೆಗೂ ಸರ್ಕಾರಿ ಶಾಲೆಯಲ್ಲೇ ವಿಧ್ಯಾಭ್ಯಾಸ ನಡೆಸಿದ್ದು, ಮೂಲತಃ ರೈತಕುಟುಂಬದಿಂದ ಬಂದಿದ್ದಾರೆ. 

upsc civil services exam 2022 result karnataka s shruti yaragatti s and yalaguresh arjun nayak have cleared the exam ash

ಹಾಗೆ, ಬೆಳಗಾವಿ ಮೂಲದ ಶೃತಿ ಯರಗಟ್ಟಿ 362ನೇ ರ‍್ಯಾಂಕ್‌ ಪಡೆದಿದ್ದಾರೆ. ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಅರಭಾವಿ ಪಟ್ಟಣದ ನಿವಾಸಿ ಶೃತಿ ಯರಗಟ್ಟಿ ಈ ಸಾಧನೆ ಮಾಡಿದ್ದಾರೆ. ಶಿರಢಾಣ ಗ್ರಾಮದ ಡಾ.ಗಂಗಾಧರ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ವ್ಯಾಸಂಗ ಮಾಡಿದ್ದ ಇವರು, ಕೆಸಿಡಿ ಧಾರವಾಡದಲ್ಲಿ ಪಿಯು ವಿಜ್ಞಾನ ವಿಭಾಗದಲ್ಲಿ ಅಧ್ಯಯನ ಮಾಡಿದ್ದರು. ನಂತರ, ಬಿಎಸ್‌ಸಿ ವ್ಯಾಸಂಗ ಮಾಡಿದ್ದ ಶೃತಿ ಯರಗಟ್ಟಿ, ಈ ವೇಳೆ 7 ಚಿನ್ನದ ಪದಕ ಗಳಿಸಿದ್ದರು.

ಇದನ್ನು ಓದಿ: UPSC CIVIL SERVICES: ಯುಪಿಎಸ್‌ಸಿ ಫಲಿತಾಂಶ ಪ್ರಕಟ: ಟಾಪ್‌ 4 ರ‍್ಯಾಂಕ್‌ ಮಹಿಳೆಯರ ಪಾಲು

ಶೃತಿ ಯರಗಟ್ಟಿ ಅವರ ತಂದೆ ನಿವೃತ್ತ ಶಿಕ್ಷಕ ಶಿವಾನಂದ ಯರಗಟ್ಟಿ ಆಗಿದ್ದು, ಈಕೆಯ ತಾಯಿ ಮಹಾನಂದಾ ಎಂದು ತಿಳಿದುಬಂದಿದೆ. ಆರನೇ ಬಾರಿ ಪ್ರಯತ್ನದಲ್ಲಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಶೃತಿ ಯರಗಟ್ಟಿ ಅವರು 362ನೇ ರ‍್ಯಾಂಕ್‌ ಗಳಿಸಿದ್ದಾರೆ. ಸದ್ಯ ಬೆಂಗಳೂರಿನ ವಿಜಯನಗರದ ಪಿಜಿಯಲ್ಲಿ ಇವರು ವಾಸವಾಗಿದ್ದಾರೆ ಎಂದು ತಿಳಿದುಬಂದಿದೆ.

ಇನ್ನೊಂದೆಡೆ, ಮೈಸೂರಿನ ಪೂಜಾ ಮುಕುಂದ್ ಸಹ ಸತತ ಮೂರು ವರ್ಷಗಳ ಪ್ರಯತ್ನದ ಫಲವಾಗಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾರೆ. ಓದಿದ್ದು ಇಂಜಿನಿಯರಿಂಗ್ ಆದರೂ ಯುಪಿಎಸ್ಸಿಯಲ್ಲಿ ಸಮಾಜಶಾಸ್ತ್ರ ವಿಷಯದಲ್ಲಿ ಪಾಸ್ ಆಗಿದ್ದಾರೆ. 

ಇದನ್ನೂ ಓದಿ: 15 ವರ್ಷದಿಂದ ಅನಾರೋಗ್ಯ ರಜೇಲಿದ್ರೂ ಸಂಬಳ ಜಾಸ್ತಿ ಮಾಡಿಲ್ಲ ಅಂತ ಕಂಪನಿ ವಿರುದ್ಧ ಕೇಸ್‌ ಹಾಕಿದ ಉದ್ಯೋಗಿ!

ಕಂಡಕ್ಟರ್‌ ಮಗನ ಸಾಧನೆ

ಇದೇ ರೀತಿ, ಧಾರವಾಡ ಜಿಲ್ಲೆಯ ಅಣ್ಣಿಗೇರಿ ಪಟ್ಟಣದ ಯುವಕ ಸಿದ್ದಲಿಂಗಪ್ಪ ಕೆ ಪೂಜಾರ್ ಯುಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾರೆ. ಕೆಎಸ್‌ಆರ್‌ಟಿಸಿ ಕಂಡ್ಟಕರ್ ಮಗ ಈ ಉತ್ತಮ ಸಾಧನೆ ಮಾಡಿದ್ದು, ಮೂಲತಃ ಕನ್ನಡ ಮಾಧ್ಯಮದಲ್ಲಿ ಇವರು ಓದಿ 589ನೇ ಸ್ಥಾನ ಪಡೆದು ಪರೀಕ್ಷೆಯಲ್ಲಿ ಪಾಸ್ ಆಗಿದ್ದಾರೆ.  
upsc civil services exam 2022 result karnataka s shruti yaragatti s and yalaguresh arjun nayak have cleared the exam ash

ಇದನ್ನೂ ಓದಿ: ಬೆಂಗಳೂರಿನಲ್ಲಿ ಬೃಹತ್ ಪ್ರಮಾಣದ ಭೂಮಿ ಖರೀದಿಸಿದ ಐಫೋನ್‌ ತಯಾರಕ ಫಾಕ್ಸ್‌ಕಾನ್: 1 ಲಕ್ಷ ಉದ್ಯೋಗ ಸೃಷ್ಟಿ!

ವಿಜಯಪುರದ ತಾಂಡಾ ಹುಡುಗನ ಸಾಧನೆ
ವಿಜಯಪುರ ಯುವಕ ಸಹ ಈ ಬಾರಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಅರ್ಹತೆ ಪಡೆದಿದ್ದಾರೆ. ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕು ಸರೂರ್ ತಾಂಡಾ ನಿವಾಸಿಯಾದ ಯಲಗೂರೇಶ ಅರ್ಜುನ ನಾಯಕ್‌ ಈ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದು, ಈ ಮೂಲಕ ತಾಂಡಾ ಹುಡುಗ ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ಪಾಸಾಗಿದ್ದಾರೆ. ಯಲಗೂರೇಶ ಅರ್ಜುನ ನಾಯಕ್‌ ಯುಪಿಎಸ್‌ಸಿಯಲ್ಲಿ 890ನೇ ಸ್ಥಾಣ ಪಡೆದಿದ್ದಾರೆ ಎಂದು ವರದಿಯಾಗಿದೆ. 

upsc civil services exam 2022 result karnataka s shruti yaragatti s and yalaguresh arjun nayak have cleared the exam ash

ಇದನ್ನೂ ಓದಿ: ದಿನಕ್ಕೆ 1 ಗಂಟೆ ಈ ವಿಡಿಯೋಗಳನ್ನ ನೋಡಲು 8 ಸಾವಿರಕ್ಕೂ ಹೆಚ್ಚು ಹಣ ನೀಡುತ್ತೆ ಕಂಪನಿ!

ಈ ವರ್ಷದ ಯುಪಿಎಸ್‌ಸಿಯ ವ್ಯಕ್ತಿತ್ವ ಪರೀಕ್ಷೆಯಲ್ಲಿ ಕಾಣಿಸಿಕೊಂಡ ಅಭ್ಯರ್ಥಿಗಳು ತಮ್ಮ ಫಲಿತಾಂಶಗಳನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ – upsc.gov.in ಪರಿಶೀಲಿಸಬಹುದಾಗಿದೆ. UPSC ಅಂತಿಮ ಫಲಿತಾಂಶ 2022 ನೇಮಕಾತಿಗೆ ಶಿಫಾರಸು ಮಾಡಲಾದ ಒಟ್ಟು 933 ಅಭ್ಯರ್ಥಿಗಳನ್ನು ಘೋಷಿಸಿದೆ. ಈ ಪೈಕಿ ಸಾಮಾನ್ಯ ವರ್ಗದಿಂದ 345 ಅಭ್ಯರ್ಥಿಗಳು, ಇಡಬ್ಲ್ಯೂಎಸ್ ವರ್ಗದಿಂದ 99 ಅಭ್ಯರ್ಥಿಗಳು, ಓಬಿಸಿ ವರ್ಗದಿಂದ 263 ಅಭ್ಯರ್ಥಿಗಳು, ಎಸ್‌ಸಿ ವರ್ಗದಿಂದ 154 ಅಭ್ಯರ್ಥಿಗಳು ಮತ್ತು ಎಸ್‌ಟಿ ವರ್ಗದಿಂದ 72 ಯಶಸ್ವಿ ಅಭ್ಯರ್ಥಿಗಳ ಸಮಗ್ರ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ.

ಶಿಫಾರಸು ಮಾಡಿದ ಅಭ್ಯರ್ಥಿಗಳ ಜೊತೆಗೆ, UPSC ಅಂತಿಮ ಫಲಿತಾಂಶ 2022 ಅಭ್ಯರ್ಥಿಗಳ ಮೀಸಲು ಪಟ್ಟಿಯನ್ನು ಸಹ ಒಳಗೊಂಡಿದೆ. ಈ ಮೀಸಲು ಪಟ್ಟಿಯು 178 ಅಭ್ಯರ್ಥಿಗಳನ್ನು ಒಳಗೊಂಡಿದ್ದು, ಈ ಪೈಕಿ ಸಾಮಾನ್ಯ ವರ್ಗದಿಂದ 89 ಅಭ್ಯರ್ಥಿಗಳು, EWS ವರ್ಗದಿಂದ 28 ಅಭ್ಯರ್ಥಿಗಳು, OBC ವರ್ಗದಿಂದ 52 ಅಭ್ಯರ್ಥಿಗಳು, SC ವರ್ಗದಿಂದ 5 ಅಭ್ಯರ್ಥಿಗಳು ಮತ್ತು ST ವರ್ಗದಿಂದ 4 ಅಭ್ಯರ್ಥಿಗಳು ಸೇರಿದ್ದಾರೆ.
ಇದನ್ನೂ ಓದಿ: ಉದ್ಯೋಗದ ಟೆನ್ಷನ್‌ ಬೇಡ್ವೆಂದು ಕೆಲಸ ತೊರೆದು ಆರಾಮಾಗಿ ಟೆಂಟ್‌ನಲ್ಲಿ ರಿಲ್ಯಾಕ್ಸ್‌ ಮಾಡ್ತಿರೋ ಯುವಕ!

Follow Us:
Download App:
  • android
  • ios