SSLC Result ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆ ಫಲಿತಾಂಶ ಪ್ರಕಟ

2022ರ ಸಾಲಿನ ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆ ಫಲಿತಾಂಶ ಪ್ರಕಟವಾಗಿದೆ. 37,479 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

karnataka SSLC Supplementary Exam 2022 Result Announced rbj

ಬೆಂಗಳೂರು, (ಜುಲೈ.20): ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆ ಫಲಿತಾಂಶ ಪ್ರಕಟವಾಗಿದೆ. ಆದ್ರೆ, ವೆಬ್‌ಸೈಟ್‌ನಲ್ಲಿ ನಾಳೆ (ಜುಲೈ 21) ಫಲಿತಾಂಶ ಲಭ್ಯವಾಗಲಿದೆ.

ಈ ಬಗ್ಗೆ ಮಾಹಿತಿ ನೀಡಿದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿಸಿ ನಾಗೇಶ್, 2022ರ ಜೂನ್ 27ರಿಂದ ಜುಲೈ 4ರ ವರೆಗೆ ನಡೆದ ಎಸ್‌ಎಸ್ಎಲ್‌ಸಿ ಪೂರಕ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, 37,479 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಪೂರಕ ಪರೀಕ್ಷೆಗೆ 94,669 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು. ಉತ್ತೀರ್ಣ ಪ್ರಮಾಣ ಶೇ.39.59 ಇದೆ ಎಂದರು.

37 ವರ್ಷದ ಬಳಿಕ 10ನೇ ತರಗತಿ ಪರೀಕ್ಷೆ ಪಾಸ್ ಮಾಡಿದ ಅಮ್ಮ

ನಾಳೆ(ಗುರುವಾರ) ಮಧ್ಯಾಹ್ನ 12 ಗಂಟೆ ನಂತರ ಈ ವೆಬ್‌ಸೈಟ್‌ನಲ್ಲಿ ( https://karresults.nic.in/ ) ಫಲಿತಾಂಶ ವೀಕ್ಷಿಸಬಹುದು. ಅಲ್ಲದೇ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿರುವ ಫೋನ್ ನಂಬರ್‌ಗಳಿಗೆ ಎಸ್ಎಂಎಸ್ ಮೂಲಕವೂ ಫಲಿತಾಂಶ ಕಳುಹಿಸಲಾಗುತ್ತದೆ ಎಂದು ತಿಳಿಸಿದರು.

SSLCಯಲ್ಲಿ ಶೂನ್ಯ ಸಾಧನೆಗೈದ BBMP ಶಾಲೆಗಳ ಶಿಕ್ಷಕರ ವಜಾ: 2021 ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ (SSLC Exam) ಶೇ.99.94 ರಷ್ಟು ಫಲಿತಾಂಶ ದಾಖಲಿಸಿದ ಬಳಿಕ ಈ ಸಾಲಿನಲ್ಲಿ ಬಿಬಿಎಂಪಿಯ ಶಿಕ್ಷಣ ಇಲಾಖೆಗೆ ದೊಡ್ಡ ಶಾಕ್ ಎದುರಾಗಿದ್ದು, ಪುರಸಭೆಯಿಂದ ನಿರ್ವಹಣೆಯಾಗುತ್ತಿರುವ ಶಾಲೆಗಳಲ್ಲಿ (School) ಫಲಿತಾಂಶ ತೀವ್ರ ಕುಸಿತ ಕಂಡಿದೆ. ಈ ಹಿನ್ನೆಲೆಯಲ್ಲಿ ಶೂನ್ಯ ಸಾಧನೆ ಮಾಡಿರುವ ಎರಡು ಶಾಲೆಗೆ ನೋಟಿಸ್ ನೀಡಲಾಗಿದ್ದು, ಶಿಕ್ಷಕರನ್ನು ವಜಾ ಮಾಡಲಾಗಿದೆ.

ಬಿಬಿಎಂಪಿ (BBMP) ಶಾಲೆಗಳು 2022ನೇ ಸಾಲಿನ ಎಸ್ಎಸ್  ಶೇ.71.27 ರಷ್ಟು ತೇರ್ಗಡೆ ಫಲಿತಾಂಶವನ್ನು ಹೊಂದಿದ್ದು, ತೀವ್ರ ಕುಸಿತ ಕಂಡಿದೆ.  ಜೊತೆಗೆ ಎರಡು ಶಿಕ್ಷಣ ಸಂಸ್ಥೆಗಳು  ಶೂನ್ಯ ಸಾಧನೆ ಮಾಡಿದ್ದು,  ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಹಾಜರಾದ ಮರ್ಫಿ ಟೌನ್‌ನ 19 ವಿದ್ಯಾರ್ಥಿಗಳು ಮತ್ತು ಕೆ.ಜಿ.ನಗರದ  ಶಾಲೆಯ ಇಬ್ಬರು ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. 2020 ರಲ್ಲಿ ಶೇ.50.16   2019ರಲ್ಲಿ ಶೇ.52  ಮತ್ತು 2018 ರಲ್ಲಿ ಶೇ. 51 ಫಲಿತಾಂಶವಿತ್ತು. ಆ ವರ್ಷಗಳಿಗೆ ಹೋಲಿಸಿದರೆ 2022 ರ ಉತ್ತೀರ್ಣ ಶೇಕಡಾವಾರು ಶೇಕಡಾ 71.27 ರಷ್ಟಿದೆ. ವಾಸ್ತವವಾಗಿ, ಕೆ ಜಿ ನಗರ ಶಾಲೆಯು 2020 ರ ನಂತರ ಎರಡನೇ ಬಾರಿಗೆ ಶೂನ್ಯ ಶೇಕಡಾವನ್ನು ಪಡೆದುಕೊಂಡಿದೆ. 

Latest Videos
Follow Us:
Download App:
  • android
  • ios