Asianet Suvarna News Asianet Suvarna News

ಹಿಜಾಬ್ ವಿವಾದ, ಅಲ್ಪಸಂಖ್ಯಾತ ಹಜ್, ವಕ್ಫ್ ಇಲಾಖೆಯಿಂದ ಮಹತ್ವದ ಸುತ್ತೋಲೆ

* ಕರ್ನಾಟಕದಲ್ಲಿ ಹಿಜಾಬ್ ವಿವಾದದ ಕಿಚ್ಚು
* ಹೈಕೋರ್ಟ್‌ ಆದೇಶಕ್ಕೂ ವಿದ್ಯಾರ್ಥಿನಿಯರು ಡೋಂಟ್ ಕೇರ್
* ಅಲ್ಪಸಂಖ್ಯಾತ ಹಜ್, ವಕ್ಫ್ ಇಲಾಖೆಯಿಂದ ಮಹತ್ವದ ಸುತ್ತೋಲೆ

Karnataka minority welfare haj and wakf dept Circular about Hijab row rbj
Author
Bengaluru, First Published Feb 18, 2022, 12:26 PM IST

ಬೆಂಗಳೂರು, (ಫೆ.18): ಉಡುಪಿ (Udupi) ಜಿಲ್ಲೆಯ ಕಾಲೇಜುಗಳಲ್ಲಿ (College) ಶುರುವಾದ ಹಿಜಾಬ್ (Hijab Row) ಹಾಗೂ ಕೇಸರಿ ಶಾಲು ವಿವಾದ ಇದಗ ಕರ್ನಾಟಕದ ಮೂಲೆ-ಮೂಲೆಗಳಿಗೂ ವ್ಯಾಪಿಸಿದೆ. ಕರ್ನಾಟಕದಲ್ಲಿನ (Karnataka) ಹಿಜಾಬ್‌ ವಿವಾದ ಈಗ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದೆ

ಹಿಜಾಬ್ ಹಾಗೂ ಕೇಸರಿ ಶಾಲು ವಿವಾದ ಬೆನ್ನಲ್ಲೇ ಹೈಕೋರ್ಟ್ (Karnataka High Court) ತ್ರಿಸದಸ್ಯ ಪೀಠ ಮಧ್ಯಂತರ ಆದೇಶ ಹೊರಡಿಸಿದ್ದ ಹಿನ್ನೆಲೆಯಲ್ಲಿ ಇದೀಗ ಕರ್ನಾಟಕ ಅಲ್ಪಸಂಖ್ಯಾತ ಹಜ್, ವಕ್ಫ್ ಇಲಾಖೆ ಮಹತ್ವದ ಸುತ್ತೋಲೆಯನ್ನು ಹೊರಡಿಸಿದೆ.

Hijab Row 'ಹಿಜಾಬ್‌ಗೆ ಅವಕಾಶ ಕೊಡಿ, ನಾನೊಬ್ಬ ಸಾಂಪ್ರದಾಯಿಕ ಬ್ರಾಹ್ಮಣನಾಗಿ ಮನವಿ ಮಾಡ್ತೇನೆ'

ಅಲ್ಪಸಂಖ್ಯಾತ ಇಲಾಖೆ ಅಡಿ ಬರುವ ಯಾವುದೇ ವಸತಿ ಶಾಲೆ, ಮೌಲಾನಾ ಆಜಾದ್ ಮಾದರಿ ಶಾಲೆ ಸೇರಿದಂತೆ ಯಾವುದೇ ಶಾಲೆ-ಕಾಲೇಜುಗಳಲ್ಲಿ ಹಿಜಾಬ್, ಕೇಸರಿ ಶಾಲು, ಸ್ಕಾರ್ಪ್ ಗಳನ್ನು ಧರಿಸುವಂತಿಲ್ಲ ಎಂದು ಆದೇಶ ಹೊರಡಿಸಿದೆ.

ಶಾಲೆ ಹಾಗೂ ತರಗತಿಗಳಲ್ಲಿ ಯಾವುದೇ ಧಾರ್ಮಿಕ ಬಾವುಟ, ಧಾರ್ಮಿಕ ಚಿಹ್ನೆಗಳನ್ನು ಕೂಡ ಬಳಕೆ ಮಾಡುವಂತಿಲ್ಲ ಎಂದು ಸುತ್ತೋಲೆಯಲ್ಲಿ ತಿಳಿಸಿದೆ.

ಮುಂದಿನ ಆದೇಶದವರೆಗೂ ಶಾಲಾ-ಕಾಲೇಜುಗಳಿಗೆ ವಿದ್ಯಾರ್ಥಿಗಳು ಯಾವುದೇ ಧಾರ್ಮಿಕ ಗುರುತು ಧರಿಸಿ ಹೋಗುವಂತಿಲ್ಲ, ಸಮವಸ್ತ್ರ ಕಡ್ಡಾಯ ಎಂದು ಹೈಕೋರ್ಟ್ ಮಧ್ಯಂತರ ಆದೇಶ ನೀಡಿತ್ತು. ಕೋರ್ಟ್ ಆದೇಶದ ಹೊರತಾಗಿಯೂ ರಾಜ್ಯದ ಹಲವು ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಹಿಜಾಬ್ ಧರಿಸಿ ಹೋಗುತ್ತಿರುವುದಲ್ಲದೇ ಹಲವೆಡೆ ತರಗತಿಗಳನ್ನು ಬಹಿಷ್ಕರಿಸಿ ಪ್ರತಿಭಟನೆಯಲ್ಲಿ ನಿರತರಾಗಿದ್ದಾರೆ.

ಇದರ ಬೆನ್ನಲ್ಲೇ ಇದೀಗ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಕೂಡ ಹೈಕೋರ್ಟ್ ಮಧ್ಯಂತರ ಆದೇಶದಂತೆಯೇ ಸುತ್ತೋಲೆ ಹೊರಡಿಸಿರುವುದು ಮಹತ್ವ ಪಡೆದುಕೊಂಡಿದೆ.

ಕೋರ್ಟ್‌ನಲ್ಲಿ ಹಿಜಾಬ್ ವಿವಾದ
ಹಿಜಾಬ್ ನಿಷೇಧ ವಿರುದ್ಧ ವಿದ್ಯಾರ್ಥಿನಿಯರು ಹೈಕೋರ್ಟ್‌ ಮೇಟ್ಟಿಲೇರಿದ್ದಾರೆ. ಆದ್ರೆ, ಕರ್ನಾಟಕ ಹೈಕೋರ್ಟ್, ಶಾಲೆ ಹಾಗೂ ತರಗತಿಗಳಲ್ಲಿ ಯಾವುದೇ ಧಾರ್ಮಿಕ ಬಾವುಟ, ಧಾರ್ಮಿಕ ಚಿಹ್ನೆಗಳನ್ನು ಕೂಡ ಬಳಕೆ ಮಾಡುವಂತಿಲ್ಲ ಎಂದು ಕೋರ್ಟ್ ಮಧ್ಯಂತರ ಆದೇಶ ನೀಡಿದೆ. ಆದರೂ ಸಹ ವಿದ್ಯಾರ್ಥಿನಿಯರು ಕೋರ್ಟ್‌ ಆದೇಶಕ್ಕೆ ಬೆಲೆ ಕೊಡುತ್ತಿಲ್ಲ. ಹಿಜಾಬ್ ಹಾಕಿಯೇ ಕ್ಲಾಸ್‌ಗೆ ಬರುತ್ತೇವೆ. ಇಲ್ಲ ಅಂದ್ರೆ ಇಲ್ಲ ಎಂದು ಪಟ್ಟು ಹಿಡಿದಿದ್ದಾರೆ.

ಇನ್ನು ಈ ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್‌ನಲ್ಲಿ ಅರ್ಜಿ ವಿಚಾರಣೆ ನಡೆದಿದೆ. ಅರ್ಜಿದಾರರ ಪರ ದೇವದತ್ ಕಾಮತ್, ರೆಹಮತ್ ಉಲ್ಲಾ ಕೊತ್ವಾಲ್‌,  ಡಾ ವಿನೋದ್ ಕುಲಕರ್ಣಿ ಸೇರಿದಂತೆ ಇನ್ನೂ ಇಬ್ಬರು ಹಿರಿಯ ವಕೀಲರು ವಾದ ಮಂಡಿಸಿದ್ದಾರೆ. 

 ಹಿಜಾಬ್ ಬ್ಯಾನ್ ಮಾಡಿದರೆ ಕುರಾನ್‌ ಅನ್ನೇ ಬ್ಯಾನ್ ಮಾಡಿದಂತೆ.  ನಾನೊಬ್ಬ ಸಾಂಪ್ರದಾಯಿಕ ಬ್ರಾಹ್ಮಣನಾಗಿ ಮನವಿ ಮಾಡ್ತೇನೆ ಹಿಜಾಬ್‌ಗೆ ಅವಕಾಶ ಕೊಡಿ ಎಂದು ವಾದ ಮಾಡಿ ಗಮನಸೆಳೆದಿದ್ದಾರೆ.

ಇದೀಗ ಸರ್ಕಾರದ ಪರ ವಕೀಲರ ವಾದ ಮಾಡುವುದು ಬಾಕಿ ಇದ್ದು, ಇಂದು(ಶುಕ್ರವಾರ) ಮಧ್ಯಾಹ್ನದಿಂದ ಸರ್ಕಾರ ಪರ ವಕೀಲರು ತ್ರಿಸದಸ್ಯ ಪೀಠದ ಮುಂದೆ ವಾದ ಮಂಡನೆ ಮಾಡಲಿದ್ದಾರೆ.

ಕೇಸರಿ ಶಾಲು ಹಾಕದಂತೆ ಆರ್‌ಎಸ್‌ಎಸ್ ಸೂಚನೆ
ಇನ್ನು  ಅಲ್ಪಸಂಖ್ಯಾತ ಹಜ್, ವಕ್ಫ್ ಇಲಾಖೆಯಂತೆ ಈ ಹಿಂದೆ ಆರ್‌ಎಸ್‌ಎಸ್‌ ಕೂಡ ಯಾವುದೇ ಕಾರಣಕ್ಕೂ ಕೇಸರಿ ಶಾಲು ಹಾಕಿಕೊಂಡು ಶಾಲಾ ಕಾಲೇಜುಗಳಿಗೆ ಹೋಗದಂತೆ ಸೂಚನೆ ಕೊಟ್ಟಿತ್ತು. ಅದರಂತೆ ಹಿಂದೂ ವಿದ್ಯಾರ್ಥಿಗಳು ಕೋರ್ಟ್ ಹಾಗೂ ಆರ್‌ಎಸ್‌ಎಸ್‌ ಸೂಚನೆಯಂತೆ ಕೇಸರಿ ಶಾಸಲು ಬಿಟ್ಟು ಸಮವಸ್ತ್ರದಲ್ಲಿ ಶಾಲಾ-ಕಾಲೇಜುಗಳಿಗೆ ಹೋಗುವ ಮೂಲಕ ನಿಯಮ ಪಾಲನೆ ಮಾಡುತ್ತಿದ್ದಾರೆ. ಆದರೆ, ಮುಸ್ಲಿಂ ವಿದ್ಯಾರ್ಥಿನಿಯರು ಹೈಕೋರ್ಟ್‌ ಆದೇಶಕ್ಕೂ ಕಿಮ್ಮತ್ತು ನೀಡದೇ ಹಿಜಾಬ್ ಧರಿಸಿ ಕಾಲೇಜಿಗೆ ಹೋಗುತ್ತಿದ್ದಾರೆ. ಇದರಿಂದ ಹಲವು ಜಿಲ್ಲೆಗಳ ಕಾಲೇಜುಗಳ ಮುಂದೆ ಹೈಡ್ರಾಮಾಗಳೇ ನಡೆಯತ್ತಿವೆ.

ಹಿಜಾಬ್ ಮುಖ್ಯ ಎಂದ ವಿದ್ಯಾರ್ಥಿನಿಯರು
ಹೌದು...ನಮಗೆ ಶಿಕ್ಷಣಗಿಂತ ಹಿಜಾಭ್ ಮುಖ್ಯ ಎಂದು ವಿದ್ಯಾರ್ಥಿಗಳು ಹಠ ಹಿಡಿದಿದ್ದಾರೆ. ಹಿಜಾಬ್ ತೆಗೆಯಲ್ಲ ಎಂದು ಪಟ್ಟು ಹಿಡಿಡಿದ್ದಾರೆ. ಅಲ್ಲದೇ ಪರೀಕ್ಷೆಗಳಿಗೂ ಗೈರಾಗುವ ಮೂಲಕ ಹೈಕೋರ್ಟ್‌ ಆದೇಶಕ್ಕೆ ಸೆಡ್ಡು ಹೊಡೆದಿದ್ದಾರೆ.

Follow Us:
Download App:
  • android
  • ios