ಹೊಸಕೋಟೆ ಪಟ್ಟಣದಲ್ಲಿ ಖಾಸಗಿ ಶಾಲೆಯ ಶಿಕ್ಷಕ ಹಾಗೂ ಅವರ ಪುತ್ರನ ಕಿರುಕುಳಕ್ಕೆ ಬೇಸತ್ತು ವಿದ್ಯಾರ್ಥಿನಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ನಡೆದಿದೆ.

ಹೊಸಕೋಟೆ (ಜೂ.30): ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಪಟ್ಟಣದಲ್ಲಿ ಖಾಸಗಿ ಶಾಲೆಯ ಶಿಕ್ಷಕ ಹಾಗೂ ಅವರ ಪುತ್ರನ ಕಿರುಕುಳಕ್ಕೆ ಬೇಸತ್ತು ಎಸ್‌ಎಸ್‌ಎಲ್‌ಸಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ನಡೆದಿದೆ.

ಶಾಲಾ ಶಿಕ್ಷಕ ಹಾಗೂ ಮಗನ ಕಿರುಕುಳಕ್ಕೆ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನೇಣಿಗೆ ಶರಣಾದ ಮೃತ ವಿದ್ಯಾರ್ಥಿನಿಯನ್ನು ಸಾರಾ (16) ಎಂದು ಗುರುತಿಸಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ನಗರದ ಪಾರ್ವತಿಪುರದಲ್ಲಿ ಘಟನೆ ನಡೆದಿದೆ. ಹೊಸಕೋಟೆ ಪಟ್ಟಣದ ಮಿಲೇನಿಯಂ ಪಬ್ಲಿಕ್ ಶಾಲೆಯಲ್ಲಿ ವಿದ್ಯಾರ್ಥಿನಿ ಓದುತ್ತಿದ್ದಳು. ಆದರೆ, ಶಾಲೆಯ ಶಿಕ್ಷಕ ಖಮರ್ ಮತ್ತು ಶಿಕ್ಷಕಿ ನಳಿನಿ ಎಂಬ ಇಬ್ಬರು ಶಿಕ್ಷಕರಿಂದ ಸಾರಾ ನಿರಂತರವಾಗಿ ಕಿರುಕುಳಕ್ಕೆ ಒಳಗಾಗಿದ್ದಳು.

ಚೆಲುವಿನ ಚಿತ್ತಾರ ಮಾದರಿ ಪ್ರೇಮಕಥೆ: ಅಲ್ಲಿ ಹುಡ್ಗ ಹುಚ್ಚನಾದ್ರೆ, ಇಲ್ಲಿ ಹುಡುಗಿಯೇ ಹುಚ್ಚಿಯಾದ್ಲು!

ಶಿಕ್ಷಕರಾಯ್ತು, ಅವರ ಮಗನಿಂದಲೂ ಕಿರುಕುಳ: ಇನ್ನು ಶಾಲೆಯಲ್ಲಿ ಶಿಕ್ಷಕ ಖಮರ್ ಪ್ರತಿನಿತ್ಯ ಕಿರುಕುಳ ನೀಡುತ್ತಿದ್ದರೆ, ಶಾಲೆಯಿಂದ ಹೊರಗೆ ಬಂದರೆ, ಶಿಕ್ಷಕ ಖಮರ್‌ ಅವರ ಮಗ ಹಮೀನ್ ಸಹ ತನನ್ನು ಪ್ರೀತಿಸು ಎಂದು ಕಿರುಕುಳ ನೀಡುತ್ತಿದ್ದನು. ನಿರಂತರವಾಗಿ ಕಿರುಕುಳ ಅನುಭವಿಸುತ್ತಿದ್ದ ಸಾರಾ ಬೇಸತ್ತು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ. ಈ ದುರ್ಘಟನೆ ಕುರಿತಂತೆ ಹೊಸಕೋಟೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ. ಎದೆಯೆತ್ತರಕ್ಕೆ ಬೆಳೆದು ನಿಂತಿದ್ದ ಮಗಳು ಆತ್ಮಹತ್ಯೆಗೆ ಶರಣಾಗಿದ್ದ ಬಾಲಕಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. 

ಮ್ಯಾಟ್ರಿಮೊನಿ ಗಂಡ, ಪ್ರೆಂಡ್ಸ್‌ಗೆ ಹೆಂಡ್ತಿಯನ್ನ ಹಂಚಿಕೊಂಡ: ಬೆಂಗಳೂರು (ಜೂ.29): ಆಂಧ್ರಪ್ರದೇಶದಲ್ಲಿ ಸಾಫ್ಟ್‌ವೇರ್‌ ಇಂಜಿನಿಯರ್‌ ಓದಿ ಐಟಿ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ ಹುಡುಗನ್ನ ಮ್ಯಾಟ್ರಿಮೊನಿಯಲ್ಲಿ ನೋಡಿ, ಪರಸ್ಪರ ಪ್ರೀತಿಸಿ ಮದುವೆಯಾದ ಯುವತಿ ಪಡಬಾರದ ಕಷ್ಟ ಅನುಭವಿಸುತ್ತಿದ್ದಾಳೆ. ತಾನು ಗಾಂಜಾ ಸೇವಿಸಿ ಕಿರುಕುಳ ನೀಡಿದ್ದಲ್ಲದೇ, ತನ್ನ ಸ್ನೇಹಿತರೊಂದಿಗೂ ಮಲಗಿ ಸುಖ ಕೊಡುವಂತೆ ಒತ್ತಾಯಿಸಿದ್ದಾನೆ. ಅದರಲ್ಲಿಯೂ ಗಂಡನೊಂದಿಗೆ ದೇಹ ಹಂಚಿಕೊಳ್ಳಬೇಕಾದವಳು, ಗಂಡನ ಸ್ನೇಹಿತರೊಂದಿಗೆ ಹಾಸಿಗೆ ಹಂಚಿಕೊಳ್ಳಬೇಕೆಂದರೆ ಎಂತಹ ದಯನೀಯ ಸ್ಥಿತಿ ಇರಬೇಡ. ಇದರಿಂದ ತಪ್ಪಿಸಿಕೊಂಡು ಬಂದ ನವ ವಿವಾಹಿತೆ ಪೊಲೀಸರಿಗೆ ದೂರು ನೀಡಿದ್ದಾಳೆ. ಇಷ್ಟಾದರೂ ಬುದ್ಧಿ ಕಲಿಯದ ಪತಿರಾಯ ಕೇಸ್‌ ವಾಪಸ್‌ ಪಡೆಯಲು ಬೆದರಿಕೆ ಹಾಕುತ್ತಿದ್ದಾನೆ.

ಮ್ಯಾಟ್ರಿಮೊನಿಯಲ್ಲಿ ನೋಡಿ ಮದ್ವೆಯಾದ ಗಂಡ, ಗಾಂಜಾ ನಶೆಯಲ್ಲಿ ಸ್ನೇಹಿತನೊಂದಿಗೆ ಹೆಂಡ್ತಿ ಹಂಚಿಕೊಂಡ

ಸ್ನೇಹಿತರ ಜೊತೆಗೂಡಿ ಪತ್ನಿ ಮೇಲೆ ಅತ್ಯಾಚಾರಕ್ಕೆ ಯತ್ನ: ಬೆಂಗಳೂರಿನಲ್ಲಿ ಸ್ನೇಹಿತರ ಜೊತೆ ಸೇರಿ ಪತ್ನಿ ಆತ್ಯಾಚಾರಕ್ಕೆ ಯತ್ನ ಮಾಡಿರುವ ಘಟನೆ ನಡೆದಿದೆ. ಪತಿಯ ಸ್ನೇಹಿತರು ಡ್ರಗ್ಸ್‌ ಮತ್ತು ಗಾಂಜಾ ಸೇವಿಸಿ ಆತನ ಮುಂದೆಯೇ ಪತ್ನಿಯನ್ನು ಅತ್ಯಾಚಾರಕ್ಕೆ ಎಳೆದಾಡಿದ್ದಾರೆ. ಸ್ನೇಹಿತರ ಜೊತೆ ಸೇರಿ ಪತ್ನಿಗೆ ಪತಿ ಲೈಂಗಿಕ ಕಿರುಕುಳ ನೀಡಿದ್ದಾನೆ. ಎಂದು ಆಂಧ್ರಪ್ರದೇಶ ಕಾಕಿನಾಡ ಮೂಲದ ಪತಿಯ ವಿರುದ್ದ ದೂರು ದಾಖಲು ಆಗಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಸುಬ್ರಮಣ್ಯಪುರ ಠಾಣೆ ಪೊಲೀಸರು ಆರೋಪಿಗಳ ಸೆರೆಹಿಡಿದು ಜೈಲಿಗಟ್ಟಿದ್ದಾರೆ. ಮನೆಯಲ್ಲಿ ಗಾಂಜಾ ಸೇವಿಸಿ ಪತ್ನಿಯ ಮೇಲೆ ಪತಿಯ ಸ್ನೇಹಿತರಿಂದ ಆತ್ಯಾಚಾರಕ್ಕೆ ಯತ್ನ ನಡೆದಿದೆ. ಈ ವೇಳೆ ತಪ್ಪಿಸಿಕೊಂಡ ಬಂದ ಪತ್ನಿಯಿಂದ ದೂರು ದಾಖಲು ಮಾಡಿದ್ದಾಳೆ. ಇಷ್ಟಾದರೂ ಕೇಸ್ ವಾಪಸ್ಸು ಪಡೆಯಲು ಗಂಡನೇ ಹಣ ಕೊಟ್ಟು ಪೊಲೀಸರಿಂದ ಒತ್ತಡ ಹಾಕಿಸಿದ್ದಾರೆ. ಇದರಿಂದ ನೊಂದ ಮಹಿಳೆ ಪೊಲೀಸ್‌ ಸ್ಟೇಷನ್ ಮುಂದೆ ಪ್ರತಿಭಟನೆಗೆ ಮುಂದಾಗಿದ್ದಾಳೆ.