Asianet Suvarna News Asianet Suvarna News

SSLC Exams ಕೊರೋನಾ ಹೆಚ್ಚಳ ಭೀತಿ, ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಸ್ಪಷ್ಟನೆ ಕೊಟ್ಟ ಶಿಕ್ಷಣ ಸಚಿವ

* ಮುಂಬರುವ ದಿನಗಳಲ್ಲಿ ಕರ್ನಾಟಕದಲ್ಲಿ ಕೊರೋನಾ ಹೆಚ್ಚಳ ಸಾಧ್ಯತೆ
* ಕೊರೋನಾ ಹೆಚ್ಚಳದ ಬಗ್ಗೆ ಮುನ್ಸೂಚನೆ ಕೊಟ್ಟಿರುವ ತಜ್ಞರು
* ಈ ವೇಳೆ ಎಸ್‌ಎಸ್ಎಲ್‌ಸಿ ಪರೀಕ್ಷೆ ಬಗ್ಗೆ ವಿವರಿಸಿದ ಶಿಕ್ಷಣ ಸಚಿವ

Minister BC Nagesh talks about Karnataka SSLC Exams In Covid pandemic rbj
Author
Bengaluru, First Published Jan 22, 2022, 8:55 PM IST

ಬೆಂಗಳೂರು, (ಜ.22): ಕಳೆದ ವರ್ಷದಂತೆ ಈ ವರ್ಷ ಕೊರೋನಾ9Coronavirus) ಪಾಸ್ ಇರುವುದಿಲ್ಲ. ಎಲ್ಲಾ ವಿದ್ಯಾರ್ಥಿಗಳು ಎಸ್‌ಎಸ್‌ಎಲ್'ಸಿ ಪರೀಕ್ಷೆಗೆ (SSLC Exam)ಹಾಜರಾಗುತ್ತಾರೆಂದು ಕರ್ನಾಟಕ ಶಿಕ್ಷಣ ಸಚಿವ ಬಿ.ಸಿ.ನಾಗೇಶ್(BC Nagesh) ಸ್ಪಷ್ಟಪಡಿಸಿದರು.

ಕಳೆದ ವರ್ಷ ಕೋವಿಡ್ ಸಾಂಕ್ರಾಮಿಕ ರೋಗದಿಂದ ವಿದ್ಯಾರ್ಥಿಗಳು ಪರೀಕ್ಷೆಯಿಲ್ಲದೆ ಉತ್ತೀರ್ಣರಾದ ಬಗ್ಗೆ ಉಲ್ಲೇಖಿಸಿ ಪ್ರತಿಕ್ರಿಯೆ ನೀಡಿರುವ ಸಚಿವರು, 2020-21 ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳು ಮತ್ತು ಶಾಲೆಗಳು ತೀವ್ರವಾದ ಕೋವಿಡ್-ಸಂಬಂಧಿತ ಸಮಸ್ಯೆಗಳನ್ನು ಎದುರಿಸುತ್ತಿರುವ ಕಾರಣ ಕಳೆದ ವರ್ಷ ಸಮಸ್ಯೆ ವಿಭಿನ್ನವಾಗಿತ್ತು. ಕಳೆದ ವರ್ಷ ನೀಡಿದ್ದ ಸೌಲಭ್ಯ, ವ್ಯವಸ್ಥೆಯನ್ನೇ ಈ ಬಾರಿಯೂ ವಿಸ್ತರಿಸಿದರೆ, ವಿದ್ಯಾರ್ಥಿಗಳು ಓದುವುದನ್ನೇ ಮರೆತು ಬಿಡುತ್ತಾರೆ. ಇದರಿಂದ ಕೆಟ್ಟ ಪ್ರವೃತ್ತಿಯೊಂದನ್ನು ಬೆಳೆಸಿದಂತಾಗುತ್ತದೆ ಎಂದರು.

SSLC Exam ಎಸ್‌ಎಸ್‌ಎಲ್‌ಸಿ ಪೂರ್ವ ಸಿದ್ಧತಾ ಪರೀಕ್ಷೆ ವೇಳಾಪಟ್ಟಿ ಪ್ರಕಟ

ರಾಜ್ಯದ ಬಹುತೇಕ ಎಲ್ಲಾ ಶಾಲೆಗಳು ಶೇಕಡಾ 70 ರಷ್ಟು ಪಠ್ಯಕ್ರಮವನ್ನು ಪೂರ್ಣಗೊಳಿಸಿವೆ, ವಿದ್ಯಾರ್ಥಿಗಳಿಗೆ ಸಹಾಯಕವಾಗಲು ಶೇಕಡಾ 30 ರಷ್ಟು ಪಠ್ಯಕ್ರಮ ಕಡಿಮೆ ಮಾಡಲಾಗಿದೆ. ಫೆಬ್ರವರಿ ಕೊನೆಯ ವಾರದಲ್ಲಿ ಅಥವಾ ಮಾರ್ಚ್ ಮೊದಲ ವಾರದಲ್ಲಿ ಕೋವಿಡ್ ತೀವ್ರವಾಗಿ ಕಡಿಮೆಯಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಮಾರ್ಚ್‌ನಿಂದ ಏಪ್ರಿಲ್ 11 ರ ಕೊನೆಯ ವಾರದಲ್ಲಿ ನಡೆಯಲಿವೆ. ಆ ಸಮಯದ ಪರಿಸ್ಥಿತಿ ಅವಲೋಕಿಸಿ ನಿರ್ಧಾರ ಕೈಗೊಳ್ಳಲಿದ್ದೇವೆ ಎಂದು ಹೇಳಿದರು.

ಪ್ರೌಢಶಾಲೆಗಳಿಗೆ ಅತಿಥಿ ಶಿಕ್ಷಕರ ನೇಮಕಾತಿ ವಿಚಾರ ಕುರಿತು ಮಾತನಾಡಿ, ಶೈಕ್ಷಣಿಕ ವರ್ಷ ಆರಂಭವಾದಾಗಲೇ ಈ ಆದೇಶಗಳಿದ್ದವು. ಮುಂದಿನ  ಶೈಕ್ಷಣಿಕ ವರ್ಷದಲ್ಲಿ ನೇಮಕ ಮಾಡಿಕೊಳ್ಳಲಾಗುತ್ತದೆ ಎಂದು ತಿಳಿಸಿದರು.

SSLC Time Table ಎಸ್‌ಎಸ್‌ಎಲ್‌ಸಿ ಪರೀಕ್ಷೆ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ

ಶಿಕ್ಷಕರ ವರ್ಗಾವಣೆ ಬಗ್ಗೆ ಪ್ರತಿಕ್ರಿಯಿಸಿ, ಕೆಲವು ಶಿಕ್ಷಕರು ಸುಮಾರು ಎರಡರಿಂದ ಮೂರು ವರ್ಷಗಳ ಹಿಂದೆ ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಾಲಯವು ಕೆಲವು ತಿಂಗಳ ಹಿಂದಷ್ಟೇ ಪ್ರಕರಣವನ್ನು ವಿಲೇವಾರಿ ಮಾಡಿತ್ತು. ಆದೇಶ ಹೊರಬಿದ್ದ ನಂತರ ಶಿಕ್ಷಕರು ವರ್ಗಾವಣೆ ಕೇಳಲು ಆರಂಭಿಸಿದರು. 'ನ್ಯಾಯಾಲಯದ ಆದೇಶ ಹಾಗೂ ಶಿಕ್ಷಕರ ನಿಜವಾದ ಬೇಡಿಕೆಗಳನ್ನು ಗೌರವಿಸಬೇಕು. ವರ್ಗಾವಣೆ ಪ್ರಕ್ರಿಯೆ ಆರಂಭಿಸಿದ್ದರೂ, ತೀವ್ರ ಕೊರತೆ ಇರುವ ಕಡೆಯಿಂದ ಶಿಕ್ಷಕರನ್ನು ಸ್ಥಳಾಂತರಿಸಿಲ್ಲ ಎಂದು ಸ್ಪಷ್ಟಪಡಿಸಿದರು.

ವೇಳಾಪಟ್ಟಿ ಪ್ರಕಟ
ಈಗಾಗಲೇ  2021-22ನೇ ಸಾಲಿನ ಕರ್ನಾಟಕ ಎಸ್‌ಎಸ್‌ಎಲ್‌ಸಿ( SSLC) ಪೂರ್ವ ಸಿದ್ಧತಾ ಹಾಗೂ ಮುಖ್ಯ ಪರೀಕ್ಷೆಯ ವೇಳಾಪಟ್ಟಿ(SSLC Preparatory Exam Time Table) ಪ್ರಕಟವಾಗಿದೆ.

ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಇಂದು(ಗುರುವಾರ) ಎಸ್‌ಎಸ್‌ಎಲ್‌ಸಿ ಪೂರ್ವ ಸಿದ್ಧತಾ ಪರೀಕ್ಷೆ ವೇಳಾಪಟ್ಟಿಯನ್ನು ಪ್ರಕಟಿಸಿದ್ದು,  ಫೆಬ್ರವರಿ 21 ರಿಂದ 26 ರವರೆಗೆ SSLC ಪೂರ್ವ ಸಿದ್ಧತಾ ಪರೀಕ್ಷೆ ನಡೆಯಲಿವೆ. ಬೆಳಗ್ಗೆ 1.30ರಿಂದ ಮಧ್ಯಾಹ್ನ 1.45ರ ವರಗೆ ಪರೀಕ್ಷೆಗಳು ನಡೆಯಲಿವೆ.

ಪೂರ್ವ ಸಿದ್ಧತಾ ಪರೀಕ್ಷೆ ವೇಳಾಪಟ್ಟಿ ಇಂತಿದೆ,
* 21-2-2022(ಪ್ರಥಮ ಭಾಷೆ: ಕನ್ನಡ, ತೆಲಗು, ತಮಿಳು, ಮರಾಠಿ, ಉರ್ದು, ಇಂಗ್ಲೀಷ್, ಸಂಸ್ಖ್ರತ, 
* 22-2-2022: ಸಮಾಜ ವಿಜ್ಞಾನ
*23-2-2022 (ದ್ವಿತೀಯ ಭಾಷೆ): ಇಂಗ್ಲೀಷ್, ಕನ್ನಡ 
* 24-2-2022: ಗಣಿತ
* 25-2-2022(ತೃತೀಯ ಭಾಷೆ): ಹಿಂದಿ, ಕನ್ನಡ, ಇಂಗ್ಲೀಷ್, ಅರೇಬಿಕ್, ಉರ್ದು, ಪರ್ಷಿಯನ್
*26-2-2022 (ಕೋರ್ ಸಬ್ಜೆಕ್ಟ್): ವಿಜ್ಞಾನ

ಮುಖ್ಯ ಪರೀಕ್ಷೆ ತಾತ್ಕಾಲಿಕ ವೇಳಾಪಟ್ಟಿ
ಎಸ್‌ಎಸ್‌ಎಲ್‌ಸಿ(10ನೇ ತರಗತಿ) ಮುಖ್ಯ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ ಪ್ರಕಟವಾಗಿದೆ. ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ(Karnataka Secondary Education Examination Board) ಜ.06ರಂದು   2021-22ನೇ ಸಾಲಿನ 10ನೇ ತರಗತಿ (SSLC)ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಮಾರ್ಚ್ 28 ರಿಂದ ಏಪ್ರಿಲ್ 11 ರವರೆಗೆ ಪರೀಕ್ಷೆಗಳು ನಡೆಯಲಿವೆ.

ಮುಖ್ಯ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ ಈ ಕೆಳಗಿನಂತಿದೆ
ಮಾರ್ಚ್ 28 - ಕನ್ನಡ
ಮಾರ್ಚ್ 30 - ದ್ವಿತೀಯ ಭಾಷೆ ಇಂಗ್ಲೀಷ್, ಕನ್ನಡ
ಏಪ್ರಿಲ್ 1 - ಅರ್ಥಶಾಸ್ತ್ರ
ಏಪ್ರಿಲ್‌ 4 - ಗಣಿತ, ಸಮಾಜ ಶಾಸ್ತ್ರ
ಏಪ್ರಿಲ್ 6 - ಸಮಾಜ‌ ವಿಜ್ಞಾನ
ಏಪ್ರಿಲ್ 8 - ತೃತೀಯ ಭಾಷೆ ಹಿಂದಿ
ಏಪ್ರಿಲ್ 11 - ವಿಜ್ಞಾನ

Follow Us:
Download App:
  • android
  • ios