ವಿಜಯನಗರ ಜಿಲ್ಲೆ ಕಲಾ ವಿಭಾಗದಲ್ಲಿ ಮತ್ತೆ ಮೊದಲ  ರ‍್ಯಾಂಕ್‌  ಪಡೆದಿದೆ. ವಿಜಯನಗರ ಜಿಲ್ಲೆಗೆ ಸತತ ಎಂಟು ವರುಷಗಳಿಂದ ಕಲಾ ವಿಭಾಗದಲ್ಲಿ ಮೊದಲ  ರ‍್ಯಾಂಕ್‌ ಪಡೆಯುತ್ತಿದೆ.

ವಿಜಯನಗರ (ಮೇ.19): ವಿಜಯನಗರ ಜಿಲ್ಲೆ ಕಲಾ ವಿಭಾಗದಲ್ಲಿ ಮತ್ತೆ ಮೊದಲ ರ‍್ಯಾಂಕ್‌ ಪಡೆದಿದೆ. ವಿಜಯನಗರ ಜಿಲ್ಲೆಗೆ ಸತತ ಎಂಟು ವರುಷಗಳಿಂದ ಕಲಾ ವಿಭಾಗದಲ್ಲಿ ಮೊದಲ ರ‍್ಯಾಂಕ್‌ ಪಡೆಯುತ್ತಿದೆ. ವಿಜಯನಗರ ಜಿಲ್ಲೆ ಕೊಟ್ಟೂರು ಇಂದು ಪಿಯು ಕಾಲೇಜಿನ ವಿದ್ಯಾರ್ಥಿಗೆ ಮೊದಲ ರ‍್ಯಾಂಕ್‌ ಬಂದಿದೆ.

ಈ ಮೊದಲು 592 ಅಂಕ ಪಡೆದಿದ್ದ ವಿಶೇಷ ಚೇತನ ವಿದ್ಯಾರ್ಥಿ ಕುಶನಾಯ್ಕ್ ಆಗ ಎರಡನೇ ರ್ಯಾಂಕ್ ತೃಪ್ತಿಪಟ್ಟಿದ್ದ. ಇದೀಗ ಮರು ಮೌಲ್ಯಮಾಪನದಲ್ಲಿ ಎರಡು ಅಂಕ ವ್ಯತ್ಯಾಸವಾಗಿ. 594 ಅಂಕ ಪಡೆಯುವ ಮೂಲಕ ರಾಜ್ಯಕ್ಕೆ ಮೊದಲ ರ‍್ಯಾಂಕ್‌ ಪಡೆದಿದ್ದಾನೆ. ಕೆ ಕೃಷ್ಣಗೆ 591 ಇದ್ದ ಅಂಕ ಮರುಮೌಲ್ಯಮಾಪನದಲ್ಲಿ 593 ಅಂಕ ಮೂಲಕ ಎರಡನೇ ರ‍್ಯಾಂಕ್‌ ಪಡೆದಿದ್ದಾರೆ. ಬೆಂಗಳೂರಿನ ವಿದ್ಯಾರ್ಥಿನಿ ತಬುಸಬ್ ಶೇಕ್ 593 ಅಂಕ ಪಡೆದಿದ್ದರು. ಈ ವಿದ್ಯಾರ್ಥಿನಿ ಮೊದಲ ರ‍್ಯಾಂಕ್‌ ಎಂದು ಪಿಯು ಬೋರ್ಡ್ ಘೋಷಿಸಿತ್ತು. ಇದೀಗ ಅಂಕಗಳ ಆಧಾರದ ಮೇಲೆ ಎರಡನೇ ರ‍್ಯಾಂಕ್‌.

ಶ್ರೀ ಸರಸ್ವತಿ ವಿದ್ಯಾನಿಕೇತನ ಇಂಡಿಪೆಂಡೆಂಟ್‌ ಪಿಯು ಕಾಲೇಜಿನ ಸಾಧನೆ
ಬೆಂಗಳೂರು: ಶ್ರೀ ಸರಸ್ವತಿ ವಿದ್ಯಾನಿಕೇತನ ಇಂಡಿಪೆಂಡೆಂಟ್‌ ಪಿಯು ಕಾಲೇಜಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಉತ್ತಮ ಅಂಕ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ.

ಬೆಳಗಾವಿ: ನಕಲಿ ಅಂಕಪಟ್ಟಿ, 51 ವಿದ್ಯಾರ್ಥಿಗಳ ಇಂಜಿನಿಯರಿಂಗ್ ಪ್ರವೇಶ ತಿರಸ್ಕರಿಸಿದ ವಿಟಿಯು

ವಾಣಿಜ್ಯ ವಿಭಾಗದಲ್ಲಿ ತನುಶ್ರೀ ಎಂ. (ಶೇ 97.83), ಐಶ್ವರ್ಯ ಎಸ್‌. (ಶೇ. 96.67) , ವಿದ್ಯಾ ಪ್ರಿಯಾ (ಶೇ. 96.5), ಮೋನಾಲಿಸಾ ವಿ. (ಶೇ. 96.33) , ರೇಖಾ ವಿ. (ಶೇ. 96), ಜೀವಿತಾ ಪ್ರಕಾಶ್‌ (ಶೇ. 96) , ಜಾಹ್ನವಿ ಎನ್‌. (ಶೇ. 95.33), ಗಂಗೋತ್ರಿ ಜೆ.ಆರ್‌. (ಶೇ. 94.83), ನಿಶಿಕಾ ಕೆ.ವಿ. (ಶೇ. 94.83 ) , ಪಲ್ಲವಿ ಎನ್‌. (ಶೇ. 94.83), ಸಂಧ್ಯಾ ಎಸ್‌.(ಶೇ.94.5 ), ಯೋಗೇಶ್ವರ ಎಸ್‌.ಎಂ. (ಶೇ.94.33) ಅಂಕ ಪಡೆದಿದ್ದಾರೆ.

ಸಿಇಟಿ ದಿನವೇ ಸಿಎಂ ಪ್ರಮಾಣ ವಚನ: ವಿದ್ಯಾರ್ಥಿಗಳಿಗೆ ಟ್ರಾಫಿಕ್‌ ಸಮಸ್ಯೆ ಆತಂಕ

ವಿಜ್ಞಾನ ವಿಭಾಗದಲ್ಲಿ ರೂಪೇಶ್‌ ಪಾಠಕ್‌ (ಶೇ.96.83 ), ನಯನಾ ಡಿ. (ಶೇ.94.7) , ಕಾವ್ಯಾ ಎಸ್‌. (94.3) ಮೋನಿಶ್‌, (ಶೇ. 94) ಯುಗಶ್ರೀ ಆರ್‌. (ಶೇ. 93.8) ತೇಜಸ್‌ ಎನ್‌.(93.5), ಆರ್‌.ಏಕನಾಥ್‌ ರೆಡ್ಡಿ (ಶೇ.93 ), ಸರಿತಾ ವಿ. (ಶೇ.92.7 ), ಯಮುನಾ ಎಸ್‌. (ಶೇ.92.3 ), ಕುಶಾಲ ಜೆ. ( ಶೇ. 92.2), ಯಶವಂತ ಪಿ. (ಶೇ. 91.7,) ಕಬೀರ್‌ ಎ. (ಶೇ. 91.5), ವೇದಾಶ್ರೀ ಎಸ್‌. (ಶೇ. 91), ಮದನ್‌ಕುಮಾರ್‌ ಸಿ. (90.3), ಚಂದನಾ ಸಿ. (ಶೇ. 90.3) , ಮಾಲಾ ಆರ್‌. (ಶೇ. 90.3), ಕೆ.ಕೀರ್ತನಾ (ಶೇ. 90.2), ಯಶವಂತ ವಿ. (ಶೇ.90.2 ) , ಅಭಿನಂದಾ ಎಂ. (ಶೇ. 89.8) , ಅಕ್ಷಿತಾಶ್ರೀ (ಶೇ.89.8 ) , ಮದನ್‌ ಕೆ.ಎಸ್‌.(ಶೇ. 89.8), ಸಂಜೀವ್‌ಕುಮಾರ್‌ (ಶೇ.89.7 ), ನಿತಿನ್‌ ಕೆ.ವಿ. (ಶೇ.89.5 ) ಅಂಕ ಗಳಿಸಿದ್ದಾರೆ.