karnataka puc result 2023 : ದ್ವಿತೀಯ ಪಿಯು ಫಲಿತಾಂಶ: ಯಾದಗಿರಿಗೆ ಕೊನೆ ಸ್ಥಾನ
ಶುಕ್ರವಾರ ಪ್ರಕಟಗೊಂಡ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಯಾದಗಿರಿ ಜಿಲ್ಲೆ ಶೇ.62.98ರಷ್ಟುಫಲಿತಾಂಶ ಪಡೆಯುವ ಮೂಲಕ ರಾಜ್ಯದಲ್ಲಿ ಕೊನೆಯ ಸ್ಥಾನಕ್ಕಿಳಿದಿದೆ. ಕಳೆದ ಬಾರಿ (2022) 23ನೇ ಸ್ಥಾನದಲ್ಲಿದ್ದ ಯಾದಗಿರಿ ಜಿಲ್ಲೆ ಈ ಬಾರಿ ಕೊನೆಯ 32ನೇ ಸ್ಥಾನಕ್ಕೆ ಕುಸಿತ ಕಂಡಿದೆಯಾದರೂ, ಕಳೆದ ಸಾಲಿನ ಶೇಕಡಾವಾರು (60.59) ಪ್ರಮಾಣಕ್ಕಿಂತ ಈ ಸಾಲಿನಲ್ಲಿ ಈ ಬಾರಿ ಶೇ.2ರಷ್ಟುಉತ್ತೀರ್ಣರಾದವರ ಪ್ರಮಾಣದಲ್ಲಿ ಹೆಚ್ಚಳ ಕಂಡಿರುವುದು ಸಮಾಧಾನ ಮೂಡಿಸಿದೆ.
ಯಾದಗಿರಿ (ಏ.22) : ಶುಕ್ರವಾರ ಪ್ರಕಟಗೊಂಡ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಯಾದಗಿರಿ ಜಿಲ್ಲೆ ಶೇ.62.98ರಷ್ಟುಫಲಿತಾಂಶ ಪಡೆಯುವ ಮೂಲಕ ರಾಜ್ಯದಲ್ಲಿ ಕೊನೆಯ ಸ್ಥಾನಕ್ಕಿಳಿದಿದೆ. ಕಳೆದ ಬಾರಿ (2022) 23ನೇ ಸ್ಥಾನದಲ್ಲಿದ್ದ ಯಾದಗಿರಿ ಜಿಲ್ಲೆ ಈ ಬಾರಿ ಕೊನೆಯ 32ನೇ ಸ್ಥಾನಕ್ಕೆ ಕುಸಿತ ಕಂಡಿದೆಯಾದರೂ, ಕಳೆದ ಸಾಲಿನ ಶೇಕಡಾವಾರು (60.59) ಪ್ರಮಾಣಕ್ಕಿಂತ ಈ ಸಾಲಿನಲ್ಲಿ ಈ ಬಾರಿ ಶೇ.2ರಷ್ಟುಉತ್ತೀರ್ಣರಾದವರ ಪ್ರಮಾಣದಲ್ಲಿ ಹೆಚ್ಚಳ ಕಂಡಿರುವುದು ಸಮಾಧಾನ ಮೂಡಿಸಿದೆ.
ಪರೀಕ್ಷೆಗೆ ಹಾಜರಾದ ಒಟ್ಟು 10493 ವಿದ್ಯಾರ್ಥಿಗಳ ಪೈಕಿ 6608 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ನಗರ ಪ್ರದೇಶ ಶೇ.60.13 ವಿದ್ಯಾರ್ಥಿಗಳಿಗಿಂತ, ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳ ಫಲಿತಾಂಶ ಶೇ.74.39ರಷ್ಟುಹೆಚ್ಚಳ ಕಂಡಿರುವುದು ವಿಶೇಷ. ಜೊತೆಗೆ, ಬಾಲಕರಿಗಿಂತ ಶೇ.54.67 ಬಾಲಕಿಯರ ಶೇ.66.98 ಫಲಿತಾಂಶ ಪ್ರಮಾಣದಲ್ಲಿಯೂ ಹೆಚ್ಚಿರುವ ಮೂಲಕ ಬಾಲಕಿಯರು ಮೇಲುಗೈ ಸಾಧಿಸಿದ್ದಾರೆ.\
ದ್ವಿತೀಯ ಪಿಯುಸಿ ರಿಸಲ್ಟ್: ಫೇಲಾಯ್ತ? ಅಂತ ಚಿಂತೆ ಬೇಡ. ಮೇಗೆ ಪೂರಕ ಪರೀಕ್ಷೆ ಬರೆಯಿರಿ
ವಿಜ್ಞಾನ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾಗಿದ್ದ ಒಟ್ಟು 2610 ಮಕ್ಕಳ ಪೈಕಿ 1963 ಮಕ್ಕಳು ಉತ್ತೀರ್ಣರಾಗಿದ್ದಾರೆ. ಶೇ.75.21ರಷ್ಟುಫಲಿತಾಂಶ ಇಲ್ಲಿ ಕಂಡಿದೆ. ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾಗಿದ್ದ 1034 ವಿದ್ಯಾರ್ಥಿಗಳ ಪೈಕಿ 643 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇ.62.19ರಷ್ಟುಫಲಿತಾಂಶ ಬಂದರೆ, ಕಲಾ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾಗಿದ್ದ ಒಟ್ಟು 6849 ವಿದ್ಯಾರ್ಥಿಗಳ ಪೈಕಿ, 4002 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ನಗರ ಪ್ರದೇಶದಲ್ಲಿ 8400 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 5051 ಮಕ್ಕಳು ಉತ್ತೀರ್ಣರಾಗಿದ್ದಾರೆ. ಶೇ.60.13ರಷ್ಟುಫಲಿತಾಂಶ ನಗರ ಪ್ರದೇಶದಲ್ಲಿ ಕಂಡು ಬಂದರೆ, ಗ್ರಾಮೀಣ ಪ್ರದೇಶದಲ್ಲಿ 2093 ಮಕ್ಕಳು ಪರೀಕ್ಷೆ ಬರೆದಿದ್ದು, ಇದರಲ್ಲಿ 1557 ಮಕ್ಕಳು ಉತ್ತೀರ್ಣರಾಗುವ ಮೂಲಕ ಶೇ.74.39ರಷ್ಟುಫಲಿತಾಂಶ ಬಂದಿದೆ.
ಕೋವಿಡ್ ಕಾರಣದಿಂದಾಗಿ 2021ರಲ್ಲಿ 100ರಷ್ಟುಫಲಿತಾಂಶ ಕಂಡಿದ್ದ ಜಿಲ್ಲೆಯಲ್ಲಿ ಕಳೆದೊಂದು ದಶಕದ ಅವಧಿಯಲ್ಲಿ ಶೈಕ್ಷಣಿಕ ಪ್ರಗತಿ ಕುಂಠಿತವಾಗಿರುವುದು ಆತಂಕ ಮೂಡಿಸಿದೆ. 2014 ಹಾಗೂ 2015ರ ಸಾಲಿನಲ್ಲಿ ಶೇ.62.09 ಹಾಗೂ ಶೇ.62.57ರಷ್ಟುಹೆಚ್ಚಿನ ಸಾಧನೆ ಕಂಡಿತ್ತಾದರೂ, ನಂತರದಲ್ಲಿ ಕುಸಿಯುತ್ತ ಬಂದಿತ್ತು. ಈಗ ರಾಜ್ಯದಲ್ಲಿ ಕೊನೆಯ ಸ್ಥಾನ ಪಡೆದರೂ, ಫಲಿತಾಂಶ ಪ್ರಗತಿಯಲ್ಲಿ ತುಸು ಏರಿಕೆ ಸಮಾಧಾನ ಮೂಡಿಸಿದೆ.
ಹಾವಿನಿಂದ ಕಚ್ಚಿಸಿಕೊಂಡರೂ ಪರೀಕ್ಷೆ ಬರೆದ ಪಿಯು ವಿದ್ಯಾರ್ಥಿನಿ : ಸ್ಥಿತಿ ಗಂಭೀರ
ಯಾದಗಿರಿ ಶೈಕ್ಷಣಿಕ ಪ್ರಗತಿ : ದಶಕದ ಹಿನ್ನೋಟ
ವರ್ಷ ಶೇಕಡ ಸ್ಥಾನ
- 2013 ಶೇ.47.00 (31ನೇ ಸ್ಥಾನ)
- 2014 ಶೇ.62.57 (21ನೇ ಸ್ಥಾನ)
- 2015 ಶೇ.62.09 (22ನೇ ಸ್ಥಾನ)
- 2016 ಶೇ.44.16 (31ನೇ ಸ್ಥಾನ)
- 2017 ಶೇ.42.07 (29ನೇ ಸ್ಥಾನ)
- 2018 ಶೇ.54.40 (30ನೇ ಸ್ಥಾನ)
- 2019 ಶೇ.53.02 (31ನೇ ಸ್ಥಾನ)
- 2020 ಶೇ.58.38 (28ನೇ ಸ್ಥಾನ)
- 2021 ಕೋವಿಡ್‌ನಿಂದಾಗಿ ಶೇ.100ರಷ್ಟುಉತ್ತೀರ್ಣ
- 2022 ಶೇ.60.59 (23ನೇ ಸ್ಥಾನ)
- 2023 ಶೇ.62.98 (32ನೇ ಸ್ಥಾನ)