KSOUನಲ್ಲಿ ಮೂರು ಹೊಸ ಕೋರ್ಸ್ ಮಾನ್ಯತೆಗೆ ಮನವಿ
ಕೆಎಸ್‌ಒಯುನಲ್ಲಿ ಮೂರು ಹೊಸ ಕೋರ್ಸ್ ಮಾನ್ಯತೆಗೆ ಯುಜಿಸಿ ಬಳಿ ಮನವಿ ಮಾಡಲಾಗಿದೆ ಎಂದು ಕುಲಪತಿ ಪೊ›.ಎಸ್. ವಿದ್ಯಾಶಂಕರ್ ತಿಳಿಸಿದ್ದಾರೆ. ಈ ಶೈಕ್ಷಣಿಕ ಸಾಲಿನ ಪ್ರವೇಶ ಪ್ರಕ್ರಿಯೆ ಆರಂಭ, ದ್ವಿ ಪದವಿ ಕೋರ್ಸ್‌ಗೆ ಅವಕಾಶ ಇರಲಿದೆ ಎಂದಿದ್ದಾರೆ.
ಮಂಗಳೂರು (ಜೂನ್ 28) :ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ( Karnataka State Open University - ಕೆಎಸ್‌ಒಯು)ವು ಈ ಶೈಕ್ಷಣಿಕ ವರ್ಷದಲ್ಲಿ ಬಿಎಸ್‌ಡಬ್ಲ್ಯೂ, ಎಂಎಸ್‌ಡಬ್ಲ್ಯೂ, ಎಂಸಿಎ ಹೊಸ ಕೋರ್ಸ್‌ಗಳಿಗೆ ವಿಶ್ವವಿದ್ಯಾನಿಲಯ ಅನುದಾನ ಆಯೋಗದಿಂದ ( University Grants Commission - ಯುಜಿಸಿ) ಮಾನ್ಯತೆ ಕೋರಲಾಗಿದೆ ಎಂದು ಕುಲಪತಿ ಪೊ›.ಎಸ್. ವಿದ್ಯಾಶಂಕರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹೊಸ ಕೋರ್ಸ್‌ಗಳಿಗೆ ಮಾನ್ಯತೆ ಪಡೆಯುವ ವಿಶ್ವಾಸ ಹೊಂದಿದ್ದು, ಮಾನ್ಯತೆ ದೊರೆತರೆ ಈ ಶೈಕ್ಷಣಿಕ ವರ್ಷದಿಂದಲೇ ಕೋರ್ಸ್‌ಗಳನ್ನು ಪ್ರಾರಂಭಿಸಲಾಗುವುದು ಎಂದು ಹೇಳಿದರು.
KSOU Admission 2022; ಕರಾಮುವಿ ಪ್ರವೇಶಾತಿಗೆ ಆನ್‌ಲೈನ್ ಅರ್ಜಿ ಆಹ್ವಾನ
ಪ್ರವೇಶಾತಿ ಆರಂಭ: ಕೆಎಸ್‌ಒಯುನಲ್ಲಿ 2022-23ನೇ ಸಾಲಿನ ವಿವಿಧ ತರಗತಿಗಳಿಗೆ ಪ್ರವೇಶಾತಿ ಪ್ರಾರಂಭವಾಗಿದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಈ ಸಾಲಿನಲ್ಲಿ 5000 ಪ್ರವೇಶಾತಿ ಮಾಡುವ ಗುರಿ ಹೊಂದಲಾಗಿದೆ. ಮಂಗಳೂರಿನ ರಥಬೀದಿ ದಯಾನಂದ ಪೈ, ಸತೀಶ್ ಪೈ ಪ್ರಥಮ ದರ್ಜೆ ಕಾಲೇಜಿನಲ್ಲಿ ಮುಕ್ತ ವಿವಿಗೆ ಪ್ರವೇಶಾತಿ ಪಡೆಯಬಹುದು. ಹೆಚ್ಚಿನ ಮಾಹಿತಿಗೆ https://ksoumysuru.ac.in/ ಸಂಪರ್ಕಿಸಬಹುದು ಎಂದರು.
ವಿವಿಯಲ್ಲಿ ಯುಜಿ ಮತ್ತು ಪಿಜಿ, ಡಿಪ್ಲೊಮಾ, ಪಿಜಿ ಸರ್ಟಿಫಿಕೇಟ್‌ನ ವಿವಿಧ ಕೋರ್ಸ್‌ಗಳಿವೆ. ಯುಜಿಸಿ ನಿಯಮಾನುಸಾರ ಲರ್ನರ್ ಸಪೋರ್ಟಿಂಗ್ ಸೆಂಟರ್‌ನ್ನು ಗುರುತಿಸಿ, ಅಧಿಕೃತ ಮಾನ್ಯತೆ ನೀಡಲಾಗಿದೆ. ಯುಜಿಸಿ ನಿಯಮಾವಳಿಯಂತೆ ವಿವಿ ದ್ವಿ-ಪದವಿಗಳಿಗೆ ಅವಕಾಶ ಕಲ್ಪಿಸಿದೆ. ಒಂದು ಕೋರ್ಸ್ ಅಧ್ಯಯನ ಮಾಡುತ್ತಿರುವಾಗಲೇ ಇನ್ನೊಂದು ಕೋರ್ಸ್‌ಗೆ ಪ್ರವೇಶಾತಿ ಹೊಂದಿ ಪದವಿ ಗಳಿಸಬಹುದು ಎಂದರು.
ವಿವಿಯ ಪ್ರವೇಶಾತಿ, ಅಂಕಪಟ್ಟಿಡಿಜಿಟಲೀಕರಣಗೊಂಡಿದೆ. ಒಟ್ಟು ಪ್ರವೇಶಾತಿಯನ್ನು ಆನ್‌ಲೈನ್ ಮೂಲಕವೇ ನಡೆಸಲಾಗುತ್ತದೆ. ಪಾರದರ್ಶಕತೆಗೆ ಅನುಗುಣವಾಗಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಲು ಕ್ರಮ ಕೈಗೊಳ್ಳಲಾಗಿದೆ. ವಿದ್ಯಾರ್ಥಿಗಳು ತಾವು ಇರುವ ಜಿಲ್ಲೆಯ ಮುಕ್ತ ವಿವಿ ಕೇಂದ್ರಗಳ ಮೂಲಕ ಶೈಕ್ಷಣಿಕ ಪ್ರಯೋಜನ ಪಡೆದುಕೊಳ್ಳಬಹುದು. ಪ್ರಾದೇಶಿಕ ಕೇಂದ್ರಗಳಲ್ಲಿ ತರಗತಿ ಮತ್ತು ಪರೀಕ್ಷೆಗಳು ನಡೆಯಲಿವೆ ಎಂದು ಪ್ರೊ.ವಿದ್ಯಾಶಂಕರ್ ತಿಳಿಸಿದರು.
ರಥಬೀದಿ ಕಾಲೇಜು ಪ್ರಾಂಶುಪಾಲ ಡಾ. ಜಯಕರ್, ಮೂಡುಬಿದಿರೆ ಆಳ್ವಾಸ್ ಕಾಲೇಜು ದೂರಶಿಕ್ಷಣ ವಿಭಾಗ ಸಂಯೋಜಕ ಬಾಲಕೃಷ್ಣ ಶೆಟ್ಟಿ, ಕೆಎಸ್‌ಒಯು ಮಂಗಳೂರು ಪ್ರಾದೇಶಿಕ ನಿರ್ದೇಶಕ ಡಾ. ಬಸವರಾಜು, ರಥಬೀದಿ ಕಾಲೇಜು ಪ್ರಾಧ್ಯಾಪಕ ನಾಗರಾಜ್ ಇದ್ದರು.
ಶುಲ್ಕ ವಿನಾಯ್ತಿ: ವಿವಿಯಲ್ಲಿ ಇದೇ ಮೊದಲ ಬಾರಿಗೆ ಶುಲ್ಕ ಪಾವತಿಗೆ ಸಂಬಂಧಿಸಿ ಇಎಂಐಗೆ ಅವಕಾಶ ಕಲ್ಪಿಸಲಾಗಿದೆ. ರಾಜ್ಯದಲ್ಲಿ ಮೊದಲ ಬಾರಿಗೆ ಆಟೋ ಮತ್ತು ಕ್ಯಾಬ್ ಚಾಲಕರ ಮಕ್ಕಳಿಗೆ ಶುಲ್ಕದಲ್ಲಿ ವಿನಾಯಿತಿ ನೀಡಲಾಗುತ್ತಿದೆ. ಆನ್‌ಲೈನ್ ಮೂಲಕ ಇ ಲರ್ನಿಂಗ್ ಮೆಟೀರಿಯಲ್ ಪಡೆಯುವ ವಿದ್ಯಾರ್ಥಿಗಳಿಗೆ ಶುಲ್ಕದಲ್ಲಿ ಶೇ. 15 ರಿಯಾಯಿತಿ ನೀಡಲಾಗುತ್ತಿದೆ. ಎಸ್‌ಸಿ, ಎಸ್‌ಟಿ, ಒಬಿಸಿ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ಪ್ರವೇಶಾತಿ ಕಲ್ಪಿಸಲಾಗಿದೆ. ಕೊರೋನಾ ರೋಗದಲ್ಲಿ ತಂದೆ- ತಾಯಿಯನ್ನು ಕಳೆದುಕೊಂಡ ಮಕ್ಕಳಿಗೆ ಉಚಿತ ಪ್ರವೇಶಾತಿ ಒದಗಿಸಲಾಗುತ್ತಿದೆ ಎಂದು ಪ್ರೊ.ವಿದ್ಯಾಶಂಕರ್ ವಿವರಿಸಿದರು.
MID DAY MEAL SCHEME ಮಕ್ಕಳೊಂದಿಗೆ ಬಿಸಿಯೂಟ ಸವಿದ ಅಧಿಕಾರಿ
ಶಿಕ್ಷಕರ ಹುದ್ದೆಗೆ ಅರ್ಜಿ ಆಹ್ವಾನ: ಚಿಕ್ಕಬಳ್ಳಾಪುರ: 2022-23ನೇ ಸಾಲಿಗೆ ಹಿಂದುಳಿದ ವರ್ಗಗಳ ಮೊರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆ, ಕೊಲುಮೇನಹಳ್ಳಿ, ಚಿಕ್ಕಬಳ್ಳಾಪುರ ಇಲ್ಲಿ, ಹಿಂದಿ ಭಾಷಾ ಶಿಕ್ಷಕರು ಹಾಗೂ ಗಣಿತ ಶಿಕ್ಷಕರ ಹುದ್ದೆ ಖಾಲಿಯಿದ್ದು, ಸದರಿ ಹುದ್ದೆಗೆ ಗೌರವಧನದ ಆಧಾರದ ಮೇಲೆ ಹಿಂದಿ ಭಾಷಾ ಶಿಕ್ಷಕರ ಹುದ್ದೆಗೆ ಹಿಂದಿ ಬಿ.ಎಡ್ ಮತ್ತು ಗಣಿತ ಶಿಕ್ಷಕರ ಹುದ್ದೆಗೆ ವಿಜ್ಞಾನ ವಿಭಾಗದಲ್ಲಿ ಪಿ.ಸಿ.ಎಂ.ಬಿ ವಿದ್ಯಾರ್ಹತೆ ಹೊಂದಿರುವ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ತಮ್ಮ ವಿವರಗಳನ್ನು 01.07.2022ರ ಸಂಜೆ 5.30 ರೊಳಗೆ ಹಿಂದುಳಿದ ವರ್ಗಗಳ ಮೊರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆ, ಕೊಲುಮೇನಹಳ್ಳಿ, ಚಿಕ್ಕಬಳ್ಳಾಪುರ ಇಲ್ಲಿಗೆ ಅರ್ಜಿ ಸಲ್ಲಿಸತಕ್ಕದ್ದು. ಹೆಚ್ಚಿನ ಮಾಹಿತಿಗಾಗಿ ಹಿಂದುಳಿದ ವರ್ಗಗಳ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಕೊಲುಮೇನಹಳ್ಳಿ$್ಳಯ ಪ್ರಾಂಶುಪಾಲರ ಮೊಬೈಲ್ ನಂ: 9686907161 ಗೆ ಸಂಪರ್ಕಿಸಬಹುದು.