SSLC Time Table: ಎಸ್ಎಸ್ಎಲ್ಸಿ ಮುಖ್ಯಪರೀಕ್ಷೆಯ ಅಂತಿಮ ವೇಳಾಪಟ್ಟಿ ಪ್ರಕಟ
* ಎಸ್‌ಎಸ್‌ಎಲ್‌ಸಿ ಮುಖ್ಯಪರೀಕ್ಷೆಯ ಅಂತಿಮ ವೇಳಾಪಟ್ಟಿ ಪ್ರಕಟ
*2021-22ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ ವೇಳಾಪಟ್ಟಿ ಪ್ರಕಟಿಸಿದ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ
* ಮಾರ್ಚ್ 28ರಿಂದ ಏಪ್ರಿಲ್ 11ರವರೆಗೆ ಪರೀಕ್ಷೆಗಳು ನಡೆಯಲಿ
ಬೆಂಗಳೂರು, (ಜ.25): ಕಳೆದ ವಾರ ಅಷ್ಟೇ ಎಸ್‌ಎಸ್ಎಲ್‌ಸಿ(SSLC) ಪೂರ್ವ ಸಿದ್ಧತಾ ಹಾಗೂ ಮುಖ್ಯ ಪರೀಕ್ಷೆಯ ತಾತ್ಕಾಕಲಿಕ ವೇಳಾಪಟ್ಟಿ ಪ್ರಕಟಿಸಲಾಗಿತ್ತು,ಇದೀಗ ಇಂದು(ಮಂಗಳವಾರ) ಅಂತಿಮ ವೇಳಾಪಟ್ಟಿಯಲ್ಲಿ (SSLC Final Time Table) ಪ್ರಕಟಿಸಲಾಗಿದೆ. ಈ ವೇಳಾಪಟ್ಟಿಯಂತೆ ಪರೀಕ್ಷೆಗಳು ನಡೆಯಲಿವೆ.
ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಎಸ್ಎಸ್ಎಲ್ಸಿ ಮುಖ್ಯಪರೀಕ್ಷೆಯ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಮಾರ್ಚ್ 28ರಿಂದ ಏಪ್ರಿಲ್ 11ರವರೆಗೆ ಪರೀಕ್ಷೆಗಳು ನಡೆಯಲಿವೆ.
SSLC Exams ಕೊರೋನಾ ಹೆಚ್ಚಳ ಭೀತಿ, ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಸ್ಪಷ್ಟನೆ ಕೊಟ್ಟ ಶಿಕ್ಷಣ ಸಚಿವ
ಪರೀಕ್ಷಾ ಸಮಯ ಬೆಳಗ್ಗೆ 10.30ರಿಂದ ಮಧ್ಯಾಹ್ನ 1.45. ಪ್ರತಿ ವಿಷಯಕ್ಕೂ ಪ್ರಶ್ನೆ ಪತ್ರಿಕೆ ಓದಲು 15 ನಿಮಿಷ ಕಾಲಾವಕಾಶ ನೀಡಲಾಗಿದೆ.
ಕಳೆದ ವಾರ ತಾತ್ಕಾಲಿಕ ವೇಳಾಪಟ್ಟಿ ಪ್ರಕಟಿಸಲಾಗಿದ್ದು, ಮಾರ್ಚ್ 28 ರಿಂದ ಏಪ್ರಿಲ್ 11 ರವರೆಗೆ ಪರೀಕ್ಷೆಗಳನ್ನ ನಡೆಸಲು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ತೀರ್ಮಾನಿಸಿತ್ತು.
ಯಾರಾದರೂ ಆಕ್ಷೇಪಣೆ ಸಲ್ಲಿಕೆ ಮಾಡಲು ಅವಕಾಶ ನೀಡಿತ್ತು. ಆದ್ರೆ, ಯಾರು ಆಕ್ಷೇಪಣ ಸಲ್ಲಿಸದಿದ್ದರಿಂದ ತಾತ್ಕಾಲಿಕವಾಗಿದ್ದನ್ನು ಅಂತಿಮಗೊಳಿಸಲಾಗಿದೆ.
ಅಂತಿಮ ವೇಳಾಪಟ್ಟಿ ಇಂತಿದೆ
ಮಾರ್ಚ್ 28- ಪ್ರಥಮ ಭಾಷೆ,
ಮಾರ್ಚ್ 30- ದ್ವಿತೀಯ ಭಾಷೆ ಇಂಗ್ಲೀಷ್, ಕನ್ನಡ
ಏಪ್ರಿಲ್ 1- ಅರ್ಥ ಶಾಸ್ತ್ರ, ಕೋರ್ ಸಬ್ಜೆಕ್ಟ್,
ಏಪ್ರಿಲ್ 4- ಗಣಿತ, ಸಮಾಜಶಾಸ್ತ್ರ
ಏಪ್ರಿಲ್ 6- ಸಮಾಜ ವಿಜ್ಞಾನ
ಏ.8- ತೃತೀಯ ಭಾಷೆ
ಏ.11- ವಿಜ್ಞಾನ, ರಾಜ್ಯಶಾಸ್ತ್ರ, ಕರ್ನಾಟಕ/ ಹಿಂದೂಸ್ತಾನಿ ಸಂಗೀತ ಪರೀಕ್ಷೆ ನಡೆಸಲು ತೀರ್ಮಾನಿಸಿದೆ.
ಪೂರ್ವ ಸಿದ್ಧತಾ ಪರೀಕ್ಷೆ ವೇಳಾಪಟ್ಟಿ
2021-22ನೇ ಸಾಲಿನ ಕರ್ನಾಟಕ ಎಸ್‌ಎಸ್‌ಎಲ್‌ಸಿ( SSLC) ಪೂರ್ವ ಸಿದ್ಧತಾ ಪರೀಕ್ಷೆ ವೇಳಾಪಟ್ಟಿ(SSLC Preparatory Exam Time Table) ಪ್ರಕಟವಾಗಿದ್ದು, ಫೆಬ್ರವರಿ 21 ರಿಂದ 26 ರವರೆಗೆ SSLC ಪೂರ್ವ ಸಿದ್ಧತಾ ಪರೀಕ್ಷೆ ನಡೆಯಲಿವೆ. ಬೆಳಗ್ಗೆ 1.30ರಿಂದ ಮಧ್ಯಾಹ್ನ 1.45ರ ವರಗೆ ಪರೀಕ್ಷೆಗಳು ನಡೆಯಲಿವೆ.
ಪೂರ್ವ ಸಿದ್ಧತಾ ಪರೀಕ್ಷೆ ವೇಳಾಪಟ್ಟಿ ಇಂತಿದೆ,
* 21-2-2022(ಪ್ರಥಮ ಭಾಷೆ: ಕನ್ನಡ, ತೆಲಗು, ತಮಿಳು, ಮರಾಠಿ, ಉರ್ದು, ಇಂಗ್ಲೀಷ್, ಸಂಸ್ಖ್ರತ,
* 22-2-2022: ಸಮಾಜ ವಿಜ್ಞಾನ
*23-2-2022 (ದ್ವಿತೀಯ ಭಾಷೆ): ಇಂಗ್ಲೀಷ್, ಕನ್ನಡ
* 24-2-2022: ಗಣಿತ
* 25-2-2022(ತೃತೀಯ ಭಾಷೆ): ಹಿಂದಿ, ಕನ್ನಡ, ಇಂಗ್ಲೀಷ್, ಅರೇಬಿಕ್, ಉರ್ದು, ಪರ್ಷಿಯನ್
*26-2-2022 (ಕೋರ್ ಸಬ್ಜೆಕ್ಟ್): ವಿಜ್ಞಾನ
PUC ಪರೀಕ್ಷೆ ವೇಳಾಪಟ್ಟಿ ರಿಲೀಸ್
ಎಸ್‌ಎಸ್‌ಎಲ್‌ಸಿ(SSLC) ಬೆನ್ನಲ್ಲೇ ಇದೀಗ ದ್ವೀತಿಯ ಪಿಯುಸಿ ಪರೀಕ್ಷೆಯ(PUC Exams) ತಾತ್ಕಾಲಿಕ ವೇಳಾಪಟ್ಟಿ(Provisional Time Table) ಬಿಡುಗಡೆ ಮಾಡಲಾಗಿದೆ.
ಮಂಗಳವಾರ ಪದವಿ ಪೂರ್ವ ಶಿಕ್ಷಣ ಇಲಾಖೆ (PUC Board) 2021-22ನೇ ಸಾಲಿನ ದ್ವೀತಿಯ ಪಿಯುಸಿಯ (Second PUC) ತಾತ್ಕಾಲಿಕ ವೇಳಾಪಟ್ಟಿ (Exam Timetable) ಬಿಡುಗಡೆ ಮಾಡಿದೆ.
ಪಿಯುಸಿ ವೇಳಾಪಟ್ಟಿ ಇಂತಿದೆ
ಏಪ್ರಿಲ್ 14- ಗಣಿತ
ಏಪ್ರಿಲ್ 18- ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ
ಏ.20- ಇತಿಹಾಸ, ಭೌತಶಾಸ್ತ್ರ
ಏಪ್ರಿಲ್ 22- ತರ್ಕಶಾಸ್ತ್ರ
ಏ.23- ಮನಃಶಾಸ್ತ್ರ, ರಸಾಯನಶಾಸ್ತ್ರ,
ಏ.25- ಅರ್ಥಶಾಸ್ತ್ರ
ಏ.26- ಹಿಂದಿ,
ಏಪ್ರಿಲ್ 28- ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ
ಏ.29- ಕನ್ನಡ
ಏ.30- ಸಮಾಜಶಾಸ್ತ್ರ, ಕಂಪ್ಯೂಟರ್ ಸೈನ್ಸ್
ಮೇ 2- ಭೂಗೋಳ ಶಾಸ್ತ್ರ ಹಾಗೂ ಜೀವಶಾಸ್ತ್ರ
ಮೇ 4- ಇಂಗ್ಲಿಷ್ ಪರೀಕ್ಷೆ ನಡೆಯಲಿದೆ.
ಕೊರೋನಾ ಪಾಸ್ ಇಲ್ಲ
ಕಳೆದ ವರ್ಷದಂತೆ ಈ ವರ್ಷ ಕೊರೋನಾ9Coronavirus) ಪಾಸ್ ಇರುವುದಿಲ್ಲ. ಎಲ್ಲಾ ವಿದ್ಯಾರ್ಥಿಗಳು ಎಸ್‌ಎಸ್‌ಎಲ್'ಸಿ ಪರೀಕ್ಷೆಗೆ (SSLC Exam)ಹಾಜರಾಗುತ್ತಾರೆಂದು ಕರ್ನಾಟಕ ಶಿಕ್ಷಣ ಸಚಿವ ಬಿ.ಸಿ.ನಾಗೇಶ್(BC Nagesh) ಸ್ಪಷ್ಟಪಡಿಸಿದ್ದಾರೆ.
ಕಳೆದ ವರ್ಷ ಕೋವಿಡ್ ಸಾಂಕ್ರಾಮಿಕ ರೋಗದಿಂದ ವಿದ್ಯಾರ್ಥಿಗಳು ಪರೀಕ್ಷೆಯಿಲ್ಲದೆ ಉತ್ತೀರ್ಣರಾದ ಬಗ್ಗೆ ಉಲ್ಲೇಖಿಸಿ ಪ್ರತಿಕ್ರಿಯೆ ನೀಡಿರುವ ಸಚಿವರು, 2020-21 ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳು ಮತ್ತು ಶಾಲೆಗಳು ತೀವ್ರವಾದ ಕೋವಿಡ್-ಸಂಬಂಧಿತ ಸಮಸ್ಯೆಗಳನ್ನು ಎದುರಿಸುತ್ತಿರುವ ಕಾರಣ ಕಳೆದ ವರ್ಷ ಸಮಸ್ಯೆ ವಿಭಿನ್ನವಾಗಿತ್ತು. ಕಳೆದ ವರ್ಷ ನೀಡಿದ್ದ ಸೌಲಭ್ಯ, ವ್ಯವಸ್ಥೆಯನ್ನೇ ಈ ಬಾರಿಯೂ ವಿಸ್ತರಿಸಿದರೆ, ವಿದ್ಯಾರ್ಥಿಗಳು ಓದುವುದನ್ನೇ ಮರೆತು ಬಿಡುತ್ತಾರೆ. ಇದರಿಂದ ಕೆಟ್ಟ ಪ್ರವೃತ್ತಿಯೊಂದನ್ನು ಬೆಳೆಸಿದಂತಾಗುತ್ತದೆ ಎಂದ್ದಾರೆ.