Asianet Suvarna News Asianet Suvarna News

37 ವರ್ಷದ ಬಳಿಕ 10ನೇ ತರಗತಿ ಪರೀಕ್ಷೆ ಪಾಸ್ ಮಾಡಿದ ಅಮ್ಮ

ಶಿಕ್ಷಣ ತೊರೆದು ಬರೋಬರಿ 37 ವರ್ಷದ ಬಳಿಕ ಮಹಿಳೆಯೊಬ್ಬರು  10ನೇ ತರಗತಿ ಪರೀಕ್ಷೆ ಬರೆದು ಪಾಸು ಮಾಡಿದ್ದು, ಈ ಮೂಲಕ ಅನೇಕರಿಗೆ ಅವರು ಸ್ಪೂರ್ತಿ ತುಂಬಿದ್ದಾರೆ. ಮಹಿಳೆಯ ಪುತ್ರ ಪ್ರಸಾದ್ ಜುಂಬಾಲೆ ಅವರು ಸಾಮಾಜಿಕ ಜಾಲತಾಣ ಲಿಂಕ್ಡಿನ್‌ನಲ್ಲಿ ತಮ್ಮ ತಾಯಿಯ ಕತೆಯನ್ನು ಹೇಳಿಕೊಂಡಿದ್ದಾರೆ.

desi mom who cleared her Class 10 examinations after 37 years of quitting education akb
Author
Bangalore, First Published Jun 24, 2022, 11:51 AM IST

ಪ್ರತಿಯೊಬ್ಬರಿಗೂ ಶಿಕ್ಷಣ ಸಿಗುವ ಸಲುವಾಗಿ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದರೂ, ಅನೇಕರ ಪಾಲಿಗೆ ಶಿಕ್ಷಣ ಇಂದಿಗೂ ಗಗನಕುಸುಮವಾಗಿದೆ. ಬಡತನದ ಕಾರಣಕ್ಕೆ ಶಿಕ್ಷಣವನ್ನು ಅರ್ಧದಲ್ಲಿ ಕೈ ಬಿಟ್ಟ ಅನೇಕ ಜನರು ನಮ್ಮ ಮಧ್ಯೆ ಇದ್ದಾರೆ. ಹೀಗೆ ಶಿಕ್ಷಣವನ್ನು ಅರ್ಧದಲ್ಲಿ ಕೈ ಬಿಟ್ಟ ಮಹಿಳೆಯೊಬ್ಬರು ತಮ್ಮ 57ನೇ ವರ್ಷಕ್ಕೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.

ಶಿಕ್ಷಣ ತೊರೆದು ಬರೋಬರಿ 37 ವರ್ಷದ ಬಳಿಕ ಮಹಿಳೆಯೊಬ್ಬರು  10ನೇ ತರಗತಿ ಪರೀಕ್ಷೆ ಬರೆದು ಪಾಸು ಮಾಡಿದ್ದು, ಈ ಮೂಲಕ ಅನೇಕರಿಗೆ ಅವರು ಸ್ಪೂರ್ತಿ ತುಂಬಿದ್ದಾರೆ. ಮಹಿಳೆಯ ಪುತ್ರ ಪ್ರಸಾದ್ ಜುಂಬಾಲೆ ಅವರು ಸಾಮಾಜಿಕ ಜಾಲತಾಣ ಲಿಂಕ್ಡಿನ್‌ನಲ್ಲಿ ತಮ್ಮ ತಾಯಿಯ ಕತೆಯನ್ನು ಹೇಳಿಕೊಂಡಿದ್ದಾರೆ. ತನ್ನ ತಾಯಿಗೆ 16 ವರ್ಷವಿದ್ದಾಗ ಅವರ ತಂದೆ ತೀರಿಕೊಂಡಿದ್ದು, ಇದಾದ ನಂತರ ತನ್ನ ಕುಟುಂಬಕ್ಕೆ ನೆರವಾಗುವ ಸಲುವಾಗಿ ತನ್ನ ತಾಯಿ ಶಿಕ್ಷಣವನ್ನು ತೊರೆಯಬೇಕಾಯಿತು ಎಂದ ಪ್ರಸಾದ್ ತಿಳಿಸಿದ್ದಾರೆ.  

ಯಾರಿಗುಂಟು ಯಾರಿಗಿಲ್ಲ ಇಂಥ ಚಾನ್ಸ್‌: ವಿಟಿಯು ಎಡವಟ್ಟಿಗೆ 100 ಅಂಕದ ಪರೀಕ್ಷೆ ಬರೆದವನಿಗೆ 106 ಮಾರ್ಕ್ಸ್..!
 

ಕಳೆದ ಡಿಸೆಂಬರ್ (2021) ನಲ್ಲಿ ಪ್ರಸಾದ್ ತಾಯಿ ಮತ್ತೆ ಶಿಕ್ಷಣ ಪಡೆಯಲು ನಿರ್ಧರಿಸಿದರು. ಅಲ್ಲದೇ ಈ ವಿಚಾರವನ್ನು ಪ್ರಸ್ತುತ ಐರ್ಲೆಂಡ್‌ನಲ್ಲಿ ವಾಸಿಸುತ್ತಿರುವ ಪ್ರಸಾದ್ ಸೇರಿದಂತೆ ತನ್ನೊಂದಿಗೆ ವಾಸಿಸುತ್ತಿರುವ ಇನ್ನೊಬ್ಬ ಮಗ ಹಾಗೂ ಪತಿಯ ಬಳಿಯೂ ಈ ವಿಚಾರವನ್ನು ತಿಂಗಳುಗಳ ಕಾಲ ಮುಚ್ಚಿಟ್ಟಿದ್ದರು. 

ನಾನು ಐರ್ಲೆಂಡ್‌ನಲ್ಲಿದ್ದಾಗ (Ireland)  ಮತ್ತು ಭಾರತದಲ್ಲಿ (India) ರಾತ್ರಿ ಸಮಯದಲ್ಲಿ ಮನೆಗೆ ಕರೆ ಮಾಡುತ್ತಿದ್ದಾಗ, ನಾನು ಅಮ್ಮ ಎಲ್ಲಿ ಎಂದು ಕೇಳುತ್ತಿದ್ದೆ? ಆಗ ಆಕೆ ವಾಕಿಂಗ್‌ಗೆ ಹೋಗಿದ್ದಾಳೆ ಎಂದು ನನಗೆ ಹೇಳುತ್ತಿದ್ದರು. ಆದರೆ ವಾಕ್‌ನಲ್ಲಿ ಆಕೆಗೆ ಆಸಕ್ತಿ ಇದೆ ಎಂದು ಕೇಳಿ ನನಗೆ ವಿಚಿತ್ರ ಎನಿಸಿತು. ಆದರೆ ವಾಸ್ತವದಲ್ಲಿ ಆಕೆ ರಾತ್ರಿ ಶಾಲೆಗೆ ಹೋಗುತ್ತಿದ್ದಳು, ಒಂದೇ ಸೂರಿನಡಿ ಇರುವ ನನ್ನ ತಂದೆ ಮತ್ತು ಸಹೋದರನಿಂದ ಈ ರಹಸ್ಯವನ್ನು ಒಂದು ತಿಂಗಳು ಮರೆಮಾಡಲು ಆಕೆ ಯಶಸ್ವಿಯಾದಳು ಎಂದು ಪ್ರಸಾದ್ ಬರೆದಿದ್ದಾರೆ. ಇತ್ತೀಚೆಗಷ್ಟೇ ತನ್ನ ತಾಯಿಯ ರಾತ್ರಿ ಶಾಲೆಯ ತರಗತಿಗಳ ಬಗ್ಗೆ ಪ್ರಸಾದ್‌ಗೆ ತಿಳಿಯಿತು.

ಹುತಾತ್ಮ ಸೇನಾಧಿಕಾರಿ ಪ್ರಸಾದ್‌ ಪತ್ನಿ ಗೌರಿ ಒಟಿಎ ಪರೀಕ್ಷೆ ಪಾಸ್‌!
 

ಅವಳ ದಿನಗಳು, 10ನೇ ತರಗತಿಯ ಪಠ್ಯಕ್ರಮದಿಂದ ಎಲ್ಲಾ ಪಾಠಗಳನ್ನು ಕಲಿಯುವುದರೊಂದಿಗೆ ಪ್ರಾರಂಭವಾಗುತ್ತಿತ್ತು. ಒಂದು ದಿನ ನಾನು ಭಾರತಕ್ಕೆ ಹಿಂತಿರುಗಿದಾಗ, ಅವಳು ನನಗೆ ತನ್ನ ನೋಟ್‌ಬುಕ್ ಅನ್ನು ತೋರಿಸಿದಳು ಮತ್ತು ಅವಳು ಬೀಜಗಣಿತ ಮತ್ತು ಇಂಗ್ಲಿಷ್‌ನಲ್ಲಿ ತೋರಿದ ಸಾಧನೆ ನೋಡಿ ನಾನು ಆಶ್ಚರ್ಯಚಕಿತನಾದೆ. ಅಲ್ಲದೆ ಅಂದು ಶಿಕ್ಷಣ ತೊರೆದ ಅವರ ಗುಂಪು ಈಗ ಹೇಗೆ ಸಂಭ್ರಮಿಸುತ್ತಿದೆ ಎಂಬುದನ್ನು ಫೋಟೋಗಳ ಮೂಲಕ ಅವರು ತೋರಿಸಿದರು ಎಂದು ಪ್ರಸಾದ್ ಬರೆದಿದ್ದಾರೆ. 

ಹಲವು ವರ್ಷಗಳ ಬ್ರೇಕ್‌ನ ನಂತರ ಶಿಕ್ಷಣ ಪುನಾರಂಭಿಸಿದ ಅವಳು ಅವರ ಬ್ಯಾಚ್‌ನ ಅದ್ಭುತ ವಿದ್ಯಾರ್ಥಿಯಾಗಿದ್ದಳು. ಅವಳ ಪರೀಕ್ಷೆಗಳು ಮಾರ್ಚ್‌ನಲ್ಲಿದ್ದರೆ,  ನನ್ನ ಮದುವೆ ಫೆಬ್ರವರಿಯಲ್ಲಿ ನಿಗದಿಯಾಗಿತ್ತು. ಹೀಗಿದ್ದೂ ಆಕೆ ಎಲ್ಲವನ್ನು ಒಟಟಿಗೆ ಸಮರ್ಪಕವಾಗಿ ನಿಭಾಯಿಸಿದ್ದಳು. ಇಷ್ಟೆಲ್ಲಾ ಕಾರ್ಯಗಳನ್ನು ಮಾಡಿ ಆಕೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇಕಡಾ 79.6 ರಷ್ಟು  ಅಂಕಗಳನ್ನು ಗಳಿಸಿ ಪಾಸಾಗಿದ್ದಾರೆ ಎಂದು ಅವರ ಪುತ್ರ ಪ್ರಸಾದ್ (Prasad) ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

ಕೆಲವೊಮ್ಮೆ ನಾನು ತುಂಬಾ ಅದೃಷ್ಟಶಾಲಿ ಎಂದು ನಾನು ಭಾವಿಸುತ್ತೇನೆ, ನಾನು ಯಾವುದರ ಬಗ್ಗೆಯೂ ಚಿಂತಿಸದೆ ಮತ್ತು ನನ್ನಲ್ಲಿರುವ ಸವಲತ್ತುಗಳಿಂದಾಗಿ ಈ ಸ್ಥಾನಕ್ಕೆ ಬರಲು ಸಾಧ್ಯವಾಯಿತು, ನನ್ನ ತಾಯಿಯು ನನ್ನಂತೆಯೇ ಅದೇ ಸವಲತ್ತು ಹೊಂದಿದ್ದರೆ ಯಾರು ಹೆಚ್ಚು ಸಾಧಿಸಬಹುದೆಂದು ಯಾರಿಗೆ ಗೊತ್ತು? ನಾನು ಯಾವಾಗಲೂ ನನ್ನ ತಾಯಿಯ (mother) ಬಗ್ಗೆ ತುಂಬಾ ಹೆಮ್ಮೆಪಡುತ್ತೇನೆ ಮತ್ತು ಈಗ ಇದು ಯಾವಾಗಲೂ ನನ್ನ ಮನಸ್ಸಿನಲ್ಲಿ ಒಂದು ಪಾಠವನ್ನು ಕಲಿಸಿದೆ. ಕಲಿಕೆ ಎಂದಿಗೂ ನಿಲ್ಲುವುದಿಲ್ಲ ಎಂದು ಪ್ರಸಾದ್ ಬರೆದುಕೊಂಡಿದ್ದಾರೆ. 
 

Follow Us:
Download App:
  • android
  • ios